ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಾಯಾಳು ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ರಕ್ಷಣೆಗೆ ರಹಸ್ಯ ಸೈನ್ಯ ನೋಪೋ ನಿಯೋಜನೆ; ಈ ಭದ್ರತಾ ಪಡೆ ಎಷ್ಟು ಬಲಿಷ್ಠ ಗೊತ್ತೆ?

NOPO: ಇರಾನ್‌ನ ಸರ್ವೋಚ್ಚ ನಾಯಕನನ್ನು ಮೊಜ್ತಾಬಾ ಖಮೇನಿ ಅವರನ್ನು ರಕ್ಷಿಸಲು ನಿಯೋಜಿಸಲಾದ ರಹಸ್ಯ ಭದ್ರತಾ ಪಡೆ ನೋಪೋ ಮತ್ತೆ ಚರ್ಚೆಗೆ ಬಂದಿದೆ. ಅಮೆರಿಕ–ಇಸ್ರೇಲ್ ದಾಳಿಯ ಬಳಿಕ ತೀವ್ರವಾಗಿ ಗಾಯಗೊಂಡಿರುವ ಮೊಜ್ತಾಬಾ ಖಮೇನಿ ಅವರ ಭದ್ರತೆಯನ್ನು ಇದೇ ಪಡೆ ನಿರ್ವಹಿಸುತ್ತಿದೆ ಎಂದು ವರದಿಗಳು ಹೇಳುತ್ತಿವೆ. 1991ರಲ್ಲಿ ಸ್ಥಾಪನೆಯಾದ ಈ ವಿಶೇಷ ಪಡೆ ನೇರವಾಗಿ ಸರ್ವೋಚ್ಚ ನಾಯಕತ್ವಕ್ಕೆ ವರದಿ ನೀಡುವ ಅತ್ಯಂತ ಶಕ್ತಿಶಾಲಿ ಮತ್ತು ರಹಸ್ಯ ಕಾರ್ಯಾಚರಣೆ ನಡೆಸುವ ಭದ್ರತಾ ಘಟಕವೆಂದು ಪರಿಗಣಿಸಲಾಗಿದೆ.

ನೋಪೋ ಪಡೆ (ಸಂಗ್ರಹ ಚಿತ್ರ)

ಟೆಹರಾನ್‌, ಮಾ. 14: ಅಮೆರಿಕ-ಇಸ್ರೇಲ್ (US-Israel) ಫೆಬ್ರವರಿ 28ರಂದು ನಡೆಸಿದ ವಾಯುದಾಳಿಯು ಇರಾನ್‌ನ (Iran) ಅಂದಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಸೇರಿದಂತೆ ಅವರ ಇಡೀ ಕುಟುಂಬವನ್ನು ಬಲಿ ಪಡೆದಿದೆ. ಆದರೆ ಆ ಭೀಕರ ದಾಳಿಯಲ್ಲಿ ಅವರ ಪುತ್ರ ಹಾಗೂ ನೂತನ ಉತ್ತರಾಧಿಕಾರಿ ಮೊಜ್ತಾಬಾ ಖಮೇನಿ (Mojtaba Khamenei) ತೀವ್ರವಾಗಿ ಗಾಯಗೊಂಡಿದ್ದರೂ ಬದುಕುಳಿದಿದ್ದಾರೆ. ಅವರು ಬದುಕುಳಿಯಲು ಇರಾನ್‌ನ ಅತ್ಯಂತ ರಹಸ್ಯ ಮತ್ತು ಶಕ್ತಿಶಾಲಿ ಭದ್ರತಾ ಘಟಕ ನೋಪೋ (NOPO) ಕಾರಣ ಎನ್ನಲಾಗುತ್ತಿದೆ.

ಏನಿದು ನೋಪೋ (NOPO)?

ನಿರೂಯೆ ವಿಜೆ ಪಾಸ್ದಾರನ್ ವಿಲಾಯತ್ (Nirouyeh Vijeh Pasdaran Velayat) ಎಂಬುದರ ಸಂಕ್ಷಿಪ್ತ ರೂಪವೇ ಈ ನೋಪೋ. ಅಂದರೆ ಸರ್ವೋಚ್ಚ ನಾಯಕತ್ವವನ್ನು ರಕ್ಷಿಸುವ ವಿಶೇಷ ಪಡೆ ಎಂದರ್ಥ. ಇದನ್ನು 1991ರಲ್ಲಿ ಸ್ಥಾಪಿಸಲಾಯಿತು. ಇದು ಇರಾನ್‌ನ ಸಾಮಾನ್ಯ ಸೇನೆ (Artesh) ಅಥವಾ ಪ್ರಸಿದ್ಧ ರೆವಲ್ಯೂಷನರಿ ಗಾರ್ಡ್ಸ್ (IRGC)ಗಿಂತ ಸಂಪೂರ್ಣವಾಗಿ ಭಿನ್ನ ಮತ್ತು ಹೆಚ್ಚು ಶಕ್ತಿಶಾಲಿ.

