ಖಮೇನಿ ಅಂತ್ಯಕ್ರಿಯೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಸ್ಪೀಕರ್; ನೆಚ್ಚಿನ ನಾಯಕನಿಗೆ ಕಣ್ಣೀರ ವಿದಾಯ
Khamenei's Funeral: ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಸಮಾರಂಭದಲ್ಲಿ, ದೇಶದ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಕಣ್ಣೀರು ಹಾಕಿದರು. ಖಮೇನಿಯವರ ಶವಪೆಟ್ಟಿಗೆಯನ್ನು ಶುಕ್ರವಾರ (ಜು.3) ಟೆಹರಾನ್‌ನ ಗ್ರ್ಯಾಂಡ್ ಮೊಸಲ್ಲಾ ಧಾರ್ಮಿಕ ಸಂಕೀರ್ಣಕ್ಕೆ ತರಲಾಯಿತು.
ಖಮೇನಿ ಅಂತ್ಯಕ್ರಿಯೆಯಲ್ಲಿ ನಾಯಕರು ಕಣ್ಣೀರು -
ಟೆಹರಾನ್, ಜು.4: ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಅಂತ್ಯಕ್ರಿಯೆ ಸಮಾರಂಭದಲ್ಲಿ, ದೇಶದ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ (Mohammad Bagher Ghalibaf) ಕಣ್ಣೀರು ಹಾಕಿದರು. ಕೈಗಳನ್ನು ಕಟ್ಟಿ ಪ್ರಾರ್ಥನೆ ಸಲ್ಲಿಸಿದ ಗಾಲಿಬಾಫ್, ಮೃತ ನಾಯಕನಿಗೆ ಅಂತಿಮ ವಿದಾಯ ಹೇಳುವಾಗ ಭಾವುಕರಾದರು. ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ (US-Isreal) ಸಂಘಟಿತ ದಾಳಿಯಲ್ಲಿ ಹತ್ಯೆಯಾದ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಶುಕ್ರವಾರ (ಜು.3) ಟೆಹರಾನ್‌ನಲ್ಲಿ ಪ್ರಾರಂಭವಾಯಿತು. ಫೆಬ್ರವರಿ ಅಂತ್ಯದಲ್ಲಿ ಅಮೆರಿಕ-ಇಸ್ರೇಲ್ ಜಂಟಿಯಾಗಿ ಟೆಹರಾನ್ ಮೇಲೆ ವಾಯುದಾಳಿ ನಡೆಸಿತು. ಈ ವೇಳೆ ಖಮೇನಿ ಸೇರಿದಂತೆ ಅವರ ಹಲವಾರು ಕುಟುಂಬದ ಸದಸ್ಯರು ಹತ್ಯೆಯಾದರು.
ಅಮೆರಿಕದೊಂದಿಗಿನ ಮಾತುಕತೆಯಲ್ಲಿ ಇರಾನ್ ಪರ ಮುಖ್ಯ ಸಮಾಲೋಚಕರಾದ ಗಾಲಿಬಾಫ್, ದೇಶದ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಗ್ಚಿ ಮತ್ತು ಇತರ ಉನ್ನತ ಅಧಿಕಾರಿಗಳ ಪಕ್ಕದಲ್ಲಿ ನಿಂತಿರುವುದು ಕಂಡುಬಂದಿತು. ಖಮೇನಿ ಅವರ ಅಂತ್ಯಕ್ರಿಯೆ ಸಮಾರಂಭದಲ್ಲಿ ಅರಗ್ಚಿ ಕೂಡ ಭಾವುಕರಾದರು.
ಖಮೇನಿಯವರ ಶವಪೆಟ್ಟಿಗೆಯನ್ನು ಶುಕ್ರವಾರ (ಜು.3) ಟೆಹರಾನ್‌ನ ಗ್ರ್ಯಾಂಡ್ ಮೊಸಲ್ಲಾ ಧಾರ್ಮಿಕ ಸಂಕೀರ್ಣಕ್ಕೆ ತರಲಾಯಿತು. ಶವಪೆಟ್ಟಿಗೆಯನ್ನು ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಆಳಿದ ಇಸ್ಲಾಮಿಕ್ ಗಣರಾಜ್ಯದ ಬಣ್ಣಗಳಿಂದ ಹೊದಿಸಲಾಯಿತು.
