Mark Carney: ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಪ್ರಮಾಣವಚನ ಸ್ವೀಕಾರ
ಕೆನಡಾದ ನೂತನ ಪ್ರಧಾನಿಯಾಗಿ ಶುಕ್ರವಾರ ಮಾಜಿ ಕೇಂದ್ರ ಬ್ಯಾಂಕರ್ ಮಾರ್ಕ್ ಕಾರ್ನಿ ಅವರು ಪ್ರಮಾಣವಚನ ಸ್ವೀಕರಿಸಿದರು. ಒಟ್ಟಾವಾದ ರೈಡೋ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಗವರ್ನರ್ ಜನರಲ್ ಮೇರಿ ಸೈಮನ್ ಅವರು ಕಾರ್ನಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಮಾರ್ಕ್ ಕಾರ್ನಿ

ಒಟ್ಟಾವಾ: ಕೆನಡಾದ ನೂತನ ಪ್ರಧಾನಿಯಾಗಿ ಶುಕ್ರವಾರ ಮಾಜಿ ಕೇಂದ್ರ ಬ್ಯಾಂಕರ್ ಮಾರ್ಕ್ ಕಾರ್ನಿ (Mark Carney) ಅವರು ಪ್ರಮಾಣವಚನ ಸ್ವೀಕರಿಸಿದರು. ಒಟ್ಟಾವಾದ ರೈಡೋ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಗವರ್ನರ್ ಜನರಲ್ ಮೇರಿ ಸೈಮನ್ ಅವರು ಕಾರ್ನಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. . ಕೆನಡಾದ ಮಾಜಿ ಬ್ಯಾಂಕ್ ಮುಖ್ಯಸ್ಥ ಜಸ್ಟಿನ್ ಟ್ರುಡೊ (Justin Trudeau) ಅವರ ನಂತರ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಸ್ಟಿನ್ ಟ್ರುಡೋ ಜನವರಿಯಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಲಿಬರಲ್ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ಕಾರ್ನಿ ಶೇ. 85.9 ರಷ್ಟು ಮತಗಳನ್ನು ಗಳಿಸುವ ಮೂಲಕ ಅಭೂತಪೂರ್ವ ಗೆಲುವು ಸಾಧಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಣಿಜ್ಯ ಸಮರ ಮತ್ತು ಇಡೀ ದೇಶವನ್ನು 51ನೇ ರಾಜ್ಯವಾಗಿ ವಶಪಡಿಸಿಕೊಳ್ಳುವ ಬೆದರಿಕೆ ಹಾಗೂ ನಿರೀಕ್ಷಿತ ಫೆಡರಲ್ ಚುನಾವಣೆಯ ಮೂಲಕ ತಮ್ಮ ದೇಶವನ್ನು ಮುನ್ನಡೆಸುವ ಸವಾಲು ಮಾರ್ಕ್ ಕಾರ್ನಿ ಮುಂದೆ ಇದೆ. ಟ್ರಂಪ್ "ಕೆನಡಾದ ಸಾರ್ವಭೌಮತ್ವವನ್ನು ಗೌರವಿಸುವುದಾದರೆ" ಮತ್ತು "ವ್ಯಾಪಾರಕ್ಕೆ ಹೆಚ್ಚು ಸಮಗ್ರವಾದ ಒಂದು ಸಾಮಾನ್ಯ ವಿಧಾನವನ್ನು" ಅಳವಡಿಸಿಕೊಳ್ಳಲು ಸಿದ್ಧರಿದ್ದರೆ ನಾನು ಅವರನ್ನು ಭೇಟಿಯಾಗಲು ಸಿದ್ಧನಿದ್ದೇನೆ ಎಂದು ಕಾರ್ನಿ ಹೇಳಿದ್ದಾರೆ.
Mark Carney has been sworn in as the new Prime Minister of Canada!
— Art Candee 🍿🥤 (@ArtCandee) March 14, 2025
Don't let Donald Trump push you around, Mark! pic.twitter.com/8yeS9I1Dh9
ಈ ಸುದ್ದಿಯನ್ನೂ ಓದಿ: Mark Carney : ಕೆನಡಾದ ಮುಂದಿನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಆಯ್ಕೆ ; ಅಧಿಕಾರದಿಂದ ಕೆಳಗಿಳಿದ ಟ್ರುಡೋ
59 ವರ್ಷದ ಮಾರ್ಕ್ ಕಾರ್ನಿ ಅವರು 2008 ರಿಂದ 2013 ರವರೆಗೆ ಬ್ಯಾಂಕ್ ಆಫ್ ಕೆನಡಾದ 8 ನೇ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ. 2011 ರಿಂದ 2018 ರವರೆಗೆ ಅವರು ಹಣಕಾಸು ಸ್ಥಿರತೆ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾರ್ನಿ ಮಾರ್ಚ್ 16, 1965 ರಂದು ಕೆನಡಾದ ವಾಯುವ್ಯ ಪ್ರಾಂತ್ಯಗಳ ಫೋರ್ಟ್ ಸ್ಮಿತ್ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದರು. 1988 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ನಂತರ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರಿಸಿದರು, ಅಲ್ಲಿ ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಎರಡನ್ನೂ ಪಡೆದುಕೊಂಡಿದ್ದಾರೆ.