Sunita Williams: ಬರೋಬ್ಬರಿ 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿದ್ದ ಸಿಲುಕಿದ್ದ ಸುನಿತಾ ವಿಲಿಯಲ್ಸ್..!; ಇಲ್ಲಿದೆ ನಿಮಗೆ ತಿಳಿಯದ ಸಂಗತಿಗಳು
ನಾಳೆ ಬಾಹ್ಯಕಾಶದಿಂದ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿ ಬುಚ್ ವಿಲ್ಮೊರ್ ಭೂಮಿಗೆ ಮರಳುತ್ತಿದ್ದಾರೆ. ಬರೋಬ್ಬರಿ 9 ತಿಂಗಳು ಬಾಹ್ಯಾಕಾಶದಲ್ಲೇ ಸಿಲುಕಿದ್ದ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ವಾಪಸ್ಸಾಗಲು ತಡವಾಗಿದ್ದು ಏಕೆ..? ಬಾಹ್ಯಾಕಾಶದಲ್ಲಿ ಅವರ ಜೀವನ ಹೇಗಿತ್ತು...? ಎಂಟು ದಿನಕ್ಕೆಂದು ತೆರಳಿದ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಏನೆಲ್ಲಾ ತೊಂದರೆ ಎದುರಿಸಿದ್ದರು..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್

ನವದೆಹಲಿ: ಒಂದು ವಾರಗಳ ಕಾಲದ ಬಾಹ್ಯಾಕಾಶ ಯಾನಕ್ಕಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ISS) ಪ್ರಯಾಣ ಮಾಡಿದ್ದ ನಾಸಾದ(NASA) ಗಗನಯಾತ್ರಿಗಳಾದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್(Sunita Williams) ಮತ್ತು ಬುಚ್ ವಿಲ್ಮೋರ್ (Sunita Williams-Butch Wilomore) ಈ ಇಬ್ಬರೂ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡು ಬರೋಬ್ಬರಿ 9 ತಿಂಗಳು ಕಳೆಯುತ್ತಿದೆ. ಜೂನ್‌ನಲ್ಲಿ ಇವರಿಬ್ಬರು ಪರೀಕ್ಷಾ ಹಾರಾಟಕ್ಕಾಗಿ ಬಾಹ್ಯಾಕಾಶಕ್ಕೆ ತೆರಳಿದ್ದರು, ಅದಾದ ನಂತರ ಅವರು ಅಲ್ಲಿಂದ ಇನ್ನೂ ಮರಳಿ ಬಂದಿಲ್ಲ. ಅಂದಾಜು 8 ತಿಂಗಳು ಅಲ್ಲಿಯೇ ಉಳಿಯಬೇಕಾದ ಅನಿವಾರ್ಯತೆ ಸಿಲುಕಿ ಇದೀಗ ನಾಳೆ ಬಾಹ್ಯಕಾಶದಿಂದ ಭೂಮಿಗೆ ಮರಳುತ್ತಿದ್ದಾರೆ. ಸುನಿತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿ ಬುಚ್ ವಿಲ್ಮೊರ್ ಅವರು 2024ರ ಜೂನ್ 5 ರಂದು ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೂಲಕ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ತೆರಳಿದ್ದರು. ಆರಂಭದಲ್ಲಿ ಕೇವಲ 8 ದಿನಗಳ ಪ್ರಯಾಣವಾಗಿ ಯೋಜಿಸಲಾಗಿದ್ದ ಈ ಮಿಷನ್, ಸ್ಟಾರ್‌ಲೈನರ್ ನೌಕೆಯಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡುಬಂದ ಕಾರಣದಿಂದ ಸುಮಾರು 9 ತಿಂಗಳುಗಳಿಗಿಂತಲೂ ಹೆಚ್ಚು ಕಾಲ ಅಲ್ಲಿಯೇ ಉಳಿಯಬೇಕಾಯಿತು.
ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಕಳೆದ ಹಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದರು. 8 ದಿನಗಳ ಗಗನಯಾನಕ್ಕೆ ಹೋಗಿದ್ದ ಸುನಿತಾ ವಿಲಿಯಮ್ಸ್ ಹಲವು ತಾಂತ್ರಿಕ ಕಾರಣಗಳಿಂದಾಗಿ ಮರಳಿ ಭೂಮಿಗೆ ಹಿಂದಿರುಗುವುದು ಕಷ್ಟ ಸಾಧ್ಯವಾಗಿತ್ತು. ಆದರೀಗ ಸತತ ಹಲವು ಪ್ರಯತ್ನಗಳ ಬಳಿಕ ನಾಸಾ ಕೊನೆಗೂ ಸುನಿತಾ ಹಾಗೂ ಬುಚ್ ವಿಲ್ಮೋರ್ ಅವರನ್ನು ಬಾಹ್ಯಾಕಾಶದಿಂದ ವಾಪಸ್ ಆಗುತ್ತಿದ್ದು, ಮಾರ್ಚ 15ರಂದು ಇವರನ್ನು ಕರೆತರಲು ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಫಾಲ್ಕನ್-9 ರಾಕೆಟ್ ಯಶಸ್ವಿಯಾಗಿ ಉಡಾವಣೆ ಆಗಿದೆ.
4 ಸದಸ್ಯರನ್ನು ಹೊತ್ತೊಯ್ಯುವ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ (Crew-10 mission) ಅನ್ನು ಈ ರಾಕೆಟ್‌ನ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದು, ಮಾರ್ಚ್ 19ರೊಳಗೆ ಅಂದರೆ ನಾಳೆ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶ ನಿಲ್ದಾಣದಿಂದ ಹೊರಡುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. Crew-10 ಕಾರ್ಯಾಚರಣೆಯ ಅಡಿಯಲ್ಲಿ 4 ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಹೊರಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್ 19 ರಂದು ಬಾಹ್ಯಾಕಾಶ ವಿಮಾನ ನಿಲ್ದಾಣದಿಂದ ಭೂಮಿಯತ್ತ ತೆರಳಲಿದ್ದಾರೆ.
ಈ ಸುದಿರ್ಘ ಪಯಣದ ಮಧ್ಯೆ ನಾನಾ ವಿಚಾರಗಳು ಘಟಿಸಿದ್ದು, ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ವಾಪಸ್ಸಾಗಲು ತಡವಾಗಿದ್ದು ಏಕೆ..?, ಬಾಹ್ಯಾಕಾಶದಲ್ಲಿ ಅವರ ಜೀವನ ಹೇಗಿತ್ತು...? ಎಂಟು ದಿನಕ್ಕೆಂದು ತೆರಳಿದ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಏನೆಲ್ಲಾ ತೊಂದರೆ ಎದುರಿಸಿದ್ದರು..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಯಾರು ಸುನಿತಾ ವಿಲಿಯಮ್ಸ್..?
ಸುನಿತಾ ವಿಲಿಯಮ್ಸ್ ಭಾರತೀಯ ಮೂಲದವರಾಗಿದ್ದು, 1965ರ ಸೆಪ್ಟೆಂಬರ್ 19ರಂದು ಅಮೆರಿಕದ ಒಹಿಯೊದಲ್ಲಿ ಜನಿಸಿದರು. ಅವರ ತಂದೆ ಡಾ. ದೀಪಕ್ ಪಾಂಡ್ಯ ಗುಜರಾತ್‌ನಿಂದ ಅಮೆರಿಕಕ್ಕೆ ವಲಸೆ ಬಂದವರು. ಸುನಿತಾ 1998ರಲ್ಲಿ ನಾಸಾದಲ್ಲಿ ಗಗನಯಾತ್ರಿಯಾಗಿ ಆಯ್ಕೆಯಾದರು ಮತ್ತು ಈವರೆಗೆ ಹಲವು ಮಹತ್ವದ ಬಾಹ್ಯಾಕಾಶ ಮಿಷನ್‌ಗಳಲ್ಲಿ ಭಾಗವಹಿಸಿದ್ದಾರೆ. 2006-2007ರಲ್ಲಿ ತಮ್ಮ ಮೊದಲ ಮಿಷನ್‌ನಲ್ಲಿ ಅವರು 195 ದಿನಗಳ ಕಾಲ ಬಾಹ್ಯಾಕಾಶದಲ್ಲೇ ಕಳೆದು ದಾಖಲೆ ಬರೆದಿದ್ದರು. ಅಲ್ಲದೆ, ಬಾಹ್ಯಾಕಾಶದಲ್ಲಿ ಮ್ಯಾರಥಾನ್ ಓಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಇವರಿಗಿದೆ.
ಕೇವಲ 8 ದಿನಕ್ಕೆ ಅಂತ ತೆರಳಿದ್ದ ಸುನಿತಾ..!
8 ದಿನಕ್ಕೆ ಅಂತಾ ಹೋಗಿದ್ದರು! ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಒಟ್ಟಾಗಿ 2024ರ ಜೂನ್ 5 ರಂದು ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಗಗನಕ್ಕೆ ಹಾರಿದ್ದರು. ಕೇವಲ 8 ದಿನಗಳ ಕಾಲ ಅಲ್ಲಿ ಉಳಿದು, ಕಾರ್ಯಾಚರೆಣೆ ನಡೆಸಲು ಪ್ಲಾನ್ ಮಾಡಲಾಗಿತ್ತು. ಆದರೆ ದಿಢಿರ್ ಅಂತಾ ತಾಂತ್ರಿಕ ಸಮಸ್ಯೆ ಎದುರಾಗಿ ಗಗನಯಾತ್ರಿಗಳನ್ನ ಬಾಹ್ಯಾಕಾಶದಲ್ಲಿಯೇ ಬಿಟ್ಟು ಸ್ಟಾರ್‌ಲೈನರ್ ಭೂಮಿಗೆ ಮರಳಿ ಬಂದಿತ್ತು. ಹೀಗಾಗಿ ಕಳೆದ 9 ತಿಂಗಳಿಂದ ಅಲ್ಲಿಯೇ ಸಿಲುಕಿ ಒದ್ದಾಡಿದ್ದರು ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಅವರು.
ಈ ಸುದ್ದಿಯನ್ನು ಓದಿ; Sunita Williams: ಭೂಮಿಗೆ ಮರಳುತ್ತಿರುವ ಸುನಿತಾ ವಿಲಿಯಮ್ಸ್; 9 ತಿಂಗಳ ವಿಳಂಬಕ್ಕೆ ಕಾರಣವೇನು?
ಸಮಸ್ಯೆ ಆಗಿದ್ದು ಎಲ್ಲಿ..?
ಥಸ್ಟರ್ ವೈಫಲ್ಯ ಮತ್ತು ಹೀಲಿಯಂ ಸೋರಿಕೆಯಿಂದಾಗಿ ಬೋಯಿಂಗ್ ಸ್ಟಾರ್ ಲೈನರ್ ನ ಇದರ ಕ್ಯಾಪ್ಸುಲ್‌ನಲ್ಲಿ ತೊಂದರೆಗಳು ಉಂಟಾಗಿ ಬಾಹ್ಯಾಕಾಶ ನೌಕೆಯು ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿತ್ತು. ಇದಾದ ಬಳಿಕ ಬೋಯಿಂಗ್ ಈ ಸಮಸ್ಯೆಯನ್ನು ಸರಿಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದದರೂ ಕೂಡ ಅದ ಯಶಸ್ವಿಯಾಗಲಿಲ್ಲ. ಇದರಿಂದಾಗಿ ಕೇವಲ 8 ದಿನಗಳಲ್ಲಿ ವಾಪಾಸ್ ಬರಬೇಕಿದ್ದ ಸುನಿತಾ ವಿಲಿಯಮ್ಸ್ ಹಾಗೂ ಸಿಬ್ಬಂದಿ ಅಲ್ಲಿಯೇ ಸಿಲುಕಿಕೊಳ್ಳುವ ಸ್ಥಿತಿ ಉಂಟಾಯಿತ್ತು.
