ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nobel Prize 2025: ಈ ಬಾರಿಯ ನೊಬೆಲ್‌ ಪ್ರಶಸ್ತಿಯ ಘೋಷಣೆ ಆರಂಭ; ಏನಿದರ ಹಿನ್ನೆಲೆ? ಯಾವೆಲ್ಲ ಕ್ಷೇತ್ರಕ್ಕೆ ನೀಡಲಾಗುತ್ತದೆ?

ವಿಶ್ವದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದ್ದು, ಮೊದಲನೇ ಹಂತದಲ್ಲಿ ವೈದ್ಯಕೀಯ ಕ್ಷೇತ್ರದ ಮೂರು ವಿಜ್ಞಾನಿಗಳಿಗೆ ಈ ಅತ್ಯುನ್ನತ ಪ್ರಶಸ್ತಿಯನ್ನು ನೀಡಲಾಗಿದೆ. ದೇಹದ ರೋಗನಿರೋಧಕ ವ್ಯವಸ್ಥೆ ತನ್ನದೇ ಅಂಗಾಂಗಗಳ ಮೇಲೆ ದಾಳಿ ಮಾಡದಂತೆ ಅದು ಹೇಗೆ ನಿಯಂತ್ರಿತವಾಗಿರುತ್ತದೆ ಎಂಬ ವಿಷಯವನ್ನು ಪತ್ತೆಹಚ್ಚಿದ ಮಹತ್ವದ ಸಂಶೋಧನೆಗಾಗಿ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ ನೀಡಲಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತರು

ನವದೆಹಲಿ: ವಿಶ್ವದ ಶ್ರೀಮಂತ ಪ್ರಶಸ್ತಿ ಎಂಬ ಹೆಗ್ಗಳಿಕೆ ಪಡೆದಿರುವ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು (Nobel Prize 2025), ವೈದ್ಯಕೀಯ ವಿಭಾಗದಲ್ಲಿ ಮೂವರು ವಿಜ್ಞಾನಿಗಳಿಗೆ ನೀಡಲಾಗಿದೆ. ರೋಗನಿರೋಧಕ ವ್ಯವಸ್ಥೆ ತನ್ನದೇ ಅಂಗಾಂಗಗಳ ಮೇಲೆ ದಾಳಿ ಮಾಡದಂತೆ ಹೇಗೆ ನಿಯಂತ್ರಿಸುತ್ತದೆ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ನಡೆಸಿದ ನವೀನ ಸಂಶೋಧನೆಗಳಿಗೆ ಈ ಪ್ರಶಸ್ತಿ ಧಕ್ಕಿದ್ದು, ಅದರ ಕರ್ತೃಗಳಾದ ಮೇರಿ ಇ. ಬ್ರಂಕೋವ್, ಫ್ರೆಡ್ ರಾಮ್ಸ್‌ಡೆಲ್ ಮತ್ತು ಶಿಮೊನ್ ಸಕಾಗುಚಿ ಅವರಿಗೆ ನೀಡುವುದಾಗಿ ನೊಬೆಲ್ ಸಮಿತಿ ಪ್ರಕಟಿಸಿದೆ.

ದೇಹದ ರೋಗನಿರೋಧಕ ವ್ಯವಸ್ಥೆ ತನ್ನದೇ ಅಂಗಾಂಗಗಳ ಮೇಲೆ ದಾಳಿ ಮಾಡದಂತೆ ಅದು ಹೇಗೆ ನಿಯಂತ್ರಿತವಾಗಿರುತ್ತದೆ ಎಂಬ ವಿಷಯವನ್ನು ಪತ್ತೆಹಚ್ಚಿದ ಮಹತ್ವದ ಸಂಶೋಧನೆಗಾಗಿ, ಈ ಮೂವರು ವಿಜ್ಞಾನಿಗಳಿಗೆ 2025ರ ಸಾಲಿನ ವೈದ್ಯಕೀಯ ನೋಬೆಲ್ ಪ್ರಶಸ್ತಿ ನೀಡಲಾಗಿದೆ.

