ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಿಮಾನದ ಎಂಜಿನ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.. ಭಯಾನಕ ವಿಡಿಯೋ ವೈರಲ್‌

ವ್ಯಕ್ತಿಯೊಬ್ಬ ವಿಮಾನದ ಎಂಜಿನ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಇಟಲಿಯ ಮಿಲನ್ ಬರ್ಗಾಮೊ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದಿದೆ. ಕ್ಯಾಲಿನೇಟ್ ನ ಆಂಡ್ರಿಯಾ ರುಸ್ಸೋ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಕಳೆದ ಮಂಗಳವಾರ ಮಿಲನ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನದ ಎಂಜಿನ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಮಾನದ ಎಂಜಿನ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಮಿಲನ್: ವ್ಯಕ್ತಿಯೊಬ್ಬ ವಿಮಾನದ ಎಂಜಿನ್ (Flight engine) ಒಳಗೆ ಹಾರಿ ಆತ್ಮಹತ್ಯೆ (self harming) ಮಾಡಿಕೊಂಡ ಘಟನೆ ಉತ್ತರ ಇಟಲಿಯ (northern Italy) ಮಿಲನ್ ಬರ್ಗಾಮೊ ವಿಮಾನ ನಿಲ್ದಾಣದಲ್ಲಿ (Milan Bergamo Airport) ಇತ್ತೀಚೆಗೆ ನಡೆದಿದೆ. ಕ್ಯಾಲಿನೇಟ್ ನ ಆಂಡ್ರಿಯಾ ರುಸ್ಸೋ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಕಳೆದ ಮಂಗಳವಾರ ಮಿಲನ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನದ ಎಂಜಿನ್ ಒಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಭಯಾನಕ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಜುಲೈ 8 ರಂದು ಬೆಳಗ್ಗೆ 10.35ರ ಸುಮಾರಿಗೆ 35 ವರ್ಷದ ಆಂಡ್ರಿಯಾ ರುಸ್ಸೋ ಎಂದು ಗುರುತಿಸಲಾದ ವ್ಯಕ್ತಿ ತಮ್ಮ ಕಾರನ್ನು ವಿಮಾನ ನಿಲ್ದಾಣದ ಸಮೀಪದಲ್ಲಿ ಬಿಟ್ಟು ಟಿಕೆಟ್ ಪಡೆಯದೆ ವೊಲೊಟಿಯಾ ಏರ್ಲೈನ್ಸ್ ಜೆಟ್ ಕಡೆಗೆ ರನ್ ವೇ ಮೇಲೆ ಓಡತೊಡಗಿದರು. ಅಲ್ಲಿದ್ದ ಸಿಬ್ಬಂದಿ ಏನಾಗುತ್ತಿದೆ ಎನ್ನುವ ಗೊಂದಲದಲ್ಲೇ ಇದ್ದರು. ವಿಮಾನ ಸ್ಪೇನ್ ಗೆ ಹಾರುವ ಸಿದ್ಧತೆಯಲ್ಲಿತ್ತು.



ರನ್ ವೇ ಮೇಲೆ ನಿಂತಿದ್ದ ವೊಲೊಟಿಯಾ ವಿಮಾನ ವಿ೭೩೫೧೧ (ಏರ್ ಬಸ್ ೩೧೯) ಕಡೆಗೆ ಓಡಿದ ರುಸ್ಸೋ ಅದರ ಎಡಭಾಗದ ಟರ್ಬೊ ಫ್ಯಾನ್ ಎಂಜಿನ್ ಗೆ ಹಾರಿದ್ದಾನೆ. ಈ ದೃಶ್ಯವನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಅಸಹಾಯಕರಾಗಿ ನಿಂತು ನೋಡಿದರು. ಇದರ ದೃಶ್ಯಗಳು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: Shiva Rajkumar: ಸೆಂಚುರಿ ಸ್ಟಾರ್‌ಗೆ ಹುಟ್ಟುಹಬ್ಬದ ಸಂಭ್ರಮ; ಶಿವರಾಜ್ ಕುಮಾರ್ ಸಿನಿ ಜರ್ನಿ ಹೇಗಿತ್ತು ಗೊತ್ತಾ?

ರುಸ್ಸೋ ವಿಮಾನ ನಿಲ್ದಾಣದ ಯಾವುದೇ ಉದ್ಯೋಗಿ ಅಥವಾ ಪ್ರಯಾಣಿಕನಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದು, ಅವರು ವಿಮಾನ ನಿಲ್ದಾಣದಿಂದ ಸುಮಾರು 10 ಮೈಲಿ ದೂರದಲ್ಲಿರುವ ಒಂದು ಸಣ್ಣ ಪಟ್ಟಣದವರು ಎನ್ನಲಾಗಿದೆ.



ಈ ಘಟನೆಯಿಂದಾಗಿ ಸ್ಪೇನ್ ಗೆ ಹಾರಬೇಕಿದ್ದ ಹಾಗೂ ಇತರ ಕೆಲವು ವಿಮಾನಗಳ ಹಾರಾಟ ವಿಳಂಬವಾಯಿತು. ದುರಂತದ ಅನಂತರ ರನ್‌ವೇಯಲ್ಲಿ ವೊಲೊಟಿಯಾ ವಿಮಾನದ ಪಕ್ಕದಲ್ಲಿ ಆಂಬ್ಯುಲೆನ್ಸ್‌, ಅಗ್ನಿಶಾಮಕ ಸಿಬ್ಬಂದಿ ಮತ್ತು ಶಟಲ್ ಬಸ್‌ಗಳು ಬಂದು ನಿಂತವು ಎಂದಿದ್ದಾರೆ ಪ್ರತ್ಯಕ್ಷದರ್ಶಿಗಳು.

ರುಸ್ಸೋ ಮಾದಕ ವ್ಯಸನ ಹೊಂದಿದ್ದು, ಇದರಿಂದ ಮುಕ್ತಿ ಪಡೆಯಲು ಚೇತರಿಕೆ ಕೇಂದ್ರಕ್ಕೆ ದಾಖಲಾಗಿದ್ದನು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.