ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼನರೇಂದ್ರ ಮೋದಿ ಮಹಾ ಪ್ರಚಂಡ, ಅವರ ಬಗ್ಗೆ ಅಪಾರ ಗೌರವವಿದೆʼʼ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಣ್ಣನೆ

Narendra Modi: ಭಾರತ-ಅಮೆರಿಕ ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಡೊನಾಲ್ಡ್‌ ಟ್ರಂಪ್‌ ಹೊಗಳಿದ್ದಾರೆ. ಮೋದಿ ಬಗ್ಗೆ ತನಗೆ ಅಪಾರ ಗೌರವವಿದೆ ಎಂದೂ ಟ್ರಂಪ್‌ ಈ ವೇಳೆ ತಿಳಿಸಿದ್ದಾರೆ. ಮಾತ್ರವಲ್ಲ ಮೋದಿ ಅವರನ್ನು ಉತ್ತಮ ಆದರೆ ಕಠಿಣ ವ್ಯಕ್ತಿ ಎಂದೂ ಟ್ರಂಪ್‌ ವಿವರಿಸಿದ್ದಾರೆ.

ಫ್ರಾನ್ಸ್‌ನಲ್ಲಿ ಮಾತುಕತೆ ನಡೆಸಿದ ನರೇಂದ್ರ ಮೋದಿ-ಡೊನಾಲ್ಡ್‌ ಟ್ರಂಪ್‌

ಪ್ಯಾರಿಸ್‌, ಜೂ. 17: ʼʼನರೇಂದ್ರ ಮೋದಿ (Narendra Modi) ಮಹಾ ಪ್ರಚಂಡ ಮತ್ತು ಉತ್ತಮ ವ್ಯಾಪಾರಿʼʼ- ಫ್ರಾನ್ಸ್‌ನಲ್ಲಿ ಆಯೋಜಿಸಿರುವ ಜಿ7 ಶೃಂಗಸಭೆ 2026ರ (G7 Summit 2026) ವೇಳೆ ನಡೆದ ಭಾರತ-ಅಮೆರಿಕ ದ್ವಿಪಕ್ಷೀಯ ಮಾತುಕತೆ ವೇಳೆ ಮೋದಿ ಅವರನ್ನು ಡೊನಾಲ್ಡ್‌ ಟ್ರಂಪ್‌ (Donald Trump) ಬಣ್ಣಿಸಿದ ಪರಿ ಇದು. ಮೋದಿ ಬಗ್ಗೆ ತನಗೆ ಅಪಾರ ಗೌರವವಿದೆ ಎಂದೂ ಟ್ರಂಪ್‌ ಈ ವೇಳೆ ತಿಳಿಸಿದರು. ಮಾತ್ರವಲ್ಲ ಮೋದಿ ಅವರನ್ನು ಉತ್ತಮ ಆದರೆ ಕಠಿಣ ವ್ಯಕ್ತಿ ಎಂದೂ ಟ್ರಂಪ್‌ ವಿವರಿಸಿದರು.

ಸುಮಾರು 16 ತಿಂಗಳ ಬಳಿ ಈ ಇಬ್ಬರು ಮಹಾನ್‌ ನಾಯಕರು ಮುಖಾಮುಖಿ ಭೇಟಿಯಾಗುತ್ತಿದ್ದು, ವ್ಯಾಪಾರ ಒಪ್ಪಂದದ ಬಗ್ಗೆ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ.

ಟ್ರಂಪ್‌ ಹೇಳಿದ್ದೇನು?

"ಮೋದಿ ತುಂಬಾ ಕಠಿಣ ಸಂಧಾನಕಾರರು. ನೀವು ಅವರನ್ನು ನೋಡಿ. ಅವರು ಅತ್ಯಂತ ಸುಂದರ ವ್ಯಕ್ತಿ. ಜತೆಗೆ ದೇವರಂತೆ ತುಂಬಾ ಒಳ್ಳೆಯವರಾಗಿ ಕಾಣುತ್ತಾರೆ. ಆದರೆ ವಾಸ್ತವವಾಗಿ ಅವರು ಮಹಾ ಪ್ರಚಂಡರು. ಆದ್ದರಿಂದ ಅವರು ನಿಮ್ಮನ್ನು ಅಚ್ಚರಿಗೆ ದೂಡುತ್ತಾರೆ. ಇಂತಹ ಕೆಲವು ಜನರಿದ್ದಾರೆ" ಎಂದು ಟ್ರಂಪ್‌ ತಿಳಿಸಿದರು.

ಮೋದಿ-ಟ್ರಂಪ್‌ ಮಾತುಕತೆ:



"ನಾನು ಅಧ್ಯಕ್ಷನಾಗಿರುವವರೆಗೆ ಭಾರತಕ್ಕೆ ಅಮೆರಿಕ ಉತ್ತಮ ಸ್ನೇಹಿತನಾಗಿರಲಿದೆ. ಇಲ್ಲಿನ ಪ್ರತಿಯೊಬ್ಬರೂ ಭಾರತವನ್ನು ಪ್ರೀತಿಸುತ್ತಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಪಾರ ಗೌರವವಿದೆ" ಎಂದು ಹೇಳಿದರು.

