ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೆನಡಾದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಭಾರತೀಯ ಉದ್ಯಮಿಯ ಹತ್ಯೆ; ಪಂಜಾಬ್ ಗಾಯಕನ ಮನೆ ಮೇಲೆ ದಾಳಿ

ಕೆನಡಾದಲ್ಲಿ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಅಟ್ಟಹಾಸ ಮುಂದುರಿದಿದ್ದು, ಭಾರತೀಯ ಮೂಲದ ಉದ್ಯಮಿ ದರ್ಶನ್ ಸಿಂಗ್ ಸಾಹಸಿ ಎಂಬವವರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ. ಅಲ್ಲದೆ ಪಂಜಾಬಿ ಗಾಯಕನ ಮನೆಯ ಮೇಲೆಯೂ ಗುಂಡು ಹಾರಿಸಲಾಗಿದ್ದು, ಇದರ ಹೊಣೆಯನ್ನು ಈ ಗ್ಯಾಂಗ್ ಹೊತ್ತುಕೊಂಡಿದೆ. ವರದಿಗಳ ಪ್ರಕಾರ, ಬ್ರಿಟಿಷ್ ಕೊಲಂಬಿಯಾದ ಅಬ್ಬಟ್ಸ್‌ಫೋರ್ಡ್‌ನಲ್ಲಿರುವ ತಮ್ಮ ಮನೆಯಿಂದ ಕಾರಿನ ಬಳಿ ಬರುತ್ತಿದ್ದಂತೆ ಸಾಹಸಿಯ ಮೇಲೆ ಗ್ಯಾಂಗ್‌ನ ಸದಸ್ಯನೊಬ್ಬ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ.

ಕೆನಡಾದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಭಾರತೀಯನ ಹತ್ಯೆ

ಮೃತ ಉದ್ಯಮಿ ದರ್ಶನ್ ಸಿಂಗ್ ಸಾಹಸಿ -

Profile Sushmitha Jain Oct 29, 2025 9:48 PM

ಒಟ್ಟಾವಾ, ಅ. 29: ಕೆನಡಾ(Canada)ದಲ್ಲಿ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌(Lawrence Bishnoi gang)ನ ಅಟ್ಟಹಾಸ ಮುಂದುರಿದಿದ್ದು, ಭಾರತೀಯ ಮೂಲದ ಉದ್ಯಮಿ ದರ್ಶನ್ ಸಿಂಗ್ ಸಾಹಸಿ (Darshan Singh Sahasi) ಎಂಬವವರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ. ಅಲ್ಲದೆ ಪಂಜಾಬಿ ಗಾಯಕನ ಮನೆಯ ಮೇಲೆಯೂ ಗುಂಡು ಹಾರಿಸಲಾಗಿದ್ದು, ಇದರ ಹೊಣೆಯನ್ನು ಈ ಗ್ಯಾಂಗ್ ಹೊತ್ತುಕೊಂಡಿದೆ. ರಾಜಸ್ಥಾನ ಪೊಲೀಸರು ಅಮೆರಿಕದಲ್ಲಿ ಈ ಗ್ಯಾಂಗ್‌ನ ಸಕ್ರಿಯ ಸದಸ್ಯರಾದ ಜಗ್ದೀಪ್ ಸಿಂಗ್ ಅಲಿಯಾಸ್ ಜಗ್ಗಾ (Jagdeep Singh alias Jagga)ನನ್ನು ಬಂಧಿಸಿದ ಒಂದು ದಿನದ ಬಳಿಕ ಈ ಎರಡು ಘಟನೆಗಳು ನಡೆದಿದೆ.

ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನಾದ ಗೋಲ್ಡಿ ಧಿಲ್ಲನ್ (Goldy Dhillon) ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಭಾರತ ಮೂಲದ ಉದ್ಯಮಿ ದರ್ಶನ್ ಸಿಂಗ್ ಸಾಹಸಿ ಹತ್ಯೆ ಹಿಂದೆ ತಮ್ಮ ಗ್ಯಾಂಗ್ ಇರುವುದಾಗಿ ಹೇಳಿಕೊಂಡಿದೆ. "68 ವರ್ಷದ ದರ್ಶನ್ ಸಿಂಗ್ ಸಾಹಸಿ, ದೊಡ್ಡ ಮಟ್ಟದಲ್ಲಿ ಮಾದಕವಸ್ತುಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಅವರ ಬಳಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಆದರೆ ಹಣ ನೀಡಲು ನಿರಾಕರಸಿದ್ದಕ್ಕೆ ನಮ್ಮ ಗ್ಯಾಂಗ್ ಹತ್ಯೆ ಮಾಡಿದೆ" ಎಂದು ಧಿಲ್ಲನ್ ಹೇಳಿದ್ದಾನೆ.

