ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಮೆರಿಕ ಪತ್ರಕರ್ತೆ ಶೆಲ್ಲಿ ಕಿಟಲ್ಸನ್ ಬಾಗ್ದಾದ್‌ನಲ್ಲಿ ಕಿಡ್ನಾಪ್‌: ಬೆದರಿಕೆಯ ಹೊರತಾಗಿಯೂ ಇರಾಕ್ ತೆರಳಿದ್ದ ವರದಿಗಾರ್ತಿ

Shelly Kittleson: ಬಾಗ್ದಾದ್‌ನಲ್ಲಿ ಅಮೆರಿಕ ಪತ್ರಕರ್ತೆ ಶೆಲ್ಲಿ ಕಿಟಲ್ಸನ್ ಅವರನ್ನು ಶಸ್ತ್ರಸಜ್ಜಿತ ವ್ಯಕ್ತಿಗಳು ಅಪಹರಿಸಿದ ಘಟನೆ ಆತಂಕ ಮೂಡಿಸಿದೆ. ಇರಾನ್ ಬೆಂಬಲಿತ ಕತೈಬ್ ಹೆಜ್ಬುಲ್ಲಾ ಗುಂಪಿನ ಮೇಲೆ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆಗೆ ಅಮೆರಿಕ ಮತ್ತು ಇರಾಕ್ ಅಧಿಕಾರಿಗಳು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

ಅಪಹರಣಕ್ಕೊಳಗಾದ ಅಮೆರಿಕದ ಪತ್ರಕರ್ತೆ ಶೆಲ್ಲಿ ಕಿಟಲ್ಸನ್

ಬಾಗ್ದಾದ್, ಏ. 2: ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಇರಾನ್ ಬೆಂಬಲಿತ ಕತೈಬ್ ಹೆಜ್ಬುಲ್ಲಾ (Kataib Hezbollah) ಉಗ್ರಗಾಮಿ ಗುಂಪಿನಿಂದ ಅಪಹರಣಕ್ಕೊಳಗಾಗಿದ್ದಾರೆ ಎನ್ನಲಾದ ಅಮೆರಿಕದ ಪತ್ರಕರ್ತೆ ಶೆಲ್ಲಿ ಕಿಟಲ್ಸನ್ (Shelly Kittleson) ಅವರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ. ಕಿಟಲ್ಸನ್ ಅಪಹರಣಕ್ಕೊಳಗಾಗುವ ಮೂರು ವಾರಗಳ ಮೊದಲು ಸಿರಿಯಾದಿಂದ ಇರಾಕ್ ಪ್ರವೇಶಿಸಲು ಪ್ರಯತ್ನಿಸಿದ್ದರು ಎಂದು ಅಸೋಸಿಯೇಟೆಡ್ ಪ್ರೆಸ್ (Associated Press) ವರದಿ ಮಾಡಿದೆ. ಆದರೆ ಅಗತ್ಯ ದಾಖಲೆಗಳಿಲ್ಲದ ಕಾರಣ ಮಾರ್ಚ್ 1ರಂದು ಅವರನ್ನು ಗಡಿಯಿಂದ ವಾಪಸ್ ಕಳುಹಿಸಲಾಗಿತ್ತು ಎಂದು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ.

ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದರೇ ಕಿಟಲ್ಸನ್?

ಕಿಟಲ್ಸನ್ ಅವರನ್ನು ಅಪಹರಿಸುವ ಕೆಲವೇ ದಿನಗಳ ಮೊದಲು ಅವರ ಜೀವಕ್ಕೆ ಅಪಾಯವಿರುವ ಬಗ್ಗೆ ಅಮೆರಿಕ ಮತ್ತು ಇರಾಕ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರ ಸಲಹೆಗಾರ ಹುಸೇನ್ ಅಲಾವಿ ಪ್ರಕಾರ, ಮಾರ್ಚ್ 9ರಂದು ಕಿಟಲ್ಸನ್ ಅಲ್-ಖೈಮ್ ಕ್ರಾಸಿಂಗ್ ಮೂಲಕ ಪ್ರವೇಶಿಸಲು ಯತ್ನಿಸಿದ್ದರು. ಆದರೆ ಪತ್ರಿಕಾ ಕೆಲಸದ ಪರವಾನಗಿ ಇಲ್ಲದ ಕಾರಣ ಮತ್ತು ಇರಾನ್ ಮೇಲಿನ ಯುದ್ಧದ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ ಅವರನ್ನು ತಡೆಯಲಾಗಿತ್ತು. ನಂತರ ಅವರು 60 ದಿನಗಳ ಸಿಂಗಲ್-ಎಂಟ್ರಿ ವೀಸಾ ಪಡೆದು ಬಾಗ್ದಾದ್ ಪ್ರವೇಶಿಸಿದ್ದರು.

