ಟೆಹರಾನ್: ಇರಾನ್‌ನ ಸರ್ವೋಚ್ಚ ನಾಯಕ (Iran's Supreme Leader) ಅಯತೊಲ್ಲಾ ಸಯ್ಯದ್ ಅಲಿ ಹುಸೇನಿ ಖಮೇನಿಯವರ (Ayatollah Sayyed Ali Husseini Khamenei) ಅಂತ್ಯಕ್ರಿಯೆ ವಿಧಿವಿಧಾನಗಳು ಶನಿವಾರ ಟೆಹರಾನ್‌ನಲ್ಲಿ (tehran) ಅಧಿಕೃತವಾಗಿ ಆರಂಭವಾಗಿದೆ. ಕಳೆದ ಫೆಬ್ರವರಿ 28ರಂದು ಇರಾನ್ (Iran) ಮೇಲೆ ಅಮೆರಿಕ ಮತ್ತು ಇಸ್ರೇಲ್ ಸೇನಾ ಪಡೆಯು ನಡೆಸಿದ ದಾಳಿಯಲ್ಲಿ ಮೃತಪಟ್ಟ ಖಮೇನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಗೌರವ ಸಲ್ಲಿಸಲು ಸಾವಿರಾರು ಇರಾನಿಯನ್ನರು ಟೆಹರಾನ್‌ನ ಗ್ರ್ಯಾಂಡ್ ಮೊಸಲ್ಲಾ ಧಾರ್ಮಿಕ ಸಂಕೀರ್ದಲ್ಲಿ ಸೇರಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಇರಿಸಲಾಗಿದ್ದ ಸಣ್ಣದೊಂದು ಶವ ಪೆಟ್ಟಿಗೆ ಎಲ್ಲರ ಗಮನ ಸೆಳೆದಿದ್ದು, ಇದರಲ್ಲಿ ಖಮೇನಿ ಅವರ 14 ತಿಂಗಳ ಮೊಮ್ಮಗಳು ಜಹ್ರಾ ಮೊಹಮ್ಮದಿ ಗೋಲ್ಪಾಯೆಗಾನಿ ಅವರ ಮೃತದೇಹವವನ್ನು ಇರಿಸಲಾಗಿತ್ತು. ಶವ ಪೆಟ್ಟಿಗೆಯ ಮುಂದೆ ಇರಿಸಲಾಗಿದ್ದ ಮಗುವಿನ ಚಿತ್ರ ಅಲ್ಲಿದ್ದವರ ಕಣ್ಣಾಲಿಗಳು ತುಂಬುವಂತೆ ಮಾಡಿತ್ತು.
ಖಮೇನಿ ಅಂತ್ಯಕ್ರಿಯೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಸ್ಪೀಕರ್; ನೆಚ್ಚಿನ ನಾಯಕನಿಗೆ ಕಣ್ಣೀರ ವಿದಾಯ
ಅಲಿ ಖಮೇನಿಯವರ ಅಂತ್ಯಕ್ರಿಯೆಯ ವೇಳೆ ಖಮೇನಿ ಕುಟುಂಬ ಸದಸ್ಯರೊಂದಿಗೆ ಕೊಲಲ್ಪಟ್ಟಿದ್ದ ಅವರ ಮೊಮ್ಮಗಳು ಜಹ್ರಾ ಮೊಹಮ್ಮದಿ ಗೋಲ್ಪಾಯೆಗಾನಿ ಅವರಿಗೂ ಶುಭ ವಿದಾಯ ಕೋರಲಾಯಿತು. ಖಮೇನಿಯವರ ಶವಪೆಟ್ಟಿಗೆಯೊಂದಿಗೆ ಜಾಹ್ರಾ ಅವರ ಸಣ್ಣ ಶವಪೆಟ್ಟಿಗೆಯನ್ನು ಕೂಡ ಸಂಕೀರ್ಣದಲ್ಲಿ ಇರಿಸಲಾಗಿತ್ತು. ಖಮೇನಿ ಅವರ ಶವ ಪೆಟ್ಟಿಗೆಗೆ ಇಸ್ಲಾಮಿಕ್ ಗಣರಾಜ್ಯದ ಧ್ವಜವನ್ನು ಹೊದಿಸಿ ಅದರ ಮೇಲೆ ಕಪ್ಪು ಪೇಟವನ್ನು ಇರಿಸಲಾಗಿತ್ತು. ಅದರ ಪಕ್ಕದಲ್ಲಿ ಅವರ ಮೃತ ಸಂಬಂಧಿಕರ ಶವಗಳನ್ನು ಇರಿಸಲಾಗಿದ್ದು, ಇದರಲ್ಲಿ ಅವರ 14 ತಿಂಗಳ ಮೊಮ್ಮಗಳ ಶವ ಪೆಟ್ಟಿಗೆಯೂ ಇತ್ತು.
ಖಮೇನಿಯವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಸುಮಾರು ಆರು ದಿನಗಳ ಕಾಲ ನಡೆಯಲಿದೆ. ಇದಕ್ಕಾಗಿ ಶವಪೆಟ್ಟಿಗೆಯನ್ನು ಟೆಹರಾನ್ ಗೆ ತರಲಾಗಿದೆ. ಅವರ ಶವಪೆಟ್ಟಿಗೆಯನ್ನು ಇರಾನ್ ಮತ್ತು ನೆರೆಯ ಇರಾಕ್‌ನ ನಗರಗಳಲ್ಲಿಮೆರವಣಿಗೆ ನಡೆಸಲಾಗುತ್ತದೆ.
ಟೆಹರಾನ್ ನ ಗ್ರ್ಯಾಂಡ್ ಮೊಸಲ್ಲಾದ ಹೊರಗೆ ಶುಕ್ರವಾರ ಸಂಜೆ ಇಸ್ಲಾಮಿಕ್ ಗಣರಾಜ್ಯದ ಸಾವಿರಾರು ಮಂದಿ ಖಮೇನಿಯವರಅಂತಿಮ ದರ್ಶನಕ್ಕಾಗಿ ಕಾದು ಕುಳಿತಿದ್ದರು. ಮುಂದಿನ ಮೂರು ದಿನಗಳಲ್ಲಿ ಟೆಹರಾನ್ ನಲ್ಲಿ ಸುಮಾರು 15 ರಿಂದ 20 ಮಿಲಿಯನ್ ಜನರು ಖಮೇನಿಯವರ ಅಂತಿಮ ದರ್ಶನ ಪಡೆಯುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಕೀರ್ಣದ ದ್ವಾರಗಳು ತೆರೆದ ಮೇಲೆ ಸಾವಿರಾರು ಜನರು ಶೋಕದ ಮಧ್ಯೆ ಅಮೆರಿಕದ ವಿರುದ್ಧ ಕೆಂಪು ಬ್ಯಾನರ್ ಪ್ರದರ್ಶಿಸಿದರು. ಕೆಲವರು ಇದಕ್ಕೆ ಪ್ರತೀಕಾರ ತೀರಿಸಬೇಕು ಎನ್ನುವ ಘೋಷಣೆಗಳನ್ನು ಕೂಗಿದರು.
ಇರಾನ್ ಮಾಜಿ ನಾಯಕನ ಆಯತೊಲ್ಲಾ ಸೈಯದ್ ಅಲಿ ಹುಸೇನಿ ಖಮೇನಿ ಅಂತ್ಯಕ್ರಿಯೆ: ಪುತ್ರ ಮೊಜ್ತಬಾ ಖಮೇನಿ ಗೈರು
ಇರಾನ್ ಸಂಸತ್ತಿನ ಸ್ಪೀಕರ್ ಮತ್ತು ಯುಎಸ್‌ನಲ್ಲಿ ಉನ್ನತ ಸಮಾಲೋಚಕ ಮೊಹಮ್ಮದ್ ಬಘರ್ ಗಾಲಿಬಾಫ್, ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳ ಮುಖ್ಯಸ್ಥ ಅಹ್ಮದ್ ವಾಹಿದಿ ಸೇರಿದಂತೆ ಅನೇಕ ಇರಾನ್ ನಾಯಕರು ತಮ್ಮ ನೆಚ್ಚಿನ ನಾಯಕನಿಗೆ ಕಣ್ಣೀರಿನೊಂದಿಗೆ ಶುಭವಿದಾಯ ಹೇಳಿದರು.