ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lashkar-e-Taiba : ಲಷ್ಕರ್-ಎ-ತೊಯ್ಬಾದ ಮೋಸ್ಟ್ ವಾಂಟೆಡ್ ಉಗ್ರ ಅಬು ಖತಾಲ್ ಪಾಕಿಸ್ತಾನದಲ್ಲಿ ಹತ್ಯೆ

ಲಷ್ಕರ್-ಎ-ತೊಯ್ಬಾದ ಮೋಸ್ಟ್ ವಾಂಟೆಡ್ ಮಾಡಲಾಗಿದೆ. ಭಯೋತ್ಪಾದಕ ಸಂಘಟನೆಯ ಪ್ರಮುಖ ಕಾರ್ಯಕರ್ತನಾಗಿದ್ದ ಕತಾಲ್, ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ದಾಳಿಗಳನ್ನು ಮಾಡಿಸಿದ್ದ. ಈತ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನ ಸಹಚರನಾಗಿದ್ದ ಎಂದು ತಿಳಿದು ಬಂದಿದೆ.

ಮೋಸ್ಟ್ ವಾಂಟೆಡ್ ಉಗ್ರ ಅಬು ಖತಾಲ್ ಪಾಕಿಸ್ತಾನದಲ್ಲಿ ಹತ್ಯೆ

ಅಬು ಖತಾಲ್‌

Profile Vishakha Bhat Mar 16, 2025 8:36 AM

ಇಸ್ಲಾಮಾಬಾದ್‌: ಲಷ್ಕರ್-ಎ-ತೊಯ್ಬಾದ (Lashkar-e-Taiba) ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅಬು ಖತಾಲ್‌ನನ್ನು ಶನಿವಾರ ರಾತ್ರಿ ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ. ಭಯೋತ್ಪಾದಕ ಸಂಘಟನೆಯ ಪ್ರಮುಖ ಕಾರ್ಯಕರ್ತನಾಗಿದ್ದ ಕತಾಲ್, ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ದಾಳಿಗಳನ್ನು ಮಾಡಿಸಿದ್ದ. 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನ ಸಹಚರನಾಗಿದ್ದ ಖತಾಲ್‌ ಜೂನ್ 9 ರಂದು ರಿಯಾಸಿಯ ಶಿವ ಖೋರಿ ದೇವಸ್ಥಾನದಿಂದ ಹಿಂದಿರುಗುತ್ತಿದ್ದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ದಾಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾನೆ. ಈ ದಾಳಿಯನ್ನು ಖತಾಲ್ ನಾಯಕತ್ವದಲ್ಲಿ ಆಯೋಜಿಸಲಾಗಿತ್ತು. ಭಯೋತ್ಪಾದಕ ಅಬು ಖತಾಲ್‌ನನ್ನು ಶನಿವಾರ ರಾತ್ರಿ ಪಾಕಿಸ್ತಾನದಲ್ಲಿ ಹತ್ಯೆ

ರಜೌರಿ ಭಯೋತ್ಪಾದಕ ದಾಳಿ

2023 ರ ರಜೌರಿ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಿದೆ. ಜನವರಿ 1, 2023 ರಂದು, ರಜೌರಿಯ ಧಂಗ್ರಿ ಗ್ರಾಮದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆಯಿತು. ದಾಳಿಯ ನಂತರ ಮರುದಿನ ಐಇಡಿ ಸ್ಫೋಟ ಸಂಭವಿಸಿತು. ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಮೃತಪಟ್ಟಿದ್ದರು. ಅನೇಕರಿಗೆ ಗಂಭೀರ ಗಾಯಗಳಾಗಿದ್ದವು. ರಜೌರಿ ದಾಳಿ ಪ್ರಕರಣದಲ್ಲಿ ನಿಷೇಧಿತ ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಘಟನೆಯ ಪಾಕಿಸ್ತಾನ ಮೂಲದ ಮೂವರು ಉಗ್ರರು ಸೇರಿಂದತೆ ಐದು ಆರೋಪಿಗಳ ಮೇಲೆ ಎನ್‌ಐಎ ಆರೋಪಪಟ್ಟಿ ಸಲ್ಲಿಸಿದೆ.

ಈ ಸುದ್ದಿಯನ್ನೂ ಓದಿ: ಲಷ್ಕರ್‌-ಇ-ತೋಯ್ಬಾದ ನಾಲ್ಕು ಮಂದಿ ಉಗ್ರರು ಮಟಾಶ್‌

ಎನ್ಐಎ ತನಿಖೆಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯದವರನ್ನು ಹಾಗೂ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದಿಂದ ಎಲ್‌ಇಟಿ ಭಯೋತ್ಪಾದನಾ ಸಂಘಟನೆ ಈ ಕೃತ್ಯವನ್ನು ನಡೆಸಿತ್ತು.