ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Global Achievers Awards Celebration in Tashkent: ತಾಷ್ಕೆಂಟ್‌ʼನಲ್ಲಿ ಕರುನಾಡ ಸಾಧಕರಿಗೆ ಸನ್ಮಾನ

ಸಾಧಕರಿಗೆ ಉತ್ತರ ಪ್ರದೇಶ ಸರಕಾರದ ಮಾಜಿ ಸಚಿವರು, ರಾಜ್ಯಸಭಾ ಮಾಜಿ ಸದಸ್ಯರು, ಭಾರತದ ಎರಡನೇ ಪ್ರಧಾನಮಂತ್ರಿ ದಿವಂಗತ ಲಾಲ್ ಬಹದ್ದೂರ್ ಶಾಸಿಯವರ ಪುತ್ರ ಸುನೀಲ್ ಶಾಸ್ತ್ರೀ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಪರ್ವ ಗ್ರೂಪ್ ಸಂಸ್ಥಾಪಕ ಎಚ್.ಪಿ.ನೀಲೇಶ್ ಸೇರಿದಂತೆ ಹಲವರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಷ್ಕೆಂಟ್‌ʼನಲ್ಲಿ ಕರುನಾಡ ಸಾಧಕರಿಗೆ ಸನ್ಮಾನ

-

Profile
Ashok Nayak Sep 13, 2026 8:46 AM

ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿದೇಶದಲ್ಲಿ ನಾಡಿನ ಸಾಧಕರನ್ನು ಸನ್ಮಾನಿಸುವ ವಿಶ್ವವಾಣಿಯ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಕಾರ್ಯಕ್ರಮದ ವೇಳೆ ನಾನಾ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸುವುದರ ಜತೆ ಭಾರತ ಹಾಗೂ ಆಯಾ ದೇಶದ ಕಲೆ, ಸಂಸ್ಕೃತಿ ಯನ್ನು ಪಸರಿಸುವ ಪ್ರಯತ್ನದಲ್ಲಿ ಪತ್ರಿಕೆ ಯಶಸ್ವಿಯಾಗಿದೆ. ಕಳೆದ ಮೂರು ವರ್ಷದ ಅವಧಿ ಯಲ್ಲಿ 13 ದೇಶಗಳಲ್ಲಿ ನಡೆದ ಯಶಸ್ವಿ ಕಾರ್ಯಕ್ರಮದ ಬಳಿಕ ಇದೀಗ ಕರುನಾಡಿನ ಸಾಧಕರಿಗೆ ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್‌ನಲ್ಲಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ನೀಡಿ ಗೌರವಿಸ ಲಾಗಿದೆ.

Page 2- with Vishwa

ಸಾಧಕರಿಗೆ ಉತ್ತರ ಪ್ರದೇಶ ಸರಕಾರದ ಮಾಜಿ ಸಚಿವರು, ರಾಜ್ಯಸಭಾ ಮಾಜಿ ಸದಸ್ಯರು, ಭಾರತದ ಎರಡನೇ ಪ್ರಧಾನಮಂತ್ರಿ ದಿವಂಗತ ಲಾಲ್ ಬಹದ್ದೂರ್ ಶಾಸಿಯವರ ಪುತ್ರ ಸುನೀಲ್ ಶಾಸ್ತ್ರೀ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಪರ್ವ ಗ್ರೂಪ್ ಸಂಸ್ಥಾಪಕ ಎಚ್.ಪಿ.ನೀಲೇಶ್ ಸೇರಿದಂತೆ ಹಲವರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: Vishwavani Global Achievers Awards Celebration in Tashkent: ವಿಶ್ವವಾಣಿ ಗ್ಲೋಬಲ್‌ ಅಚೀವರ್ಸ್‌ ಪ್ರಶಸ್ತಿ ಸಂಭ್ರಮ: ಶಾಸ್ತ್ರಿ ಪುಣ್ಯ ನೆಲದಲ್ಲಿ ಸಾಧಕರಿಗೆ ಸನ್ಮಾನ

