ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೂಕ್ಷ್ಮ ವಿಡಿಯೊ ಸೋರಿಕೆ: ಇಸ್ರೇಲ್‌ನ ಉನ್ನತ ಮಿಲಿಟರಿ ಪ್ರಾಸಿಕ್ಯೂಟರ್ ರಾಜೀನಾಮೆ

ಪ್ಯಾಲೆಸ್ತೀನ್‌ ಬಂಧಿತನ ಮೇಲಿನ ದೌರ್ಜನ್ಯದ ವಿಡಿಯೊ ಬಿಡುಗಡೆಗೆ ತಾನೇ ಕಾರಣ ಎಂದು ಒಪ್ಪಿಕೊಂಡ ಇಸ್ರೇಲ್‌ನ ಉನ್ನತ ಮಿಲಿಟರಿ ಪ್ರಾಸಿಕ್ಯೂಟರ್ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. 2024ರ ಆಗಸ್ಟ್‌ನಲ್ಲಿ ಬಿಡುಗಡೆಯಾದ ವಿಡಿಯೊದಲ್ಲಿ ದಕ್ಷಿಣ ಇಸ್ರೇಲ್‌ನ ಕುಖ್ಯಾತ ಎಸ್‌ಡಿ ಟೀಮನ್ ಮಿಲಿಟರಿ ಬಂಧನ ಕೇಂದ್ರದಲ್ಲಿ ಇಸ್ರೇಲಿ ಸೈನಿಕರು ಪ್ಯಾಲೆಸ್ತೀನ್‌ನ ಬಂಧಿತನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತೋರಿಸಲಾಗಿತ್ತು. ಈ ವಿಡಿಯೊ ಸೋರಿಕೆಯಾಗಿ ಸಾಕಷ್ಟು ಗಲಾಟೆಗೆ ಕಾರಣವಾಗಿತ್ತು. ಆದರೆ ಇದೀಗ ಆ ತಪ್ಪು ತನ್ನಿಂದಲೇ ಆಗಿರುವುದು ಎಂದು ಇಸ್ರೇಲ್‌ನ ಉನ್ನತ ಮಿಲಿಟರಿ ಪ್ರಾಸಿಕ್ಯೂಟರ್ ಒಪ್ಪಿಕೊಂಡು ರಾಜೀನಾಮೆ ನೀಡಿದ್ದಾರೆ.

ಜೆರುಸಲೇಂ: ಸೂಕ್ಷ್ಮ ವಿಡಿಯೊವೊಂದು ಸೋರಿಕೆಯಾಗಿ ಗಲಭೆ ಉಂಟಾದ ಬಳಿಕ ಇದೀಗ ಆ ವಿಡಿಯೊ ತಮ್ಮಿಂದಲೇ ಸೋರಿಕೆಯಾಗಿದೆ ಎಂದು ಒಪ್ಪಿಕೊಂಡು ಇಸ್ರೇಲ್‌ನ ಉನ್ನತ ಮಿಲಿಟರಿ ಪ್ರಾಸಿಕ್ಯೂಟರ್ (Israel top military prosecutor) ರಾಜೀನಾಮೆ ನೀಡಿದ್ದಾರೆ. 2024ರ ಆಗಸ್ಟ್‌ನಲ್ಲಿ ಬಂಧಿತ ಪ್ಯಾಲೆಸ್ತೀನ್‌ (Palestinian Detainee) ಪ್ರಜೆಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊವೊಂದು (Abuse Video) ಸೋರಿಕೆಯಾಗಿ ಗಲಭೆ ಉಂಟು ಮಾಡಿತ್ತು. ಇದೀಗ ಆ ವಿಡಿಯೊ ಸೋರಿಕೆಗೆ ತಾನೇ ಕಾರಣ ಎಂದು ಒಪ್ಪಿಕೊಂಡಿರುವ ಇಸ್ರೇಲ್‌ನ ಉನ್ನತ ಮಿಲಿಟರಿ ಪ್ರಾಸಿಕ್ಯೂಟರ್, ಮೇಜರ್ ಜನರಲ್ ಯಿಫತ್ ಟೋಮರ್-ಯೆರುಷಲ್ಮಿ ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

2024ರ ಆಗಸ್ಟ್‌ನಲ್ಲಿ ಪ್ರಸಾರವಾದ ಒಂದು ವಿಡಿಯೊದಲ್ಲಿ ಕುಖ್ಯಾತ ಎಸ್‌ಡಿ ಟೀಮನ್ ಮಿಲಿಟರಿ ಬಂಧನ ಕೇಂದ್ರದಲ್ಲಿ ಇಸ್ರೇಲ್ ಸೈನಿಕರು ಬಂಧಿತ ಪ್ಯಾಲೆಸ್ತೀನ್‌ ಪ್ರಜೆಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತೋರಿಸಲಾಗಿತ್ತು. ಈ ಕುರಿತು ಮಾತನಾಡಲು ಮಾಧ್ಯಮಗಳ ಮುಂದೆ ಬಂದ ಇಸ್ರೇಲ್‌ನ ಉನ್ನತ ಮಿಲಿಟರಿ ಪ್ರಾಸಿಕ್ಯೂಟರ್ ಮೇಜರ್ ಜನರಲ್ ಯಿಫತ್ ಟೋಮರ್-ಯೆರುಷಲ್ಮಿ ಇದಕ್ಕೆ ತಾನೇ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಬಳಿಕ ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು.

