ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ChatGPT: ಪ್ರಪಂಚದಾದ್ಯಂತ ಚಾಟ್‌ಜಿಪಿಟಿ ಸ್ಥಗಿತ; ಲಕ್ಷಾಂತರ ಬಳಕೆದಾರರ ಪರದಾಟ

ChatGPT ಬಳಕೆದಾರರಿಗೆ ಸಮಸ್ಯೆ ಎದುರಾಗಿದ್ದು,ಭಾರತ ಸೇರಿ ವಿಶ್ವಾದ್ಯಂತ ಚಾಟ್‌ಜಿಪಿಟಿ ಸ್ಥಗಿತಗೊಂಡಿದೆ. ಡೌನ್ ಡಿಟೆಕ್ಟರ್ ಎಂಬ ವೆಬ್‌ಸೈಟ್ ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಚಾಟ್‌ಜಿಪಿಟಿಯ ಸ್ಟೇಟಸ್ ಪುಟದಲ್ಲಿ ಓಪನ್‌ಎಐ, ಚಾಟ್‌ಜಿಪಿಟಿ ಈ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದೆ.

ChatGPT ಡೌನ್: ಬಳಕೆದಾರರ ಪರದಾಟ

-

Profile Sushmitha Jain Oct 6, 2025 4:55 PM

ನವದೆಹಲಿ: ಸದ್ಯ ಪ್ರತಿಯೋರ್ವರು OpenAI ಪರಿಚಯಿಸಿದ ChatGPT ಎಐ (AI) ತಂತ್ರಜ್ಞಾನದ (Technology) ಹಿಂದೆ ಬಿದ್ದಿದ್ದು, ಎಲ್ಲ ಕ್ಷೇತ್ರದಲ್ಲಿಯೂ ತನ್ನ ಪಾರುಪತ್ಯ ಸಾಧಿಸಿದೆ. ಎಷ್ಟರ ಮಟ್ಟಿಗೆ ಎಐ ತನ್ನ ಪ್ರಭಾವ ಬೀರಿದೆ ಎಂದರೆ ದೈನಂದಿನ ಕೆಲ ಕಾರ್ಯಗಳಲ್ಲೂ ಅನಿವಾರ್ಯ ಆಗಿ ಹೋಗಿದೆ. ಇದಕ್ಕೆ OpenAI ಪರಿಚಯಿಸಿದ ChatGPT ಹೊರತಾಗಿಲ್ಲ. ವಿದ್ಯಾರ್ಥಿಗಳಿಂದ ಪ್ರತಿ ವಯೋಮಾನದವರು ಇದೀಗ ಚಾಟ್‌ಜಿಪಿಟಿಯ ಮೊರೆ ಹೋಗುತ್ತಿದ್ದು, OpenAI ಪರಿಚಯಿಸಿದ ChatGPT ಕಡಿಮೆ ಸಮಯದಲ್ಲಿ ಇಂಟರ್‌ನೆಟ್‌ ಬಳಕೆದಾರರಿಗೆ ಬಹಳ ಹತ್ತಿರವಾಗಿದೆ. ಅದ್ಭುತ ಸಾಮರ್ಥ್ಯಗಳು ಮತ್ತು ಎಲ್ಲ ವಿಷಯಗಳ ಆಳವಾದ ತಿಳುವಳಿಕೆಯೊಂದಿಗೆ ಇದು ಭಾರತದಲ್ಲಿಯೂ ಜನಪ್ರಿಯವಾಗಿದ್ದು, ಹೆಚ್ಚಿನ ಜನರನ್ನು ತಲುಪುವ ಸಲುವಾಗಿ ಮೊದಲು ಐಫೋನ್‌ನಲ್ಲಿ ಮಾತ್ರ ಲಭ್ಯವಿದ್ದ ಈ ಅಪ್ಲಿಕೇಷನ್‌ ಆಂಡ್ರಾಯ್ಡ್‌ನಲ್ಲೂ ಲಭ್ಯವಿದೆ.

ಆದರೆ ಇದೀಗ ಏಕಾಏಕಿ ಓಪನ್‌ಎಐನ ಪ್ರಸಿದ್ಧ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್, ChatGPT ಭಾರತ ಸೇರಿದಂತೆ ಪ್ರಪಂಚದಾದ್ಯಂತ ಡೌನ್ ಆಗಿದೆ. ಚಾಟ್‌ಜಿಪಿಟಿಯ ಸ್ಟೇಟಸ್ ಪುಟದಲ್ಲಿ ಓಪನ್‌ಎಐ, ಚಾಟ್‌ಜಿಪಿಟಿ ಈ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಒಪ್ಪಿಕೊಂಡಿದೆ. ಜನರು ಸಾಮಾಜಿಕ ಮಾಧ್ಯಮದಲ್ಲಿ ಚಾಟ್‌ಜಿಪಿಟಿಯನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡುತ್ತಿದ್ದಾರೆ. ಚಾಟ್‌ಜಿಪಿಟಿ ಡೌನ್ ಆಗುವುದರ ಜತೆಗೆ, ಬಳಕೆದಾರರಿಗೆ ಅವರ ಹಳೆಯ ಚಾಟ್‌ಗಳನ್ನು ಸಹ ತೋರಿಸುತ್ತಿಲ್ಲ. ಆದರೆ ಓಪನ್ ಎಐ ಸ್ಟೇಟಸ್ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡದೇ ಇರುವುದು ಬಳಕೆದಾರರನ್ನು ಮತ್ತಷ್ಟು ಕೆರಳಿಸಿದೆ.

