ನ್ಯೂಯಾರ್ಕ್: ಒಂದು ಕಾಲದಲ್ಲಿ ವಿಶ್ವದ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದ (Most Wanted Men) ಅಹ್ಮದ್ ಅಲ್-ಶರಾ (Ahmed al-Sharaa), ಇಂದು ಸಿರಿಯಾದ ಅಧ್ಯಕ್ಷರಾಗಿ ವಿಶ್ವಸಂಸ್ಥೆ (United Nations) ಮುಂಭಾಗದಲ್ಲಿ ಜನರ ಚಪ್ಪಾಳೆಯೊಂದಿಗೆ ಸ್ವಾಗತ ಪಡೆದಿದ್ದಾರೆ. ಅಬು ಮೊಹಮ್ಮದ್ ಅಲ್-ಜೊಲಾನಿ ಎಂಬ ಹೆಸರಿನಿಂದ ಪರಿಚಿತರಾಗಿದ್ದ ಶರಾ ಒಮ್ಮೆ ಸಿರಿಯಾದಲ್ಲಿ ದಾಳಿ ನಡೆಸಿದ್ದಕ್ಕೆ ಆತನ ಮೇಲೆ $10 ಮಿಲಿಯನ್ ಬಹುಮಾನ ಘೋಷಣೆಯಾಗಿತ್ತು. ಈಗ ಅವರು ಶಾಂತಿಯ ಸಂದೇಶವನ್ನು ಸಾರುತ್ತಾ UNನಲ್ಲಿ ಭಾಷಣ ಮಾಡಿದ್ದಾರೆ.
ಶತ್ರುಗಳ ಸಂದರ್ಶನ
ಸೆಪ್ಟೆಂಬರ್ 23 ರಂದು ನ್ಯೂಯಾರ್ಕ್‌ನಲ್ಲಿ ಶರಾ, ಅಮೆರಿಕದ ನಿವೃತ್ತ ಜನರಲ್ ಡೇವಿಡ್ ಪೆಟ್ರಿಯಸ್ ಜೊತೆ ಸಂದರ್ಶನದಲ್ಲಿ ಭಾಗವಹಿಸಿದರು. 2006-2011ರವರೆಗೆ ಶರಾರನ್ನು ಬಂಧಿಸಿದ್ದ ಪೆಟ್ರಿಯಸ್, ಇರಾಕ್‌ನಲ್ಲಿ ಅಮೆರಿಕದ ಸೈನ್ಯದ ನಾಯಕರಾಗಿದ್ದರು. “ನಾವು ಒಂದು ಕಾಲದಲ್ಲಿ ಯುದ್ಧದಲ್ಲಿದ್ದೆವು, ಈಗ ಸಂವಾದದಲ್ಲಿದ್ದೇವೆ” ಎಂದು ಶರಾ ನಗುತ್ತಾ ಹೇಳಿದರು. “ಯುದ್ಧವನ್ನು ಅನುಭವಿಸಿದವನಿಗೆ ಶಾಂತಿಯ ಮೌಲ್ಯ ಗೊತ್ತು,” ಎಂದರು.
ಈ ಸುದ್ದಿಯನ್ನು ಓದಿ: Viral Video: ನಿನ್ನಂಥ ಹಲವರನ್ನು ಇಟ್ಕೊಂಡಿದ್ದೇನೆ... ಮಹಿಳೆಗೆ ಉಬರ್ ಚಾಲಕ ಬೆದರಿಕೆ, ಹಲ್ಲೆಗೆ ಯತ್ನ!
ಶರಾ ಬದಲಾವಣೆ
2012ರಲ್ಲಿ ಶರಾ ಅಲ್-ನುಸ್ರಾ ಫ್ರಂಟ್ ಸ್ಥಾಪಿಸಿ, ಬಶರ್ ಅಲ್-ಅಸದ್ ವಿರುದ್ಧ ಹೋರಾಡಿದರು. 2016ರಲ್ಲಿ ಅಲ್-ಖೈದಾದಿಂದ ದೂರವಾಗಿ, 2017ರಲ್ಲಿ ಹಯಾತ್ ತಹ್ರೀರ್ ಅಲ್-ಶಾಮ್ (HTS) ರಚಿಸಿದರು. HTSನನ್ನು 2018ರಲ್ಲಿ ಅಮೆರಿಕ “ಭಯೋತ್ಪಾದಕ ಸಂಘಟನೆ” ಎಂದಿತ್ತು, ಆದರೆ ಜುಲೈ 2025ರಲ್ಲಿ ಅದನ್ನು ತೆಗೆದುಹಾಕಿತು. ಶರಾ, “ಕೊಲೆಗಾರರಿಂದ ಮಕ್ಕಳನ್ನು ಕಾಪಾಡಲು ಯಾವುದೇ ಸಾಧನವನ್ನು ಬಳಸುವೆ,” ಎಂದು ಹೇಳಿದ್ದಾರೆ.ವಿಶ್ವಸಂಸ್ಥೆಯಲ್ಲಿ ಅವರು, “ಸಿರಿಯಾ ಶಾಂತಿಯ ಅವಕಾಶವಾಗಿದೆ. ರಕ್ತಪಾತಕ್ಕೆ ಕಾರಣರಾದವರಿಗೆ ನ್ಯಾಯ ಒದಗಿಸುವೆ” ಎಂದರು.
ಜನರ ಪ್ರತಿಕ್ರಿಯೆ
ಅಲ್-ಅರೇಬಿಯಾ ವಿಡಿಯೋಗಳಲ್ಲಿ ಜನರು UN ಮತ್ತು ಶರಾ ಅವರ ಹೋಟೆಲ್ ಬಳಿ ಸಿರಿಯಾದ ಧ್ವಜ ಹಿಡಿದು ಚಪ್ಪಾಳೆ ಹೊಡೆಯುತ್ತಿದ್ದರು. ಅಮೆರಿಕದ ಅಧಿಕಾರಿಯೊಬ್ಬರು, “ಶರಾ ಜಗತ್ತಿನ ನಾಯಕನಾಗಲು ಯತ್ನಿಸುತ್ತಿದ್ದಾರೆ, ಇದುವರೆಗೆ ಯಶಸ್ವಿಯಾಗಿದ್ದಾರೆ” ಎಂದಿದ್ದಾರೆ. ಶರಾ ಇಸ್ರೇಲ್‌ನ ದಾಳಿಗಳನ್ನು ಖಂಡಿಸಿ, 1974ರ ಒಪ್ಪಂದಕ್ಕೆ ಬದ್ಧರಿರುವುದಾಗಿ ಹೇಳಿದರು. “ಅಂತಾರಾಷ್ಟ್ರೀಯ ಸಮುದಾಯವು ಸಿರಿಯಾಕ್ಕೆ ಬೆಂಬಲ ನೀಡಲಿ” ಎಂದು ಕೇಳಿದರು.