ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

"ಚಿಪ್ಸ್‌, ಬಿಸ್ಕೆಟ್‌ ತಿಂದೇ ಬದುಕುತ್ತಿದ್ದ"; ಕ್ಯಾಲಿಫೋರ್ನಿಯಾದಲ್ಲಿ ಮೃತಪಟ್ಟ ಸಾಕೇತ್‌ ಸಾವಿನ ಹಿಂದಿನ ರಹಸ್ಯವೇನು?

ಕ್ಯಾಲಿಫೋರ್ನಿಯಾದಲ್ಲಿ ಶವವಾಗಿ ಪತ್ತೆಯಾದ 22 ವರ್ಷದ ಕರ್ನಾಟಕ ಮೂಲದ ಸಾಕೇತ್‌ ಶ್ರೀನಿವಾಸಯ್ಯ ಅವರು ಇಂದು ಶವವಾಗಿ ಪತ್ತೆಯಾಗಿದ್ದಾರೆ. ಇದೀಗ ಸಾಕೇತ್ ಶ್ರೀನಿವಾಸಯ್ಯ ಅವರ ರೂಮ್‌ಮೇಟ್ ಬನೀತ್ ಸಿದ್ಧ್, "ಅಂತರರಾಷ್ಟ್ರೀಯ ವಿದ್ಯಾರ್ಥಿಯಾಗಿ ಜೀವನ ಎಷ್ಟು ಕಠಿಣ" ಎಂಬುದನ್ನು ಎತ್ತಿ ತೋರಿಸುವ ಭಾವನಾತ್ಮಕ ಪೋಸ್ಟ್ ಅನ್ನು ಹಾಕಿದ್ದಾರೆ.

