#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Pakistan's Airspace: 41 ನಿಮಿಷ ಪಾಕ್‌ ವಾಯುಪ್ರದೇಶದಲ್ಲಿ ಸಂಚರಿಸಿದ ಮೋದಿ ಇದ್ದ ವಿಮಾನ!

ಫ್ರಾನ್ಸ್‌ ಮತ್ತು ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಪಾಕಿಸ್ತಾನದ ವಾಯುಪ್ರದೇಸವನ್ನು ಬಳಸಿದ್ದಾರೆ. ಸುಮಾರು 41 ನಿಮಿಷಗಳ ಕಾಲ ಮೋದಿ ಸಂಚರಿಸುತ್ತಿದ್ದ ವಿಮಾನ ಪಾಕ್‌ ವಾಯುಪ್ರದೇಶದಲ್ಲಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕ್‌ ವಾಯುಪ್ರದೇಶದಲ್ಲಿ ಮೋದಿ ಇದ್ದ ವಿಮಾನ ಸಂಚರಿಸಿದ್ದೇಕೆ?

ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್.

Profile Ramesh B Feb 12, 2025 7:39 PM

ಪ್ಯಾರಿಸ್‌: 4 ದಿನಗಳ ಫ್ರಾನ್ಸ್‌ ಮತ್ತು ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಫೆ. 10ರಂದು ದಿಲ್ಲಿಯಿಂದ ತೆರಳಿದ್ದಾರೆ. ಎಐ ಕ್ರಿಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತದಿಂದ ಫ್ರಾನ್ಸ್​ನತ್ತ ಪ್ರಯಾಣ ಬೆಳೆಸಿದ ಅವರು ಈ ವೇಳೆ ಪಾಕಿಸ್ತಾನದ ವಾಯುಪ್ರದೇಶವನ್ನು (Pakistan’s Airspace) ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುಮಾರು 41 ನಿಮಿಷಗಳ ಕಾಲ ಮೋದಿ ಸಂಚರಿಸುತ್ತಿದ್ದ ವಿಮಾನ ಪಾಕ್‌ ವಾಯುಪ್ರದೇಶದಲ್ಲಿತ್ತು ಎನ್ನಲಾಗಿದೆ. ಮಧ್ಯಾಹ್ನ ಮಧ್ಯಾಹ್ನ 1 ಗಂಟೆಗೆ ದಿಲ್ಲಿಯಿಂದ ಹೊರಟ ಅವರು ಸಂಜೆ ಪ್ಯಾರಿಸ್‌ಗೆ ತಲುಪಿದರು.

ದಿಲ್ಲಿಯಿಂದ ಪ್ಯಾರಿಸ್‌ಗೆ ತೆರಳುವ ವಿಶೇಷ ವಿಮಾನದಲ್ಲಿ ಮೋದಿ ಪ್ರಯಾಣಿಸಿದ್ದಾರೆ. ಲಾಹೋರ್‌ ಸಮೀಪ ಪಾಕಿಸ್ತಾನ ವಾಯುಪ್ರದೇಶವನ್ನು ಪ್ರವೇಶಿಸಿದ ಮೋದಿ ಇದ್ದ ವಿಮಾನ ಬಳಿಕ 34,000 ಅಡಿ ಎತ್ತರದಲ್ಲಿ ಶೇಖುಪುರ, ಹಫೀಜಾಬಾದ್, ಚಕ್ವಾಲ್ ಮತ್ತು ಕೊಹತ್‌ನಲ್ಲಿ ಸಂಚರಿಸಿತು.

ʼʼಮೋದಿ ಅವರ ವಿಮಾನವು ಪಾಕಿಸ್ತಾನದ ವಾಯುಪ್ರದೇಶದ ಮೂಲಕ ಸುಮಾರು 41 ನಿಮಿಷಗಳ ಕಾಲ ಪ್ರಯಾಣಿಸಿತು. ಆದರೆ ಈ ಬಗ್ಗೆ ಪಾಕಿಸ್ತಾನದ ಜನರಿಗೆ ಯಾವುದೇ ಮಾಹಿತಿ ಇರಲಿಲ್ಲʼʼ ಎಂದು ವಿಮಾನಯಾನ ಮೂಲಗಳು ತಿಳಿಸಿವೆ.



ಯಾಕಾಗಿ ಪಾಕಿಸ್ತಾನದ ವಾಯುಪ್ರದೇಶ ಬಳಕೆ?