ಇಲ್ಲಿದೆ ವಿಡಿಯೊ:
Iranian Parliament Speaker Ghalibaf Pays Emotional Tribute to Late Supreme Leader
— Kurdistan 24 English (@K24English) July 3, 2026
Iranian Parliament Speaker Mohammad Baqer Qalibaf was filmed weeping openly at the platform displaying the coffin of Ayatollah Ali Khamenei in Tehran's Grand Mosque complex pic.twitter.com/L4z9ete0pw
ಸರ್ವೋಚ್ಚ ನಾಯಕನ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಮಾರ್ಗವಾಗಿ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭಗಳಲ್ಲಿ ಭಾಗವಹಿಸಬೇಕೆಂದು ಗಾಲಿಬಾಫ್ ಒತ್ತಾಯಿಸಿದರು. ಪ್ರತೀಕಾರಕ್ಕಾಗಿ ರಾಷ್ಟ್ರದ ಕರೆ ಇಡೀ ಪ್ರಪಂಚದ ಕಿವಿಗಳಲ್ಲಿ ಮೊಳಗಬೇಕು ಎಂದು ಅವರು ಹೇಳಿದರು.
ಇರಾನ್ ಮಾಜಿ ನಾಯಕನ ಆಯತೊಲ್ಲಾ ಸೈಯದ್ ಅಲಿ ಹುಸೇನಿ ಖಮೇನಿ ಅಂತ್ಯಕ್ರಿಯೆ: ಪುತ್ರ ಮೊಜ್ತಬಾ ಖಮೇನಿ ಗೈರು
ಅಂತ್ಯಕ್ರಿಯೆ ಸಮಾರಂಭದ ಸುತ್ತಮುತ್ತ ಹೈ ಅಲರ್ಟ್
ಇನ್ನು ಹತ್ಯೆಗೀಡಾದ ನಾಯಕನ ಆರು ದಿನಗಳ ಅಂತ್ಯಕ್ರಿಯೆಯ ಸಂದರ್ಭದಲ್ಲಿ 15 ರಿಂದ 20 ಮಿಲಿಯನ್ ಜನರು ಸೇರುವ ನಿರೀಕ್ಷೆಯಿದೆ. ಇದು ದೇಶಾದ್ಯಂತ, ವಿಶೇಷವಾಗಿ ರಾಜಧಾನಿ ಟೆಹರಾನ್ ಸುತ್ತಲೂ ಹೆಚ್ಚಿನ ಭದ್ರತಾ ಎಚ್ಚರಿಕೆ ವಹಿಸಲಾಗಿದೆ. ಸೋಮವಾರ (ಜು.6) ಟೆಹ್ರಾನ್‌ನ ಬೀದಿಗಳಲ್ಲಿ ಅಂತ್ಯಕ್ರಿಯೆಯ ಮೆರವಣಿಗೆ ನಡೆಯಲಿದ್ದು, ನಂತರ ಪವಿತ್ರ ನಗರವಾದ ಕೋಮ್‌ನಲ್ಲಿ ಮತ್ತೊಂದು ಮೆರವಣಿಗೆ ನಡೆಯಲಿದೆ. ಟೆಹ್ರಾನ್‌ನಿಂದ ನೈಋತ್ಯಕ್ಕೆ ಸುಮಾರು 140 ಕಿಲೋಮೀಟರ್ ದೂರದಲ್ಲಿರುವ ಕೋಮ್, ಇರಾನ್‌ನ ಶಿಯಾ ಇಸ್ಲಾಮಿಕ್ ಪಾಂಡಿತ್ಯದ ಪ್ರಮುಖ ಕೇಂದ್ರವಾಗಿದೆ.
ಜುಲೈ 9 ರಂದು, ಮೆರವಣಿಗೆಯು ಖಮೇನಿಯವರ ಹುಟ್ಟೂರು ಪವಿತ್ರ ನಗರವಾದ ಮಶಾದ್‌ಗೆ ಪ್ರಯಾಣಿಸಲಿದ್ದು, ಅಲ್ಲಿ ಇಮಾಮ್ ರೆಜಾ ದೇಗುಲದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ನೆರೆಯ ಇರಾಕ್‌ನ ಐತಿಹಾಸಿಕ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾದಲ್ಲೂ ಇತರ ಸ್ಮರಣಾರ್ಥ ಕಾರ್ಯಕ್ರಮಗಳು ನಡೆಯಲಿವೆ.