ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಂಡಲ್ಲಿ ಲಾಭಗಳಿಸಲು ಸಾಧ್ಯ: ಕುಲಪತಿ ಡಾ.ಸುರೇಶ್ ಅಭಿಮತ
ಕೃಷಿ ಲಾಭದಾಯಕವಲ್ಲವೆಂಬ ನಕಾರಾತ್ಮಕ ಅಭಿಪ್ರಾಯವುಳ್ಳ ರೈತರು ಪ್ರಗತಿಪರ ರೈತರೊಡ ಗೂಡಿ ಚರ್ಚಿಸಿ ತಮ್ಮ ಮನೋಸ್ಥೆöÊರ್ಯ ಉತ್ತಮಪಡಿಸಿಕೊಂಡಾಗ ನಷ್ಟದಿಂದ ಪಾರಾಗುವ ಕಲೆ ಸಿದ್ಧಿಸಲಿದೆ. ಬುದ್ದಿವಂತ ರೈತರು ಕೂಡ ಸುತ್ತಮುತ್ತಲಿರುವ ರೈತರಿಗೆ ತಮ್ಮ ಜ್ಞಾನವನ್ನು ಹಂಚುವ ಮನಸ್ಸು ಮಾಡಬೇಕು.
-
Ashok Nayak
Oct 29, 2025 11:25 PM
ಚಿಕ್ಕಬಳ್ಳಾಪುರ : ಜಿಲ್ಲೆಯ ರೈತಬಾಂಧವರು ಪ್ರಗತಿ ಶೀಲರಾಗಿದ್ದು ಆಧುನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದು ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ( Bangalore Agricultural University) ದ ಕುಲಪತಿ ಡಾ.ಸುರೇಶ್ ಎ.ವಿ. ತಿಳಿಸಿದರು.
ತಾಲೂಕಿನ ಬಲಜಿಗ ಪಡೆಯ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಪಶು ಸಂಗೋಪನೆ ಇಲಾಖೆಗಳು ಚಿಕ್ಕಬಳ್ಳಾಪುರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಬೆಳೆ ಕ್ಷೇತ್ರೋತ್ಸವ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ: Chinthamani News: ಎಫ್ ಸಿ ಇಲ್ಲದ ಶಾಲಾ ವಾಹನಗಳಿಗೆ ಎಫ್ ಸಿ ಮಾಡಿಕೊಳ್ಳಲು ಖಡಕ್ ವಾರ್ನಿಂಗ್
ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಆಧುನಿಕ ತಾಂತ್ರಿಕತೆಗಳನ್ನು ಕೃಷಿ ಮತ್ತು ತೋಟಗಾರಿಕೆಯಲ್ಲಿ ಬಳಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಇಲ್ಲಿಯ ಕೃಷಿ ಸನ್ನಿವೇಶವನ್ನು ನೋಡಿದರೆ ಕರ್ನಾಟಕದ ಇಸ್ರೇಲ್ ಎಂದು ಕರೆಯಬಹುದೆಂದು ಅಭಿಪ್ರಾಯಪಟ್ಟರು.
ಕೃಷಿ ಲಾಭದಾಯಕವಲ್ಲವೆಂಬ ನಕಾರಾತ್ಮಕ ಅಭಿಪ್ರಾಯವುಳ್ಳ ರೈತರು ಪ್ರಗತಿಪರ ರೈತರೊಡ ಗೂಡಿ ಚರ್ಚಿಸಿ ತಮ್ಮ ಮನೋಸ್ಥೆöÊರ್ಯ ಉತ್ತಮಪಡಿಸಿಕೊಂಡಾಗ ನಷ್ಟದಿಂದ ಪಾರಾಗುವ ಕಲೆ ಸಿದ್ಧಿಸಲಿದೆ.ಬುದ್ದಿವಂತ ರೈತರು ಕೂಡ ಸುತ್ತಮುತ್ತಲಿರುವ ರೈತರಿಗೆ ತಮ್ಮ ಜ್ಞಾನವನ್ನು ಹಂಚುವ ಮನಸ್ಸು ಮಾಡಬೇಕು. ಹೀಗಾದಲ್ಲಿ ಯುವಶಕ್ತಿ ಗ್ರಾಮೀಣ ಪರಿಸರದಿಂದ ನಗರಗಳಿಗೆ ವಲಸೆ ಹೋಗುತ್ತಿರುವ ಸಮಸ್ಯೆಯನ್ನು ತಗ್ಗಿಸಬಹುದೆಂದು ಹೇಳಿದರು.
ಇದರ ಜತೆಗೆ ನಮ್ಮ ಸರಕಾರಗಳು ಕೂಡ ರೈತಾಪಿ ವರ್ಗ ಬೆಳೆದ ಬೆಳೆಗಳಿಗೆ ನೇರ ಮಾರುಕಟ್ಟೆ ಸೌಲಭ್ಯ ಒದಗಿಸಲು ಮುಂದಾದಲ್ಲಿ ಕೃಷಿಕರ ಬಾಳು ಹಸನಾಗುವುದರಲ್ಲಿ ಸಂದೇಹವಿಲ್ಲವೆAದು ಹೇಳಿದ ಅವರು ಕೃಷಿ ಸಂಶೋಧನಾ ಕೇಂದ್ರಗಳು ಈ ನಿಟ್ಟಿನಲ್ಲಿ ಹೆಚ್ಚಿನದಾಗಿ ಕಾರ್ಯೋನ್ಮುಖ ವಾಗಬೇಕೇಂದು ಕರೆಯಿತ್ತರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಥಿ ಯೋಜನೆಯ ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ದೇಶಕ ಪ್ರಶಾಂತ್ ಅವರು ಸ್ವಸಹಾಯ ಸಂಘಗಳ ಬಲವರ್ಧನೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಡಾ|| ಜಿ.ಎಂ.ಸುಜಿತ್ ಪ್ರಾಸ್ತಾವಿಕ ನುಡಿಯಲ್ಲಿ ಕೇಂದ್ರದಲ್ಲಿ ಸಾಧಿಸಿದ ಪ್ರಗತಿ ಕುರಿತಾದ ವಿವರವಾದ ವರದಿ ಮಂಡಿಸಿದರು.
ಈ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಾದ ಮಿಮಿಕ್ರಿ ಗೋಪಿ, ಕೃಷಿ ಹಾಸ್ಯ ರಸಾಯನ ಕುರಿತು ಕಾರ್ಯಕ್ರಮ ನಡೆಸಿಕೊಟ್ಟರು. ಸದರಿ ಕಾರ್ಯಕ್ರಮದಲ್ಲಿ ಕೃಷಿ ವಿಶ್ವ ವಿದ್ಯಾನಿಲಯದ ಅಧಿಕಾರಿ ಗಳು ಹಾಗು ಪ್ರಗತಿ ಪರ ರೈತ ಬಾಂಧವರು ಕೂಡಿದಂತೆ ಒಟ್ಟಾರೆ ೪೦೦ ಜನ ಭಾಗವಹಿಸಿದ್ದರು.