ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunita Williams: ಊದಿಕೊಂಡ ಕಣ್ಣು, ಮಗುವಿನಂತಾದ ಚರ್ಮ! ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್‌ ಆರೋಗ್ಯ ಹೇಗಿದೆ?

ಕಳೆದ 9 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಅವರ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಮಾರ್ಚ್ 19ರಂದು ಬೆಳಗಿನ ಜಾವ 3:27ಕ್ಕೆ ಫ್ಲೋರಿಡಾದ ಸಮೀಪ ಮೆಕ್ಸಿಕೋ ಕೊಲ್ಲಿಯಲ್ಲಿ ಯಶಸ್ವಿಯಾಗಿ ಕೆಳಗೆ ಇಳಿದಿದೆ.

ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್‌ ಆರೋಗ್ಯ ಹೇಗಿದೆ?

ಸುನಿತಾ ವಿಲಿಯಮ್ಸ್

Profile Vishakha Bhat Mar 19, 2025 8:31 AM

ವಾಷಿಂಗ್ಟನ್‌: ಕಳೆದ 9 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ ( Sunita Williams) ಹಾಗೂ ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಅವರ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಮಾರ್ಚ್ 19ರಂದು ಬೆಳಗಿನ ಜಾವ 3:27ಕ್ಕೆ ಫ್ಲೋರಿಡಾದ ಸಮೀಪ ಮೆಕ್ಸಿಕೋ ಕೊಲ್ಲಿಯಲ್ಲಿ ಯಶಸ್ವಿಯಾಗಿ ಕೆಳಗೆ ಇಳಿದಿದೆ. ಇನ್ನು ಈಗಷ್ಟೇ ಭೂಮಿಗೆ ಮರಳಿರುವ ಗಗನಯಾತ್ರಿಗಳ ದೇಹದ ಮೇಲೆ ಕೆಲ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಬಾಹ್ಯಾಕಾಶದಲ್ಲಿ ದೀರ್ಘಕಾಲ ಉಳಿಯುವುದು ಗಗನಯಾತ್ರಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸ್ನಾಯುಗಳು ದುರ್ಬಲವಾಗುತ್ತವೆ.

ಏನೆಲ್ಲ ಸಮಸ್ಯೆ ಕಾಡಬಹುದು?

ಸ್ನಾಯುಗಳು ಕ್ಷೀಣಿಸಬಹುದು

ಬಾಹ್ಯಾಕಾಶದಲ್ಲಿ ಕಡಿಮೆ ಗುರುತ್ವಾಕರ್ಷಣ ಶಕ್ತಿ ಇರುವುದರಿಂದ ತಿಂಗಳಿಗೆ ಸರಿಸುಮಾರು 1-2% ರಷ್ಟು ಸ್ನಾಯುಗಳು ನಷ್ಟವಾಗಬುದು ಎಂದು ಹೇಳಲಾಗುತ್ತದೆ. ಈ ನಷ್ಟವನ್ನು ಸರಿಪಡಿಸಲು ನುರಿತ ವೈದ್ಯರುಗಳು ಇವರ ಮೇಲೆ ನಿಗಾ ಇಡಲಿದ್ದಾರೆ. ಸುನೀತಾ ಮತ್ತು ಬುಚ್ ಅವರನ್ನು ಪ್ರಸ್ತುತ ಹೂಸ್ಟನ್‌ನ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಆರೋಗ್ಯ ತಪಾಸಣೆಗಾಗಿ ಇಬ್ಬರೂ ಕೆಲವು ದಿನಗಳ ಕಾಲ ಕೇಂದ್ರದಲ್ಲಿಯೇ ಉಳಿಯಲಿದ್ದಾರೆ. ಗಗನಯಾತ್ರಿಗಳು ಹಿಂದಿರುಗಿದ ನಂತರ ಇದು ನಿಯಮಿತ ಕಾರ್ಯವಿಧಾನವಾಗಿದೆ. ನಾಸಾ ವೈದ್ಯರು ಅವರನ್ನು ಮನೆಗೆ ಹೋಗಲು ಅನುಮತಿಸುವ ಮೊದಲು ಕೂಲಂಕಷವಾಗಿ ಪರೀಕ್ಷಿಸುತ್ತಾರೆ.