ಶ್ರೀ ಶ್ರೀ ನಟರಾಜ ಸ್ವಾಮೀಜಿ, ಶ್ರೀ ಗುರುಲಿಂಗಜಂಗಮ ದೇವರಮಠ

Page 2- 1 (Lead) Natarj swami R

ಹುಣಸೂರು ತಾಲೂಕಿನ ಗಾವಡಗೆರೆ ಶ್ರೀ ಗುರುಲಿಂಗ ಜಂಗಮ ದೇವರಮಠದ ಶ್ರೀ ಶ್ರೀ ನಟರಾಜ ಸ್ವಾಮೀಜಿ ಅವರು ಧಾರ್ಮಿಕ ಮತ್ತು ಸಮಾಜ ಸುಧಾರಣೆ ಯಲ್ಲಿ ತೊಡಗಿದ್ದಾರೆ. ಎಲ್ಲ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಸರಳ ಸಾಮೂಹಿಕ ವಿವಾಹಗಳಂತಹ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಎರಡು ಶತಮಾನಗಳ ಹಿಂದೆ ಅಸ್ತಿತ್ವದಲ್ಲಿದ್ದ ಶ್ರೀ ಗುರುಲಿಂಗ ಜಂಗಮದೇವರ ಮಠವು ಶಿಥಿಲಗೊಂಡಿತ್ತು. ನಂತರ ತಪಸ್ವಿಗಳಾದ ಶ್ರೀ ನಂಜುಂಡ ಶಿವಯೋಗಿಗಳವರು ಗಾವಡಗೆರೆಯ ಪಶ್ಚಿಮ ಭಾಗದಲ್ಲಿ ಮಠವನ್ನು ಪುನರ್ ಸ್ಥಾಪಿಸಿದರು. ಶ್ರೀ ಶ್ರೀ ನಟರಾಜ ಸ್ವಾಮೀಜಿ ಅವರು ಈ ಮಠವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇಲ್ಲಿ ಪ್ರತಿದಿನ ದಾಸೋಹ ಸೇವೆ ನಡೆಯುತ್ತಿದೆ. ಉಚಿತ ವಿದ್ಯಾರ್ಥಿ ನಿಲಯ ವಿದೆ. ಶ್ರೀ ಶ್ರೀ ನಟರಾಜ ಸ್ವಾಮೀಜಿ ಅವರು ಗಾವಡಗೆರೆ ಶ್ರೀ ಗುರುಲಿಂಗಜಂಗಮ ದೇವರಮಠದ ಪರಂಪರೆಯನ್ನು ಮುಂದುವರಿಸುತ್ತ, ಕ್ರಿಯಾಶೀಲವಾಗಿ ಮುನ್ನಡೆಸುತ್ತಿದ್ದಾರೆ.

ಶ್ರೀ ಕೆ. ರಾಧಾಕೃಷ್ಣ ಹೊಳ್ಳ, ಸ್ಥಾಪಕರು, ಕಾವೇರಿ ಕಾರ್ಸ್.

Page 2- 2- Holla R

ಕೆ.ರಾಧಾಕೃಷ್ಣ ಹೊಳ್ಳ ಅವರು ಉದ್ಯಮಿಯಾಗಿ ಮಾತ್ರವಲ್ಲದೆ, ವಿವಿಧ ಸಂಘಟನೆಗಳ ಮೂಲಕ ಸಾರಿಗೆ ಕ್ಷೇತ್ರದ ಹಿತರಕ್ಷಣೆಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿರುವ ಇವರು, ರಾಜ್ಯದ ಉದ್ಯಮ ವಲಯದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ. ಇವರು ಮೂಲತಃ ಕಾಸರಗೋಡಿನವರು. ಕಾವೇರಿ ಕಾರ್ಸ್ ಟ್ರಾವೆಲ್ ಸಂಸ್ಥೆಯ ಸಂಸ್ಥಾಪಕರಾಗಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಇವರು ಕಂಪನಿಯನ್ನು ಉತ್ತುಂಗಕ್ಕೇರಿಸಿದ್ದಾರೆ.

