ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Modi Thailand Visit : ಬ್ಯಾಂಕಾಕ್ ನೆಲದಲ್ಲಿ ಥಾಯ್ ವರ್ಶನ್‌ ರಾಮಾಯಣ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ

Narendra Modi: 6ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗುರುವಾರ ಥಾಯ್ಲೆಂಡ್‌ ಗೆ ತೆರಲಿದ್ದಾರೆ. ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರ ಆಹ್ವಾನದ ಮೇರೆಗೆ, ಅಧಿಕೃತ ಭೇಟಿಗಾಗಿ ಮತ್ತು 6ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಥಾಯ್ಲೆಂಡ್‌ಗೆ ತೆರಳಿದ್ದಾರೆ. ಈ ವೇಳೆ ಪ್ರಧಾನಿ ಮತ್ತೊಂದು ವಿಶೇಷ ಘಟನೆ ನಡೆದಿದ್ದು, ಮೋದಿ ಥಾಯ್​ ರಾಮಾಯಣವನ್ನು ವೀಕ್ಷಿಸಿದ್ದಾರೆ.

ಥಾಯ್ ವರ್ಶನ್‌ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರವಾಸ

Profile Sushmitha Jain Apr 3, 2025 5:05 PM

ಬ್ಯಾಂಕಾಕ್: 6ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು(Narendra Modi) ಇಂದು ಥಾಯ್ಲೆಂಡ್‌ಗೆ ತೆರಲಿದ್ದು, ಬ್ಯಾಕಾಂಕ್​ಗೆ ಬಂದಿಳಿದ ಪ್ರೈಮ್ ಮಿನಿಸ್ಟರ್ ಬ್ಯಾಕಾಂಕ್​ ಜನತೆ ಜಯಗೋಘದೊಂದಿಗೆ ಭರ್ಜರಿ ಸ್ವಾಗತ ಕೋರಿದ್ದಾರೆ. ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರ ಆಹ್ವಾನದ ಮೇರೆಗೆ, ಅಧಿಕೃತ ಭೇಟಿಗಾಗಿ ಮತ್ತು 6ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಥಾಯ್ಲೆಂಡ್‌ಗೆ ಪ್ರವಾಸ ಕೈಗೊಂಡಿದ್ದು, ಬ್ಯಾಕಾಂಕ್​ಗೆ ಬರುತ್ತಿದ್ದಂತೆ ಮೋದಿಗೆ ಅದ್ದೂರಿ ವೆಲ್ಕಂ ಸಿಕ್ಕಿದೆ. ಈ ವೇಳೆ ಪ್ರಧಾನಿ ಮತ್ತೊಂದು ವಿಶೇಷ ಘಟನೆ ನಡೆದಿದ್ದು, ಮೋದಿ ಥಾಯ್​ ರಾಮಾಯಣವನ್ನು ವೀಕ್ಷಿಸಿದ್ದಾರೆ.



ಹೌದು..6 ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಥೈಲ್ಯಾಂಡ್‌ನಲ್ಲಿದ್ದಾರೆ, ಅಲ್ಲಿ ಅವರು ಏಪ್ರಿಲ್ ಇಂದು ಪ್ರಾದೇಶಿಕ ನಾಯಕರೊಂದಿಗೆ ಸಹಕಾರದ ಪ್ರಮುಖ ಕ್ಷೇತ್ರಗಳ ಕುರಿತು ಚರ್ಚಿಸಲಿದ್ದಾರೆ. ಇದೇ ವೇಳೆ ಬ್ಯಾಂಕಾಕ್ ನೆಲದಲ್ಲಿ ಪ್ರಧಾನಿ ಮೋದಿ ಥಾಯ್​ ರಾಮಾಯಣ ಹಾಗೂ ಗರ್ಭಾ ನೃತ್ಯವನ್ನು ವೀಕ್ಷಿಸಿದ್ದು, ಭಾರತ ಮತ್ತು ಥೈಲ್ಯಾಂಡ್ ನಡುವಿನ ಆಳವಾದ ಸಾಂಸ್ಕೃತಿಕ ಸಂಬಂಧಗಳನ್ನು ಸಂಕೇತಿಸುವ ರಾಮಾಯಣದ ಥಾಯ್ ಆವೃತ್ತಿ ‘ರಾಮಕಿಯೆನ್’ ಅನ್ನು ವೀಕ್ಷಿಸಿದ್ದಾರೆ. ಈ ಪ್ರವಾಸದ ಬಗ್ಗೆ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಬರೆದು ಕೊಂಡಿದ್ದು, “ಬಿಮ್‌ಸ್ಟೆಕ್ ದೇಶಗಳ ನಾಯಕರನ್ನು ಭೇಟಿ ಮಾಡಲು ಮತ್ತು ಭಾರತೀಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಹಯೋಗವನ್ನು ಮತ್ತಷ್ಟು ಬಲಪಡಿಸಲು ಈ ಭೇಟಿ ಫಲಪ್ರದವಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.



