ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pak Defence Minister: ಭಾರತದೊಂದಿಗೆ ಯುದ್ಧ ನಡೆದರೆ ಸೌದಿ ನಮ್ಮನ್ನು ಕಾಪಾಡುತ್ತದೆ; ಪಾಕ್‌ ರಕ್ಷಣಾ ಸಚಿವನಿಂದ ಹೊಸ ಹೇಳಿಕೆ

ಮೊನ್ನೆಯಷ್ಟೇ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ (Pak Defence Minister) ರಾಷ್ಟ್ರಗಳು ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸಿಫ್, ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನದ ಸಂಬಂಧದ ಕುರಿತು ಇದೀಗ ಮಾತನಾಡಿದ್ದಾರೆ.

ಭಾರತದೊಂದಿಗೆ ಯುದ್ಧ ನಡೆದರೆ ಸೌದಿ ನಮ್ಮನ್ನು ಕಾಪಾಡುತ್ತದೆ; ಪಾಕ್‌ ರಕ್ಷಣಾ

-

Vishakha Bhat Vishakha Bhat Sep 20, 2025 11:27 AM

ಇಸ್ಲಾಮಾಬಾದ್‌: ಮೊನ್ನೆಯಷ್ಟೇ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ (Pak Defence Minister) ರಾಷ್ಟ್ರಗಳು ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸಿಫ್, ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನದ ಸಂಬಂಧದ ಕುರಿತು ಇದೀಗ ಮಾತನಾಡಿದ್ದಾರೆ. ಜಿಯೋ ಟಿವಿಯೊಂದಿಗೆ ಮಾತನಾಡಿದ ಅವರು, ಭಾರತ ತನ್ನ ನೆರೆಯ ರಾಷ್ಟ್ರದ ಮೇಲೆ ಯುದ್ಧ ಘೋಷಿಸಿದರೆ ಸೌದಿ ಅರೇಬಿಯಾ ಪಾಕಿಸ್ತಾನವನ್ನು ರಕ್ಷಿಸುತ್ತದೆ ಎಂದು ಹೇಳಿದ್ದಾರೆ. ಹೌದು, ಖಂಡಿತ. ಅದರಲ್ಲಿ ಯಾವುದೇ ಸಂದೇಹವಿಲ್ಲ..." ಎಂದು ಪಾಕ್ ಸುದ್ದಿ ವಾಹಿನಿ ಜಿಯೋ ಟಿವಿಗೆ ನೀಡಿದ ಸಂದರ್ಶನದಲ್ಲಿ ಖವಾಜಾ ಮೊಹಮ್ಮದ್ ಆಸಿಫ್ ಹೇಳಿದರು.

ಶೆಹಬಾಜ್​​​ ಷರೀಫ್​ ಅವರನ್ನು ಸೌದಿ ಅರೇಬಿಯಾ ಪ್ರಧಾನಿ ಮತ್ತು ರಾಜಕುಮಾರ್​ ಮೊಹಮ್ಮದ್​ ಬಿನ್​ ಸಲ್ಮಾನ್​ ತಮ್ಮ ಎಲ್​ ಯಮಮಹ್​ ಅರಮನೆಯಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಉಭಯ ದೇಶಗಳ ನಡುವೆ ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕಳೆದ ಎಂಟು ದಶಕಗಳ ಸೌದಿ ಅರೇಬಿಯಾ ಹಾಗೂ ಇಸ್ಲಾಮಿಕ್​ ರಿಪಬ್ಲಿಕ್​ ಆಫ್​ ಪಾಕಿಸ್ತಾನದ ನಡುವಿನ ಐತಿಹಾಸಿಕ ಸಹಭಾಗಿತ್ವ ನಿರ್ಮಾಣವನ್ನು ಸಹೋದರತ್ವ ಮತ್ತು ಇಸ್ಲಾಮಿಕ್ ಒಗ್ಗಟ್ಟಿನ ಸಂಬಂಧಗಳ ಆಧಾರದ ಮೇಲೆ ವಿಸ್ತರಿಸಲಾಗಿದೆ. ಎರಡು ದೇಶಗಳ ಕಾರ್ಯತಂತ್ರದ ಆಸಕ್ತಿಗಳು ಮತ್ತು ಉಭಯ ದೇಶಗಳ ನಡುವಿನ ನಿಕಟ ರಕ್ಷಣಾ ಸಹಕಾರದ ಆಧಾರದ ಮೇಲೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Pakistan-Saudi Arabia: 'ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಬದ್ಧ'; ಪಾಕಿಸ್ತಾನ-ಸೌದಿ ಅರೇಬಿಯಾ ರಕ್ಷಣಾ ಒಪ್ಪಂದದ ಬಗ್ಗೆ ಭಾರತ ಹೀಗಂದಿದ್ದೇಕೆ..?

ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು ಸೌದಿ ಅರೇಬಿಯಾದ ಬಳಕೆಗೆ ಲಭ್ಯವಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ. ದೇಶದ ಪರಮಾಣು ಸೌಲಭ್ಯವನ್ನು ಸೌದಿ ಅರೇಬಿಯಾಕ್ಕೆ "ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದ್ದಾರೆ. ಪಾಕಿಸ್ತಾನದ ಜಿಯೋ ಟಿವಿಯೊಂದಿಗೆ ಮಾತನಾಡಿದ ಖವಾಜಾ ಆಸಿಫ್, ದಶಕಗಳಿಂದ ನಿಕಟ ಮಿಲಿಟರಿ ಸಂಬಂಧಗಳನ್ನು ಹಂಚಿಕೊಂಡಿರುವ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವೆ ಈ ವಾರ ಸಹಿ ಹಾಕಲಾದ ಒಪ್ಪಂದದ ಆಳವನ್ನು ಒತ್ತಿ ಹೇಳಿದರು.