ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಅವಾಮಿ ಲೀಗ್‌ನ ಕಚೇರಿಗೆ ಬೆಂಕಿ

Bangladesh Protests: ಮೊಹಮ್ಮದ್ ಯೂನುಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ ವರ್ಷವಷ್ಟೇ ಪ್ರಧಾನಿ ಶೇಖ್ ಹಸೀನಾರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಅದಾದ ಬಳಿಕ ಹಸೀನಾ ಅಲ್ಲಿಂದ ಪಲಾಯನ ಮಾಡಿ ಭಾರತಕ್ಕೆ ಬಂದಿದ್ದರು. ಮೊಹಮ್ಮದ್ ಯೂನಸ್ ಮಧ್ಯಂತರ ಸರ್ಕಾರವನ್ನು ರಚಿಸಿದ್ದರು.

Massive Protests In Bangladesh

ಢಾಕಾ, ಡಿ.19: ಜುಲೈ ದಂಗೆಯ ಸಂಘಟಕ ಷರೀಫ್ ಉಸ್ಮಾನ್ ಹಾದಿ(Sharif Osman Hadi) ಸಿಂಗಾಪುರದಲ್ಲಿ ನಿಧನರಾದ ನಂತರ, ಢಾಕಾ ಮತ್ತು ಚಟ್ಟೋಗ್ರಾಮ್ ಸೇರಿದಂತೆ ಬಾಂಗ್ಲಾದೇಶದ ಹಲವಾರು ಭಾಗಗಳಲ್ಲಿ ಬೃಹತ್ ಪ್ರತಿಭಟನೆಗಳು(Bangladesh Protests) ಭುಗಿಲೆದ್ದಿದೆ. ಚುನಾವಣಾ ಪ್ರಚಾರ ವೇಳೆ ಉಸ್ಮಾನ್ ಹಾದಿ ಮೇಲೆ ಫೈರಿಂಗ್ ನಡೆದಿತ್ತು. ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ವರದಿಗಳ ಪ್ರಕಾರ, ರಾಜ್‌ಶಾಹಿಯಲ್ಲಿರುವ ಅವಾಮಿ ಲೀಗ್‌ನ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಉದ್ರಿಕ್ತ ಪ್ರತಿಭಟನಾಕಾರರು ಬಾಂಗ್ಲಾದೇಶದ ಪ್ರಮುಖ ಬಂಗಾಳಿ ಭಾಷೆಯ ಪತ್ರಿಕೆಗಳಲ್ಲಿ ಒಂದಾದ ಪ್ರೋಥೋಮ್ ಅಲೋ ಕಚೇರಿಯ ಮೇಲೂ ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಇದಕ್ಕೂ ಮೊದಲು ಫೇಸ್‌ಬುಕ್ ಪೋಸ್ಟ್‌ನಲ್ಲಿ, ಇಂಕ್ವಿಲಾಬ್ ಮಂಚ ಬಾಂಗ್ಲಾದೇಶಿಗಳು ಬೀದಿಗಿಳಿದು ಶಹಬಾಗ್‌ನಲ್ಲಿ ಒಟ್ಟುಗೂಡುವಂತೆ ಒತ್ತಾಯಿಸಿದ್ದರು. ಹಾದಿ ಗಾಯಗೊಂಡು ಹುತಾತ್ಮರಾದರೆ ದೇಶದ ಸಾರ್ವಭೌಮತ್ವವನ್ನು ರಕ್ಷಿಸುವ ಚಳುವಳಿಯಾಗಿ ಪ್ರತಿಭಟನೆಯನ್ನು ರೂಪಿಸಲಾಗುವುದು ಎಂದು ಹೇಳಿದ್ದರು.

ಮೊಹಮ್ಮದ್ ಯೂನುಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ ವರ್ಷವಷ್ಟೇ ಪ್ರಧಾನಿ ಶೇಖ್ ಹಸೀನಾರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಅದಾದ ಬಳಿಕ ಹಸೀನಾ ಅಲ್ಲಿಂದ ಪಲಾಯನ ಮಾಡಿ ಭಾರತಕ್ಕೆ ಬಂದಿದ್ದರು. ಮೊಹಮ್ಮದ್ ಯೂನಸ್ ಮಧ್ಯಂತರ ಸರ್ಕಾರವನ್ನು ರಚಿಸಿದ್ದರು.



ಬಾಂಗ್ಲಾದೇಶದಲ್ಲಿ ಆಂತರಿಕ ಪರಿಸ್ಥಿತಿ ಹದಗೆಟ್ಟ ಕಾರಣ ಭದ್ರತಾ ಕಾರಣಗಳಿಂದಾಗಿ ಭಾರತದ ಎರಡು ವೀಸಾ ಅರ್ಜಿ ಕೇಂದ್ರಗಳನ್ನು ಗುರುವಾರ ಮುಚ್ಚಲಾಗಿದೆ ರಾಜ್‌ಶಾಹಿ ಮತ್ತು ಖುಲ್ನಾ ಪ್ರದೇಶಗಳಲ್ಲಿನ ಕೇಂದ್ರಗಳನ್ನು ಮುಚ್ಚಲಾಗಿದೆ ಭಾರತೀಯ ವೀಸಾ ಅರ್ಜಿ ಕೇಂದ್ರದ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಮಾಜಿ ಪ್ರಧಾನಿ ಶೇಕ್‌ ಹಸೀನಾ ಅವರನ್ನು ವಾಪಸ್ ಕಳುಹಿಸಿಕೊಡುವುದು ಸೇರಿ ಅನೇಕ ವಿಚಾರಗಳಿಗೆ ಸಂಬಂಧಿಸಿ ಢಾಕಾದಲ್ಲಿರುವ ಭಾರತದ ಹೈಕಮಿಷನ್‌ ಕಚೇರಿ ಎದುರು ‘ಜುಲೈ ಒಯಿಕ್ಯಾ’ ಸಂಘಟನೆಯ ನೂರಾರು ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿ, ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದರು.

‘ಭಾರತ ಹೈಕಮಿಷನ್‌ ಕಚೇರಿ ಮೇಲೆ ದಾಳಿ ನಡೆಸುವ ಬಗ್ಗೆ ಯೋಜನೆ ಇದೆ ಎಂದು ಉಗ್ರರು ಘೋಷಿಸಿದ್ದರ ಬಗ್ಗೆ ಮಧ್ಯಂತರ ಸರ್ಕಾರವು ತನಿಖೆಯನ್ನೂ ನಡೆಸಿಲ್ಲ ಅಥವಾ ನಮ್ಮೊಂದಿಗೆ ಸಾಕ್ಷ್ಯಗಳನ್ನೂ ಹಂಚಿಕೊಂಡಿಲ್ಲ. ಇದು ದುರದೃಷ್ಟಕರ’ ಎಂದು ಬಾಂಗ್ಲಾದೇಶದ ರಾಯಭಾರಿ ರಿಯಾಜ್‌ ಹಮೀದುಲ್ಲಾ ಅವರನ್ನು ಕರೆಸಿದ ಭಾರತದ ವಿದೇಶಾಂಗ ಸಚಿವಾಲಯ ತನ್ನ ಕಳವಳವನ್ನು ವ್ಯಕ್ತಪಡಿಸಿತ್ತು.