ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವೆನೆಜುವೆಲಾ ಅಧ್ಯಕ್ಷರ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನನ್ನು ಬಂಧಿಸುತ್ತಾರೆಯೇ ಡೊನಾಲ್ಡ್ ಟ್ರಂಪ್ ?

ವೆನೆಜುವೆಲಾದ ನಿಕೋಲಸ್ ಮಡುರೊ ಅವರ ಬಂಧನದ ಬಳಿಕ ಉಕ್ರೇನ್ ಮೇಲೆ ದಾಳಿ ನಡೆಸಿ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನದ ಯೋಜನೆ ಮಾಡುತ್ತಿರಬಹುದು ಎನ್ನುವ ಚರ್ಚೆಗಳು ಪ್ರಾರಂಭವಾಗಿವೆ. ಈ ಬಗ್ಗೆ ಟ್ರಂಪ್ ಹೇಳಿದ್ದೇನು? ಇಲ್ಲಿದೆ ಮಾಹಿತಿ.

(ಸಂಗ್ರಹ ಚಿತ್ರ)

ವಾಷಿಂಗ್ಟನ್: ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ (Venezuela president Nicolas Maduro,) ಅವರ ಬಂಧನದ ಬಳಿಕ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President, Vladimir Putin) ಅವರನ್ನು ಇದೇ ರೀತಿ ಅಮೆರಿಕ ಬಂಧಿಸಬಹುದು ಎನ್ನುವ ಚರ್ಚೆಗಳು ಪ್ರಾರಂಭವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಉಕ್ರೇನ್ ವಿರುದ್ಧ ರಷ್ಯಾ ನಡೆಸಿದ ದಾಳಿ ಖಂಡನೀಯವಾದರೂ ರಷ್ಯಾದ ವಿರುದ್ಧ ಅಂತಹ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದರು. ಮಡುರೊ ಬಳಿಕ ಪುಟಿನ್ ಅವರನ್ನು ಸೆರೆ ಹಿಡಿಯಬಹುದು ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Ukrainian President Volodymyr Zelensky) ಅವರ ಹೇಳಿಕೆ ಬಳಿಕ ಟ್ರಂಪ್ ಅವರು ಶುಕ್ರವಾರ ಇದಕ್ಕೆ ಸ್ಪಷ್ಟನೆ ನೀಡಿದರು.

ಅಮೆರಿಕದ ಉನ್ನತ ತೈಲ ಮತ್ತು ಅನಿಲ ಕಾರ್ಯನಿರ್ವಾಹಕರೊಂದಿಗಿನ ಸಭೆಯಲ್ಲಿ ಮಾತನಾಡಿದ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಂಧನ ಅಗತ್ಯವೆಂದು ನಾನು ಭಾವಿಸುವುದಿಲ್ಲ. ನಾವು ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಲಿದ್ದೇವೆ ಎಂದು ಭಾವಿಸುತ್ತೇನೆ ಎಂದು ಹೇಳಿದರು.

ಒಡಿಶಾದಲ್ಲಿ ನೆಲಕ್ಕಪ್ಪಳಿಸಿದ ಲಘು ವಿಮಾನ; ಪೈಲಟ್‌ ಸಮಯಪ್ರಜ್ಞೆಯಿಂದ ತಪ್ಪಿತು ಭಾರಿ ಅನಾಹುತ

ರಷ್ಯಾ ಮತ್ತು ಉಕ್ರೇನ್ ಯುದ್ಧ ಕೊನೆಗೊಳ್ಳದಿರುವುದು ತುಂಬಾ ನಿರಾಸೆಯಾಗಿದೆ. ನಾನು ಎಂಟು ಯುದ್ಧಗಳನ್ನು ಕೊನೆಗೊಳಿಸಿದೆ. ಇದು ಕೂಡ ಅತ್ಯಂತ ಸುಲಭವಾಗಿ ಕೊನೆಯಾಗಬಹುದು ಎಂದು ಭಾವಿಸಿದೆ. ಆದರೆ ಸಾಧ್ಯವಾಗಿಲ್ಲ ಎಂದರು.

