ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಾಕಿಸ್ತಾನಕ್ಕೆ ಮರ್ಮಾಘಾತ ಗ್ಯಾರಂಟಿ; ದಾಳಿಗೆ ತಾಲಿಬಾನ್ ಆತ್ಮಹತ್ಯಾ ದಳ ಸಜ್ಜು

ಅಫ್ಘಾನಿಸ್ತಾನದ ನಗರಗಳ ಮೇಲೆ ಪಾಕಿಸ್ತಾನ ಬಾಂಬ್ ದಾಳಿ ನಡೆಸಿದ ಬಳಿಕ ಪೂರ್ಣ ಪ್ರಮಾಣದ ಯುದ್ಧಕ್ಕೆ ಎರಡು ರಾಷ್ಟ್ರಗಳು ಸಿದ್ಧಗೊಂಡಿವೆ. ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಇದೀಗ ತಾಲಿಬಾನ್ ಆತ್ಮಹತ್ಯಾ ದಳ ಸಿದ್ಧವಾಗಿದೆ ಎಂದು ತಾಲಿಬಾನ್‌ನ ಉಪ ವಕ್ತಾರ ಹಮ್ದುಲ್ಲಾ ಫಿತ್ರಾಟ್ ಘೋಷಿಸಿದ್ದಾರೆ.

ಸಂಗ್ರಹ ಚಿತ್ರ

ಕಾಬೂಲ್‌: ಅಫ್ಘಾನಿಸ್ತಾನದ (Afghanistan) ಗಡಿ ರೇಖೆ ಡುರಾಂಡ್ ಬಳಿಯ ವಿವಿಧ ಭಾಗಗಳಲ್ಲಿ ಪಾಕಿಸ್ತಾನಿ (Pakistan) ಪಡೆಗಳು ತೀವ್ರವಾದ ದಾಳಿ ನಡೆಸಿದ ಬಳಿಕ ಅಫ್ಘಾನಿಸ್ತಾನದಿಂದಲೂ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತೀಕಾರದ ಕಾರ್ಯಾಚರಣೆಗಳಿಗೆ ಸಿದ್ಧತೆಗಳು ನಡೆದಿವೆ. ಪಾಕಿಸ್ತಾನದ ಮೇಲೆ ದಾಳಿಗೆ ತಾಲಿಬಾನ್ ಆತ್ಮಹತ್ಯಾ ದಳ (Suicide Squad) ಇದೀಗ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿದೆ ಎಂದು ತಾಲಿಬಾನ್‌ನ (Taliban) ಉಪ ವಕ್ತಾರ ಹಮ್ದುಲ್ಲಾ ಫಿತ್ರಾಟ್ ಘೋಷಿಸಿದ್ದಾರೆ. ಪಾಕಿಸ್ತಾನ ಸೇನೆಯು ಅಫ್ಘಾನ್ ನ ಪ್ರಮುಖ ನಗರಗಳಲ್ಲಿರುವ ತಾಲಿಬಾನ್ ಸರ್ಕಾರಿ ಕೇಂದ್ರಗಳ ಮೇಲೆ ಬಾಂಬ್ ದಾಳಿ ನಡೆಸಿದ ಬಳಿಕ ಅಫ್ಘಾನಿಸ್ತಾನ ಈ ಘೋಷಣೆಯನ್ನು ಮಾಡಿದೆ.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಘರ್ಷಣೆಯನ್ನು ಇಸ್ಲಾಮಾಬಾದ್ "ಮುಕ್ತ ಯುದ್ಧ" ಎಂದು ಕರೆದಿದೆ. ಗಡಿಯುದ್ದಕ್ಕೂ ಅನೇಕ ವಲಯಗಳಲ್ಲಿನ ತಾಲಿಬಾನ್ ಪೋಸ್ಟ್‌ಗಳು, ಪ್ರಧಾನ ಕಚೇರಿಗಳು ಮತ್ತು ಮದ್ದುಗುಂಡು ಡಿಪೋಗಳ ಮೇಲೆ ಪಾಕಿಸ್ತಾನ ವಾಯು ಮತ್ತು ನೆಲದ ಮೇಲೆ ದಾಳಿ ನಡೆಸುವುದಾಗಿ ತಿಳಿಸಿದೆ.