"ಜನರು ಮೋದಿ ತುಂಬಾ ಒಳ್ಳೆಯ ವ್ಯಕ್ತಿ ಎಂದು ಹೇಳುತ್ತಾರೆ. ನನಗೆ ಅವರು ತುಂಬಾ ಶಿಸ್ತಿನ ವ್ಯಕ್ತಿಯಾಗಿ ಕಾಣಿಸುತ್ತಾರೆ. ಅವರು ಕಠಿಣ ವ್ಯಾಪಾರಿ ಕೂಡ ಹೌದು. ಅವರು ಭಾರತದ ಜತೆಗೆ ಅಮೆರಿಕವನ್ನೂ ಪ್ರೀತಿಸುತ್ತಾರೆ. ನಾವು ಹೂಸ್ಟನ್‌ನಲ್ಲಿ 'ಹೌಡಿ ಮೋದಿ' ಕಾರ್ಯಕ್ರಮ ಆಯೋಜಿಸಿದ್ದೆವು. ಆಗ ಕ್ರೀಡಾಂಗಣವು ತುಂಬಿತ್ತು. ಶೀಘ್ರದಲ್ಲೇ ನಾನು ಭಾರತಕ್ಕೆ ಭೇಟಿ ನೀಡುತ್ತೇನೆʼʼ ಎಂದರು.

ಫ್ರಾನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ-ಡೊನಾಲ್ಡ್‌ ಟ್ರಂಪ್‌ ಶೇಕ್‌ ಹ್ಯಾಂಡ್‌; ಈ ಬಾರಿ ಅಪ್ಪುಗೆ ಮಿಸ್ಸಿಂಗ್‌

ಇದೇ ವೇಳೆ ಟ್ರಂಪ್‌ ಯಾವುದೇ ದೇಶ ಭಾರತದ ಮೇಲೆ ದಾಳಿ ಮಾಡಿದರೆ ಅಮೆರಿಕ ಭಾರತದ ಸಹಾಯಕ್ಕೆ ಬರುತ್ತದೆ ಎಂದು ಹೇಳಿದರು. "ಮೋದಿ ನಾಯಕತ್ವ ವಹಿಸಿಕೊಂಡಿದ್ದಾಗ ಭಾರತದ ಮೇಲೆ ದಾಳಿ ನಡೆದರೆ ನಾವು ಭಾರತಕ್ಕೆ ಸಹಾಯ ಮಾಡುತ್ತೇವೆ" ಎಂದು ಅವರು ಭರವಸೆ ನೀಡಿದರು.

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಲ್ಲಿ ಭಾರತದ ಪಾತ್ರದ ಬಗ್ಗೆಉತ್ತರಿಸಿದ ಟ್ರಂಪ್, “ಭಾರತವು ಜಗತ್ತಿನ ಪ್ರತಿಯೊಂದು ವಿಷಯದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ನರೇಂದ್ರ ಮೋದಿ ನಾಯಕರಾಗಿರುವ ತನಕ ಜಾಗತಿಕ ರಾಜಕಾರಣದಲ್ಲಿ ಭಾರತದ ಪಾತ್ರ ಅತ್ಯಂತ ದೊಡ್ಡದಾಗಿರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿ7 ಶೃಂಗಸಭೆಯಲ್ಲಿ ಮತ್ತೆ ಸದ್ದು ಮಾಡಿದ ‘ಮೆಲೋಡಿ’ ಜೋಡಿ; "ಇನ್ಸ್ಟಾಗ್ರಾಂ ಫೇವರೆಟ್ ಕಪಲ್‌" ಎಂದ ಮೆಲೋನಿ!

16 ತಿಂಗಳ ಬಳಿಕ ಮೊದಲ ಭೇಟಿ

ಸುಮಾರು 16 ತಿಂಗಳ ಬಳಿಕ ಮೋದಿ ಮತ್ತು ಟ್ರಂಪ್‌ ಎದುರು ಬದುರಾಗಿ ಮಾತುಕತೆ ನಡೆಸುತ್ತಿದ್ದಾರೆ. ಪಶ್ಚಿಮ ಏಷ್ಯಾ ಯುದ್ಧ ಆರಂಭವಾದ ಬಳಿಕ ಇಬ್ಬರು ನಾಯಕರು ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದರೂ ಮುಖಾಮುಖಿ ಭೇಟಿಯಾಗುತ್ತಿರುವುದು 2025ರ ಫೆಬ್ರವರಿ ನಂತರ ಇದು ಮೊದಲ ಬಾರಿ. ಟ್ರಂಪ್‌ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ಸ್ವೀಕರಿಸಿದಾಗ ವಾಷಿಂಗ್ಟನ್‌ನ ವೈಟ್‌ ಹೌಸ್‌ನಲ್ಲಿ ಮೋದಿ ಅವರನ್ನು ಭೇಟಿಯಾಗಿದ್ದರು.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author