ಇದನ್ನೂ ಓದಿ: Online Scam: 'ಮೇಕ್‌ ಮೀ ಪ್ರೆಗ್ನೆಂಟ್' ಆನ್ಲೈನ್ ಜಾಹೀರಾತು ನಂಬಿದ ವ್ಯಕ್ತಿಗೆ ಲಕ್ಷ... ಲಕ್ಷ... ಪಂಗನಾಮ!

ಇದು ಈಗ ಯುದ್ಧದ ಸಮಯದಲ್ಲಿ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಇಸ್ರೇಲಿ ಮಿಲಿಟರಿಯ ಕಾನೂನು ವ್ಯವಸ್ಥೆಯ ಮೇಲೆ ಅಪಾರ ಆಂತರಿಕ ಮತ್ತು ಬಾಹ್ಯ ಒತ್ತಡಗಳಿರುವುದನ್ನು ಎತ್ತಿ ತೋರಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸೋರಿಕೆಯಾಗಿರುವ ವಿಡಿಯೊದಲ್ಲಿ ಗಾಜಾ ಯುದ್ಧದ ಸಮಯದಲ್ಲಿ ಬಂಧಿಸಲ್ಪಟ್ಟಿದ್ದ ಪ್ಯಾಲೆಸ್ತೀನ್‌ ವ್ಯಕ್ತಿಯನ್ನು ಸೈನಿಕರ ಗುಂಪೊಂದು ತೀವ್ರವಾಗಿ ಥಳಿಸುತ್ತಿರುವುದನ್ನು ಕಾಣಬಹುದು. ತೀವ್ರ ಥಳಿತದ ಕಾರಣದಿಂದ ಬಂಧಿತ ವ್ಯಕ್ತಿಯ ಪಕ್ಕೆಲುಬುಗಳು ಮುರಿದವು. ಆಂತರಿಕವಾಗಿ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.

ಈ ದೌರ್ಜನ್ಯದ ಕುರಿತು ತನಿಖೆ ಆರಂಭಿಸಿದ ಮಿಲಿಟರಿ ಪೊಲೀಸರು, ಐವರು ಸೈನಿಕರನ್ನು ಬಂಧಿಸಿದ್ದು, ಇದರಿಂದ ದೋಷಾರೋಪಣೆ ಪ್ರಾರಂಭವಾಯಿತು. ಈ ತನಿಖೆ ಬಗ್ಗೆ ಬಲಪಂಥೀಯ ಇಸ್ರೇಲಿ ರಾಜಕಾರಣಿಗಳು ಮತ್ತು ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸಿ ತೀವ್ರ ಪ್ರತಿಭಟನೆ ಪ್ರಾರಂಭಿಸಿದರು.

ಇದೀಗ ರಾಜೀನಾಮೆ ಸಲ್ಲಿಸಿರುವ ಟೋಮರ್-ಯೆರುಷಲ್ಮಿ ವಿಡಿಯೊ ಸೋರಿಕೆಗೆ ತಾನೇ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಬಂಧಿತರ ವಿರುದ್ಧ ನಡೆದಿರುವ ಶಂಕಿತ ಕಾನೂನುಬಾಹಿರ ಕೃತ್ಯಗಳ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಟೋಮರ್-ಯೆರುಷಲ್ಮಿ ರಾಜೀನಾಮೆ ಬಳಿಕ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್‌ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಅವರ ರಾಜೀನಾಮೆಯನ್ನು ಸ್ವಾಗತಿಸಿದರು. ಪಡೆಗಳ ವಿರುದ್ಧ ಕ್ರಮಕ್ಕೆ ಸೂಚಿಸಿದರು.

ಇದನ್ನೂ ಓದಿ: Major Stampedes This Year: ಕರ್ನಾಟಕ, ಆಂಧ್ರ ಪ್ರದೇಶ, ಉತ್ತರ ಪ್ರದೇಶ; ಈ ವರ್ಷ ದೇಶದಲ್ಲಿ ಸಂಭವಿಸಿದ ಪ್ರಮುಖ ಕಾಲ್ತುಳಿತ ದುರಂತಗಳಿವು

ಈ ಘಟನೆಯು ಗಾಜಾದ ಪ್ಯಾಲೆಸ್ತೀನಿಯರನ್ನು ಬಂಧಿಸಿಟ್ಟಿರುವ ಕೇಂದ್ರಗಳನ್ನು ಬಿಚ್ಚಿಡಲಾಗಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ಹೇಳಿವೆ. ಟೋಮರ್-ಯೆರುಷಲ್ಮಿ ವಿರುದ್ಧ ಕ್ರಮ, ಯುದ್ಧ ಅಪರಾಧಗಳ ವಿರುದ್ಧ ತನಿಖೆಗೆ ರಾಷ್ಟ್ರೀಯತಾವಾದಿ ರಾಜಕೀಯ ಬಣಗಳ ಒತ್ತಡ ಹೆಚ್ಚಾಗಿದೆ. ಇದು ಮುಂದಿನ ದಿನಗಳಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ.

ವಿದ್ಯಾ ಇರ್ವತ್ತೂರು

View all posts by this author