ತಾಷ್ಕೆಂಟ್: ಮಾಜಿ ಪ್ರಧಾನಿ ಮತ್ತು ತಮ್ಮ ತಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸ್ವರ್ಗಸ್ಥ ರಾದ ತಾಷ್ಕೆಂಟ್‌ನಲ್ಲಿ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಸಮಾರಂಭ ಆಯೋಜಿ ಸಿದ್ದು ಅರ್ಥಪೂರ್ಣ ಕಾರ್ಯ. ಈ ಸಮಾರಂಭದಲ್ಲಿ ನಾನಾ ಕ್ಷೇತ್ರಗಳಲ್ಲಿ ವಿಶೇಷವಾಗಿ ಸಾಧನೆ ಮಾಡಿರುವ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪಾಲಿಗೆ ಸೌಭಾಗ್ಯದ ಸಂಗತಿ. ಇದು ಸದಾ ಅವಿಸ್ಮರಣೀಯ ಕ್ಷಣಗಳಾಗಿವೆ ಎಂದು ರಾಜ್ಯಸಭೆ ಮಾಜಿ ಸದಸ್ಯ ಮತ್ತು ಮಾಜಿ ಸಚಿವ ಸುನೀಲ್ ಶಾಸ್ತ್ರಿ ಅವರು ಹೇಳಿದರು.
ವಿಶ್ವವಾಣಿ ಮಾಧ್ಯಮ ಸಮೂಹ ತಾಷ್ಕೆಂಟ್‌ನಲ್ಲಿ ಆಯೋಜಿಸಿದ್ದ ‘ಗ್ಲೋಬಲ್ ಅಚೀವರ್ಸ್ ಅವಾರ್ಡ್-2026’ ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ನಂತರ ಅವರು ಮಾತನಾಡಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕರ್ನಾಟಕವನ್ನು ಬಹಳ ಇಷ್ಟಪಟ್ಟಿ ದ್ದರು. ನನಗೂ ಕರ್ನಾಟಕದ ನೆಲ-ಸಂಸ್ಕೃತಿ ಎಂದರೆ ಇಷ್ಟ. ಅದಕ್ಕಾಗಿ ಪ್ರೀತಿಯಿಂದ ‘ನನ್ನ ಕರ್ನಾಟಕ ಎನ್ನುವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ: Vishwavani Global Achievers Awards Celebration in Tashkent: ತಾಷ್ಕೆಂಟ್ʼನಲ್ಲಿ ಕರುನಾಡ ಸಾಧಕರಿಗೆ ಸನ್ಮಾನ
ವಿಶ್ವೇಶ್ವರ ಭಟ್ ಬಗ್ಗೆ ಮೆಚ್ಚುಗೆ: ಸಮಾರಂಭದಲ್ಲಿ ವಿಶ್ವವಾಣಿ ಸಮೂಹದ ಪ್ರಧಾನ ಸಂಪಾದಕ ರಾದ ವಿಶ್ವೇಶ್ವರ ಭಟ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸುನಿಲ್ ಶಾಸ್ತ್ರಿಯವರು ವಿಶ್ವೇಶ್ವರ ಭಟ್ ಅವರು ಪ್ರಸಿದ್ಧ ಪತ್ರಕರ್ತರು. ಅವರು ಅತ್ಯುತ್ತಮವಾಗಿ ಬರೆಯುತ್ತಾರೆ. ಜತೆಗೆ ಅಷ್ಟೇ ಚೆನ್ನಾಗಿ ಮಾತನಾಡ ಬಲ್ಲರು. ವಿಚಾರಗಳನ್ನು ಮುಂದಿಡಬಲ್ಲರು. ಅಷ್ಟೇ ಅತ್ಯುತ್ತಮ ವ್ಯಕ್ತಿ ಕೂಡ ಆಗಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗ್ಗೆ ಅಪಾರವಾಗಿ ತಿಳಿದುಕೊಂಡಿದ್ದಾರೆ ಎಂದು ಪ್ರಶಂಸಿಸಿ ದರು. ವಿಶ್ವೇಶ್ವರ ಭಟ್ ಅವರ ಪತ್ನಿ ಸುಷ್ಮಾ ಮತ್ತು ಪುತ್ರ ವಿಶ್ವಾತ್ಮ ಅವರ ಹೆಸರುಗಳೇ ಎಷ್ಟೊಂದು ಅದ್ಭುತ. ವಿಶ್ವೇಶ್ವರ ಭಟ್ ಅವರ ಸಮಗ್ರ ವ್ಯಕ್ತಿತ್ವ ನನ್ನನ್ನು ಆಕರ್ಷಿಸಿದೆ. ಅವರು ಒಬ್ಬ ಶ್ರೇಷ್ಠ ಲೇಖಕ ಮಾತ್ರವಲ್ಲದೆ, ತಮ್ಮ ಜೀವನವನ್ನೇ ಸಾಮಾಜಿಕ ಹಿತಕ್ಕೆ ಮುಡಿಪಾಗಿರಿಸಿದ್ದಾರೆ.
ಜೈ ಜವಾನ್, ಜೈ ಕಿಸಾನ್, ಜೈ ಇನ್ಸಾನ್: ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಅತ್ಯಂತ ಪ್ರಸಿದ್ಧ ಘೋಷಣೆ ‘ಜೈ ಜವಾನ್ ಜೈ ಕಿಸಾನ್’. ಇದರ ಜತೆಗೆ ‘ಜೈ ಇನ್ಸಾನ್’ ಕೂಡ ಸೇರಿಸ ಬೇಕು ಎಂದು ಅವರ ಪುತ್ರ ಸುನಿಲ್ ಶಾಸ್ತ್ರಿಯವರು ಅಭಿಪ್ರಾಯ ಪಟ್ಟರು.
ಒಬ್ಬ ಯೋಧ ತನ್ನ ಜೀವನವನ್ನೇ ತ್ಯಾಗ ಮಾಡುತ್ತಾನೆ. ಆದ್ದರಿಂದ ಯೋಧರನ್ನು ಗೌರವಿಸುವ ಪರಂಪರೆ ಭಾರತದಲ್ಲಿದೆ. ಅದೇ ರೀತಿ ರೈತರು ಆಹಾರವನ್ನು ಬೆಳೆಯುತ್ತಾರೆ. ಅವರನ್ನೂ ನಾವು ಗೌರವಿಸಬೇಕು ಎಂಬುದು ತಂದೆ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಚಿಂತನೆಯಾಗಿತ್ತು. ಆದರೆ ಈಗ ಇದರ ಜತೆಗೆ ‘ಜೈ ಇನ್ಸಾನ್’ ಅನ್ನೂ ಸೇರಿಸಬೇಕು ಎಂದರು. ಮನುಷ್ಯ ತನ್ನ ಮಾನವೀ ಯತೆ, ಅಂತಃಕರಣ, ಮನುಷ್ಯತ್ವ ವನ್ನು ಮರೆಯಕೂಡದು. ಆದ್ದರಿಂದ ಅದನ್ನು ಬಿಂಬಿಸುವ ‘ಇನ್ಸಾನ್’ ಪದವನ್ನೂ ಈ ಘೋಷಣೆಯ ಜತೆಗೆ ಸೇರಿಸಬೇಕಾದ ಕಾಲ ಇದಾಗಿದೆ. ಇದನ್ನು ನೀವೆಲ್ಲರೂ ಜನಪ್ರಿಯ ಗೊಳಿಸಬೇಕು ಎಂದು ವಿವರಿಸಿದರು.
ಕನ್ನಡದಲ್ಲಿ ಶಾಸ್ತ್ರೀಜಿ ಪುಸ್ತಕ ವಿಶ್ವೇಶ್ವರ ಭಟ್‌ಗೆ ಮನವಿ “ನನ್ನ ಮನವಿ ಒಂದೇ. ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಬಗ್ಗೆ ನಾನು ಇಂಗ್ಲಿಷ್‌ನಲ್ಲಿ ಬರೆದಿರುವ ಪುಸ್ತಕವನ್ನು ವಿಶ್ವೇಶ್ವರ ಭಟ್ ಅವರು ಕನ್ನಡಕ್ಕೆ ಅನುವಾದಿಸಬೇಕು. ಇದರಿಂದ ಶಾಸ್ತ್ರಿಯವರ ಬದುಕು ಮತ್ತು ಸಾಧನೆಯ ಬಗ್ಗೆ ಕರ್ನಾಟಕದ ಜನತೆಗೆ ಹೆಚ್ಚು ಅರಿತುಕೊಳ್ಳಲು, ಮನನ ಮಾಡಿಕೊಳ್ಳಲು ಸಹಕಾರಿಯಾಗಲಿದೆ" ಎಂದು ಸುನೀಲ್ ಶಾಸ್ತ್ರಿ ಅವರು ಹೇಳಿದರು.
![]()
ಜೈ ಜವಾನ್, ಜೈ ಕಿಸಾನ್ ಜತೆ ಜೈ ಇನ್ಸಾನ್ ಎನ್ನುವುದನ್ನೂ ಸೇರಿಸಬೇಕಿದೆ. ನನ್ನ ತಂದೆ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಸ್ವರ್ಗಸ್ಥರಾದ ತಾಷ್ಕೆಂಟ್‌ನಲ್ಲಿ ವಿಶ್ವವಾಣಿ ಬಳಗವು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಿರುವುದು ನನ್ನನ್ನು ಭಾವುಕ ಆಗಿಸಿದೆ. ವಿಶ್ವೇಶ್ವರ ಭಟ್ ಅವರ ಪ್ರಭಾವ, ವರ್ಚಸ್ಸು ಮತ್ತು ಕಾರ್ಯ ವೈಖರಿಯನ್ನು ಹಲವು ವರ್ಷಗಳಿಂದ ಹತ್ತಿರದಿಂದ ಕಂಡಿದ್ದೇನೆ. ವಿಶ್ವವಾಣಿ ಸಮೂಹ ಮತ್ತಷ್ಟು ಬೆಳೆಯಲಿ, ಯಶಸ್ಸು ಸಿಗಲಿ.
- ಸುನೀಲ್ ಶಾಸ್ತ್ರಿ, ರಾಜ್ಯಸಭೆ ಮಾಜಿ ಸದಸ್ಯ, ಮಾಜಿ ಸಚಿವ