ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Karna Serial Kannada: ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಟಿಎಸ್ ನಾಗಾಭರಣ? ಕರ್ಣನ ಮುಂದಿನ ಹೆಜ್ಜೆ ಏನು?

Karna serial Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಕರ್ಣ ಧಾರಾವಾಹಿಯಲ್ಲಿ ರಮೇಶ್‌ ಮಾಡಿದ ಕುತಂತ್ರದಿಂದ ಮೂವರು ರೋಗಿಗಳು ನಿಧನರಾಗಿದ್ದರು. ನಾಯಕ ಕರ್ಣ ಜೈಲು ಸೇರಿದ್ದು ಆಗಿತ್ತು. ಕರ್ಣನ ಹೆಸರಿಗೆ ಅಂಟಿದ ಕಳಂಕವನ್ನು ದೂರ ಮಾಡಲು ಸ್ತ್ರೀ ಶಕ್ತಿ ಒಂದಾಗಿ ಅಂತೂ ಜೈಲು ಸೇರಿದ್ದ ಕರ್ಣ ಕೊನೆಗೂ ಹೊರಗೆ ಬಂದಿದ್ದಾನೆ. ರಮೇಶ್ ಪಾತ್ರದಿಂದ ಹಿರಿಯ ನಟ ಟಿ.ಎಸ್. ನಾಗಾಭರಣ ಹೊರನಡೆದಿದ್ದು, ಆ ಪಾತ್ರಕ್ಕೆ ಇದೀಗ ನಟ ಅಭಿಜಿತ್ ಪ್ರವೇಶಿಸಿದ್ದಾರೆ.

Karna Serial: ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಟಿಎಸ್ ನಾಗಾಭರಣ?

ಕರ್ಣ ಧಾರಾವಾಹಿ -

Yashaswi Devadiga
Yashaswi Devadiga Mar 4, 2026 10:08 AM

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಕರ್ಣ ಧಾರಾವಾಹಿಯಲ್ಲಿ (Karna Serial Kannada) ರಮೇಶ್‌ ಮಾಡಿದ ಕುತಂತ್ರದಿಂದ ಮೂವರು ರೋಗಿಗಳು ನಿಧನರಾಗಿದ್ದರು. ನಾಯಕ ಕರ್ಣ ಜೈಲು ಸೇರಿದ್ದು ಆಗಿತ್ತು. ಕರ್ಣನ ಹೆಸರಿಗೆ ಅಂಟಿದ ಕಳಂಕವನ್ನು ದೂರ ಮಾಡಲು ಸ್ತ್ರೀ ಶಕ್ತಿ ಒಂದಾಗಿ ಅಂತೂ ಜೈಲು ಸೇರಿದ್ದ ಕರ್ಣ ಕೊನೆಗೂ ಹೊರಗೆ ಬಂದಿದ್ದಾನೆ. ರಮೇಶ್ (Ramesh) ಪಾತ್ರದಿಂದ ಹಿರಿಯ ನಟ ಟಿ.ಎಸ್. ನಾಗಾಭರಣ ಹೊರನಡೆದಿದ್ದು, ಆ ಪಾತ್ರಕ್ಕೆ ಇದೀಗ ನಟ ಅಭಿಜಿತ್ ಪ್ರವೇಶಿಸಿದ್ದಾರೆ. ರಮೇಶ್ ಪಾತ್ರದಲ್ಲಿ ಅಭಿಜಿತ್ (Abhijith), ಕರ್ಣನ ಮುಂದಿನ ಹೆಜ್ಜೆಗಳನ್ನು ತಾನೇ ನಿರ್ಧರಿಸುವುದಾಗಿ ಪಣ ತೊಟ್ಟಿದ್ದಾರೆ.

ಕರ್ಣ ಶಪಥ

ರಮೇಶ್ ಮತ್ತು ತಾರಾ ಕುತಂತ್ರದಿಂದ ಜೈಲು ಸೇರಿದ್ದ ಕರ್ಣ ಕೊನೆಗೂ ಹೊರಗೆ ಬಂದಿದ್ದಾನೆ. ಅಜ್ಜಿ ಇದ್ದವರು ಕರ್ಣನಿಗೆ, ಪಾಪ ಕರ್ಣನಿಗೆ ಇಂತಹ ಸ್ಥಿತಿ ಬಂತಲ್ಲ ಅಂತ ರಮೇಶ್‌ ಅದೆಷ್ಟು ನೊಂದುಕೊಂಡಿದ್ದಾನೋ ಅಂತ ಹೇಳಿದ್ದಾಳೆ. ಆದರೆ ರಮೇಶ್‌ ಕುತಂತ್ರ ಕರ್ಣನಿಗೆ ಗೊತ್ತಿದೆ.