ಮೇರಿ ಇ. ಬ್ರಂಕೋವ್ ಅಮೆರಿಕದ ಪ್ರಸಿದ್ಧ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದು, ಪ್ರಸ್ತುತ ಅವರು ಸಿಯಾಟಲ್‌ನ ಇನ್‌ಸ್ಟಿಟ್ಯೂಟ್ ಫಾರ್ ಸಿಸ್ಟಮ್ಸ್ ಬಯೋಲಜಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನೊಬೆಲ್‌ ಪ್ರಶಸ್ತಿ ಪುರಸ್ಕೃತರ ಘೋಷಣೆ:



ಫ್ರೆಡ್ ರಾಮ್‌ಡೆಲ್ 1987ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಲಾಸ್ ಏಂಜಲೀಸ್ (UCLA) ನಿಂದ ಪಿಎಚ್‌ಡಿ ಪಡೆದಿದ್ದು, ಅವರು ಈಗ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಸೊನೊಮಾ ಬಯೋಥೆರಪಿಟಿಕ್ಸ್ ಸಂಸ್ಥೆಯಲ್ಲಿ ವೈಜ್ಞಾನಿಕ ಸಲಹೆಗಾರ (Scientific Advisor) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಮೊನ್ ಸಕಾಗುಚಿ 1976ರಲ್ಲಿ ಎಂ.ಡಿ. ಮತ್ತು 1983ರಲ್ಲಿ ಜಪಾನದ ಕೋಟೋ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದು, ಪ್ರಸ್ತುತ ಅವರು ಒಸಾಕಾ ವಿಶ್ವವಿದ್ಯಾಲಯದ ಇಮ್ಯುನೋಲಾಜಿ ಫ್ರಾಂಟಿಯರ್ ರಿಸರ್ಚ್ ಸೆಂಟರ್‌ನಲ್ಲಿ ವಿಶೇಷ ಪ್ರೊಫೆಸರ್ (Distinguished Professor) ಆಗಿದ್ದಾರೆ.

ಈ ಪ್ರಶಸ್ತಿಯನ್ನು, ದೇಹದ ರೋಗನಿರೋಧಕ ವ್ಯವಸ್ಥೆಯ ನಿಯಂತ್ರಣದಲ್ಲಿ ಮುಖ್ಯಪಾತ್ರ ವಹಿಸುವ “ಪೆರಿಫೆರಲ್ ಇಮ್ಯೂನ್ ಟಾಲರೆನ್ಸ್” (ಬಾಹ್ಯ ರೋಗನಿರೋಧಕ ಸಹಿಷ್ಣುತೆ)ಗೆ ಸಂಬಂಧಿಸಿದ ಮಹತ್ವದ ಸಂಶೋಧನೆಗೆ ನೀಡಲಾಗಿದೆ. ಈ ಸಂಶೋಧಕರು, ದೇಹದ ಸ್ವಂತ ಆರೋಗ್ಯಕರ ಕಣಗಳ ಮೇಲೆ ರೋಗನಿರೋಧಕ ವ್ಯವಸ್ಥೆ ದಾಳಿ ಮಾಡದಂತೆ ನೋಡಿಕೊಳ್ಳುವ ರೆಗ್ಯುಲೇಟರಿ ಟಿ ಸೆಲ್‌ಗಳು (Tregs) ಎಂಬುದನ್ನು ಗುರುತಿಸಿದ್ದಾರೆ. ಈ ಮಹತ್ವದ ಆವಿಷ್ಕಾರವು ಕ್ಯಾನ್ಸರ್ ಮತ್ತು ಆಟೋಇಮ್ಯೂನ್ ಕಾಯಿಲೆಗಳಿಗಾಗಿ ಹೊಸ ಚಿಕಿತ್ಸಾ ಮಾರ್ಗಗಳನ್ನು ಅಳವಡಿಕೊಳ್ಳಲು ಸಹಾಯ ಮಾಡಲಿದೆ.

