ಇಸ್ರೇಲ್, ಪಾಲೆಸ್ತೀನ್ ಎರಡೂ ದೇಶಗಳ ಅತ್ಯುನ್ನತ ಗೌರವ ಪಡೆದ ಅಪರೂಪದ ನಾಯಕ ಪ್ರಧಾನಿ ಮೋದಿ
ಇಸ್ರೇಲ್ ಮತ್ತು ಪಾಲೆಸ್ತೀನ್ ಎರಡೂ ದೇಶಗಳಿಂದ ಅತ್ಯುನ್ನತ ಗೌರವಗಳನ್ನು ಪಡೆದ ಅಪರೂಪದ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಬುಧವಾರ ಇಸ್ರೇಲ್ 'ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ' ನೀಡಿ ಗೌರವಿಸಿದೆ. ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ ಅವರ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ಸಂಗ್ರಹ ಚಿತ್ರ -
ಇಸ್ರೇಲ್: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಬುಧವಾರ ಇಸ್ರೇಲ್ ನ ಅತ್ಯುನ್ನತ ಪುರಸ್ಕಾರವಾದ 'ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ' (Speaker of the Knesset Medal) ನೀಡಿ ಗೌರವಿಸಲಾಗಿದೆ. ಭಾರತ (India) ಮತ್ತು ಇಸ್ರೇಲ್ (Israel) ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ ಅವರ ಅಸಾಧಾರಣ ಕೊಡುಗೆಯನ್ನು ಗುರುತಿಸಿ ನೆಸ್ಸೆಟ್ ಸ್ಪೀಕರ್ ಅಮೀರ್ ಒಹಾನಾ (Knesset Speaker Amir Ohana) ಅವರು ಈ ಗೌರವವನ್ನು ಪ್ರಧಾನ ಮಾಡಿದರು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ (Israel), ಪಾಲೆಸ್ತೀನ್ (Palestine) ಎರಡೂ ದೇಶಗಳ ಅತ್ಯುನ್ನತ ಗೌರವ ಪಡೆದ ಅಪರೂಪದ ನಾಯಕ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.
ಇಸ್ರೇಲ್ ಸಂಸತ್ತು ನೆಸ್ಸೆಟ್ ಅನ್ನು ಉದ್ದೇಶಿಸಿ ಬುಧವಾರ ಭಾಷಣ ಮಾಡುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸತ್ ಸದಸ್ಯರು ಘೋಷಣೆಗಳನ್ನು ಕೂಗಿ, ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಇಸ್ರೇಲ್ ಸಂಸತ್ತು ಅನ್ನು ಉದ್ದೇಶಿಸಿ ಭಾಷಣ ಮಾಡಿದ ಮೊದಲ ಭಾರತೀಯ ನಾಯಕ ಪ್ರಧಾನಿ ಮೋದಿ ಆಗಿದ್ದಾರೆ.
ಇಸ್ರೇಲ್‌ಗೆ ಬಂದಿಳಿದ ನರೇಂದ್ರ ಮೋದಿಯನ್ನು ಬಿಗಿದಪ್ಪಿ ಸ್ವಾಗತಿಸಿದ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಇಸ್ರೇಲ್ ಮತ್ತು ಪಾಲೆಸ್ತೀನ್ ಎರಡರಿಂದಲೂ ಉನ್ನತ ಪ್ರಶಸ್ತಿಗಳನ್ನು ಪಡೆದ ಅಪರೂಪದ ವಿಶ್ವ ನಾಯಕರಾಗಿರುವ ಪ್ರಧಾನಿ ಮೋದಿ ಅವರಿಗೆ 2018ರಲ್ಲಿ ವಿದೇಶಿ ನಾಯಕರಿಗೆ ನೀಡಲಾಗುವ ಅತ್ಯುನ್ನತ ಪಾಲೆಸ್ತೀನ್ ಗೌರವವಾದ ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪಾಲೆಸ್ತೀನ್ ಅನ್ನು ನೀಡಲಾಯಿತು.
ಇಸ್ರೇಲ್ ನೀಡಿರುವ ಗೌರವದ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ನೆಸೆಟ್ ಪದಕ ಸ್ವೀಕರಿಸಲು ನನಗೆ ತುಂಬಾ ಗೌರವವಾಗಿದೆ. ನಾನು ಅದನ್ನು ನಮ್ರತೆ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ಈ ಗೌರವವು ಭಾರತ ಮತ್ತು ಇಸ್ರೇಲ್ ನಡುವಿನ ಶಾಶ್ವತ ಸ್ನೇಹಕ್ಕೆ ನೀಡುವ ಗೌರವವಾಗಿದೆ. ಇದು ನಮ್ಮ ಎರಡೂ ರಾಷ್ಟ್ರಗಳಿಗೆ ಮಾರ್ಗದರ್ಶನ ನೀಡುವ ಹಂಚಿಕೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.