ಶೆಲ್ಲಿ ಕಿಟಲ್ಸನ್ ಅಪಹರಣದ ದೃಶ್ಯ:



ಅಪಹರಣದ ಭೀಕರ ದೃಶ್ಯ

ಬಾಗ್ದಾದ್‌ನ ಅತ್ಯಂತ ಜನನಿಬಿಡ ಪ್ರದೇಶವಾದ ಬಾಗ್ದಾದ್ ಹೋಟೆಲ್ ಬಳಿ ಕಿಟಲ್ಸನ್ ಅವರನ್ನು ಸಶಸ್ತ್ರ ವ್ಯಕ್ತಿಗಳು ಅಡ್ಡಗಟ್ಟಿ ಬಲವಂತವಾಗಿ ಕಾರಿಗೆ ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇರಾಕ್ ಭದ್ರತಾ ಪಡೆಗಳು ಅಪಹರಣಕಾರರನ್ನು ಬೆನ್ನಟ್ಟಿದಾಗ ಒಂದು ಕಾರು ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದಓರ್ವ ಶಂಕಿತನನ್ನು ಬಂಧಿಸಲಾಗಿದೆ. ಆದರೆ ಇತರ ಅಪಹರಣಕಾರರು ಕಿಟಲ್ಸನ್ ಅವರನ್ನು ಮತ್ತೊಂದು ಕಾರಿನಲ್ಲಿ ಕರೆದೊಯ್ದು ಪರಾರಿಯಾಗಿದ್ದಾರೆ.

ಹೊರ್ಮುಜ್‌ ಮೂಲಕ ಸಾಗುವ ಹಡಗುಗಳಿಗೆ ಭಾರತೀಯ ನೌಕಾಪಡೆಯಿಂದ ಬೆಂಗಾವಲು ಎಂದ ರಾಜನಾಥ್ ಸಿಂಗ್

ಪ್ರಸ್ತುತ ಸ್ಥಿತಿ

ಶೆಲ್ಲಿ ಕಿಟಲ್ಸನ್ ಸದ್ಯ ಎಲ್ಲಿಲ್ಲಿದ್ದಾರೆ ಎಂಬುದು ನಿಗೂಢವಾಗಿದ್ದರೂ, ಅವರು ಬಾಗ್ದಾದ್‌ನಲ್ಲೇ ಇರಬಹುದು ಎಂದು ಇರಾಕ್ ಗುಪ್ತಚರ ಇಲಾಖೆ ಶಂಕಿಸಿದೆ. ಅಮೆರಿಕದ ವಿದೇಶಾಂಗ ಇಲಾಖೆ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಅವರ ಬಿಡುಗಡೆಗಾಗಿ ಪ್ರಯತ್ನ ನಡೆಯುತ್ತಿದೆ. ಕಿಟಲ್ಸನ್ ಅವರ ತಾಯಿ ಬಾರ್ಬ್ ಕಿಟಲ್ಸನ್ ಮಾತನಾಡಿ, "ನನ್ನ ಮಗಳು ಜನರಿಗೆ ಸಹಾಯ ಮಾಡಲು ಬಯಸಿದ್ದಳು, ಅದಕ್ಕಾಗಿ ಪತ್ರಿಕೋದ್ಯಮವನ್ನು ಆರಿಸಿಕೊಂಡಿದ್ದಳು" ಎಂದು ಭಾವುಕರಾಗಿ ನುಡಿದಿದ್ದಾರೆ. ಕಿಟಲ್ಸನ್ ಈ ಹಿಂದೆ ಬಿಬಿಸಿ ವರ್ಲ್ಡ್ ಮತ್ತು ಪಾಲಿಟಿಕೋದಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ವರದಿ ನೀಡಿದ್ದರು.