ಈ ಸುದ್ದಿಯನ್ನು ಓದಿ:I Love Muhammad: ಮತ್ತೆ ಸದ್ದು ಮಾಡಿದ ಬಲ್ಡೋಜರ್; 'ಐ ಲವ್ ಮುಹಮ್ಮದ್’ ವಿವಾದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಯೋಗಿ ಸರ್ಕಾರ

ಹೌದು, ಆನ್‌ಲೈನ್ ಸೇವೆಗಳ ಸ್ಥಿತಿಗತಿಯನ್ನು ಪತ್ತೆಹಚ್ಚುವ ಡೌನ್‌ಡಿಟೆಕ್ಟರ್ (Downdetector) ವೆಬ್‌ಸೈಟ್‌ನ ಪ್ರಕಾರ, ಸೋಮವಾರ ಮಧ್ಯಾಹ್ನ 12:58ರ ಹೊತ್ತಿಗೆ, ಚಾಟ್‌ಜಿಪಿಟಿ ಸ್ಥಗಿತಗೊಂಡಿರುವ ಬಗ್ಗೆ 500ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಡೌನ್‌ಡಿಟೆಕ್ಟರ್ ಹಂಚಿಕೊಂಡ ಮಾಹಿತಿ ಪ್ರಕಾರ, 80% ChatGPT ಬಳಕೆದಾರರು OpenAI ಕಾರ್ಯ ನಿರ್ವಹಿಸುತ್ತಿಲ್ಲದ ಕಾರಣ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಿದ್ದಾರೆ. ಅದೇ ಸಮಯದಲ್ಲಿ, 13% ಬಳಕೆದಾರರು ವೆಬ್‌ಸೈಟ್ ಸಮಸ್ಯೆಗಳ ಬಗ್ಗೆ ಮತ್ತು 7% ಬಳಕೆದಾರರು ಲಾಗಿನ್ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದಾರೆ.

ಪ್ರಸ್ತುತ, ಕಂಪನಿಯು ಡೌನ್ ಆಗಿರುವುದಕ್ಕೆ ನಿಜವಾದ ಕಾರಣವನ್ನು ನೀಡಿಲ್ಲ, ಆದರೆ ಬಹಳಷ್ಟು ಜನರು ಏಕಕಾಲದಲ್ಲಿ ChatGPT ಅನ್ನು ಬಳಸುತ್ತಿರುವ ಕಾರಣ ಇದು ಸಂಭವಿಸಬಹುದು, ಇದು ಸರ್ವರ್ ಮೇಲೆ ಒತ್ತಡವನ್ನು ಬೀರುತ್ತದೆ. ಇದು ಸಿಸ್ಟಮ್ ನಿಧಾನವಾಗಲು ಅಥವಾ ನಿಲ್ಲಲು ಕಾರಣವಾಗುತ್ತದೆ. ಸಾಫ್ಟ್​ವೇರ್ ಅಪ್‌ಡೇಟ್‌ನಲ್ಲಿನ ಸಮಸ್ಯೆಯಿಂದಲೂ ಇದು ಸಂಭವಿಸಬಹುದು.

ಇನ್ನು ಈಗಾಗಲೇ ನಾಲ್ಕೈದು ಬಾರಿ ಇಂತಹ ಸಮಸ್ಯೆಗಳು ಸಂಭವಿಸಿದ್ದು, ಇದು ಪ್ಲಾಟ್‌ಫಾರ್ಮ್‌ನ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. OpenAI ಡೌನ್ ಆಗಿದೆ ಎಂದು ಡೌನ್ ಡಿಟೆಕ್ಟರ್ ಸಹ ದೃಢಪಡಿಸಿದ್ದು, ಈ ಸ್ಥಗಿತದ ಪರಿಣಾಮ ಜಾಗತಿಕವಾಗಿ ಕಂಡುಬರುತ್ತಿದೆ. ಈ ಸಮಸ್ಯೆಯಿಂದ ಬೆಸತ್ತ ಬಳಕೆದಾರರು ವಿಧ ವಿಧವಾಗಿ ತಮ್ಮ ಆಕ್ರೋಶ ಹಾಗೂ ಅಸಹನೆಯನ್ನು ಹೊರ ಹಾಕಿದ್ದು, ಚಾಟ್‌ಜಿಪಿಟಿ ಡೌನ್ ಆಗಿರುವುದರಿಂದ, ನನ್ನ ತಲೆಗೆ ಕೆಲಸ ಹೆಚ್ಚಾಗಿದೆ ಎಂದಿದ್ದಾರೆ. ಮತ್ತೊಬ್ಬರು ಚಾಟ್‌ಜಿಪಿಟಿ ಸ್ಥಗಿತಗೊಂಡಿರುವುದರಿಂದ ಜಗತ್ತೇ ನಿಂತುಹೋಗುತ್ತಿದೆ ಅನ್ನಿಸುತ್ತಿದೆ ಎಂದು ಕಮೆಂಟ್ ಹಾಕಿದ್ದಾರೆ.