ಈ ಸುದ್ದಿಯನ್ನೂ ಓದಿ: Lawrence Bishnoi Gang: ಯುಎಸ್- ಕೆನಡಾ ಗಡಿ ಬಳಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಮತ್ತೊರ್ವ ಸದಸ್ಯನ ಅರೆಸ್ಟ್‌

ವರದಿಗಳ ಪ್ರಕಾರ, ಬ್ರಿಟಿಷ್ ಕೊಲಂಬಿಯಾ(British Columbia)ದ ಅಬ್ಬಟ್ಸ್‌ಫೋರ್ಡ್‌ (Abbotsford)ನಲ್ಲಿರುವ ತಮ್ಮ ಮನೆಯಿಂದ ಕಾರಿನ ಬಳಿ ಬರುತ್ತಿದ್ದಂತೆ ಸಾಹಸಿಯ ಮೇಲೆ ಗ್ಯಾಂಗ್‌ನ ಸದಸ್ಯನೊಬ್ಬ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಸಾಹಸಿ ಆಸ್ಪತ್ರೆಯಲ್ಲಿ ಕೊನಯುಸಿರೆಳೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಘಟನೆಯ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಮೂರು ಶಾಲೆಗಳನ್ನು ಬಂದ್ ಮಾಡಲಾಗಿತ್ತು. ಸಾಹಸಿ 1991ರಲ್ಲಿ ಕೆನಡಾಕ್ಕೆ ವಲಸೆ ಬಂದಿದ್ದರು. ನಂತರ ಕ್ಯಾನಮ್ ಇಂಟರ್‌ನ್ಯಾಷನಲ್‌ ಎಂಬ ವಸ್ತ್ರ ಮರುಬಳಕೆ ಸಂಸ್ಥೆಯ ಅಧ್ಯಕ್ಷರಾದರು. ಸಾಹಸಿ ಹತ್ಯೆಯಿಂದ ಪಂಜಾಬಿ ವಲಸೆ ಸಮುದಾಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಉದ್ಯಮಿ ದರ್ಶನ್ ಸಿಂಗ್ ಸಾಹಸಿ ಹತ್ಯೆಯ ದೃಶ್ಯ:



ಪಂಜಾಬಿ ಗಾಯಕನ ಮನೆಯಲ್ಲಿ ಗುಂಡಿನ ದಾಳಿ

ಅದೇ ದಿನ, ಗಾಯಕ ಚನ್ನಿ ನಟ್ಟನ್ ಅವರ ಮನೆ ಮೇಲೆ ಕೂಡಾ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಗುಂಡಿನ ದಾಳಿ ನಡೆಸಿದೆ. ಮತ್ತೊಬ್ಬ ಗಾಯಕ ಸರ್ದಾರ್ ಖೇರಾ ಜತೆ ನಟ್ಟನ್ ಮತ್ತಷ್ಟು ಆತ್ಮೀಯನಾಗಲು ಮುಂದಾದ ಹಿನ್ನೆಲೆ ಅವರ ಮನೆ ಮುಂದೆ ದಾಳಿ ಮಾಡಲಾಗಿದೆ. ಆದರೆ ನಟ್ಟನ್ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ ಎಂದು ಕೃತ್ಯ ನಡೆಸಿದ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಧಿಲ್ಲೊನ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾನೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೆನಡಾದಲ್ಲಿ ಉಗ್ರ ಸಂಘಟನೆ ಎಂದು ಪಟ್ಟಿ ಮಾಡಲ್ಪಟ್ಟಿದೆ. ಜಗತ್ತಿನಾದ್ಯಂತ 700ಕ್ಕೂ ಹೆಚ್ಚು ಶೂಟರ್‌ಗಳು ಈ ಜಾಲದ ಭಾಗವಾಗಿದ್ದಾರೆ. ಈ ಗ್ಯಾಂಗ್ ಮೇಲೆ ಸಿದ್ಧು ಮೂಸೇವಾಲಾ ಹತ್ಯೆ, ಸಲ್ಮಾನ್ ಖಾನ್ ಬೆದರಿಕೆ ಪ್ರಕರಣ ಮತ್ತು ಪ್ರೋ-ಖಾಲಿಸ್ತಾನ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪಗಳಿವೆ.