ಜಪಾನ್‌ನಲ್ಲಿ 7.2 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ
Tsunami Alert: ಸೋಮವಾರ ಉತ್ತರ ಜಪಾನ್ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ. ಹೊಕ್ಕೈಡೋ ಕರಾವಳಿಯಲ್ಲಿಅಮೋರಿ ಬಳಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಕೇಂದ್ರಬಿಂದು ಸಮುದ್ರ ಮಟ್ಟದಿಂದ ಸುಮಾರು 50 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದ್ದು, ಸುಮಾರು 3 ಮೀಟರ್ (10 ಅಡಿ) ಎತ್ತರದ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ.
ಸಾಂದರ್ಭಿಕ ಚಿತ್ರ -
ಟೋಕಿಯೊ, ಡಿ. 8: ಸೋಮವಾರ (ಡಿಸೆಂಬರ್ 8) ಉತ್ತರ ಜಪಾನ್ ಕರಾವಳಿಯಲ್ಲಿ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ. ಹೊಕ್ಕೈಡೋ ಕರಾವಳಿಯಲ್ಲಿಅಮೋರಿ ಬಳಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಸಂಸ್ಥೆ ತಿಳಿಸಿದೆ. ಇದರ ಕೇಂದ್ರಬಿಂದು ಸಮುದ್ರ ಮಟ್ಟದಿಂದ ಸುಮಾರು 50 ಕಿಲೋಮೀಟರ್ (ಸುಮಾರು 30 ಮೈಲು) ಆಳದಲ್ಲಿ ಪತ್ತೆಯಾಗಿದೆ. ಸುಮಾರು 3 ಮೀಟರ್ (10 ಅಡಿ) ಎತ್ತರದ ಸುನಾಮಿ ಅಲೆಗಳು ಏಳಬಹುದು (Tsunami Alert) ಎನ್ನುವ ಮುನ್ಸೂಚನೆ ನೀಡಲಾಗಿದೆ.
ಈ ಪ್ರದೇಶದಲ್ಲಿರುವ ಪರಮಾಣು ವಿದ್ಯುತ್ ಸ್ಥಾವರಗಳ ತಪಾಸಣೆ ನಡೆಸುತ್ತಿವೆ ಎಂದು ಅದಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಜಪಾನ್ ಪ್ರಧಾನಿ ಸನೇ ತಕೈಚಿ ಹಾನಿಯ ಪ್ರಮಾಣವನ್ನು ನಿರ್ಣಯಿಸಲು ಸರ್ಕಾರ ತುರ್ತು ಕಾರ್ಯಪಡೆಯನ್ನು ಸ್ಥಾಪಿಸಿದೆ ಎಂದು ಹೇಳಿದರು. "ನಾವು ಜನರ ಜೀವಕ್ಕೆ ಆದ್ಯತೆ ನೀಡುತ್ತಿದ್ದೇವೆ. ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ" ಎಂದು ತಿಳಿಸಿದರು. ಅಮೋರಿ ಪಟ್ಟಣದ ಹೋಟೆಲ್‌ನಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಜಪಾನ್‌ನಲ್ಲಿ ಸಂಭವಿಸಿದ ಭೂಕಂಪ:
BREAKING 🔴
— Open Source Intel (@Osint613) December 8, 2025
7.2 magnitude massiv quake struck off northern Japan. Authorities issue a tsunami advisory. pic.twitter.com/z88ua66EQ9
ಜಪಾನ್ ಭೂಕಂಪದಿಂದ ಉಂಟಾಗುವ ಅಪಾಯಕಾರಿ ಸುನಾಮಿ ಅಲೆಗಳು ಜಪಾನ್ ಮತ್ತು ರಷ್ಯಾದ ಕರಾವಳಿಯಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ಎಚ್ಚರಿಸಿವೆ. ರಾಯಿಟರ್ಸ್ ವರದಿಯ ಪ್ರಕಾರ, ಪೂರ್ವ ಜಪಾನ್ ರೈಲ್ವೆ ಈ ಪ್ರದೇಶದಲ್ಲಿ ಕೆಲವು ರೈಲು ಸೇವೆಗಳನ್ನು ಸ್ಥಗಿತಗೊಳಿಸಿದೆ.
