ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿರಿಯಾ ಮೇಲೆ ಅಮೆರಿಕ ಏರ್‌ಸ್ಟ್ರೈಕ್‌ ; ಐಸಿಸ್‌ ಉಗ್ರರ ನೆಲೆ ಧ್ವಂಸ

Operation Hawkeye Strike: ಸಿರಿಯಾದಾದ್ಯಂತ ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಶನಿವಾರ ಅಮೆರಿಕ ದೊಡ್ಡ ಪ್ರಮಾಣದ ವಾಯುದಾಳಿ ನಡೆಸಿದೆ. ಕಳೆದ ತಿಂಗಳು ಇಬ್ಬರು ಅಮೇರಿಕನ್ ಸೈನಿಕರು ಮತ್ತು ನಾಗರಿಕನ ಹತ್ಯೆಯ ಪ್ರತೀಕಾರದ ಸಲುವಾಗಿ ದಾಳಿಯನ್ನು ನಡೆಸಲಾಗಿದೆ.

ಸಂಗ್ರಹ ಚಿತ್ರ

ಸಿರಿಯಾದಾದ್ಯಂತ (Syria) ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ (Operation Hawkeye Strike ) ಶನಿವಾರ ಅಮೆರಿಕ ದೊಡ್ಡ ಪ್ರಮಾಣದ ವಾಯುದಾಳಿ ನಡೆಸಿದೆ. ಕಳೆದ ತಿಂಗಳು ಇಬ್ಬರು ಅಮೇರಿಕನ್ ಸೈನಿಕರು ಮತ್ತು ನಾಗರಿಕನ ಹತ್ಯೆಯ ಪ್ರತೀಕಾರದ ಸಲುವಾಗಿ ದಾಳಿಯನ್ನು ನಡೆಸಲಾಗಿದೆ. ಯುಎಸ್ ಸೆಂಟ್ರಲ್ ಕಮಾಂಡ್ ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಅವರ ಪ್ರಕಾರ, ಯುಎಸ್ ಯುದ್ಧವಿಮಾನಗಳು ಮತ್ತು ಡ್ರೋನ್‌ಗಳು ಸುಮಾರು ಮೂರು ಡಜನ್ ಸ್ಥಳಗಳ ಮೇಲೆ 90 ಕ್ಕೂ ಹೆಚ್ಚು ಬಾಂಬ್‌ಗಳನ್ನು ಬೀಳಿಸಿವೆ.

ಐಸಿಸ್ ಮೂಲಸೌಕರ್ಯ, ಕಳ್ಳಸಾಗಣೆ ಮಾರ್ಗಗಳು ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹಣಾ ಸ್ಥಳಗಳನ್ನು ಗುರುತಿಸಿ ದಾಳಿ ನಡೆಸಲಾಗಿದೆ. ಜೋರ್ಡಾನ್ ಮಿಲಿಟರಿ ಕೂಡ ಈ ದಾಳಿಗಳಲ್ಲಿ ಭಾಗವಹಿಸಿತ್ತು. ಐಸಿಸ್‌ನ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ದುರ್ಬಲಗೊಳಿಸುವ ಮತ್ತು ಈ ಪ್ರದೇಶದಲ್ಲಿ ಅಮೆರಿಕ ಮತ್ತು ಮಿತ್ರ ಪಡೆಗಳ ಮೇಲೆ ಭವಿಷ್ಯದಲ್ಲಿ ದಾಳಿಗಳನ್ನು ತಡೆಯುವ ಗುರಿಯನ್ನು ಈ ದಾಳಿ ಹೊಂದಿತ್ತು ಎಂದು ಅಮೆರಿಕ ಹೇಳಿದೆ.



ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ದೇಶನದ ಮೇರೆಗೆ ಡಿಸೆಂಬರ್ 19, 2025 ರಂದು 'ಆಪರೇಷನ್ ಹಾಕಿ ಸ್ಟ್ರೈಕ್' ಎಂಬ ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಶನಿವಾರ ಮಧ್ಯಾಹ್ನ ಸುಮಾರು 12.30ಕ್ಕೆ ಅಮೆರಿಕನ್ ಪಡೆಗಳು ಮಿತ್ರ ರಾಷ್ಟ್ರಗಳೊಂದಿಗೆ ಸೇರಿ ಈ ಕಾರ್ಯಾಚರಣೆಯನ್ನು ನಡೆಸಿವೆ. ಸಿರಿಯಾದ ವಿವಿಧ ಭಾಗಗಳಲ್ಲಿರುವ ಐಸಿಸ್ ನೆಲೆಗಳನ್ನು ಈ ದಾಳಿಯಲ್ಲಿ ಧ್ವಂಸಗೊಳಿಸಲಾಗಿದೆ.

ಅಮೆರಿಕ ಸೆರೆ ಹಿಡಿದ ರಷ್ಯಾದ ತೈಲ ಟ್ಯಾಂಕರ್‌ನಲ್ಲಿದ್ದಾರೆ ಮೂವರು ಭಾರತೀಯರು

ದಾಳಿಯ ನಂತರ ಪ್ರಕಟಣೆ ಹೊರಡಿಸಿದ ಅಮೆರಿಕ ಕೇಂದ್ರ ಕಮಾಂಡ್, "ನಮ್ಮ ಸಂದೇಶ ಸ್ಪಷ್ಟ ಮತ್ತು ಪ್ರಬಲವಾಗಿದೆ: ನೀವು ನಮ್ಮ ಯೋಧರಿಗೆ ಹಾನಿ ಮಾಡಿದರೆ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಾವು ನಿಮ್ಮನ್ನು ಪತ್ತೆಹಚ್ಚಿ ಕೊಲ್ಲುತ್ತೇವೆ. ನೀವು ನ್ಯಾಯದಿಂದ ಎಷ್ಟೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಅದು ಸಾಧ್ಯವಿಲ್ಲ" ಎಂದು ಉಗ್ರರಿಗೆ ಎಚ್ಚರಿಕೆ ನೀಡಿದೆ.ದಾಳಿಗಿಂತ ಒಂದು ದಿನ ಮುಂಚಿತವಾಗಿ, ಸಿರಿಯಾ ಅಧಿಕಾರಿಗಳು ಲೆವಂಟ್‌ನಲ್ಲಿ ಐಸಿಸ್ ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತಿದ್ದ ಪ್ರಮುಖ ಮಿಲಿಟರಿ ನಾಯಕನನ್ನು ಬಂಧಿಸಿದ್ದಾರೆ.