ನೋಪೋ ಪಡೆಯ ವಿಶೇಷತೆಗಳೇನು?

ನೇರ ನಿಯಂತ್ರಣ: ಈ ಪಡೆ ನೇರವಾಗಿ ಸರ್ವೋಚ್ಚ ನಾಯಕನಿಗೆ ವರದಿ ಒಪ್ಪಿಸುತ್ತದೆ. ಐಆರ್‌ಜಿಸಿಗಿಂತಲೂ ಹೆಚ್ಚು ತರಬೇತಿ ಪಡೆದ, ಕ್ರೂರ ಮತ್ತು ರಹಸ್ಯವಾಗಿ ಕಾರ್ಯಾಚರಣೆ ನಡೆಸುವ ಶಕ್ತಿ ಈ ಪಡೆಗಿದೆ.

ಕಪ್ಪು ಸಮವಸ್ತ್ರಧಾರಿಗಳು: ಇವರು ಸದಾ ಕಪ್ಪು ಸಮವಸ್ತ್ರದಲ್ಲಿರುತ್ತಾರೆ. ಆಂತರಿಕ ದಂಗೆಗಳನ್ನು ಹತ್ತಿಕ್ಕಲು, ಒತ್ತೆಯಾಳುಗಳನ್ನು ಬಿಡಿಸಲು ಮತ್ತು ಸರ್ವೋಚ್ಚ ನಾಯಕನಿಗೆ ಇರುವ ಅಪಾಯಗಳನ್ನು ತಡೆಯಲು ಇವರನ್ನು ಬಳಸಲಾಗುತ್ತದೆ.

ಹಾಲಿವುಡ್ ಶೈಲಿಯಲ್ಲಿ ನಡೀತು ಚಿನ್ನದಂಗಡಿಯಲ್ಲಿ ದರೋಡೆ; 15 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು!

ನೋಪೋ ಪಡೆಯ ಇತಿಹಾಸ

1999ರ ವಿದ್ಯಾರ್ಥಿ ಪ್ರತಿಭಟನೆ ಮತ್ತು 2022ರ 'ಮಹ್ಸಾ ಅಮೀನಿ' ಸಾವಿನ ನಂತರ ನಡೆದ ಬೃಹತ್ ದಂಗೆಗಳನ್ನು ಹತ್ತಿಕ್ಕಲು ಈ ನೋಪೋ ಪಡೆಯನ್ನೇ ಬಳಸಲಾಗಿತ್ತು. 500ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಈ ಭೀಕರ ದಮನಕಾರಿ ನೀತಿಯಿಂದಾಗಿ ಅಮೆರಿಕ ಈ ಪಡೆಯ ಮೇಲೆ ನಿರ್ಬಂಧ ಹೇರಿದೆ.

ಮೊಜ್ತಾಬಾ ಖಮೇನಿ ಅವರ ಸ್ಥಿತಿ

ಪ್ರಸ್ತುತ ಮೊಜ್ತಾಬಾ ಖಮೇನಿ ಕೋಮಾದಲ್ಲಿದ್ದಾರೆ ಮತ್ತು ಅವರ ಮುಖ ವಿಕಾರಗೊಂಡಿದೆ (disfigured) ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ. ಮೊಜ್ತಾಬಾ ಇದುವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇಂತಹ ವಿಷಮ ಪರಿಸ್ಥಿತಿಯಲ್ಲಿ, ಇರಾನ್‌ನ ಆಡಳಿತ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಮೊಜ್ತಾಬಾ ಅವರನ್ನು ಬದುಕಿಸಿಕೊಳ್ಳುವುದು ಇರಾನ್‌ಗೆ ಅನಿವಾರ್ಯವಾಗಿದೆ. ಹೀಗಾಗಿ, ನೋಪೋ ಪಡೆಯ ನಾಲ್ಕು ಬ್ರಿಗೇಡ್‌ಗಳು ಟೆಹರಾನ್‌ನ ಆಸ್ಪತ್ರೆಯ ಸುತ್ತ ಬಿಗಿ ಭದ್ರತೆ ಒದಗಿಸಿವೆ. ಒಟ್ಟಾರೆಯಾಗಿ ಇರಾನ್‌ನ ಭವಿಷ್ಯ ಮತ್ತು ಮೊಜ್ತಾಬಾ ಖಮೇನಿ ಅವರ ಪ್ರಾಣ ಈಗ ಈ ರಹಸ್ಯ ನೋಪೋ ಪಡೆಯ ಕೈಯಲ್ಲಿದೆ.