ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮತ್ತೆ ಭಾರತ- ಪಾಕ್‌ ಕದನದ ಕುರಿತು ಡೊನಾಲ್ಡ್‌ ಟ್ರಂಪ್‌ ಹೇಳಿಕೆ; ಈ ಬಾರಿ ಹೇಳಿದ್ದೇನು?

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತೀಯ ಸೇನೆ ನಡೆಸಿದ ಅಪರೇಷನ್ ಸಿಂದೂರ್ ನಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಉಲ್ಬಣಗೊಳ್ಳುವ ಸಾಧ್ಯತೆ ಇತ್ತು. ಆದರೆ ನಾನು ಶೇಕಡಾ 200 ರಷ್ಟು ಸುಂಕ ವಿಧಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರಿಂದ ಯುದ್ಧ ನಿಂತಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸಂಗ್ರಹ ಚಿತ್ರ

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ (India-Pakistan Conflict) ಸಮಯದಲ್ಲಿ 11 ದುಬಾರಿ ಜೆಟ್‌ಗಳನ್ನು (Fighter jet) ಹೊಡೆದುರುಳಿಸಲಾಗಿದೆ. ನಾನು ಸುಂಕ ಬೆದರಿಕೆ (Tariff threat) ಹಾಕಿದ್ದರಿಂದ ಭಾರತದ ಮೇಲೆ ವ್ಯಾಪಾರ ಒತ್ತಡ ಬೀರಿ 2025ರ ಭಾರತ ಮತ್ತು ಪಾಕಿಸ್ತಾನ ಸಂಘರ್ಷವನ್ನು ನಿಲ್ಲಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಮತ್ತೆ ಶುಕ್ರವಾರ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಮಹಾನ್ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಬಹುದಾಗಿದ್ದ ಸಂಭಾವ್ಯ ಯುದ್ಧವನ್ನು ನಿಲ್ಲಿಸಲು ನಾನು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿದ್ದೆ. ಯುದ್ಧಗಳು ಉಲ್ಬಣಗೊಳ್ಳುತ್ತಿರುವ ಸಮಯದಲ್ಲಿ ಎರಡೂ ದೇಶಗಳ ನಾಯಕರೊಂದಿಗೆ ನೇರವಾಗಿ ಮಾತನಾಡಿದ್ದೇನೆ ಎಂದು ಟ್ರಂಪ್ ಮತ್ತೊಮ್ಮೆ ಹೇಳಿದ್ದಾರೆ. ಆದರೆ ಈ ಹಿಂದೆ ಅವರು ನೀಡಿದ್ದ ಇಂತಹ ಹೇಳಿಕೆಗಳನ್ನು ನವದೆಹಲಿ ತಿರಸ್ಕರಿಸಿತ್ತು.

"ನಮ್ಮನ್ನೇಕೆ ಕೈಬಿಟ್ಟಿರಿ?" ಸಹಾಯಕ್ಕಾಗಿ ಅಂಗಲಾಚುತ್ತಿರುವ ಒತ್ತೆಯಾಳು ಪಾಕ್‌ ಸೈನಿಕರ ವಿಡಿಯೋ ಹರಿಬಿಟ್ಟ BLA

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವು ಭರದಿಂದ ಸಾಗುತ್ತಿತ್ತು. ವಿಮಾನಗಳನ್ನು ಹೊಡೆದುರುಳಿಸಲಾಗುತ್ತಿತ್ತು. ನಾನು ಭಾರತ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ಫೋನ್ ಮೂಲಕ ಮಾತನಾಡಿದೆ. ಪರಮಾಣು ಶಸ್ತ್ರಸಜ್ಜಿತ ಎರಡು ರಾಷ್ಟ್ರಗಳ ನಡುವಿನ ದೊಡ್ಡ ಪ್ರಮಾಣದ ಸಂಘರ್ಷವನ್ನು ತಡೆಯಲು ತಾವು ಹಸ್ತಕ್ಷೇಪ ಮಾಡಿರುವುದಾಗಿ ಹೇಳಿದರು.