ಕಾರ್ಪೊರೇಟ್ ವಲಯದ ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಉತ್ತಮ ಗುಣಮಟ್ಟದ ಲಕ್ಸುರಿ ಕಾರುಗಳ ಬಾಡಿಗೆ ಹಾಗೂ ಸಾರಿಗೆ ಸೇವೆ ಒದಗಿಸುವ ಮೂಲಕ ಈ ಸಂಸ್ಥೆ ಸಾರಿಗೆ ಕ್ಷೇತ್ರದಲ್ಲಿ ದಕ್ಷಿಣ ಭಾರತದ ತನ್ನ ಛಾಪನ್ನು ಮೂಡಿಸಿದೆ. ರಾಧಾಕೃಷ್ಣ ಹೊಳ್ಳ ಅವರು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ನಿರ್ದೇಶಕರಾಗಿ ಹಾಗೂ ಅಖಿಲ ಭಾರತ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶ್ರೀ ರೇಣುಕಾ ಲಕ್ಷ್ಮಣ್ ಉಪ್ಪಾರ್, ವ್ಯವಸ್ಥಾಪಕ ನಿರ್ದೇಶಕರು, ಸ್ಪರ್ಧಾ‌ ಸ್ಪೂರ್ತಿ, ಧಾರವಾಡ

Page 2- 3- uppar R

ಸ್ಫರ್ಧಾ ಸ್ಪೂರ್ತಿ ಕನ್ನಡ ಮಾಸಪತ್ರಿಕೆ ರಾಜ್ಯಾದ್ಯಂತ ಮನೆ ಮಾತು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರಿಗೆ ಇದು ದಾರಿದೀಪ. ಇದರ ವ್ಯವಸ್ಥಾಪಕ ನಿರ್ದೇಶಕರಾಗಿರುವ ರೇಣುಕಾ ಉಪ್ಪಾರ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ. ಸ್ಪರ್ಧಾಸ್ಪೂರ್ತಿಯ ಪ್ರಧಾನ ಸಂಪಾದಕರಾ ಗಿರುವ ಲಕ್ಷ್ಮಣ ಎಸ್. ಉಪ್ಪಾರ ಅವರು ರೇಣುಕಾ ಉಪ್ಪಾರ ಅವರ ಪತಿ. ಧಾರವಾಡದ ಕ್ಲಾಸಿಕ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕ್ಲಾಸಿಕ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾ ವಿದ್ಯಾಲಯ ಮತ್ತು ಕ್ಲಾಸಿಕ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾ ವಿದ್ಯಾಲಯದ ಚಟುವಟಿಕೆಗಳಲ್ಲಿ ಪತಿಗೆ ರೇಣುಕಾ ಉಪ್ಪಾರ ಸಾಥ್ ನೀಡುತ್ತಿದ್ದಾರೆ. ಇವರು 2005ರಿಂದ ಸ್ಪರ್ಧಾ ಸ್ಪೂರ್ತಿ ಹಾಗೂ ಇತರ ಮಾಸಪತ್ರಿಕೆ, ಉದ್ಯೋಗವಾರ್ತೆ ಪಾಕ್ಷಿಕ ಪತ್ರಿಕೆ ಹಾಗೂ ಅಧ್ಯಯನ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಸ್ಪರ್ಧಾ ಸೂರ್ತಿ ಪಬ್ಲಿಷರ್ಸ್ ಪ್ರಿಂಟರ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಸ್ಪರ್ಧಾಸ್ಪೂರ್ತಿ ಕನ್ನಡ ಮಾಸಪತ್ರಿಕೆ ಮತ್ತು ಕಾಂಪಿಟೇಶನ್ ವಿಷನ್ ಇಂಗ್ಲಿಷ್ ಮಾಸ ಪತ್ರಿಕೆಯನ್ನು ಇವರು ನಡೆಸುತ್ತಿದ್ದಾರೆ.

ಶ್ರೀ ಸುನಿಲ್ ಕುಮಾರ್ ಎಚ್.ವಿ., ಉದ್ಯಮಿ

Page 2- 4 sunil kumar R

ರೊಟೇರಿಯನ್ ಸುನಿಲ್ ಕುಮಾರ್ ಎಚ್.ವಿ. ಅವರು ತುಮಕೂರು ಜಿಲ್ಲೆಯ ಮಧುಗಿರಿಯವರು. ಇವರ ಕುಟುಂಬ 100 ವರ್ಷಗಳಿಗೂ ಅಧಿಕ ಕಾಲ ಕಬ್ಬಿಣ ಮತ್ತು ಉಕ್ಕಿನ ವ್ಯಾಪಾರದಲ್ಲಿ ತೊಡಗಿದ ಶ್ರೀಮಂತ ಪರಂಪರೆ ಹೊಂದಿದೆ. ಐದು ತಲೆಮಾರುಗಳಿಂದ ಮುಂದುವರಿದಿರುವ ಹೆಮ್ಮೆಯ ಕುಟುಂಬ ಪರಂಪರೆಯನ್ನು ಸುನಿಲ್ ಕುಮಾರ್ ಅವರು ಯಶಸ್ವಿಯಾಗಿ ಮುನ್ನಡೆಸು ತ್ತಿದ್ದಾರೆ.

ತಮ್ಮ ತಂದೆ, ರೊಟೇರಿಯನ್ ಪ್ರೆಸಿಡೆಂಟ್ ಆಗಿದ್ದ ವೀರೇಶ್ ಎಚ್.ವಿ. ಅವರೊಂದಿಗೆ ಚಿಕ್ಕ ವಯಸ್ಸಿನ ಕುಟುಂಬದ ವ್ಯವಹಾರಕ್ಕೆ ಸೇರ್ಪಡೆಯಾದರು. ಇವರು ಬಿಸಿನೆಸ್ ಮ್ಯಾನೇಜ್ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಸಮರ್ಥ ನಾಯಕತ್ವದಲ್ಲಿ 1995ರಲ್ಲಿ ಸ್ಥಾಪನೆಯಾದ ಎಸ್‌ವಿ ಸ್ಟೀಲ್ಸ್ ಅಂಡ್ ವೈರ್ಸ್ ಸಂಸ್ಥೆಯು ಬೆಂಗಳೂರಿನ ಪ್ರಮುಖ ಕಬ್ಬಿಣ ಮತ್ತು ಉಕ್ಕಿನ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. SVSW ಸಂಸ್ಥೆಯು ತನ್ನ ಕಾರ್ಯಚಟು ವಟಿಕೆಗಳನ್ನು ಗೋದಾಮು ನಿರ್ವಹಣೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಕ್ಕೂ ವಿಸ್ತರಿಸಿದೆ.

ಎ.ಎಸ್.ಪ್ರೇಮನಾಥ್, ಮಾಜಿ ವ್ಯವಸ್ಥಾಪಕ ನಿರ್ದೇಶಕರು, ಕೆಎಂಎಫ್, ಬೆಂಗಳೂರು

Page 2- 5 Premanath R

ರಾಜ್ಯ ಸರಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಕ್ಷೀರ ಭಾಗ್ಯ’ ಶಾಲಾ ಮಕ್ಕಳಿಗಷ್ಟೇ ಅಲ್ಲ, ಇಡೀ ಗ್ರಾಮೀಣ ಹೈನುಗಾರಿಕೆ ವಲಯಕ್ಕೆ ಹೊಸ ಚೈತನ್ಯ ತುಂಬಿದ ವಿನೂತನ ಸಾಮಾಜಿಕ ಕ್ರಾಂತಿ. 2013ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಕಾರದಲ್ಲಿ ಈ ಯೋಜನೆ ಆರಂಭವಾಗಿತ್ತು. ಇದರ ಹಿಂದೆ ಕೆಎಂಎಫ್‌ʼನ ಅಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎ.ಎಸ್. ಪ್ರೇಮನಾಥ್ ಅವರ ಕೊಡುಗೆ ಮಹತ್ವದ್ದು. ಇವರು ಮೂಲತಃ ಕೊಡಗು ಜಿ‌ಲ್ಲೆಯ ಸೋಮವಾರ ಪೇಟೆಯವರು. 1975ರಲ್ಲಿ ಬೆಂಗಳೂರು ಡೇರಿ ಸಂಸ್ಥೆಯಲ್ಲಿ ಸೂಪರ್ ವೈಸರ್ ಆಗಿ ಸೇವೆ ಆರಂಭಿಸಿ ದರು. ಬೆಂಗಳೂರು ಡೇರಿ ಬಳಿಕ ಕೆಎಂಎಫ್ ಆಗಿ ಬದಲಾಯಿತು. 35 ವರ್ಷ ಕೆಎಂಎಫ್‌ʼನಲ್ಲಿ ಸುದೀರ್ಘ ಸೇವೆ ಸಲ್ಲಿಸಿದರು. ಸೂಪರ್ ವೈಸರ್ ಆಗಿದ್ದ ಪ್ರೇಮನಾಥ್ ಅವರು ಹಂತ ಹಂತವಾಗಿ ಸಾಧನೆಯ ಪಥದಲ್ಲಿ ಸಾಗಿ ವ್ಯವಸ್ಥಾಪಕ ನಿರ್ದೇಶಕ ಹುzಗೇರಿ ಕೆಎಂಎ- ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕಿರಣ್ ಕುಮಾರ್ ವಿ.ಜಿ., ಸ್ಥಾಪಕರು, ವಿಶಾಲ್ ಇನ್ರಾಸ್ಟ್ರಕ್ಚರ್ ಲಿಮಿಟೆಡ್, ಬೆಂಗಳೂರು.

Page 2- 6 Kiran kumar R

ರಾಮಜನ್ಮಭೂಮಿ ಅಯೋಧ್ಯೆ ಮತ್ತು ಪ್ರಯಾಗ್ರಾಜ್ ನಲ್ಲಿ ವಿಮಾನ ನಿಲ್ದಾಣಗಳ ರನ್ ವೇ ನಿರ್ಮಾಣದಲ್ಲಿ ಕನ್ನಡಿಗ ಉದ್ಯಮಿ ಕಿರಣ್ ಕುಮಾರ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಬೆಂಗಳೂರು, ಮಂಗಳೂರು ಕೊಚ್ಚಿನ್ ಸೇರಿದಂತೆ ದೇಶದ ಪ್ರಮುಖ ನಗರಗಳ ವಿಮಾನ ನಿಲ್ದಾಣಗಳ ರನ್ ವೇ, ಡಿಆರ್‌ಡಿಒ, ಡಿಎಚ್‌ಎಲ್‌ನ ಪ್ರಮುಖ ಯೋಜನೆಗಳಿಗೂ ಇವರ ಸಹಯೋಗ ಇದೆ. ಇವರ ವಿಶಾಲ್ ಇನ್ರಾಸ್ಟ್ರಕ್ಚರ್ ಕಂಪನಿಯಲ್ಲಿ 2500ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ವಿಡ್ ಸಂದರ್ಭದಲ್ಲಿ 65 ಲಕ್ಷ ಊಟದ ಪ್ಯಾಕ್ ಗಳನ್ನು ಸಿದ್ಧಪಡಿಸಿ ಜನಸಾಮಾನ್ಯರಿಗೆ, ರೋಗಿಗಳಿಗೆ, ನಸ್ ಗಳು, ವೈದ್ಯರು, ಪೊಲೀಸರು, ಸಮಾಜ ಸೇವಕರು ಮೊದ ಲಾದ ಕೋವಿಡ್ ವಾರಿಯರ್‌ಗಳಿಗೆ ವಿತರಣೆ ಮಾಡಿದ್ದರು.

ಅಸ್ಸಾಂ, ಮಣಿಪುರ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ 21 ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿ, ಮೆಲ್ಬೋರ್ನ್, ಪರ್ತ್ ಮೊದಲಾದ ಕಡೆಗಳಲ್ಲಿ ರಾಘವೇಂದ್ರ ಸ್ವಾಮಿ ಮಠದ ಶಾಖೆಗಳು ಕೇಂದ್ರಗಳು ಸ್ಥಾಪಿಸುವ ನಿಟ್ಟಿನಲ್ಲಿ ನೆರವಾಗಿದ್ದಾರೆ.

ಶ್ರೀ ರಾಘವ್ ಸೂರ್ಯ ಹೆಗಡೆ, ಯುವ ಉದ್ಯಮಿ

Page 2- 7 R S H -R

ಮಾಹಿತಿ ತಂತ್ರeನದಲ್ಲಿ ಪದವಿ ಪಡೆದ ಬಳಿಕ, ಪ್ರತಿಷ್ಠಿತ ಅಸೆಂಚರ್ (Accenture) ಸಂಸ್ಥೆಯೊಂದಿಗೆ ವೃತ್ತಿ ಆರಂಭಿಸಿದ ಬೆಂಗಳೂರಿನ ರಾಘವ್ ಸೂರ್ಯ ತಂತ್ರಜ್ಞಾನ ಮತ್ತು ಬಿಸಿನೆಸ್ ಸೊಲ್ಯೂಷನ್ಸ್ ಕ್ಷೇತ್ರದಲ್ಲಿ ಪಡೆದ ಅನುಭವದ ಹಿನ್ನೆಲೆಯಲ್ಲಿಯೇ ತಮ್ಮದೇ ಉದ್ಯಮ ಪ್ರಾರಂಭಿಸಿದ್ದಾರೆ. Verzeo Edutech ಸಂಸ್ಥೆಯಲ್ಲಿ ಕನ್ಸಲ್ಟೆಂಟ್ ಹಾಗೂ ಅಡ್ವೈಸರ್ ಆಗಿ ಕಾರ್ಯನಿರ್ವಹಿಸಿದ ಅವರು, ಉದ್ಯಮದ ಅಗತ್ಯಗಳಿಗೆ ಅನುಗುಣವಾದ ಕೋರ್ಸ್‌ಗಳು ಹಾಗೂ ಪಠ್ಯಕ್ರಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ನಂತರ Diagnext ಮೂಲಕ ಇನ್ಶೂರೆನ್ಸ್ ಟೆಕ್ನಾಲಜಿ ಕ್ಷೇತ್ರಕ್ಕೆ ಕಾಲಿಟ್ಟ ರಾಘವ್ ಸೂರ್ಯ, ಆಡಿಯೋ ಹಾಗೂ ವಿಡಿಯೋ ಆಧಾರಿತ ಪ್ರಿ-ಪಾಲಿಸಿ ಮೆಡಿಕಲ್ ಅಸೆಸ್ಮೆಂಟ್ ಮೂಲಕ ಮಾಹಿತಿಯನ್ನು ವೇಗವಾಗಿ ಸಂಗ್ರಹಿಸುವುದು, ಆರೋಗ್ಯ ವರದಿಗಳಿಂದ ಅಗತ್ಯ ಮಾಹಿತಿಗಳು ಪಡೆಯು ವುದು ಮತ್ತು ಕ್ಲೌಡ್ ಆಧಾರಿತ ತಂತ್ರಜ್ಞಾನದ ಮೂಲಕ ಅಂಡರೈಟರ್‌ಗಳಿಗೆ ನಿರ್ಧಾರ ಕೈಗೊಳ್ಳಲು ನೆರವಾಗುವಂತಹ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ.

ಶ್ರೀ ಸಿದ್ದಪ್ಪ ಮುನಿಯಪ್ಪ, ಸ್ಥಾಪಕರು, ಸಿದ್ದೇಶ್ವರ ಎಲೆಕ್ಟ್ರಿಕಲ್ ಎಂಟರ್ ಪ್ರೈಸಸ್, ಬೆಂಗಳೂರು.

Page 2- 8 siddappa R

ಬೆಂಗಳೂರಿನ ಶ್ರೀ ಸಿದ್ದೇಶ್ವರ ಎಲೆಕ್ಟ್ರಿಕಲ್ ಎಂಟರ್ ಪ್ರೈಸಸ್ ಸ್ಥಾಪಕರಾದ ಸಿದ್ದಪ್ಪ ಮುನಿಯಪ್ಪ ಅವರು ಉದ್ಯಮಿ ಯಾಗಿ ಯಶಸ್ಸು ಗಳಿಸಿದವರು. ಕೃಷಿಕ ಕುಟುಂಬದಿಂದ ಬಂದ ಇವರು, ಶಿಕ್ಷಣದ ಪೂರ್ಣಗೊಳಿಸಿದ ಬಳಿಕ ಉದ್ಯಮಿಯಾಗಿ ಸಾಧನೆಯ ಹಾದಿಯಲ್ಲಿ ಮುನ್ನಡೆದು ಯಶಸ್ವಿಯೂ ಆದರು. ಮೂಲತಃ ಬೆಂಗಳೂರಿನ ಆನೇಕಲ್‌ನ ಸಿದ್ದಪ್ಪ ಮುನಿ ಯಪ್ಪ ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪದವಿ ಗಳಿಸಿದರು. ಕೆಲ ಕಾಲ ಉದ್ಯೋಗದಲ್ಲಿದ್ದರು. ಎಲೆಕ್ಟ್ರಿ ಕಲ್ ಕ್ಷೇತ್ರದಲ್ಲಿ ಉದ್ಯಮಿಯಾಗುವ ನಿಟ್ಟಿನಲ್ಲಿ 1992ರಲ್ಲಿ ಸಿದ್ದೇಶ್ವರ ಎಲೆಕ್ಟ್ರಿಕಲ್ ಎಂಟರ್ ಪ್ರೈಸಸ್ ಸಂಸ್ಥೆಯನ್ನು ಸ್ಥಾಪಿಸಿದರು. ಸಿದ್ದೇಶ್ವರ ಕನ್‌ಸ್ಟ್ರಕ್ಷನ್ಸ್ ಕಂಪನಿ ಸ್ಥಾಪಿಸಿ ಯಶಸ್ವಿಯಾಗಿ ದ್ದಾರೆ.

ಇವರು ಕೇಂದ್ರ ಸರಕಾರದ ರಕ್ಷಣಾ ಇಲಾಖೆಗೆ ಸಂಬಂಽಸಿದ ಹಲವಾರು ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳ ನಿರ್ಮಾಣಗಳ ಕಾಮಗಾರಿ ಗುತ್ತಿಗೆ ಯನ್ನು ಯಶಸ್ವಿಯಾಗಿ ನಿರ್ವಹಿಸಿ ದ್ದಾರೆ. ಕಾರ್ಪೊರೇಟ್ ವಲಯದ ಜವಾಬ್ದಾರಿಗಳ ಜತೆಗೆ ರೋಟರಿ ಸಂಘಟನೆಗಳಲ್ಲಿ ಕೂಡ ಸಕ್ರಿಯ ಸೇವೆ ಸಲ್ಲಿಸಿದ್ದಾರೆ.

ಶ್ರೀ ರಾಹುಲ್ ಚಂದ್ರಶೇಖರ್, ಯಶಸ್ವಿ ಉದ್ಯಮಿ, ಸಮಾಜ ಸೇವಕರು

Page 2- 9 Rahul R

ವೃತ್ತಿಯಲ್ಲಿ ಉದ್ಯಮಿ, ಪ್ರವೃತ್ತಿಯಲ್ಲಿ ಸಮಾಜ ಸೇವಕರು ರಾಹುಲ್ ಚಂದ್ರಶೇಖರ್. ರಷ್ಯಾದ Higher School of Economics, ಜರ್ಮನಿಯ Munich Business School ಹಾಗೂ ಲಂಡನ್‌ನ University of Westminsterನಲ್ಲಿ ಉನ್ನತ ಶಿಕ್ಷಣ ಪಡೆದ ರಾಹುಲ, ವಿದ್ಯಾರ್ಥಿ ಜೀವನದ ಉದ್ಯಮ ದತ್ತ ಹೆಜ್ಜೆ ಹಾಕಿದವರು. ಲಂಡನ್‌ನಲ್ಲಿ Property Consultancy ಆರಂಭಿಸಿ, ಕೇವಲ 9 ತಿಂಗಳಲ್ಲಿ ಯಶಸ್ವಿ ಉದ್ಯಮಿಯಾಗಿ ನಿಂತ ಹಿರಿಮೆ ಇವರದು. ಕೋವಿಡ್ ಸಂಕಷ್ಟದ ಸಂದರ್ಭ ದಲ್ಲಿ ಭಾರತಕ್ಕೆ ಮರಳಿ, ರಾಜ್ಯ ಸೇವಾ ಚಾರಿಟೇಬಲ್ ಟ್ರಸ್ಟ್ ಮೂಲಕ ಆಕ್ಸಿಜನ್, ಆಸ್ಪತ್ರೆ ಬೆಡ್, ಆಹಾರ ಮತ್ತು ರೇಷನ್ ಸೇರಿದಂತೆ ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ದುಬೈನಲ್ಲಿ Property Management ÊÜáñÜᤠLuxury Car Hireಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಇವರು, 70ಕ್ಕೂ ಹೆಚ್ಚು ಎಲೈಟ್ ಕ್ಲೈಂಟ್‌ಗಳ ಪೋರ್ಟೋ ಪೊಲಿಯೊ ಹಾಗೂ 55 ಮಂದಿಯ ತಂಡಕ್ಕೆ ವಿಶೇಷ ಮಾರ್ಗದರ್ಶನ ನೀಡುತ್ತಿದ್ದಾರೆ

ಶ್ರೀ ಸಂಗಮೇಶ್ ಸುಗ್ರೀವಾ ಪರವಾಗಿ ಸ್ನೇಹಿತ ಅಜಯ್ ಕುಮಾರ್ ಪೂಜಾರ್

Page 2- 10 sangamesh R

ಬೆಂಗಳೂರಿನ ದಾಸನಾಳ ಗ್ರಾಮದ ಸರಳ ಕುಟುಂಬದಿಂದ ಬಂದ ಸಂಗಮೇಶ್ ಸುಗ್ರೀವಾ ಅವರು ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಹಾಗೂ ಬಿ.ಟೆಕ್ ಪದವಿ ಪಡೆದು, ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. ನಿರಂತರ ಪರಿಶ್ರಮ ಹಾಗೂ ಬದ್ಧತೆಯಿಂದ ವಿಎಸ್‌ಆರ್ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ರೋಗಿಗಳಿಗೆ ಸಹಾಯ ಹಾಗೂ ಗ್ರಾಮದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದರ ಮೂಲಕ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕೋವಿಡ್‌ನ ಕಠಿಣ ಸಮಯದಲ್ಲಿ ಸಾವಿರಾರು ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನು ನೀಡಿ ಮಾನವೀಯತೆಯ ಕೈ ಚಾಚಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಇವರು ಸುಗ್ರೀವ ಜನ ಸೇವಾ ಸಮಿತಿ, ಸುಗ್ರೀವ ಧ್ವನಿ ಪಾಕ್ಷಿಕ ಪತ್ರಿಕೆ, ಸುಗ್ರೀವ ರೂರಲ್ ಬಿಲ್ಡಿಂಗ್ ಸೆಂಟರ್‌ನಂತಹ ಸಂಸ್ಥೆಗಳನ್ನು ಸ್ಥಾಪಿಸಿ ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ.

Page 2- last

ಹೇಗಿರುತ್ತೆ ಪ್ರಶಸ್ತಿ ಆಯ್ಕೆ ?

ವಿಶ್ವವಾಣಿ ಗ್ಲೋಬಲ್ ಫಾರಂ ನೀಡುವ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ಬಗ್ಗೆ ವಿವರಣೆ ನೀಡಿದ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು, ರಾಜ್ಯದ ಸಾಧಕರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಮೂರು ಜನರ ಆಯ್ಕೆದಾರರ ಸಮಿತಿಯಿರುತ್ತದೆ. ಆ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಸಾಧಕರನ್ನು ಗುರುತಿಸಲಾಗುತ್ತದೆ. ತಾಷ್ಕೆಂಟ್‌ನಲ್ಲಿ ನಡೆದ 14ನೇ ಆವೃತ್ತಿಗೆ 90 ಜನರ ಪಟ್ಟಿಯನ್ನು ಆಯ್ಕೆದಾರರ ಸಮಿತಿ ನೀಡಿತ್ತು. ಆದರೆ 40ಕ್ಕಿಂತ ಹೆಚ್ಚು ಜನರ ತಂಡವಾದರೆ ಪ್ರತ್ಯೇಕವಾಗಿ ತೆರಳಬೇಕಾಗು ತ್ತದೆ. ಆದ್ದರಿಂದ ಭಾವನಾತ್ಮಕವಾಗಿ ಒಂದು ತಂಡವಾಗಿ ಇರಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ನಿಯೋಗದ ಮಿತಿಯನ್ನು 40ಕ್ಕೆ ತಗ್ಗಿಸಲಾಗಿದೆ. ಕಳೆದ 13 ಕಾರ್ಯಕ್ರಮದಲ್ಲಿ ಸುಮಾರು 240ಕ್ಕೂ ಹೆಚ್ಚು ಸಾಧಕರನ್ನು ವಿಶ್ವವಾಣಿ ಗುರುತಿಸಿದೆ. ಸಾಮಾನ್ಯವಾಗಿ ಬೆಂಗಳೂರು ಅಥವಾ ಮುಂಬೈನಲ್ಲಿ ಕಾರ್ಯಕ್ರಮವನ್ನು ನಡೆಸುವ ಪ್ರತೀತಿ ನಡೆದುಕೊಂಡು ಬಂದಿತ್ತು. ಆದರೆ ರಾಜ್ಯದ ಸಾಧಕರನ್ನು ವಿದೇಶಿ ನೆಲದಲ್ಲಿ ಗುರುತಿಸಿ, ಸನ್ಮಾನಿಸಬೇಕು ಎನ್ನುವ ಉದ್ದೇಶದಿಂದ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿಯನ್ನು ಆರಂಭಿಸಲಾಗಿದೆ ಎನ್ನುವುದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ಅಭಿಪ್ರಾಯ.

Page 2- Madhuswamy
Page 2- with parwa