ಸೇಂಟ್ ಪೀಟರ್ಸ್‌ಬರ್ಗ್: ಭಾರತಕ್ಕಾಗಿ ಐದನೇ ತಲೆಮಾರಿನ ಸು-57 ಸ್ಟೆಲ್ತ್ ಫೈಟರ್ ಜೆಟ್ (Su-57 fighter jet) ಅನ್ನು ರಷ್ಯಾ (Russia) ಸಿದ್ಧಪಡಿಸಲಿದೆ. ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ರಕ್ಷಣಾ ಸಂಬಂಧಗಳು ನಂಬಿಕೆಯ ಆಧಾರದ ಮೇಲೆ ನಿರ್ಮಿಸಲ್ಪಟ್ಟಿವೆ. ಹೀಗಾಗಿ ಸು-57 ಸ್ಟೆಲ್ತ್ ಫೈಟರ್ ಜೆಟ್ ಅನ್ನು ಭಾರತದೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಿ, ಉತ್ಪಾದಿಸಲು ಮತ್ತು ಪೂರೈಸಲು ರಷ್ಯಾ ಸಿದ್ಧವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russia President Vladimir Putin) ಹೇಳಿದರು. ಈ ಕುರಿತು ಶನಿವಾರ SPIEF ಅಧಿವೇಶನದಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ವ್ಯವಹಾರವನ್ನು ಮೀರಿ ನವದೆಹಲಿಯೊಂದಿಗೆ ರಕ್ಷಣಾ ಸಹಕಾರ ಸಂಬಂಧವನ್ನು ಬೆಳೆಸಲು ಮಾಸ್ಕೋ ಆಸಕ್ತಿ ಹೊಂದಿದೆ ಎಂದು ತಿಳಿಸಿದರು.
ಸೇಂಟ್ ಪೀಟರ್ಸ್‌ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆಯ SPIEF ಅಧಿವೇಶನದ ಬಳಿಕ ಅವರು ಪತ್ರಕರ್ತೆ ಗೀತಾ ಮೋಹನ್ ಅವರೊಂದಿಗೆ ಮಾತನಾಡಿ, ಭಾರತದೊಂದಿಗೆ ಫೈಟರ್ ಜೆಟ್‌ನ ಸಹಯೋಗಕ್ಕೆ ರಷ್ಯಾ ಮುಕ್ತವಾಗಿದೆ ಎಂದು ಹೇಳಿದರು.
ಮತ್ತೆ ಶುರುವಾಯ್ತಾ ವಾರ್? ಇರಾನ್ ಡ್ರೋನ್‌ಗಳು, ರೇಡಾರ್ ಕೇಂದ್ರಗಳ ಮೇಲೆ ಅಮೆರಿಕ ದಾಳಿ
ಸೋವಿಯತ್ ಯುಗದಿಂದಲೂ ಭಾರತ ಮತ್ತು ರಷ್ಯಾ ನಡುವೆ ನಿಕಟ ಮಿಲಿಟರಿ-ತಾಂತ್ರಿಕ ಸಹಕಾರವಿದೆ. ಭಾರತೀಯ ಸಶಸ್ತ್ರ ಪಡೆಗಳ ಗಮನಾರ್ಹ ಭಾಗವು ರಷ್ಯಾದ ಮೂಲದ ಉಪಕರಣಗಳನ್ನು ಬಳಸುತ್ತಿದೆ. ಇದು ಮುಂದುವರಿಯಲಿದೆ ಎಂದರು.
ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ರಕ್ಷಣಾ ಸಂಬಂಧಗಳು ಕೇವಲ ವ್ಯಾಪಾರ, ವ್ಯವಹಾರದಿಂದ ಮಾತ್ರವಲ್ಲ ಎಂದ ಅವರು, ಇದು ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಹೆಚ್ಚು ಗಮನಹರಿಸಿವೆ. ಭಾರತವು ಸಾಂಪ್ರದಾಯಿಕವಾಗಿ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳನ್ನು ರಷ್ಯಾದಿಂದ ಖರೀದಿಸುತ್ತಿದೆ. ಸು-57 ಬಹಳ ಉತ್ತಮ ವಿಮಾನವಾಗಿದೆ. ಇದು ಅತ್ಯಂತ ಆಧುನಿಕವಾಗಿದೆ ಎಂದು ತಿಳಿಸಿದರು.
ಸು-57 ಅನ್ನು ಇಬ್ಬರು ಪೈಲಟ್‌ಗಳು ನಿರ್ವಹಿಸಬಹುದು. ಅಲ್ಲದೇ ಇದು ಹೆಚ್ಚುವರಿ ಕಮಾಂಡ್ ಸೆಂಟರ್ ಆಗಿ ಕೂಡ ಕಾರ್ಯನಿರ್ವಹಿಸುತ್ತದೆ. ವಾಯುಯಾನದಲ್ಲಿ ಮಾತ್ರವಲ್ಲದೆ ಜಲಾಂತರ್ಗಾಮಿ ನೌಕೆಗಳು ಮತ್ತು ಮೇಲ್ಮೈ ಹಡಗುಗಳು ಸೇರಿದಂತೆ ನೌಕೆಯಲ್ಲೂ ಇದು ಉತ್ತಮವಾಗಿ ಕಾರ್ಯನಿರ್ವಹಣೆಯನ್ನು ಮಾಡುತ್ತದೆ ಎಂದರು.
ರಷ್ಯಾದಿಂದ ರಕ್ಷಣಾ ಸಾಮಗ್ರಿಗಳನ್ನು ಖರೀದಿಸಲು ಭಾರತವು ಅಮೆರಿಕದಿಂದ ಅನುಮತಿಯನ್ನು ಪಡೆಯಬೇಕಿಲ್ಲ. ಭಾರತವು ನಿರಂತರವಾಗಿ ಸಾರ್ವಭೌಮ ರಾಷ್ಟ್ರವಾಗಿ ಕಾರ್ಯನಿರ್ವಹಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತವನ್ನು ನಿರ್ಬಂಧ, ಬೆದರಿಕೆಗಳಿಂದ ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದರು.
ಒಂದು ಕಾಲದಲ್ಲಿ ಪ್ರಧಾನಿ ಮೋದಿ ಅವರನ್ನು ಅಮೆರಿಕಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು. ಆದರೆ ಇಂದು ಆ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಭಾರತ ಮತ್ತು ಅಮೆರಿಕ ಸಂಬಂಧಗಳು ಉತ್ತಮವಾಗಿದೆ. ನವದೆಹಲಿಯು ಅತ್ಯಂತ ಮುಂದುವರಿದ, ಸೂಕ್ತ ಮತ್ತು ವೆಚ್ಚ-ಪರಿಣಾಮಕಾರಿ ಎಂದು ಪರಿಗಣಿಸುವ ಮಿಲಿಟರಿ ಉಪಕರಣಗಳನ್ನು ಖರೀದಿಸಲು ಮುಕ್ತವಾಗಿದೆ ಎಂದು ಹೇಳಿದರು.
ಭಾರತ ಮತ್ತು ರಷ್ಯಾದ ರಕ್ಷಣಾ ಸಂಬಂಧಗಳು ರಾಜಕೀಯ ಒತ್ತಡಗಳಿಂದ ಮುಕ್ತವಾಗಿವೆ. ನಾವು ಭಾರತಕ್ಕೆ ಏನು ನೀಡಬೇಕು ಅಥವಾ ಏನು ಮಾಡಬಾರದು ಎಂಬುದನ್ನು ಯಾರೂ ನಮಗೆ ನಿರ್ದೇಶಿಸಲು ಸಾಧ್ಯವಿಲ್ಲ. ನಮ್ಮ ಪಾಲುದಾರರಿಗೆ, ವಿಶೇಷವಾಗಿ ಭಾರತದಂತಹ ಪಾಲುದಾರರಿಗೆ ನಮ್ಮ ಬದ್ಧತೆಗಳನ್ನು ನಾವು ಯಾವಾಗಲೂ ಗೌರವಿಸುತ್ತೇವೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಹಾನಿಕಾರಕ: ವ್ಲಾಡಿಮಿರ್ ಪುಟಿನ್
ಐದನೇ ತಲೆಮಾರಿನ ಸು-57 ಯುದ್ಧ ವಿಮಾನದ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (AMCA), ಅಭಿವೃದ್ಧಿ ಹಂತದಲ್ಲಿದೆ. ಇದು 2030 ರ ದಶಕದ ಮಧ್ಯಭಾಗದಲ್ಲಿ ಸೇನೆ ಸೇರುವ ನಿರೀಕ್ಷೆ ಇದೆ. ರಷ್ಯಾದ ಪ್ರಮುಖ ಸ್ಟೆಲ್ತ್ ಫೈಟರ್, ಸು-57 ವಿಶೇಷವೆಂದರೆ ಹೆಚ್ಚಿನ ಕುಶಲತೆ ಮತ್ತು ಸುಧಾರಿತ ಏವಿಯಾನಿಕ್ಸ್ ನ ಸಂಯೋಜನೆಯಾಗಿದೆ.ಇದು ಅಮೆರಿಕದ ಎಫ್-35 ಮತ್ತು ಚೀನಾದ ಜೆ-35 ಯುದ್ಧ ವಿಮಾನಗಳ ಮಾದರಿಯನ್ನು ಹೊಂದಿದೆ.