ಸಂಗ್ರಹ ಚಿತ್ರ

ವಾಷಿಂಗ್ಟನ್‌: ಕ್ಯಾಲಿಫೋರ್ನಿಯಾದಲ್ಲಿ ಶವವಾಗಿ ಪತ್ತೆಯಾದ 22 ವರ್ಷದ ಕರ್ನಾಟಕ ಮೂಲದ ಸಾಕೇತ್‌ ಶ್ರೀನಿವಾಸಯ್ಯ ಅವರು ಇಂದು (Saketh Sreenivasaiah) ಶವವಾಗಿ ಪತ್ತೆಯಾಗಿದ್ದಾರೆ. ಇದೀಗ ಸಾಕೇತ್ ಶ್ರೀನಿವಾಸಯ್ಯ ಅವರ ರೂಮ್‌ಮೇಟ್ ಬನೀತ್ ಸಿದ್ಧ್, "ಅಂತರರಾಷ್ಟ್ರೀಯ ವಿದ್ಯಾರ್ಥಿಯಾಗಿ ಜೀವನ ಎಷ್ಟು ಕಠಿಣ" ಎಂಬುದನ್ನು ಎತ್ತಿ ತೋರಿಸುವ ಭಾವನಾತ್ಮಕ ಪೋಸ್ಟ್ ಅನ್ನು ಹಾಕಿದ್ದಾರೆ. ಸಾಕೇತ್ ಕರ್ನಾಟಕದವರಾಗಿದ್ದು, ಯುಸಿ ಬರ್ಕ್ಲಿಯಲ್ಲಿ ರಾಸಾಯನಿಕ ಮತ್ತು ಜೈವಿಕ ಅಣು ಎಂಜಿನಿಯರಿಂಗ್ ವಿಭಾಗದಲ್ಲಿ ಸೇರಿಕೊಂಡಿದ್ದರು. ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ, "ನಾನು ಯುಸಿ ಬರ್ಕ್ಲಿಯಲ್ಲಿ ರಾಸಾಯನಿಕ ಮತ್ತು ಜೈವಿಕ ಅಣು ಎಂಜಿನಿಯರಿಂಗ್ ವಿಭಾಗದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದು, ಐಐಟಿ ಮದ್ರಾಸ್‌ನಿಂದ ಪದವಿಪೂರ್ವ ಪದವಿ ಪಡೆದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಶ್ರೀನಿವಾಸಯ್ಯ ಅವರ ರೂಮ್‌ಮೇಟ್ ಭಾರತದವರೇ ಆದ ಬನೀತ್ ಸಿಂಗ್, ವಿದ್ಯಾರ್ಥಿಯ ಕೊನೆಯ ಎರಡು ವಾರಗಳ ಬಗ್ಗೆ ಹೃದಯಸ್ಪರ್ಶಿ ಮತ್ತು ತೊಂದರೆದಾಯಕವಾದ ಕಥೆಯನ್ನು ಹಂಚಿಕೊಂಡಿದ್ದಾರೆ. ಸಾಕೇತ್‌ ಕಾಣೆಯಾಗುವ ಹಿಂದಿನ ಹದಿನೈದು ದಿನಗಳಲ್ಲಿ "ಕಡಿಮೆ ತಿನ್ನಲು ಮತ್ತು ಕಡಿಮೆ ತೊಡಗಿಸಿಕೊಳ್ಳಲು ಪ್ರಾರಂಭಿಸಿದ್ದರು, ಕೇವಲ ಚಿಪ್ಸ್ ಮತ್ತು ಕುಕೀಸ್‌ಗಳನ್ನು ಮಾತ್ರ ತಿನ್ನುತ್ತಿದ್ದರು. ನನ್ನ ಬಗ್ಗೆ ಯಾರು ಏನು ಯೋಚಿಸಿದರೂ ನನಗೆ ಚಿಂತೆ ಇಲ್ಲ ಎಂದು ಹೇಳಿದ್ದರು ಎಂದು ಅವರು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ, ನಾನು ಕಾಳಜಿ ವಹಿಸುವುದನ್ನು ನಿಲ್ಲಿಸಿದ್ದೇನೆ ಎಂದು ಆಗಗ ಹೇಳುತ್ತಿದ್ದನು. ಆಗ ನಾವು ಅದನ್ನು ಅಷ್ಟಾಗಿ ಕಾಳಜಿ ತೆಗೆದುಕೊಂಡಿರಲಿಲ್ಲ. ಆಗಗ ಅವನು ಜೀವನ ಕುರಿತು ಅತಿಯಾಗಿ ಮಾತನಾಡುತ್ತಿದ್ದ ಎಂದು ಸಿಂಗ್‌ ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಜನವರಿ 21 ರಲ್ಲೇ ಸಾಕೇತ್ ಅವರನ್ನು ಲೇಕ್ ಅಂಜಾಗೆ ಆಹ್ವಾನಿಸಿದ್ದರು, ಆದರೆ ನಾನು ಅಲ್ಲಿ ಹೋಗಿರಲಿಲ್ಲ. ಅದೇ ಅವನ ಸಾವಿನ ಸ್ಥಳವಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ ಎಂದು ಸಿಂಗ್‌ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

IIT ಮದ್ರಾಸ್‌ನಿಂದ ಕ್ಯಾಲಿಫೋರ್ನಿಯಾವರೆಗೆ; ಮೃತ ಸಾಕೇತ್‌ ಶ್ರೀನಿವಾಸಯ್ಯ ಶೈಕ್ಷಣಿಕ ಸಾಧನೆ ಹೇಗಿತ್ತು ಗೊತ್ತಾ?

ಸಾಕೇತ್‌ ಅವರು ಬೆಂಗಳೂರಿನ ಶ್ರೀ ವಾಣಿ ಎಜುಕೇಶನ್ ಸೆಂಟರ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪೂರೈಸಿ, ನಂತರ ಪ್ರತಿಷ್ಠಿತ ಬೇಸ್‌ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಬಳಿಕ ಚೆನ್ನೈ ಐಐಟಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಪ್ರಸ್ತುತ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ 'ಪ್ರಾಡಕ್ಟ್ ಡೆವಲಪ್‌ಮೆಂಟ್ ಪ್ರೋಗ್ರಾಮ್' ಅಡಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುತ್ತಿದ್ದರು.

Vishakha Bhat Heggar

View all posts by this author