Shubhanshu Shukla: ಬಾಹ್ಯಾಕಾಶಕ್ಕೆ ಹೋಗಿ ಮರಳಿ ಬಂದ ಮೇಲೆ ಹೆಜ್ಜೆ ಇಡಲು ಕಲಿಯುತ್ತಿರುವ ಶುಭಾಂಶು ಶುಕ್ಲಾ
ಆಕ್ಸಿಯಮ್- 4 ಮಿಷನ್‌ನ (Axiom-4 mission) ನಾಲ್ವರು ಗಗನಯಾತ್ರಿಗಳಲ್ಲಿ ಒಬ್ಬರಾದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಜೂನ್ 25ರಂದು ಸ್ಪೇಸ್‌ಎಕ್ಸ್ ಡ್ರ್ಯಾಗನ್ ನೌಕೆಯಲ್ಲಿ ( SpaceX Dragon spacecraft ) ಬಾಹ್ಯಾಕಾಶಕ್ಕೆ ಹೋಗಿದ್ದು, ಜುಲೈ 15 ರಂದು ಮರಳಿ ಬಂದಿದ್ದಾರೆ. ಸುಮಾರು ಮೂರು ವಾರಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಬಂದಿರುವ ಅವರು ಈಗ ಭೂಮಿಯ ಮೇಲೆ ಚೇತರಿಸಿಕೊಳ್ಳಲು ಬೇಕಾದ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.


ಕ್ಯಾಲಿಫೋರ್ನಿಯಾ: ಬಾಹ್ಯಾಕಾಶದಲ್ಲಿ (International Space Station) 18 ದಿನಗಳನ್ನು ಕಳೆದು ಮರಳಿ ಭೂಮಿಗೆ ಬಂದಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Group Captain Shubhanshu Shukla) ಮತ್ತೆ ನಡೆಯಲು ಕಲಿಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಕ್ಸಿಯಮ್- 4 ಮಿಷನ್‌ನ (Axiom-4 mission) ನಾಲ್ವರು ಗಗನಯಾತ್ರಿಗಳಲ್ಲಿ ಒಬ್ಬರಾದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಜೂನ್ 25ರಂದು ಸ್ಪೇಸ್‌ಎಕ್ಸ್ ಡ್ರ್ಯಾಗನ್ ನೌಕೆಯಲ್ಲಿ ( SpaceX Dragon spacecraft ) ಬಾಹ್ಯಾಕಾಶಕ್ಕೆ ಹೋಗಿದ್ದು, ಜುಲೈ 15 ರಂದು ಮರಳಿ ಬಂದಿದ್ದಾರೆ. ಸುಮಾರು ಮೂರು ವಾರಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಬಂದಿರುವ ಅವರು ಈಗ ಭೂಮಿಯ ಮೇಲೆ ಚೇತರಿಸಿಕೊಳ್ಳಲು ಬೇಕಾದ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.
ಆಕ್ಸಿಯಮ್ -4 ಮಿಷನ್‌ನ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ನಾಲ್ವರು ಗಗನಯಾತ್ರಿಗಳೊಂದಿಗೆ ಶುಕ್ಲಾ ಜೂನ್ 25 ರಂದು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು. ಸುಮಾರು 20 ದಿನಗಳನ್ನು ಅಲ್ಲಿ ಕಳೆದ ಅವರ ತಂಡವು ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಸುರಕ್ಷಿತವಾಗಿ ಭೂಮಿಯನ್ನು ತಲುಪಿತು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಈಗ ಭೂಮಿಯ ಮೇಲೆ ಚೇತರಿಕೆಗೆ ಬೇಕಾದ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಅವರು ನಿಧಾನವಾಗಿ ಹೆಜ್ಜೆಗಳನ್ನು ಇಡುವಾಗ ಇಬ್ಬರು ವ್ಯಕ್ತಿಗಳು ಅವರಿಗೆ ನಡೆಯಲು ಕಲಿಸುತ್ತಿರುವುದನ್ನು ಕಾಣಬಹುದು.
ಈ ಕುರಿತು ಪೋಸ್ಟ್ ಮಾಡಿರುವ ಶುಕ್ಲಾ, ನನಗೆ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುವ ಅನೇಕ ಸಂದೇಶಗಳು ಬಂದಿವೆ. ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: GST Protest Karnataka: ಜಿಎಸ್‌ಟಿ ತೆರಿಗೆ ಬಾಕಿ ಮನ್ನಾ ಘೋಷಣೆ ಮಾಡಿದ ಸಿಎಂ; ಪ್ರತಿಭಟನೆ ಹಿಂಪಡೆದ ವ್ಯಾಪಾರಿಗಳು
ಬಾಹ್ಯಾಕಾಶ ಪ್ರಯಾಣದ ವೇಳೆ ಗುರುತ್ವಾಕರ್ಷಣೆ ಇಲ್ಲದೇ ಇರುವುದರಿಂದ ದೇಹವು ಹಲವಾರು ಶಾರೀರಿಕ ಬದಲಾವಣೆಗಳಿಗೆ ಒಳಗಾಗುತ್ತದೆ. ಭೂಮಿಗೆ ಮರಳಿ ಬಂದ ಬಳಿಕ ಮತ್ತೆ ಇಲ್ಲಿಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳು ಜುಲೈ 23 ರವರೆಗೆ ಕ್ವಾರಂಟೈನ್‌ನಲ್ಲಿ ಉಳಿಯುತ್ತಾರೆ. ಈ ಅವಧಿಯಲ್ಲಿ ಅವರಿಗೆ ವೈದ್ಯಕೀಯ ಮೇಲ್ವಿಚಾರಣೆ ನಡೆಸಲಾಗುತ್ತದೆ. ಮತ್ತೆ ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಅವರಿಗೆ ಸಹಾಯ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.