ಅಫ್ಘಾನ್‌ ವಾಯುಪ್ರದೇಶ ಸದ್ಯ ಮುಚ್ಚಿರುವ ಹಿನ್ನೆಲೆಯಲ್ಲಿ ವಿಶೇಷ ಅನುಮತಿಯೊಂದಿಗೆ ಮೋದಿ ಅವರಿದ್ದ ವಿಮಾನ ಪಾಕಿಸ್ತಾನದಲ್ಲಿ ಪ್ರಯಾಣಿಸಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತಕ್ಕೆ ಅನುಮತಿ ಇರಲಿಲ್ಲ

2019ರಲ್ಲಿ ಪುಲ್ವಾಮಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಇದಾದ ಬಳಿಕ ಪಾಕಿಸ್ತಾನ 2019ರ ಫೆ. 26ರಂದು ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ಅದೇ ವರ್ಷದ ಮಾರ್ಚ್‌ನಲ್ಲಿ ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಭಾಗಶಃ ಮತ್ತೆ ತೆರೆಯಿತು. ಆದರೆ ಭಾರತೀಯ ವಿಮಾನಗಳಿಗಿದ್ದ ನಿರ್ಬಂಧ ಮುಂದುವರಿದಿತ್ತು. ಅದೇ ವರ್ಷ ಜರ್ಮನಿಗೆ ತೆರಳಲು ಮೋದಿ ಅವರ ವಿಮಾನ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲು ಅನುಮತಿ ಕೋರಲಾಗಿತ್ತು. ಆದರೆ ಪಾಕ್‌ ಈ ಮನವಿಯನ್ನು ನಿರಾಕರಿಸಿತ್ತು. ಅದಾದ 2 ವರ್ಷಗಳ ಬಳಿಕ ಅಂದರೆ 2021ರಲ್ಲಿ ಭಾರತದ ವಿಮಾನಕ್ಕೆ ಸಂಚಾರಕ್ಕೆ ಪಾಕ್‌ ಅನುಮತಿ ನೀಡಿತು.

ಇದೇ ಮೊದಲ ಸಲವಲ್ಲ

ವಿಶೇಷ ಎಂದರೆ ಮೋದಿ ಈ ಹಿಂದೆಯೂ ಪಾಕಿಸ್ತಾನ ವಾಯುಪ್ರದೇಶವನ್ನು ತಮ್ಮ ಸಂಚಾರಕ್ಕಾಗಿ ಬಳಸಿಕೊಂಡಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಮೋದಿ ಅವರಿದ್ದ ವಿಮಾನವು ಪೋಲೆಂಡ್‌ನಿಂದ ದಿಲ್ಲಿಗೆ ಮರಳುವಾಗ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಿತ್ತು. ವಿಮಾನವು ರಾತ್ರಿ 11:00ಕ್ಕೆ ಪಾಕಿಸ್ತಾನದ ಭೂಪ್ರದೇಶವನ್ನು ಪ್ರವೇಶಿಸಿತ್ತು ಮತ್ತು ಸುಮಾರು 46 ನಿಮಿಷಗಳ ಕಾಲ ಆ ದೇಶದ ಗಡಿಯೊಳಗೆ ಸಂಚರಿಸಿತ್ತು. ಪಂಜಾಬ್‌ನ ಅಮೃತಸರಕ್ಕೆ ಪ್ರವೇಶಿಸುವ ಮೊದಲು ಇಸ್ಲಾಮಾಬಾದ್ ಮತ್ತು ಲಾಹೋರ್‌ನ ವಾಯು ನಿಯಂತ್ರಣ ವಲಯಗಳ ಮೂಲಕ ಹಾದು ಬಂದಿತ್ತು.

ಈ ಸುದ್ದಿಯನ್ನೂ ಓದಿ: Modi in Paris: ಮರ್ಸೆಲ್ಲೆ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ; ವೀರ್‌ ಸಾವರ್ಕರ್‌ಗೆ ಸ್ಮರಣೆ

ಈ ಬಾರಿ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಬಂದರು ನಗರಿ ಮಾರ್ಸಿಲ್ಲೆಗೆ ಆಗಮಿಸಿ ವೀರ ಸಾವರ್ಕರ್​ಗೆ ಗೌರವ ಸಲ್ಲಿಸಿದ್ದಾರೆ.