ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IIT ಮದ್ರಾಸ್‌ನಿಂದ ಕ್ಯಾಲಿಫೋರ್ನಿಯಾವರೆಗೆ; ಮೃತ ಸಾಕೇತ್‌ ಶ್ರೀನಿವಾಸಯ್ಯ ಶೈಕ್ಷಣಿಕ ಸಾಧನೆ ಹೇಗಿತ್ತು ಗೊತ್ತಾ?

Saketh Sreenivasaiah: 22 ವರ್ಷದ ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ನಾಪತ್ತೆಯಾಗಿ ಆರು ದಿನಗಳ ನಂತರ ಕ್ಯಾಲಿಫೋರ್ನಿಯಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ಸಾಕೇತ್ ಫೆಬ್ರವರಿ 9 ರಂದು ನಾಪತ್ತೆಯಾಗಿದ್ದರು.

ಮೃತ ಸಾಕೇತ್‌ ಶ್ರೀನಿವಾಸಯ್ಯ ಶೈಕ್ಷಣಿಕ ಸಾಧನೆ ಹೇಗಿತ್ತು ಗೊತ್ತಾ?

ಮೃತ ಸಾಕೇತ್‌ ಶ್ರೀನಿವಾಸಯ್ಯ -

Vishakha Bhat Heggar
Vishakha Bhat Heggar Feb 15, 2026 11:16 AM

ತುಮಕೂರು: 22 ವರ್ಷದ ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (Saketh Sreenivasaiah) ನಾಪತ್ತೆಯಾಗಿ ಆರು ದಿನಗಳ ನಂತರ ಕ್ಯಾಲಿಫೋರ್ನಿಯಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ಸಾಕೇತ್ ಫೆಬ್ರವರಿ 9 ರಂದು ನಾಪತ್ತೆಯಾಗಿದ್ದರು. ಪೋಷಕರು ಮಗನ ಹುಡುಕಾಟಕ್ಕಾಗಿ ಭಾರತೀಯ ರಾಯಭಾರ ಕಚೇರಿ ಮೊರೆ ಹೋಗಿದ್ದರು. ಪೊಲೀಸರು ಕಾರ್ಯಾಚರಣೆಗೆ ಇಳಿದು ಶೋಧ ಕಾರ್ಯಾ ಆರಂಭ ಮಾಡಿದ್ದರು. ಆದರೆ ಇದೀಗ ಸಾಕೇತ್​ ಶವವಾಗಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಸಾಕೇತ್ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ (UC Berkeley) ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದರು. ಯುಸಿ ಬರ್ಕ್ಲಿಯಲ್ಲಿ ರಾಸಾಯನಿಕ ಮತ್ತು ಜೈವಿಕ ಅಣು ಎಂಜಿನಿಯರಿಂಗ್ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿದ್ದರು. ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಉತ್ಪನ್ನ ಅಭಿವೃದ್ಧಿ ಕಾರ್ಯಕ್ರಮ (ಪಿಡಿಪಿ) ಅಡಿಯಲ್ಲಿ ವಿಜ್ಞಾನ ಸ್ನಾತಕೋತ್ತರ ಪದವಿ (ಎಂಎಸ್) ಪಡೆಯುತ್ತಿದ್ದಾರೆ. ಈ ಹಿಂದೆ ಅವರು ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ನಲ್ಲಿ ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ (ಬಿಟೆಕ್) ಪದವಿಯನ್ನು ಪೂರ್ಣಗೊಳಿಸಿದ್ದರು. ಆಗಸ್ಟ್ 2025 ರಿಂದ ಮೇ 2026 ರವರೆಗೆ ಅವರ ಅಧ್ಯಯನ ಅವಧಿ ಇತ್ತು.

