ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunita Williams: ಭೂಮಿಗೆ ಮರಳುತ್ತಿರುವ ಸುನಿತಾ ವಿಲಿಯಮ್ಸ್‌ ; 9 ತಿಂಗಳ ವಿಳಂಬಕ್ಕೆ ಕಾರಣವೇನು?

ಬರೋಬ್ಬರಿ 10 ತಿಂಗಳ ಬಳಿಕ ಭಾರತೀಯ ಮೂಲದ ಅಮೆರಿಕನ್‌ ಗಗನಯಾತ್ರಿ ಸುನೀತಾ ವಿಲಿಯಮ್ಸ್‌, ಭೂಮಿಗೆ ಸುರಕ್ಷಿತವಾಗಿ ಮರಳುತ್ತಿದ್ದಾರೆ. ಕೇವಲ 8 ದಿನದ ಅಧ್ಯಯನಕ್ಕೆಂದು ತೆರಳಿದ್ದ ಅವರು 9 ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಸಿಲುಕಿಕೊಂಡಿದ್ದರು. ಇದೀಗ ಅವರು ಭೂಮಿಗೆ ಮರಳುತ್ತಿದ್ದಾರೆ.

ಸುನಿತಾ ವಿಲಿಯಮ್ಸ್

ವಾಷಿಂಗ್ಟನ್:‌ ಬರೋಬ್ಬರಿ 10 ತಿಂಗಳ ಬಳಿಕ ಭಾರತೀಯ ಮೂಲದ ಅಮೆರಿಕನ್‌ ಗಗನಯಾತ್ರಿ ಸುನಿತಾ ವಿಲಿಯಮ್ಸ್‌, (Sunita Williams) ಭೂಮಿಗೆ ಸುರಕ್ಷಿತವಾಗಿ ಮರಳುತ್ತಿದ್ದಾರೆ. ಕೇವಲ 8 ದಿನದ ಅಧ್ಯಯನಕ್ಕೆಂದು ತೆರಳಿದ್ದ ಅವರು 9 ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಸಿಲುಕಿಕೊಂಡಿದ್ದರು. ಇದೀಗ ನಾಸಾದ ಸ್ಪೇಸ್‌ಎಕ್ಸ್ ಕ್ರೂ-10 ಮಿಷನ್‌ನಲ್ಲಿರುವ ನಾಲ್ವರು ಸಿಬ್ಬಂದಿ ಮಾರ್ಚ್ 16 ರ ಭಾನುವಾರ ಬೆಳಿಗ್ಗೆ 1:35 ET ಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಅನ್ನು ಯಶಸ್ವಿಯಾಗಿ ತಲುಪಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಭೂಮಿಗೆ ಕರೆತರುವ ಪ್ರಯತ್ನವಾಗಿ ಕ್ರೂ ಡ್ರಾಗನ್‌ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗಿದೆ.



ಮಂಗಳವಾರ ಬೆಳಗ್ಗೆ 8.30ಕ್ಕೆ ಐಎಸ್‌ಎಸ್‌ನಿಂದ ನೌಕೆ ಹೊರಟಿದೆ. ಬುಧವಾರ ಮುಂಜಾನೆ 3 ಗಂಟೆ ಫ್ಲೋರಿಡಾದ ಸಮುದ್ರದ ಮೇಲೆ ನೌಕೆಯು ಇಳಿಯಲಿದೆ. ಅಲ್ಲಿಂದ ವಿಶೇಷ ದೋಣಿಗಳ ಮೂಲಕ ಕರಾವಳಿಗೆ ಆಗಮಿಸಲಿದ್ದಾರೆ.

9 ತಿಂಗಳ ವಿಳಂಬ ಏಕೆ?

ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಅವರು ಕಳೆದ ವರ್ಷ ಬೋಯಿಂಗ್‌ನ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಬೋಯಿಂಗ್‌ ಕಂಪನಿಗೂ ಇದು ಮೊದಲ ಬಾಹ್ಯಾಕಾಶ ಕಾರ್ಯಾಚರಣೆಯಾಗಿತ್ತು. ಆದರೆ ಸ್ಟಾರ್‌ಲೈನರ್‌ ನೌಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷದ ಕಾರಣದಿಂದಾಗಿ, ಈ ಇಬ್ಬರೂ ಗಗನಯಾತ್ರಿಗಳು ಐಎಸ್‌ಎಸ್‌ನಲ್ಲೇ ದೀರ್ಘ ಕಾಲ ಉಳಿಯುವಂತಾಯಿತು. ಈ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವುದು ನಾಸಾಗೆ ಸವಾಲಿನ ವಿಷಯವಾಗಿತ್ತು.

ರಾಜಕೀಯ ಆರೋಪ

ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಜೋ ಬೈಡನ್‌ ಅವರ ಮೇಲೆ ಈ ವಿಷಯದ ಕುರಿತು ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಡೊನಾಲ್ಡ್‌ ಟ್ರಂಪ್‌ ಅವರ ಆಪ್ತ ಹಾಗೂ ಸ್ಪೇಸ್‌ ಎಕ್ಸ್‌ನ ಸಿಇಒ ಆದ ಎಲಾನ್‌ ಮಸ್ಕ್‌ ಹಾಗೂ ಬೈಡನ್‌ ಅವರ ನಡುವಿನ ತಿಕ್ಕಾಟದ ಕಾರಣದಿಂದ ಗಗನ ಯಾತ್ರಿಗಳು ಅಲ್ಲಿಯೇ ಉಳಿಯ ಬೇಕಾಯಿತು ಎಂದು ಆರೋಪಿಸಲಾಗುತ್ತಿದೆ. ಆದರೆ ಈಗ ಡೊನಾಲ್ಡ್‌ ಟ್ರಂಪ್‌ ಅವರು ವಿಶೇಷ ಕಾಳಜಿವಹಿಸಿ ಸುನಿತಾ ವಿಲಿಯಮ್ಸ್‌ ಅವರನ್ನು ಮರಳಿ ಭೂಮಿಗೆ ಕರೆತರುವ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳುವಂತೆ ಎಲಾನ್‌ ಮಸ್ಕ್‌ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.