ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mark Carney : ಕೆನಡಾದ ಮುಂದಿನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಆಯ್ಕೆ ; ಅಧಿಕಾರದಿಂದ ಕೆಳಗಿಳಿದ ಟ್ರುಡೋ

ಕೆನಡಾದ ಆಡಳಿತಾರೂಢ ಲಿಬರಲ್‌ ಪಕ್ಷವು ಸೋಮವಾರ ಮಾರ್ಕ್ ಕಾರ್ನಿ ಅವರನ್ನು ಮುಂದಿನ ಲಿಬರಲ್ ಪಕ್ಷದ ನಾಯಕ ಮತ್ತು ಕೆನಡಾದ 24 ನೇ ಪ್ರಧಾನ ಮಂತ್ರಿಯಾಗಿ ಘೋಷಿಸಿದೆ. ಕೆನಡಾದ ಮಾಜಿ ಬ್ಯಾಂಕ್ ಮುಖ್ಯಸ್ಥ ಜಸ್ಟಿನ್ ಟ್ರುಡೊ ಅವರ ನಂತರ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.

ಕೆನಡಾದ ಮುಂದಿನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಆಯ್ಕೆ

ಮಾರ್ಕ್ ಕಾರ್ನಿ

Profile Vishakha Bhat Mar 10, 2025 8:57 AM

ಒಟ್ಟಾವಾ: ಕೆನಡಾದ ಆಡಳಿತಾರೂಢ ಲಿಬರಲ್‌ ಪಕ್ಷವು ಸೋಮವಾರ ಮಾರ್ಕ್ ಕಾರ್ನಿ (Mark Carney) ಅವರನ್ನು ಮುಂದಿನ ಲಿಬರಲ್ ಪಕ್ಷದ ನಾಯಕ ಮತ್ತು ಕೆನಡಾದ 24 ನೇ ಪ್ರಧಾನ ಮಂತ್ರಿಯಾಗಿ ಘೋಷಿಸಿದೆ. ಕೆನಡಾದ ಮಾಜಿ ಬ್ಯಾಂಕ್ ಮುಖ್ಯಸ್ಥ ಜಸ್ಟಿನ್ ಟ್ರುಡೊ (Justin Trudeau) ಅವರ ನಂತರ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಲಿಬರಲ್ ಪಕ್ಷದ ಅಧ್ಯಕ್ಷ ಸಚಿತ್ ಮೆಹ್ರಾ ಅವರು ಮಾರ್ಕ್ ಕಾರ್ನಿ ಅವರನ್ನು ಮುಂದಿನ ಪ್ರಧಾನಿ ಎಂದು ಘೋಷಿಸಿದ್ದಾರೆ. ಜಸ್ಟಿನ್‌ ಟ್ರುಡೋ ಜನವರಿಯಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಲಿಬರಲ್ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ಕಾರ್ನಿ ಶೇ. 85.9 ರಷ್ಟು ಮತಗಳನ್ನು ಗಳಿಸುವ ಮೂಲಕ ಅಭೂತಪೂರ್ವ ಗೆಲುವು ಸಾಧಿಸಿದರು.

59 ವರ್ಷದ ಮಾರ್ಕ್ ಕಾರ್ನಿ ಅವರು 2008 ರಿಂದ 2013 ರವರೆಗೆ ಬ್ಯಾಂಕ್ ಆಫ್ ಕೆನಡಾದ 8 ನೇ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ. 2011 ರಿಂದ 2018 ರವರೆಗೆ ಅವರು ಹಣಕಾಸು ಸ್ಥಿರತೆ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾರ್ನಿ ಮಾರ್ಚ್ 16, 1965 ರಂದು ಕೆನಡಾದ ವಾಯುವ್ಯ ಪ್ರಾಂತ್ಯಗಳ ಫೋರ್ಟ್ ಸ್ಮಿತ್ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದರು. 1988 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ನಂತರ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರಿಸಿದರು, ಅಲ್ಲಿ ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಎರಡನ್ನೂ ಪಡೆದುಕೊಂಡಿದ್ದಾರೆ.

ಕಾರ್ನಿ, ಬ್ಯಾಂಕ್‌ ಆಫ್‌ ಕೆನಡಾದ ಅಧ್ಯಕ್ಷರಾಗಿದ್ದಾಗ, ಹಣಕಾಸು ಬಿಕ್ಕಟ್ಟನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವ್ಯಾಪಾರ ಯುದ್ಧ ಮತ್ತು ದೇಶವನ್ನು ವಶಪಡಿಸಿಕೊಳ್ಳುವ ಬೆದರಿಕೆಯನ್ನು ಎದುರಿಸುತ್ತಿರುವ ಹಾಗೂ ಮತ್ತು ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ನೂತನ ಪ್ರಧಾನಿ ಆಯ್ಕೆ ಮಹತ್ವವನ್ನು ಪಡೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ: Jagmeet Singh: ಕೆನಡಾದ ತಂಟೆಗೆ ಬಂದ್ರೆ ಹುಶಾರ್‌! ಟ್ರಂಪ್‌ಗೆ ಜಸ್ಟಿನ್‌ ಟ್ರುಡೊ ಆಪ್ತ ಜಗ್ಮೀತ್ ಸಿಂಗ್‌ ಖಡಕ್‌ ಎಚ್ಚರಿಕೆ

ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾಡಿದ ವಿಜಯ ಭಾಷಣದಲ್ಲಿ, ಕಾರ್ನಿ, ಟ್ರಂಪ್ ನೇತೃತ್ವದ ಅಮೆರಿಕವು ಕೆನಡಾದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಆದರೆ ನಾವು ಅದನ್ನು ತಡೆಯಲೇ ಬೇಕು ಎಂದು ಹೇಳಿದ್ದಾರೆ. ಅಮೆರಿಕನ್ನರು ನಮ್ಮ ಸಂಪನ್ಮೂಲಗಳು, ನಮ್ಮ ನೀರು, ನಮ್ಮ ಭೂಮಿ, ನಮ್ಮ ದೇಶವನ್ನು ಬಯಸುತ್ತಾರೆ. ಕೆನಡಾದ ಕಾರ್ಮಿಕರು, ಕುಟುಂಬಗಳು ಮತ್ತು ವ್ಯವಹಾರಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ನಾವು ಅವರನ್ನು ಯಶಸ್ವಿಯಾಗಲು ಬಿಡವುದಿಲ್ಲ ಎಂದು ಅವರು ಹೇಳಿದ್ದಾರೆ.