ಯಾರಿಗೆಲ್ಲ ಕೊಡುತ್ತಾರೆ?

ಜಗತ್ತಿನ ಪ್ರಮುಖ ಹಾಗೂ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ನೊಬೆಲ್‌ ಪ್ರಶಸ್ತಿ ಗಳಿಸಿದ್ದು, ಆರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜ್ಞಾನಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ರಸಾಯನ ವಿಜ್ಞಾನ, ಭೌತ ವಿಜ್ಞಾನ, ವೈದ್ಯ ವಿಜ್ಞಾನ, ಶಾಂತಿ, ಅರ್ಥಶಾಸ್ತ್ರ ಹಾಗೂ ಸಾಹಿತ್ಯ ಕ್ಷೇತ್ರಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿ ಆಯಾಯ ವಿಷಯದಲ್ಲಿ ನಿಪುಣತೆ ಹೊಂದಿರುವ ಮಹಾನ್ ಸಾಧಕರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.

ಈ ಸುದ್ದಿಯನ್ನು ಓದಿ: ChatGPT: ಪ್ರಪಂಚದಾದ್ಯಂತ ಚಾಟ್‌ಜಿಪಿಟಿ ಸ್ಥಗಿತ; ಲಕ್ಷಾಂತರ ಬಳಕೆದಾರರ ಪರದಾಟ

ಪ್ರಾರಂಭವಾಗಿದ್ದು ಯಾವಾಗ?

1901ರಿಂದ ನೊಬೆಲ್‌ ಪ್ರಶಸ್ತಿ ಪ್ರದಾನಕ್ಕೆ ಚಾಲನೆ ದೊರೆತಿದ್ದು, ಸ್ವೀಡಿಷ್ ವಿಜ್ಞಾನಿ ಆಲ್ಫ್ರೆಡ್‌ ನೊಬೆಲ್‌ ಯಾವೆಲ್ಲ ಕ್ಷೇತ್ರಗಳಲ್ಲಿ ಈ ಪ್ರಶಸ್ತಿಯನ್ನು ನೀಡಬೇಕು ಎನ್ನುವ ಬಗ್ಗೆ ವಿಲ್ ಬರೆದಿದ್ದರು. ಈ ಪ್ರಶಸ್ತಿ ಪ್ರದಾನ ಮಾಡುವುದಕ್ಕೆ ಬರೋಬ್ಬರಿ 13 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿರಿಸಿದ್ದಾರೆ. ಪ್ರತಿ ನೊಬೆಲ್ ಪ್ರಶಸ್ತಿಯನ್ನು ಗರಿಷ್ಠ ಮೂರು ವ್ಯಕ್ತಿಗಳಿಗೆ ನೀಡಬಹುದು. ಅದರಲ್ಲಿ ಬಂದ ಹಣವನ್ನು ಮೂರು ಜನ ಹಂಚಿಕೊಳ್ಳುತ್ತಾರೆ.

ಇಂದು ಮೊದಲನೇ ಹಂತದ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಣೆಯಾಗಿದ್ದು, ಇನ್ನು ಐದು ಕ್ಷೇತ್ರದಲ್ಲಿ ಪ್ರಶಸ್ತಿ ಘೋಷಣೆಯಾಗುವುದು ಬಾಕಿ ಇದೆ. ಇಂದಿನಿಂದ ಅಕ್ಟೋಬರ್ 10ರವರೆಗೆ ನೊಬೆಲ್ ಪ್ರಶಸ್ತಿಗೆ ಭಾಜನರಾದವರ ಹೆಸರನ್ನು ಪ್ರಕಟಿಸಲಾಗುತ್ತದೆ.