Pakistan Drones: ಭಾರತದೊಳಗೆ ನುಗ್ಗಿದ ಪಾಕ್‌ ಡ್ರೋನ್‌ಗಳು, ಹೊಡೆದುರುಳಿಸಿದ ಸೇನೆ

ಪಾಕಿಸ್ತಾನದ ಘೋಷಣೆಯ ಬಳಿಕ ಅಫ್ಘಾನಿಸ್ತಾನವು ತನ್ನ ತಾಲಿಬಾನ್‌ನ ಆತ್ಮಹತ್ಯಾ ದಳವನ್ನು ಸಿದ್ಧಗೊಳಿಸಿದೆ. ಈ ಕುರಿತು ಅಫ್ಘಾನಿಸ್ತಾನದ ನಂಗರ್‌ಹಾರ್‌ನ ಸರ್ಕಾರಿ ಮಾಧ್ಯಮ ಸಂಸ್ಥೆ ಬಖ್ತರ್ ಸುದ್ದಿ ಸಂಸ್ಥೆಯು ಆತ್ಮಹತ್ಯಾ ದಾಳಿಕೋರರ ಬೆಟಾಲಿಯನ್ ಎಂದು ಹೇಳಲಾದ ಚಿತ್ರವನ್ನು ಹಂಚಿಕೊಂಡಿದೆ.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಘರ್ಷಣೆಯಲ್ಲಿ ಎರಡೂ ರಾಷ್ಟ್ರಗಳಿಗೂ ಭಾರಿ ನಷ್ಟವಾಗಿದೆ. 133 ಅಫಘಾನ್ ತಾಲಿಬಾನ್ ಹೋರಾಟಗಾರರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 27 ಪೋಸ್ಟ್‌ಗಳು ನಾಶವಾಗಿವೆ ಮತ್ತು ಒಂಬತ್ತು ಜನರನ್ನು ಸೆರೆಹಿಡಿಯಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ಇನ್ನು ಅಫ್ಘಾನಿಸ್ತಾನ ನಡೆಸಿದ ದಾಳಿಯಲ್ಲಿ 55 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. 19 ಪೋಸ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಪಾಕಿಸ್ತಾನ ಸಶಸ್ತ್ರ ಪಡೆಗಳು ಕೂಡ ಯಾವುದೇ ಆಕ್ರಮಣಕ್ಕೂ ಸಿದ್ದ ಎಂದು ಹೇಳಿದ್ದು, ಸೂಕ್ತ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ನಮಗಿದೆ ಎಂದು ತಿಳಿಸಿದೆ.

ಕಾಬೂಲ್ ಪಾಕಿಸ್ತಾನದೊಳಗೆ ದಾಳಿ ನಡೆಸುವ ಉಗ್ರರಿಗೆ ಆಶ್ರಯ ನೀಡಿದೆ ಎಂಬ ಇಸ್ಲಾಮಾಬಾದ್‌ನ ಆರೋಪವನ್ನು ತಾಲಿಬಾನ್ ತಳ್ಳಿ ಹಾಕಿದೆ. ಇದು ಪಾಕಿಸ್ತಾನದ ಭದ್ರತೆ ಆಂತರಿಕ ಸಮಸ್ಯೆ ಎಂದು ಹೇಳಿದೆ. ಇದೇ ಹಿನ್ನೆಲೆಯಲ್ಲಿ ಇದೀಗ ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.

Afghanistan Vs Pak: ಮುರಿದು ಬಿತ್ತು ಪಾಕಿಸ್ತಾನ, ಅಫ್ಘಾನಿಸ್ತಾನ ನಡುವಿನ ಶಾಂತಿ ಮಾತುಕತೆ

ಪಾಕಿಸ್ತಾನಿ ಪಡೆಗಳು ಕಾಬೂಲ್, ಕಂದಹಾರ್ ಮತ್ತು ಪಕ್ತಿಯಾದ ಕೆಲವು ಭಾಗಗಳಲ್ಲಿ ವಾಯುದಾಳಿಗಳನ್ನು ನಡೆಸಿವೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.

ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ಹಂಚಿಕೊಂಡ ವಿಡಿಯೊದಲ್ಲಿ ಗಡಿಯಲ್ಲಿ ಗುಂಡು ಹಾರಿಸುವುದು, ಕಾಬೂಲ್ ಮೇಲಿನ ದಾಳಿಯನ್ನು ತೋರಿಸಲಾಗಿದೆ. ಇನ್ನೊಂದು ವಿಡಿಯೊದಲ್ಲಿ ಕಟ್ಟಡವೊಂದು ಬೆಂಕಿಗೆ ಆಹುತಿಯಾಗಿರುವುದನ್ನು ತೋರಿಸಲಾಗಿದೆ. ಪಕ್ತಿಯಾ ಪ್ರಾಂತ್ಯದಲ್ಲಿರುವ ತಾಲಿಬಾನ್ ಪ್ರಧಾನ ಕಚೇರಿಯಾಗಿದೆ ಎನ್ನಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author