ಉಕ್ರೇನ್‌ನಲ್ಲಿ ನಡೆದ ಯುದ್ಧ ಅಪರಾಧಗಳಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿರುದ್ಧ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಬಂಧನ ವಾರಂಟ್‌ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಝೆಲೆನ್ಸ್ಕಿ ಅವರು ಮಡುರೊ ಬಂಧನದ ಅನಂತರ ಪುಟಿನ್ ಬಂಧನವಾಗುತ್ತದೆ ಎಂದಿದ್ದರು.

ಮಡುರೊ ವಿರುದ್ದದ ಯುಎಸ್ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ವಾಧಿಕಾರಿಯನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಯುನೈಟೆಡ್ ಸ್ಟೇಟ್ಸ್‌ಗೆ ತಿಳಿದಿದೆ ಎಂದು ಪರೋಕ್ಷವಾಗಿ ಪುಟಿನ್ ಗೆ ಹೇಳಿದ್ದರು. ಆದರೆ ರಷ್ಯಾದ ಅಧ್ಯಕ್ಷರ ವಿರುದ್ಧ ಈ ರೀತಿ ಕಾರ್ಯಾಚರಣೆ ನಡೆಸಲಾಗುವುದಿಲ್ಲ ಎಂದು ಟ್ರಂಪ್ ನೇರವಾಗಿ ಹೇಳಿದ್ದಾರೆ.

ಆಯೋಮಯಗೊಂಡ ಇರಾನ್; ತಣಿಯದ ಅಯತೊಲ್ಲಾ ವಿರುದ್ಧ ಭುಗಿಲೆದ್ದ ಆಕ್ರೋಶ: ಜನಾಕ್ರೋಶಕ್ಕೆ ಕಾರಣವೇನು?

ಮಡುರೊ ಬಂಧನ

ಮಾದಕ ವಸ್ತು ಕಳ್ಳಸಾಗಾಣೆದಾರರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿರುವ ಅಮೆರಿಕ ಕಳೆದ ವಾರಾಂತ್ಯದಲ್ಲಿ ಮಾದಕ ವಸ್ತು, ಭಯೋತ್ಪಾದನೆ, ಕಳ್ಳಸಾಗಣೆಗೆ ಸಹಕಾರ ನೀಡುತ್ತಿರುವ ಆರೋಪದಲ್ಲಿ ವೆನೆಜುವೆಲಾ ಮೇಲೆ ದಾಳಿ ನಡೆಸಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿತ್ತು.

ವಾಷಿಂಗ್ಟನ್ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ವೆನೆಜುವೆಲಾದಲ್ಲಿ ನಡೆದ ಕಾರ್ಯಾಚರಣೆಯು ಕ್ಯಾರಕಾಸ್‌ನಲ್ಲಿ ಮಧ್ಯರಾತ್ರಿಯ ಅನಂತರ ನಡೆದಿದೆ. ಸೇನಾ ಪಡೆಗಳು ಮಡುರೊ ಅವರ ನಿವಾಸಕ್ಕೆ ನುಗ್ಗುವ ಮೊದಲು ಯುಎಸ್ ಜೆಟ್‌ಗಳು ನಗರದಾದ್ಯಂತ ವೈಮಾನಿಕ ದಾಳಿ ನಡೆಸಿದವು. ಬಳಿಕ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ವಶಕ್ಕೆ ಪಡೆದು ನೇರವಾಗಿ ನ್ಯೂಯಾರ್ಕ್‌ಗೆ ಕರೆ ತರಲಾಗಿದೆ ಎಂದು ಹೇಳಿದೆ.

ವಿದ್ಯಾ ಇರ್ವತ್ತೂರು

View all posts by this author