ಇಸ್ಲಾಮಾಬಾದ್: ಇಸ್ರೇಲ್ ಮತ್ತು ಯುಎಸ್ (Israe and USl) ಸೇನೆಯು ಇರಾನ್ (Iran) ಮೇಲೆ ದಾಳಿ ನಡೆಸಿದ ಬಳಿಕ ಪಶ್ಚಿಮ ಏಷ್ಯಾದ (West Asia) ಭಾಗದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ (Saudi Arabia) ಮತ್ತು ಗಲ್ಫ್ ರಾಷ್ಟ್ರಗಳೊಂದಿಗೆ (Gulf countries) ಪಾಕಿಸ್ತಾನ (Pakistan) ಸಂಪೂರ್ಣ ಒಗ್ಗಟ್ಟಿನ ಪ್ರತಿಜ್ಞೆ ಮಾಡಿದೆ. ಇಸ್ಲಾಮಾಬಾದ್ ಮತ್ತು ರಿಯಾದ್ ನಡುವಿನ ರಕ್ಷಣಾ ಒಪ್ಪಂದದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಒಬ್ಬರ ಮೇಲಿನ ಯಾವುದೇ ದಾಳಿಯನ್ನು ಎಲ್ಲರ ಮೇಲಿನ ದಾಳಿ ಎಂದು ಪರಿಗಣಿಸುವುದಾಗಿ ಹೇಳಿದೆ.
ಇಸ್ರೇಲ್ ಮತ್ತು ಯುಎಸ್ ದಾಳಿ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇರಾನ್ ಸೌದಿಯ ಪ್ರದೇಶಗಳ ಮೇಲೆ ಗುರಿ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಇದೀಗ ಹೇಳಿಕೆಯನ್ನು ಬಿಡುಗಡೆ ಮಾಡಿ, ಸೌದಿ ಅರೇಬಿಯಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಯಾವುದೇ ದೇಶಗಳ ಮೇಲೆ ದಾಳಿ ನಡೆದರೂ ಅದನ್ನು ಎಲ್ಲರ ಮೇಲಿನ ದಾಳಿ ಎಂದು ಪರಿಗಣಿಸುವುದಾಗಿ ರಿಯಾದ್ ಒಪ್ಪಂದವನ್ನು ಪುನರುಚ್ಚರಿಸಿದೆ.
ಇರಾನ್ ವಾಯು ಪ್ರದೇಶದೊಳಗೆ ನಿರ್ಬಂಧ; ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸಾಗುವ ಹಲವು ವಿಮಾನ ಸಂಚಾರ ರದ್ದು
ಈ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿರುವ ದಾಳಿ, ಇದಕ್ಕೆ ಪ್ರತಿಯಾಗಿ ಸೌದಿ ಅರೇಬಿಯಾ ಸೇರಿದಂತೆ ಕೊಲ್ಲಿಯಲ್ಲಿ ನಡೆದಿರುವ ಪ್ರತೀಕಾರದ ದಾಳಿಗಳ ಕುರಿತಾಗಿ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಹಾಗೂ ಇಸ್ಲಾಮಾಬಾದ್‌ನ ನಿಲುವನ್ನು ತಿಳಿಸಲು ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ.
ಗಲ್ಫ್ ಪ್ರದೇಶಗಳ ಮೇಲಿನ ದಾಳಿಯನ್ನು ಖಂಡಿಸಿರುವ ಅವರು, ನಾನು ನನ್ನ ಪ್ರೀತಿಯ ಸಹೋದರ, ರಾಜಮನೆತನದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತನಾಡಿದೆ. ಈ ಕಷ್ಟದ ಸಮಯದಲ್ಲಿ ಪಾಕಿಸ್ತಾನವು ಸೌದಿ ಅರೇಬಿಯಾ ಮತ್ತು ಗಲ್ಫ್ ರಾಷ್ಟ್ರಗಳೊಂದಿಗೆ ಸಂಪೂರ್ಣ ಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದರು.
ಶಾಂತಿ ಮಾತುಕತೆಯಲ್ಲಿ ರಚನಾತ್ಮಕ ಪಾತ್ರ ವಹಿಸಲು ಪಾಕಿಸ್ತಾನ ಸಂಪೂರ್ಣ ಸಿದ್ಧವಾಗಿದೆ. ಪವಿತ್ರ ರಂಜಾನ್ ತಿಂಗಳಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸುವಂತೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
ರಿಯಾದ್ ಮತ್ತು ಪೂರ್ವ ಪ್ರಾಂತ್ಯ ಪ್ರದೇಶಗಳ ಮೇಲೆ ಇರಾನ್ ನಡೆಸಿರುವ ದಾಳಿಯನ್ನು ಖಂಡಿಸಿರುವ ಸೌದಿ ಅರೇಬಿಯಾ, ಇದು ಅಸ್ಪಷ್ಟ ಮತ್ತು ಹೇಡಿತನ. ವಾಯು ರಕ್ಷಣಾ ಪಡೆಗಳು ಈ ದಾಳಿಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ ಎಂದು ತಿಳಿಸಿದೆ.
ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ ಸಾವು? 3ನೇ ಮಹಾಯುದ್ಧ ಫಿಕ್ಸ್?
ಪಾಕಿಸ್ತಾನ-ಸೌದಿ ರಕ್ಷಣಾ ಒಪ್ಪಂದ
ಪಾಕಿಸ್ತಾನ ಮತ್ತು ಸೌದಿ ಅರೇಬಿಯಾವು ಕಳೆದ ವರ್ಷ ರಿಯಾದ್‌ನಲ್ಲಿ ಪ್ರಮುಖ ಪರಸ್ಪರ ರಕ್ಷಣಾ ಸಹಕಾರಕ್ಕೆ ಒಪ್ಪಂದ ಹಾಕಿದ್ದು, ಇದರಲ್ಲಿ ಎರಡೂ ದೇಶಗಳ ಮೇಲಿನ ಯಾವುದೇ ದಾಳಿಯನ್ನು ಎರಡೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂದು ಪರಿಗಣಿಸಲಾಗಿತ್ತು. ಅಗತ್ಯವಿದ್ದಾಗ ಸೌದಿ ಅರೇಬಿಯಾದ ರಕ್ಷಣೆಗಾಗಿ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರವನ್ನು ಬಳಸಲು ಕೂಡ ಈ ಒಪ್ಪಂದವು ಕಾನೂನುಬದ್ಧವಾಗಿ ಅನುಮತಿಸುತ್ತದೆ. ಇದು ದ್ವಿಪಕ್ಷೀಯ ಭದ್ರತಾ ಸಂಬಂಧಗಳನ್ನು ಗಾಢವಾಗಿಸಲು ಮತ್ತು ಬಾಹ್ಯ ಬೆದರಿಕೆಗಳನ್ನು ತಡೆಗಟ್ಟಲು ಮಾಡಲಾಗಿದೆ.