ಐಐಟಿ ಮದ್ರಾಸ್‌ ಜರ್ನಿ

ಯುನೈಟೆಡ್ ಸ್ಟೇಟ್ಸ್‌ಗೆ ತೆರಳುವ ಮೊದಲು, ಸಾಕೇತ್ ಐಐಟಿ ಮದ್ರಾಸ್‌ನಲ್ಲಿರುವ ಪಾಲಿಮರ್ ಎಂಜಿನಿಯರಿಂಗ್ ಮತ್ತು ಕೊಲಾಯ್ಡ್ ವಿಜ್ಞಾನ ಪ್ರಯೋಗಾಲಯದಲ್ಲಿ ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದರು. ಪದವಿಪೂರ್ವ ಸಂಶೋಧಕರಾಗಿ (ಸೆಪ್ಟೆಂಬರ್ 2024 - ಮೇ 2025) ಮತ್ತು ಯುವ ಸಂಶೋಧನಾ ಸಹೋದ್ಯೋಗಿಯಾಗಿ (ಸೆಪ್ಟೆಂಬರ್ 2023 - ಆಗಸ್ಟ್ 2024) ರವರೆಗೆ ಕೆಲಸ ಮಾಡಿದ್ದರು. ಮೇ 2024 ರಿಂದ ಜುಲೈ 2024 ರವರೆಗೆ ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್‌ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಇಂಟರ್ನ್ ಆಗಿ ಸಾಕೇತ್ ಕೆಲಸ ಮಾಡಿದ್ದರು. ಬಳಿಕ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದ್ದರು.

ಹುಟ್ಟುಹಬ್ಬ ಪಾರ್ಟಿ, ಅಶ್ಲೀಲ ವಿಡಿಯೊ, ಕೊಲೆ, ಸ್ನೇಹಿತ ನಾಪತ್ತೆ; ಎಂಬಿಎ ವಿದ್ಯಾರ್ಥಿನಿ ಸಾವಿನ ಸುತ್ತ ಅನುಮಾನದ ಹುತ್ತ

ಸಾಕೇತ್ ಫೆಬ್ರವರಿ 9ರಂದು ನಾಪತ್ತೆಯಾಗಿದ್ದರು. ಕೊನೆಯ ಬಾರಿಗೆ ಅವರು ಟಿಲ್ಡೆನ್ ರೀಜನಲ್ ಪಾರ್ಕ್‌ನ ಸರೋವರದ ಬಳಿ ಕಂಡುಬಂದಿದ್ದರು ಎಂದು ಮಾಹಿತಿ ಇದೆ. ಅವರ ತಂದೆ ಶ್ರೀನಿವಾಸಯ್ಯ ಅವರು ಫೆಬ್ರವರಿ 9ರಂದು ಕೊನೆಯ ಬಾರಿಗೆ ಮಗನೊಂದಿಗೆ ಮಾತನಾಡಿದ್ದಾಗಿ ಹೇಳಿದ್ದರು. ಇದೀಗ ಸಾಕೇತ್‌ ಮೃತದೇಹ ಪತ್ತೆಯಾಗಿದೆ. ಕಾನ್ಸುಲೇಟ್ ಅಧಿಕಾರಿಗಳು ಕುಟುಂಬದೊಂದಿಗೆ ನೇರ ಸಂಪರ್ಕದಲ್ಲಿದ್ದು, ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ಕಳುಹಿಸಲು ಅಗತ್ಯ ವ್ಯವಸ್ಥೆ ಮಾಡುತ್ತಿದ್ದಾರೆ. ಎಲ್ಲಾ ವಿಧಿವಿಧಾನಗಳು ಮತ್ತು ಸೇವೆಗಳಲ್ಲಿ ಬೆಂಬಲ ನೀಡಲು ಸಿದ್ಧವಾಗಿದ್ದಾರೆ ಎಂದು ಹೇಳಿದ್ದಾರೆ. ಸಾಕೇತ್ ನಿಧನದ ಸುದ್ದಿಯೊಂದಿಗೆ ಕುಟುಂಬ ಮತ್ತು ಸ್ನೇಹಿತರು ಆಘಾತಕ್ಕೆ ಒಳಗಾಗಿದ್ದಾರೆ.