ಹೀಲಿಯಂ ಸೋರಿಕೆಯಾಗಿದ್ದೇ ಹಿನ್ನಡೆಗೆ ಕಾರಣ
ಈ ಇಬ್ಬರೂ ಗಗನಯಾತ್ರಿಗಳು ಬೋಯಿಂಗ್ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆ ಮೂಲಕ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಇವರು ಕೇವಲ 8 ದಿನಗಳ ಕಾಲ ISS ನಲ್ಲಿ ಉಳಿದು ಪುನಃ ಅದೇ ಬಾಹ್ಯಾಕಾಶ ನೌಕೆಯ ಮೂಲಕ ವಾಪಾಸ್ ತೆರಳಬೇಕಿತ್ತು. ಆದ್ರೆ ಐಎಸ್ಎಸ್ (ISS)ಗೆ ಹೋಗುವ ಮಾರ್ಗಮಧ್ಯೆ ಬಹ್ಯಾಕಾಶ ನೌಕೆಯಿಂದ ಹೀಲಿಯಂ ಸೋರಿಕೆ ಮತ್ತು ಥ್ರಸ್ಟರ್ ಸಮಸ್ಯೆಗಳು ಉಂಟಾಯಿತು. ದೊಡ್ಡ ಸಮಸ್ಯೆಯೆಂದರೆ ಹೀಲಿಯಂ ಅನಿಲವು ಸ್ಟಾರ್ ಲೈನರ್ ಕ್ಯಾಪ್ಸುಲ್‌ನ ಐದು ಸ್ಥಳಗಳಲ್ಲಿ ಸೋರಿಕೆಯಾಗಿದ್ದು, . ಹೀಲಿಯಂ ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ಸಿಸ್ಟಮ್ಗೆ ಒತ್ತಡವನ್ನು ಒದಗಿಸುತ್ತದೆ. ಇದಲ್ಲದೆ, ಐದು ಬಾರಿ ಥ್ರಸ್ಟರ್ ವೈಫಲ್ಯ ಸಂಭವಿಸಿದೆ. ಭಾರತೀಯ ಮೂಲದ ಅಮೇರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರು 13 ಜೂನ್ 2024 ರಂದು ಭೂಮಿಗೆ ಮರಳಬೇಕಿತ್ತು. ಆದರೆ ಇಂದು ಮೂರು ತಿಂಗಳಿಗಿಂತ ಹೆಚ್ಚು ಸಮಯ ಕಳೆದಿದೆ ಮತ್ತು ಸುನೀತಾ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.
ಇನ್ನಿತರ ತಾಂತ್ರಿಕ ದೋಷಗಳು
ಬಾಹ್ಯಾಕಾಶ ನೌಕೆ ಐಎಸ್‌ಎಸ್ ಅನ್ನು ಸಮೀಪಿಸುತ್ತಿದ್ದಂತೆ ಅದರ 28 ಥ್ರಸ್ಟರ್‌ಗಳಲ್ಲಿ ಐದು ಅನಿರೀಕ್ಷಿತವಾಗಿ ಸ್ಥಗಿತಗೊಂಡವು. ಹೆಚ್ಚುವರಿಯಾಗಿ, ಇಂಜಿನಿಯರ್‌ಗಳು ಬಾಹ್ಯಾಕಾಶ ನೌಕೆಯ ಸೇವಾ ಮಾಡ್ಯೂಲ್‌ನಲ್ಲಿ ಐದು ಸಣ್ಣ ಹೀಲಿಯಂ ಸೋರಿಕೆಯನ್ನು ಕಂಡುಹಿಡಿದರು, ಇದು ಸ್ಟಾರ್‌ಲೈನರ್ ಸುರಕ್ಷಿತವಾಗಿ ಪ್ರತ್ಯೇಕಗೊಳ್ಳುವುದನ್ನು ಮತ್ತು ಭೂಮಿಗೆ ಹಿಂತಿರುಗುವುದನ್ನು ತಡೆಯುತ್ತದೆ
ಆರೋಗ್ಯ ಸಮಸ್ಯೆ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವಾತಾವರಣ ಸುನಿತಾ ವಿಲಿಯಮ್ಸ್ ಅವರ ಮೇಲೆ ಪ್ರಭಾವ ಬೀರಿತ್ತು. ಅವರ ದೇಹದ ತೂಕವೂ ಇಳಿಮುಖವಾಗಿತ್ತು. ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ಪ್ರಯಾಣ ಮಾಡುವಾಗ ಅವರು 63 ಕಕೆಜಿ ಇದ್ದರು. ಆದರೆ, ಅವಧಿಗಿಂತ ಹೆಚ್ಚಿನ ಕಾಲ ಬಾಹ್ಯಾಕಾಶದಲ್ಲಿ ಇರುವ ಕಾರಣ ಹೈ ಕ್ಯಾಲರಿ ಇಂಟೇಕ್ ಪಡೆದುಕೊಳ್ಳುವುದು ಕಡಿಮೆಯಾಗಿತ್ತು. ಕ್ಯಾಲರಿ ಇಂಟೇಕ್ ಇದ್ದಲ್ಲಿ ಮಾತ್ರವೇ ತೂಕ ಸರಿಯಾಗಿರಲಿ ಸಾಧ್ಯವಾಗಿದ್ದು, ಒಂದು ದಿನಕ್ಕೆ 3500 ರಿಂದ 4 ಸಾವಿರ ಕ್ಯಾಲೋರಿಯ ಆಹಾರ ತಿನ್ನಬೇಕು. ಹಾಗಿದ್ದಾಗ ಮಾತ್ರವೇ ಅವರು ಇದ್ದ ತೂಕವನ್ನು ಮೇಂಟೇನ್ ಮಾಡಲು ಸಾಧ್ಯ. ಇದನ್ನು ಮಾಡಲು ಸಾಧ್ಯವಾಗದೇ ಇದ್ದಾಗ, ವೇಗವಾಗಿ ತೂಕ ಕಡಿಮೆ ಆಗುತ್ತದೆ. ಸುನೀತಾ ವಿಚಾರದಲ್ಲೂ ಹೀಗಾಗಿದ್ದು, ಅವರು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಹಲವು ಸಮಸ್ಯೆಗಳನ್ನು ಎದುರಿಸಿದ್ದರು.
ಬಾಹ್ಯಾಕಾಶದಿಂದ ಬಂದಿಳಿದ ಮೇಲೂ ಹದಗೆಡಲಿರುವ ಆರೋಗ್ಯ
ಇನ್ನೂ ಬಾಹ್ಯಾಕಾಶದಿಂದ ಬಂದಿಳಿದ ಮೇಲೆ ಇವರಿಬ್ಬರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಲಿದ್ದು, ಗುರುತ್ವಾಕರ್ಷಣೆ ಬಲ ಇಲ್ಲದಿರುವ ಬಾಹ್ಯಾಕಾಶದಲ್ಲಿ ದೀರ್ಘಕಾಲದವರೆಗೆ ಉಳಿದಿದ್ದ ಗಗನಯಾತ್ರಿಗಳು ತಮ್ಮ ಪಾದಗಳಲ್ಲಿ ಶಕ್ತಿಯನ್ನು ಕಳೆದುಕೊಳ್ಳಲಿದ್ದಾರೆ. ಅಲ್ಲದೇ ಸುನಿತಾ ವಿಲಿಯಮ್ಸ್ ಕಣ್ಣಿನ ಸಮಸ್ಯೆಗಳನ್ನು ಎದುರಾಗುವ ಸಾಧ್ಯತೆ ಇದ್ದು, ಮೈಕ್ರೋಗ್ರಾವಿಟಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಇದು ಸಂಭವಿಸುತ್ತದೆ. ಗಗನಯಾತ್ರಿಗಳು ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ವಿಕಿರಣಕ್ಕೆ ಸಂಬಂಧಿಸಿದ ಅಪಾಯಗಳನ್ನು ಎದುರಿಸುತ್ತಾರೆ. ಅವರ ದೇಹದ ಮೇಲೆ ಶೂನ್ಯ ಗುರುತ್ವಾಕರ್ಷಣೆಯ ಪರಿಣಾಮ ಇದೆಲ್ಲ ಆಗುತ್ತಿದೆ. ಜೊತೆಗ ಒಂಟಿತನದಿಂದಾಗಿ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಒಟ್ಟಾರೆ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 9 ತಿಂಗಳು 13 ದಿನಗಳ ನಂತರ ಭೂಮಿಗೆ ಮರಳುತ್ತಿದ್ದು, ಸುನೀತಾ ವಿಲಿಯಮ್ಸ್ ಮತ್ತು ಅವರ ತಂಡ ಇರುವ ಬಾಹ್ಯಾಕಾಶ ನೌಕೆ ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್ 19ರಂದು ಬೆಳಗಿನ ಜಾವ 3:27ರ ಸುಮಾರಿಗೆ ಅಮೆರಿಕದ ಫ್ಲೋರಿಡಾ ಕರಾವಳಿಯಲ್ಲಿ ಇಳಿಯಲಿದೆ.