ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊರ್ಮುಜ್ ಜಲಸಂಧಿಯ ಬಳಿ ಹಡಗು ಡಿಕ್ಕಿ: ಇಬ್ಬರು ಭಾರತೀಯರಿಗೆ ಗಾಯ

ಇರಾನ್ ಸಮೀಪ ಹೊರ್ಮುಜ್ ಜಲಸಂಧಿಯ ಬಳಿ ಹಡಗೊಂದು ಸೇತುವೆಗೆ ಡಿಕ್ಕಿಯಾಗಿ ಭಾರತೀಯ ನಾವಿಕರಿಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಟೋಗೋ ಧ್ವಜ ಹೊತ್ತ ಎಂಟಿ ಚಿರೋನ್ 7 ಹಡಗಿನಲ್ಲಿದ್ದ ಈಜಿಪ್ಟ್ ಪ್ರಜೆ ಝೆಯದ್ ತಹಾ ಎಂಬವರೊಂದಿಗೆ ಭಾರತೀಯರಾದ ಅಂಕಿತ್ ಕುಮಾರ್ ಮತ್ತು ಸಾಗರ್ ಚಂದ್ ಅವರಿಗೆ ಗಾಯಗಳಾಗಿವೆ.

ಹೊರ್ಮುಜ್ ಜಲಸಂಧಿಯ ಬಳಿ ಹಡಗು ಡಿಕ್ಕಿ

ಸಂಗ್ರಹ ಚಿತ್ರ -

ನವದೆಹಲಿ: ಹೊರ್ಮುಜ್ ಜಲಸಂಧಿಯ (Strait of Hormuz) ಬಳಿ ಶನಿವಾರ ನಡೆದ ಅಪಘಾತದಲ್ಲಿ ಭಾರತೀಯ ನಾವಿಕರಿಬ್ಬರು (Indian sailors) ಗಾಯಗೊಂಡಿರುವ ಘಟನೆ ನಡೆದಿದೆ. ಶಾರ್ಜಾಕ್ಕೆ (Sharja) ಹೋಗುತ್ತಿದ್ದ ಟೋಗೋ ಧ್ವಜ ಹೊತ್ತ ಎಂಟಿ ಚಿರೋನ್ 7 (Togo-flagged MT Chiron 7) ಹಡಗು ಟ್ಯಾಂಕರ್‌ನ ಸೇತುವೆಗೆ ಡಿಕ್ಕಿಯಾಗಿದೆ. ಇದರಿಂದ ಈಜಿಪ್ಟ್ ಪ್ರಜೆ ಝೆಯದ್ ತಹಾ, ಭಾರತೀಯ ನಾವಿಕರಾದ ಅಂಕಿತ್ ಕುಮಾರ್ ಮತ್ತು ಸಾಗರ್ ಚಂದ್ ಅವರು ಗಾಯಗೊಂಡಿದ್ದಾರೆ. ಹಡಗಿನಲ್ಲಿ ಒಟ್ಟು 24 ಮಂದಿ ಇದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹಡಗು ನಿರ್ದೇಶನಾಲಯದ ವರದಿ ತಿಳಿಸಿದೆ.

ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಹೊರ್ಮುಜ್ ಜಲ ಮಾರ್ಗವನ್ನು ಇರಾನ್ ನಿರ್ಬಂಧಿಸಿತ್ತು. ಇದರ ಬಳಿಕ ಈ ಜಲ ಮಾರ್ಗದಲ್ಲಿ ಆತಂಕ ಹೆಚ್ಚಾಗಿದೆ.

ಹೊರ್ಮುಜ್ ಜಲಸಂಧಿಯ ಬಳಿ ಶನಿವಾರ ಟೋಗೋ ಧ್ವಜ ಹೊತ್ತ ಎಂಟಿ ಚಿರೋನ್ 7 ಸೇತುವೆಗೆ ಡಿಕ್ಕಿಯಾಗಿ ಭಾರತೀಯ ನಾವಿಕರಾದ ಅಂಕಿತ್ ಕುಮಾರ್ ಮತ್ತು ಸಾಗರ್ ಚಂದ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದರಲ್ಲಿದ್ದ ಇನ್ನೊಬ್ಬ ನಾವಿಕ ಈಜಿಪ್ಟ್ ಪ್ರಜೆ ಝೆಯದ್ ತಹಾ ಅವರಿಗೂ ಗಾಯಗಳಾಗಿವೆ.