ಇದನ್ನೂ ಓದಿ: Amruthadhaare Serial: ಗೌತಮ್ ಮೇಲಿನ ಸೇಡಿಗೆ ಕೇಡಿ ಜೇಡಿಯ ಭರ್ಜರಿ ಡಿಮ್ಯಾಂಡ್‌!



ಆಸ್ಪತ್ರೆ ಮುಂದೆ ಬಂದಿರುವ ಕರ್ಣ, ನನ್ನ ಮೇಲಿನ ದ್ವೇಷಕ್ಕಾಗಿ ಆಸ್ಪತ್ರೆಯನ್ನು ದಾಳವಾಗಿ ಬಳಸಿಕೊಳ್ಳಲಾಯ್ತು. ಈ ಕುತಂತ್ರದ ಹಿಂದರೋರು ಯಾರು ಎಂಬುದನ್ನು ಪತ್ತೆ ಮಾಡುತ್ತೇನೆ ಎಂದು ಕರ್ಣ ಶಪಥ ಮಾಡಿದ್ದಾನೆ. ರಮೇಶ್ ನೊಂದುಕೊಂಡಿದ್ದಾನೆ ಅಂತ ಅಂದ್ಕೊಂಡಿದ್ರೆ ಆತ ನಿತ್ಯಾ, ನಿಧಿ ಮತ್ತು ಕರ್ಣನ ಫೋಟೋಗೆ ಪೂಜೆ ಸಲ್ಲಿಸಿ ಪಿಂಡ ಬಿಡುತ್ತಿದ್ದಾನೆ. ಇನ್ಮುಂದೆ ನೀನು ಇರಿಸುವ ಪ್ರತಿಯೊಂದು ಹೆಜ್ಜೆ ಏನಾಗಿರಬೇಕು ಎಂದು ನಾನು ನಿರ್ಧರಿಸುತ್ತೇನೆ ಎಂದು ರಮೇಶ್ ಹೇಳಿದ್ದಾನೆ.

ರಮೇಶ್‌ ಮುಂದಿನ ಗುರಿ ಏನು?

ವೈಯಕ್ತಿಕ ಕಾರಣಗಳಿಂದ ಟಿ.ಎಸ್.ನಾಗಾಭರಣ ಸೀರಿಯಲ್‌ನಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಮೇಶ್ ನಾಗಿ ಅಭಿಜಿತ್ ನಟಿಸಲಿದ್ದಾರೆ. ಸಂಚಿಕೆಯಲ್ಲಿ ತೋರಿಸಿರುವ ಪ್ರಕಾರ, ರಮೇಶ್‌ನಾಗಿ ನಟ ಅಭಿಜಿತ್ ಬಂದಿದ್ದಾರೆ. ರಮೇಶ್ ಪಾತ್ರಧಾರಿ ಬದಲಾಗಿದ್ದಾರೆ. ಆದ್ರೆ ಅಭಿಜಿತ್ ಅವರುದ್ದು ಹೊಸ ಪಾತ್ರನಾ ಎಂಬುದರ ಬಗ್ಗೆ ವೀಕ್ಷಕರಲ್ಲಿ ಸಣ್ಣ ಗೊಂದಲವಿದೆ.

ಇದನ್ನೂ ಓದಿ: Dog Satish: C M ಬಂದು ಹೇಳಿದ್ರು ವಿಡಿಯೋ ಡಿಲೀಟ್ ಮಾಡಲ್ಲ; ಡಾಗ್‌ ಸತೀಶ್

ಕರ್ಣ ಈಗ ಮೊದಲಿನಂತಿಲ್ಲ, ಅಪ್ಪನ ಮೋಸಾಟ ಅವನ ಗಮನಕ್ಕೆ ಬಂದಿದೆ. ಸಖತ್‌ ಚಮಕ್‌ ಕೊಡ್ತಾ ಇದ್ದಾನೆ ಕರ್ಣ. ರಮೇಶ್ ಮಾಡಿದ ಕುತಂತ್ರವನ್ನು ಕರ್ಣ ಹೇಗೆ ಬಯಲಿಗೆಳೆಯುತ್ತಾನೆ? ತನ್ನ ಮೇಲಿರುವ ಕಳಂಕವನ್ನು ಆತ ಹೇಗೆ ರಿವೀಲ್‌ ಮಾಡ್ತಾನೆ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.