ಕಳೆದ ದಶಕದಲ್ಲಿ, ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಪ್ರಾದೇಶಿಕ ಅಭಿವೃದ್ಧಿ, ಸಂಪರ್ಕ ಮತ್ತು ಆರ್ಥಿಕ ಪ್ರಗತಿಯನ್ನು ಉತ್ತೇಜಿಸಲು ಬಿಮ್‌ಸ್ಟೆಕ್ ಮಹತ್ವದ ವೇದಿಕೆಯಾಗಿ ಹೊರಹೊಮ್ಮಿದೆ. ಈ ಅಧಿಕೃತ ಭೇಟಿಯ ಸಮಯದಲ್ಲಿ, ಪ್ರಧಾನಿ ಶಿನವಾತ್ರ ಮತ್ತು ಥಾಯ್ಲೆಂಡ್‌ನ ನಾಯಕರೊಂದಿಗೆ ನಮ್ಮ ಪ್ರಾಚೀನ ಐತಿಹಾಸಿಕ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಸಲು ಅವಕಾಶ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ಥಾಯ್ಲೆಂಡ್‌ ಬಳಿಕ ಶ್ರೀಲಂಕಾ ಪ್ರವಾಸ

ಥಾಯ್ಲೆಂಡ್‌ ಪ್ರವಾಸದ ಬಳಿಕ ಪ್ರಧಾನಿ ಮೋದಿಯವರು ಎರಡು ದಿನಗಳ ಶ್ರೀಲಂಕಾ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಏಪ್ರಿಲ್‌ 4ರಿಂದ 6ರವರೆಗೆ ಅವರು ಶ್ರೀಲಂಕಾ ಪ್ರವಾಸದಲ್ಲಿ ಇರಲಿದ್ದಾರೆ. “ಪರಸ್ಪರರ ಭವಿಷ್ಯಕ್ಕಾಗಿ ಸಂಬಂಧಗಳನ್ನು ಬೆಳೆಸುವ” ಜಂಟಿ ಧ್ಯೇಯದೊಂದಿಗೆ ಪ್ರಗತಿ ಪರಿಶೀಲನೆ ಹಾಗೂ ಪರಸ್ಪರ ಸಹಕಾರದ ಉದ್ದೇಶಗಳನ್ನು ಸಾಧಿಸಲು ಈ ಪ್ರವಾಸ ಸಾಕ್ಷಿಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. “ಈ ಭೇಟಿಗಳು ಭಾರತೀಯರು ಮತ್ತು ಹಲವು ವಲಯಗಳಲ್ಲಿನ ನಿಕಟ ಸಂಬಂಧಗಳನ್ನು ಬಲಪಡಿಸಲು ಕೊಡುಗೆ ನೀಡುವ ವಿಶ್ವಾಸವಿದೆ” ಎಂದು ಅವರು ತಿಳಿಸಿದರು.

2025ರಲ್ಲಿ ಪ್ರಧಾನಿ ಮೋದಿಯವರ ವಿದೇಶ ಭೇಟಿಗಳು

2025ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಮೂರು ದೇಶಗಳಿಗೆ ಭೇಟಿ ನೀಡಿದ್ದಾರೆ. ಫೆಬ್ರವರಿ 10ರಿಂದ 13ರವರೆಗೆ ಅವರು ಫ್ರಾನ್ಸ್‌ ಮತ್ತು ಅಮೆರಿಕ ಪ್ರವಾಸ ಕೈಗೊಂಡಿದ್ದರು. ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಧಾನಿ ಮೋದಿಯವರ ಮೊದಲ ಭೇಟಿ ಇದಾಗಿತ್ತು. ಈ ಭೇಟಿಯ ವೇಳೆ, ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಲಾಗಿತ್ತು.

ಪ್ರಧಾನಿ ಭೇಟಿ ಸಂದರ್ಭದಲ್ಲಿ ಟ್ರಂಪ್‌ ಸುಂಕ ನೀತಿ, ರಕ್ಷಣಾ ವಲಯದಲ್ಲಿ ಪಾಲುದಾರಿಕೆ ಸೇರಿದಂತೆ ಹಲವು ವಿಚಾರಗಳು ಚರ್ಚಿಸಲ್ಪಟ್ಟಿದ್ದವು ಎಂದು ವಿದೇಶಾಂಗ ಇಲಾಖೆ ಹೇಳಿತ್ತು. ಇದರ ಬಳಿಕ ಮಾರ್ಚ್‌ನಲ್ಲಿ ಪ್ರಧಾನಿ ಮೋದಿಯವರು ಮಾರಿಷಸ್‌ಗೆ ಭೇಟಿ ನೀಡಿದ್ದರು. ಮಾರ್ಚ್‌ 11 ಮತ್ತು 12ರಂದು ಮಾರಿಷಸ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿಯವರಿಗೆ ಅಧ್ಯಕ್ಷರಾದ ಧರಮ್ ಗೋಖೂಲ್ ಅವರು ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ʼ “ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆ್ಯಂಡ್ ಕೀ ಆಫ್ ದಿ ಇಂಡಿಯನ್ ಓಷನ್ʼ ಅನ್ನು ಪ್ರದಾನ ಮಾಡಿದ್ದರು. ಈ ಭೇಟಿ ವೇಳೆ ಭಾರತ ಮತ್ತು ಮಾರಿಷಸ್‌ ಹಲವು ಒಪ್ಪಂದಗಳಿಗೆ ಸಹಿ ಮಾಡಿದ್ದವು. ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.