ಜಪಾನ್‌ನಲ್ಲಿ ಸಂಭವಿಸಿದ ಭೂಕಂಪದ ದೃಶ್ಯ:
7.6 earthquake in Japan (Aomori) , felt really strong to me from Haneda Airport! The most impressive part is Japanese people couldn’t care less about it , they were very calm all the time… as nothing happened 🥹 pic.twitter.com/CXT5Onw1Pb
— Marisa (@MariaDebochca) December 8, 2025
ಈ ವರ್ಷ ಜುಲೈನಲ್ಲಿ ನೈಋತ್ಯ ಜಪಾನ್‌ನ ದೂರದ ದ್ವೀಪವೊಂದರಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪದ ಕೇಂದ್ರಬಿಂದುವು ಕಗೋಶಿಮಾದ ಟೋಕಾರ ದ್ವೀಪದ ಕರಾವಳಿಯಲ್ಲಿತ್ತು. ಆದರೆ ಅದು ಸುನಾಮಿ ಅಲೆ ಎಬ್ಬಿಸಿರಲಿಲ್ಲ. ಇನ್ನು ರಷ್ಯಾದ ಕಮ್ಚಟ್ಕಾ ಪ್ರದೇಶದಲ್ಲಿ ಅದೇ ತಿಂಗಳು 8.8 ತೀವ್ರತೆಯ ಭೂಕಂಪಕ್ಕೆ ಸಂಭವಿಸಿ ಸುನಾಮಿ ಅಲೆಗಳನ್ನು ಸೃಷ್ಟಿಸಿತ್ತು. ಇದು 14 ವರ್ಷಗಳಲ್ಲಿ ಕಂಡುಬಂದ ವಿಶ್ವದ ಅತಿದೊಡ್ಡ ಭೂಕಂಪ ಎನಿಸಿಕೊಂಡಿತ್ತು. 2011ರಲ್ಲಿ ಜಪಾನ್‌ನಲ್ಲಿ 9.1 ತೀವ್ರತೆಯ ಭೂಕಂಪ ಸಂಭವಿಸಿ, ದೊಡ್ಡ ಸುನಾಮಿಯನ್ನು ಉಂಟು ಮಾಡಿ, ದೇಶವನ್ನು ಧ್ವಂಸಗೊಳಿಸಿತ್ತು. ಆ ದುರಂತದ ಕಹಿ ನೆನಪಿನಿಂದ ಇನ್ನೂ ಹೊರ ಬಾರದ ಜಪಾನ್ ಇದೀಗ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಅಮೆರಿಕದ ಗಡಿಯಲ್ಲಿ 7.0 ತೀವ್ರತೆಯ ಭೂಕಂಪ
ಇನ್ನು ಅಮೆರಿಕದಲ್ಲಿ ಭಾನುವಾರ (ಡಿಸೆಂಬರ್ 7) 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಅಲಾಸ್ಕಾ ಮತ್ತು ಕೆನಡಾದ ಯುಕಾನ್ ಪ್ರದೇಶದ ನಡುವಿನ ಗಡಿಯ ಸಮೀಪ ಭೂಮಿ ಕಂಪಿಸಿತ್ತು. ಭೂಕಂಪದ ಕೇಂದ್ರಬಿಂದು ಅಲಾಸ್ಕಾದ ರಾಜಧಾನಿ ಜುನೌದಿಂದ ವಾಯುವ್ಯಕ್ಕೆ ಸುಮಾರು 370 ಕಿಲೋ ಮೀಟರ್ ಮತ್ತು ಕೆನಡಾದ ವೈಟ್‌ಹಾರ್ಸ್‌ನಿಂದ ಪಶ್ಚಿಮಕ್ಕೆ ಸುಮಾರು 250 ಕಿಲೋಮೀಟರ್ ದೂರದಲ್ಲಿತ್ತು. ಕಂಪನವು ಎಷ್ಟು ಪ್ರಬಲವಾಗಿತ್ತೆಂದರೆ ಸಾವಿರಾರು ಕಿಲೋ ಮೀಟರ್ ದೂರಕ್ಕೂ ಭೂಮಿ ಕಂಪಸಿದ ಅನುಭವವಾಗಿತ್ತು.
ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪ; ಕೊಲ್ಕತ್ತಾದಲ್ಲಿಯೂ ಕಂಪಿಸಿದ ಭೂಮಿ
ಭೂಕಂಪದ ಕೇಂದ್ರವು ಸುಮಾರು 10 ಕಿಲೋ ಮೀಟರ್ ಆಳದಲ್ಲಿತ್ತು ಎಂದು ವರದಿಯಾಗಿದೆ. ಭೂಕಂಪಕ್ಕೆ ಹತ್ತಿರದ ಕೆನಡಾದ ಪಟ್ಟಣ ಹೈನ್ಸ್ ಜಂಕ್ಷನ್ ಕೇಂದ್ರಬಿಂದುದಿಂದ ಸುಮಾರು 130 ಕಿಲೋ ಮೀಟರ್ ದೂರದಲ್ಲಿದೆ.