ಇರಾನ್ ಕೋಸ್ಟ್ ಗಾರ್ಡ್‌ನಿಂದ ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ಗುಂಡಿನ ದಾಳಿ!

ಹಡಗಿನಲ್ಲಿ 24 ಮಂದಿ ಸಿಬ್ಬಂದಿ ಇದ್ದು, ಇದರಲ್ಲಿ 17 ಮಂದಿ ಭಾರತೀಯರಾಗಿದ್ದಾರೆ. ಇದರಲ್ಲಿ ಇಬ್ಬರು ಈಜಿಪ್ಟ್, ಇಬ್ಬರು ಬಾಂಗ್ಲಾದೇಶಿ, ಒಬ್ಬ ಪಾಕಿಸ್ತಾನಿ ಮತ್ತು ಒಬ್ಬ ಇರಾನಿನ ಪ್ರಜೆ ಸೇರಿದ್ದಾರೆ. ಇವರೆಲ್ಲ ಸುರಕ್ಷಿತವಾಗಿದ್ದಾರೆ. ಹಡಗು ಶಾರ್ಜಾಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹಡಗು ಟ್ರ್ಯಾಕಿಂಗ್ ವೆಬ್‌ಸೈಟ್‌ಗಳು ತೋರಿಸಿವೆ ಎಂದು ಹಡಗು ನಿರ್ದೇಶನಾಲಯ ತಿಳಿಸಿದೆ.

ಕಳೆದ ವಾರ ಒಟ್ಟು 22 ಭಾರತೀಯ ಸಿಬ್ಬಂದಿಯನ್ನು ಹೊಂದಿದ್ದ ಎರಡು ವಿದೇಶಿ ಧ್ವಜದ ಹಡಗುಗಳ ಮೇಲೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ದೋಣಿಗಳು ಗುಂಡು ಹಾರಿಸಿದ್ದವು. ಏಪ್ರಿಲ್ 18 ರಂದು ಎರಡು ಭಾರತೀಯ ಧ್ವಜದ ಹಡಗುಗಳಾದ ಸನ್ಮಾರ್ ಹೆರಾಲ್ಡ್ ಮತ್ತು ಜಗ್ ಅರ್ನವ್ ಮೇಲೆ ಗುಂಡು ಹಾರಿಸಲಾಯಿತು.

ಟೋಗೋ ಧ್ವಜ ಹೊಂದಿದ್ದ ಕೆಮಿಕಲ್ ಟ್ಯಾಂಕರ್ ಹಡಗನ್ನು ಶನಿವಾರ ಇರಾನ್ ಪಡೆಗಳು ತಡೆದಿದ್ದು ಈ ವೇಳೆ ಎಚ್ಚರಿಕೆ ನೀಡಲು ಗುಂಡು ಹಾರಿಸಿದ್ದವು. ಎಂಟಿ ಸಿಲೋನ್ ಎಂಬ ಕೆಮಿಕಲ್ ಟ್ಯಾಂಕರ್ ಏಪ್ರಿಲ್ 25 ರಂದು ಓಮನ್ ಹೊರ ಬಂದರು ಮಿತಿಯ ಸಮೀಪ ಇರಾನ್ ಕೋಸ್ಟ್ ಗಾರ್ಡ್‌ಗಳ ಎದುರಾಯಿತು ಎನ್ನಲಾಗಿದೆ.

ಅಫ್ಘಾನಿಸ್ತಾನದ ಮೇಲೆ ಮತ್ತೆ ದಾಳಿ ನಡೆಸಿದ ಪಾಕಿಸ್ತಾನ: ಮೂವರು ಸಾವು

ಪರ್ಷಿಯನ್ ಗಲ್ಫ್‌ನಲ್ಲಿರುವ ಎಲ್ಲಾ ಭಾರತೀಯ ಹಡಗುಗಳು ಮತ್ತು ಸಿಬ್ಬಂದಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಭಾರತದ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.