ರಕ್ತಪರಿಚಲನಾ ಮತ್ತು ಹೃದಯನಾಳದ ಬದಲಾವಣೆಗಳು

ಬಾಹ್ಯಾಕಾಶದಲ್ಲಿ, ಹೃದಯವು ಗುರುತ್ವಾಕರ್ಷಣೆಯ ವಿರುದ್ಧ ರಕ್ತವನ್ನು ಪಂಪ್ ಮಾಡುವ ಅಗತ್ಯವಿಲ್ಲದ ಕಾರಣ ಕಡಿಮೆ ಕೆಲಸ ಮಾಡುತ್ತದೆ. ರಕ್ತದ ಪರಿಚಲನೆ ಕೂಡ ಸರಾಗವಾಗುವುದಿಲ್ಲ. ಇದರಿಂದಾಗಿ ಅವರ ಮುಖ ಊದಿಕೊಂಡಿರುತ್ತದೆ ಹಾಗೂ ಕೈಕಾಲುಗಳು ಸಣ್ಣದಾಗಿರುತ್ತದೆ. ಹೆಚ್ಚುವರಿಯಾಗಿ, ತಲೆಯಲ್ಲಿ ದ್ರವಗಳು ಸಂಗ್ರಹವಾಗುತ್ತವೆ, ಇದರಿಂದಾಗಿ ಗಗನಯಾತ್ರಿಗಳು ನಿರಂತರ ಶೀತವನ್ನು ಅನುಭವಿಸುತ್ತಾರೆ. ರಕ್ತಪರಿಚಲನೆಯಲ್ಲಿನ ಬದಲಾವಣೆಗಳು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸಬಹುದು,

ದೃಷ್ಟಿ ಹೀನತೆ

ಅನೇಕ ಗಗನಯಾತ್ರಿಗಳು ತಲೆಯಲ್ಲಿ ದ್ರವದ ಶೇಖರಣೆಯಿಂದಾಗಿ ದೃಷ್ಟಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಸ್ಪೇಸ್‌ಫ್ಲೈಟ್-ಅಸೋಸಿಯೇಟೆಡ್ ನ್ಯೂರೋ-ಆಕ್ಯುಲರ್ ಸಿಂಡ್ರೋಮ್ (SANS) ಎಂದು ಕರೆಯಲ್ಪಡುವ ಈ ಸ್ಥಿತಿಯು ದೃಷ್ಟಿ ಮಂದವಾಗಲು ಕಾರಣವಾಗಬಹುದು ಮತ್ತು ಗಗನಯಾತ್ರಿಗಳು ಶಾಶ್ವತವಾಗಿ ಕನ್ನಡಕವನ್ನು ಧರಿಸಬೇಕಾಗಬಹುದು.

ಸೂಕ್ಷ್ಮ ಚರ್ಮ

ದೀರ್ಘಕಾಲದಿಂದ ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳಿಗೆ ಚರ್ಮದ ಸಮಸ್ಯೆಗಳು ಕಾಡಬಹುದು. ಗಗನಯಾತ್ರಿಗಳ ಚರ್ಮವು ಮೃದುವಾಗುತ್ತದೆ ಮತ್ತು ಹೆಚ್ಚು ಸೂಕ್ಷ್ಮವಾಗುತ್ತದೆ.

ಈ ಸುದ್ದಿಯನ್ನೂ ಓದಿ: Sunita Williams: ಬರೋಬ್ಬರಿ 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿದ್ದ ಸಿಲುಕಿದ್ದ ಸುನಿತಾ ವಿಲಿಯಲ್ಸ್..!; ಇಲ್ಲಿದೆ ನಿಮಗೆ ತಿಳಿಯದ ಸಂಗತಿಗಳು

ಮಾನಸಿಕ ಸವಾಲುಗಳು

ದೈಹಿಕ ಪರಿಣಾಮಗಳ ಹೊರತಾಗಿ, ದೀರ್ಘಾವಧಿಯ ಬಾಹ್ಯಾಕಾಶ ಹಾರಾಟವು ಮಾನಸಿಕ ಮತ್ತು ಭಾವನಾತ್ಮಕ ಸವಾಲುಗಳನ್ನು ಸಹ ತಂದೊಡ್ಡುತ್ತದೆ. ಒಂದೇ ಬಾರಿಗೆ ಪರಿಸರ ಬದಲಾದಂತೆ ಇವರ ಮಾನಸಿಕ ಸ್ಥಿತಿಯ ಮೇಲೆಯೂ ಪರಿಣಾಮ ಬೀರಬಹುದು.