Be Modiji: 🗿
— Ankit Yadav (@AnkitKu2175) February 26, 2026
- Get highest honours by both Palestine & Israel pic.twitter.com/nBGqGRG0SE
ಇಸ್ರೇಲ್ ಸಂಸತ್ತು ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನೆ ಎಲ್ಲೆಡೆ ಶಾಂತಿಗೆ ಬೆದರಿಕೆ ಹಾಕುತ್ತದೆ ಎಂದು ಹೇಳಿದ ಅವರು ಗಾಜಾ ಶಾಂತಿ ಒಪ್ಪಂದಕ್ಕಾಗಿ ನವದೆಹಲಿಯು ಶ್ರಮಿಸುತ್ತಿದೆ ಎಂದ ಅವರು, ಇಲ್ಲಿನ ಜನರಿಗೆ ನ್ಯಾಯ ಮತ್ತು ಶಾಂತಿ ದೊರೆಯುವ ಭರವಸೆ ಇದೆ ಎಂದು ಹೇಳಿದರು.
2023ರಲ್ಲಿ ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಭಾರತದ ಆಳವಾದ ಸಂತಾಪವನ್ನು ತಿಳಿಸಿದ ಮೋದಿ, ನಿಮ್ಮ ನೋವನ್ನು ನಾವು ಅನುಭವಿಸುತ್ತೇವೆ. ನಿಮ್ಮ ದುಃಖವನ್ನು ನಾವು ಹಂಚಿಕೊಳ್ಳುತ್ತೇವೆ. ಈ ಕ್ಷಣದಲ್ಲಿ ಅದಕ್ಕೂ ಮೀರಿ ಭಾರತವು ಇಸ್ರೇಲ್‌ನೊಂದಿಗೆ ದೃಢವಾಗಿ ಮತ್ತು ಪೂರ್ಣ ದೃಢನಿಶ್ಚಯದಿಂದ ನಿಂತಿದೆ. ನಾಗರಿಕರ ಹತ್ಯೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ. ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಭಾರತವು ದೀರ್ಘಕಾಲದವರೆಗೆ ಭಯೋತ್ಪಾದನೆಯ ನೋವನ್ನು ಸಹಿಸಿಕೊಂಡಿದೆ ಎಂದು ಹೇಳಿದ ಪ್ರಧಾನಿ ಮೋದಿ, 26/11 ಮುಂಬೈ ದಾಳಿ ಮತ್ತು ಇಸ್ರೇಲ್ ನಾಗರಿಕರು ಸೇರಿದಂತೆ ಕಳೆದುಹೋದ ಮುಗ್ಧ ಜೀವಗಳನ್ನು ನೆನಪಿಸಿಕೊಂಡರು.
ಇಸ್ರೇಲ್‌ನಂತೆಯೇ ನಾವು ಕೂಡ ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಸ್ಥಿರ ಮತ್ತು ರಾಜಿಯಾಗದ ನೀತಿಯನ್ನು ಹೊಂದಿದ್ದೇವೆ. ಭಯೋತ್ಪಾದನೆಯನ್ನು ಎದುರಿಸಲು ನಿರಂತರ ಮತ್ತು ಸಂಘಟಿತ ಜಾಗತಿಕ ಕ್ರಮದ ಅಗತ್ಯವಿದೆ. ಅದಕ್ಕಾಗಿ ಭಾರತವು ಶಾಶ್ವತ ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆಗೆ ಕೊಡುಗೆ ನೀಡುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ತಿಳಿಸಿದರು.
ಪಾಕಿಸ್ತಾನಿಗಳಿಂದ ಕಿರುಕುಳ, ದಾಳಿ; 16 ವರ್ಷದಿಂದ ನಡೆಸುತ್ತಿದ್ದ ರೆಸ್ಟೋರೆಂಟ್ ಮುಚ್ಚಲು ನಿರ್ಧರಿಸಿದ ಭಾರತೀಯ
ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಇದು ಎರಡನೇ ಬಾರಿಗೆ ಇಸ್ರೇಲ್ ಗೆ ಭೇಟಿ ನೀಡಿದ್ದಾರೆ. 2017ರ ಜುಲೈ ನಲ್ಲಿ ಅವರು ಮೊದಲ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಭಾರತ-ಇಸ್ರೇಲ್ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಮಾಡಲಾಗಿತ್ತು. ಅವರ ಎರಡನೇ ಭೇಟಿಯು ವಿವಿಧ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಿದೆ.