ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Photo: ವಿಶ್ವದ ಅತಿ ದೊಡ್ಡ ತುಟಿ ಹೊಂದಿರುವ ಯುವತಿಯ ಫೋಟೋ ವೈರಲ್

Biggest lips: ಇನ್ಸ್ಟಾಗ್ರಾಂ ಪ್ರಭಾವಿ ಆಂಡ್ರಿಯಾ ಎಂಬಾಕೆ ತನ್ನ ಅತಿ ದೊಡ್ಡ ತುಟಿಗಳಿಂದಾಗಿ ಜಗತ್ತಿನಾದ್ಯಂತ ವೈರಲ್ ಆಗಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಂಡ್ರಿಯಾಳ ಈ ಹಿಂದಿನ ಹಾಗೂ ನಂತರದ ಫೋಟೋಗಳು ವ್ಯಾಪಕವಾಗಿ ಶೇರ್ ಮಾಡಲಾಗಿದ್ದು, ಹೊಸ ಅಲೆಯನ್ನೇ ಸೃಷ್ಟಿಸಿದೆ.

ಅತಿ ದೊಡ್ಡ ತುಟಿ ಹೊಂದಿರುವ ಯುವತಿಯ ಫೋಟೋ ವೈರಲ್

Priyanka P Priyanka P Jul 23, 2025 4:13 PM

ಸೋಶಿಯಲ್‌ ಮೀಡಿಯಾ ಇನ್‌ಫ್ಲುವೆನ್ಸರ್‌ ಆಂಡ್ರಿಯಾ ಎಂಬಾಕೆ ತನ್ನ ಅತಿ ದೊಡ್ಡ ತುಟಿಗಳಿಂದಾಗಿ ಜಗತ್ತಿನಾದ್ಯಂತ ವೈರಲ್ ಆಗಿದ್ದಾಳೆ. ಬಲ್ಗೇರಿಯಾ ಮೂಲದ 28 ವರ್ಷದ ಯುವತಿ ಆಂಡ್ರಿಯಾ ಇವನೊವಾ ತನ್ನ ದೊಡ್ಡ ತುಟಿಗಳಿಗೆ ಹೆಸರುವಾಸಿಯಾಗುವ ಮುನ್ನ, ಎಲ್ಲರಂತೆ ಮೃದುವಾದ, ನೈಸರ್ಗಿಕ ತುಟಿಗಳನ್ನು ಹೊಂದಿದ್ದಳು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಂಡ್ರಿಯಾಳ ಈ ಹಿಂದಿನ ಹಾಗೂ ನಂತರದ ಫೋಟೋಗಳು ವ್ಯಾಪಕವಾಗಿ ಶೇರ್ ಮಾಡಲಾಗಿದ್ದು, ಹೊಸ ಅಲೆಯನ್ನೇ ಸೃಷ್ಟಿಸಿದೆ.

ಸೌಂದರ್ಯವರ್ಧಕ ಚಿಕಿತ್ಸೆಗಾಗಿ $ 27,000 (ಸುಮಾರು 22.5 ಲಕ್ಷ ರೂಪಾಯಿ) ಖರ್ಚು ಮಾಡಿರುವ ಆಂಡ್ರಿಯಾ ಇವನೊವಾ, ತುಟಿಗಳಿಗೆ ಮಾತ್ರವಲ್ಲ, ತಮ್ಮ ಗಲ್ಲ, ದವಡೆ ಮತ್ತು ಕೆನ್ನೆಗೆ ಹೈಲುರಾನಿಕ್ ಆಮ್ಲದ ಚುಚ್ಚುಮದ್ದನ್ನು ಮತ್ತು 600 ಸಿಸಿ ಸ್ತನವರ್ಧನೆಯನ್ನು ಮಾಡಿಕೊಂಡಿದ್ದಾಳೆ. ಈ ಮೂಲಕ ತನ್ನ ಬಾಹ್ಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ದಿದ್ದಾಳೆ.

ಆಂಡ್ರಿಯಾ ಇವನೊವಾ ಬಗ್ಗೆ ಒಂದಿಷ್ಟು

ನನಗೆ ದೊಡ್ಡ ತುಟಿಗಳು, ಮುಖದ ಬದಲಾವಣೆ, ವಿಲಕ್ಷಣ ಮೇಕಪ್‌ ಮಾಡುವುದೆಂದರೆ ಬಹಳ ಇಷ್ಟ ಎಂದು ಆಂಡ್ರಿಯಾ ಇವನೊವಾ ಹೇಳಿದಳು. ಪ್ಲಾಟಿನಂ-ಹೊಂಬಣ್ಣದ ಕೂದಲು, ಬಿಳುಪುಗೊಳಿಸಿದ ಹುಬ್ಬುಗಳು, ದೊಡ್ಡ ತುಟಿಗಳು ಮತ್ತು ಗೊಂಬೆಯಂತಹ ರೆಪ್ಪೆಗೂದಲುಗಳನ್ನು ಇದೀಗ ಆಂಡ್ರಿಯಾ ಹೊಂದಿದ್ದಾಳೆ.

ಆದರೆ ವರ್ಷಗಳ ಹಿಂದೆ ಆಂಡ್ರಿಯಾ ಇವನೊವಾ ಅವರ ನೈಸರ್ಗಿಕ ಮುಖದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಬೆರಗುಗೊಳಿಸಿದೆ. ಆಕೆ ಎಷ್ಟು ನಾಟಕೀಯವಾಗಿ ಬದಲಾಗಿದ್ದಾಳೆ ಎಂದು ಅನೇಕ ಬಳಕೆದಾರರು ಆಘಾತಕ್ಕೊಳಗಾಗಿದ್ದಾರೆ. ತನಗೆ ನೀರಸವಾಗಿ, ಎಲ್ಲರಂತೆ ಕಾಣಿಸಿಕೊಳ್ಳಲು ಇಷ್ಟವಿಲ್ಲ ಎಂದು ವಿವರಿಸಿದ ಆಂಡ್ರಿಯಾ ಇವನೊವಾ, ನೈಸರ್ಗಿಕ ಸೌಂದರ್ಯ ತನಗೆ ಬೇಸರ ತರಿಸುತ್ತದೆ. ಆದ್ದರಿಂದ ನಾನು ನನ್ನ ನೋಟವನ್ನು ಆಮೂಲಾಗ್ರವಾಗಿ ಬದಲಾಯಿಸಲು ನಿರ್ಧರಿಸಿದೆ ಎಂದು ಹೇಳಿದಳು.

ಈ ಸುದ್ದಿಯನ್ನೂ ಓದಿ: Kalaburagi News: ಸೋಶಿಯಲ್‌ ಮೀಡಿಯಾದಲ್ಲಿ ಫೋಟೊ ವೈರಲ್‌; ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ!

ಇನ್ನು ಆಂಡ್ರಿಯಾ ಮತ್ತಷ್ಟು ಬದಲಾವಣೆಗಳನ್ನು ಬಯಸುತ್ತಿದ್ದು, ಇದಕ್ಕೆ ವೈದ್ಯರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ತುಟಿಗೆ ಇಂಜೆಕ್ಷನ್‌ ನೀಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಆಂಡ್ರಿಯಾ ಇವನೊವಾ ತಮ್ಮ ಸೌಂದರ್ಯದ ದೃಷ್ಟಿಕೋನಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾಳೆ.

ಇನ್ನು ಸ್ನೇಹಿತರು ಕೂಡ ತನ್ನೊಂದಿಗೆ ಆರಾಮದಾಯಕವಾಗಿದ್ದಾರೆ. ತನ್ನೊಂದಿಗೆ ಸುತ್ತಾಡುವುದಕ್ಕೆ ಹಿಂಜರಿಯುತ್ತಿಲ್ಲ. ಅವರೀಗ ತನ್ನ ದೊಡ್ಡ ತುಟಿಗಳನ್ನು ನೋಡುವುದಕ್ಕೆ ಒಗ್ಗಿಕೊಂಡಿದ್ದಾರೆ ಎಂದು ಹೇಳಿದ್ದಾಳೆ. ಹಾಗಂತ ತನ್ನ ಪ್ರೀತಿ-ಪಾತ್ರರೆಲ್ಲರೂ ಇದಕ್ಕೆ ಬೆಂಬಲ ನೀಡಿಲ್ಲ ಎಂದು ಹೇಳಿದ್ದಾಳೆ. ಹೆತ್ತವರು, ಅಜ್ಜಿ ತನ್ನ ತುಟಿಗಳು ದೊಡ್ಡದಾಗಿವೆ ಮತ್ತು ನಾನು ಅವರಿಗೆ ಭಯಂಕರವಾಗಿ ಕಾಣುತ್ತೇನೆ ಎಂದು ನಿರಂತರವಾಗಿ ಹೇಳುತ್ತಾರೆ. ತಾನು ಅವರ ಮಾತುಗಳಿಗೆ ಗಮನ ಕೊಡುವುದಿಲ್ಲ. ತಾನು ವಯಸ್ಕಳಾಗಿದ್ದು, ನನ್ನ ದೇಹವನ್ನು ಏನು ಮಾಡಬೇಕೆಂದು ನಾನೇ ನಿರ್ಧರಿಸುತ್ತೇನೆ ಎಂದು ಹೇಳಿದ್ದಾಳೆ.