ಯುದ್ಧ ಕ್ಷೇತ್ರದಿಂದ ಎರಡೂ ಕಡೆಯವರು ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ಆರ್ಥಿಕ ಒತ್ತಡ ಪ್ರಮುಖ ಪಾತ್ರ ವಹಿಸಿದೆ ಎಂದ ಅವರು, ನಾವು ಅವರಿಗೆ ಕರೆ ಮಾಡಿ ಯುದ್ಧ ನಿಲ್ಲಿಸದೇ ಇದ್ದರೆ ನಿಮ್ಮಿಬ್ಬರೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ. ಸಂಘರ್ಷ ಮುಂದುವರಿಸಿದರೆ ಎರಡೂ ದೇಶಗಳ ಮೇಲೆ ತಲಾ ಶೇಕಡಾ 200 ರಷ್ಟು ಸುಂಕಗಳನ್ನು ವಿಧಿಸುತ್ತೇನೆ ಎಂದು ಎಚ್ಚರಿಕೆ ನೀಡಿದೆ. ಗಂಭೀರ ಆರ್ಥಿಕ ಪರಿಣಾಮಗಳ ಬೆದರಿಕೆಯಿಂದ ಎರಡೂ ರಾಷ್ಟ್ರಗಳು ಯುದ್ಧವನ್ನು ನಿಲ್ಲಿಸಲು ಒಪ್ಪಿಕೊಂಡವು ಎಂದು ಅವರು ತಿಳಿಸಿದರು.

ಪಾಕಿಸ್ತಾನಕ್ಕೆ ಏಪ್ರಿಲ್ ಬಳಿಕ ಸಿಗಲಿದೆ ಮತ್ತೊಂದು ಶಾಕ್; ಸಿಂಧೂ ಬಳಿಕ ರಾವಿ ನದಿ ನೀರು ಹರಿವಿಗೆ ತಡೆ

ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಲು ಎರಡು, ಮೂರು ದಿನಗಳಲ್ಲಿ ಒಪ್ಪಂದ ಮಾಡಿಸಿದ್ದೇನೆ. ಇದರಿಂದ ಲಕ್ಷಾಂತರ ಜೀವಗಳು ಉಳಿಯಿತು. ಸಂಘರ್ಷ ನಿಲ್ಲಿಸಿದ್ದರಿಂದ 25 ಮಿಲಿಯನ್ ಜೀವಗಳು ಉಳಿದಿವೆ ಎಂದು ಪಾಕಿಸ್ತಾನ ನಾಯಕರು ತಮಗೆ ತಿಳಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಸಂಘರ್ಷ ನಿಂತ ಬಳಿಕ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಟ್ರಂಪ್ ಅವರನ್ನು ಸಾರ್ವಜನಿಕವಾಗಿ ಶ್ಲಾಘಿಸಿದ್ದರು. ಅವರ ಹಸ್ತಕ್ಷೇಪವನ್ನು ಸಮಯೋಚಿತ ಮತ್ತು ಪರಿಣಾಮಕಾರಿ ಎಂದು ಹೇಳಿದ್ದರು. ಆದರೆ ಭಾರತ ಇದನ್ನು ತಿರಸ್ಕರಿಸಿತ್ತು. ಎರಡು ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ಮಾತುಕತೆ ಬಳಿಕ ದ್ವಿಪಕ್ಷೀಯವಾಗಿ ಯುದ್ಧವನ್ನು ನಿಲ್ಲಿಸಲಾಗಿದೆ ಎಂದು ನವದೆಹಲಿ ಸಮರ್ಥಿಸಿಕೊಂಡಿತ್ತು.

ವಿದ್ಯಾ ಇರ್ವತ್ತೂರು

View all posts by this author