ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

12th Global Achievers Awards in South Africa: ಭಟ್ಟರಿಂದ ಸಮಾಜ ಕಟ್ಟುವ ಕಾರ್ಯ

ಹೃದಯ ಹೃದಯಗಳ ವಾತ್ಸಲ್ಯಕ್ಕೆ ಕೊಂಡಿಯ ಆವಶ್ಯಕತೆ ಇದೆಯೇ? ಇದೆ ಅದು ಯಾವಾಗ ಎಂದರೆ ಒಬ್ಬರನ್ನೊಬ್ಬರು ಅರಿತಾಗ ಮಾತ್ರ ಎನ್ನುವ ನಾಣ್ಣುಡಿ ಇದೆ. ಇದಕ್ಕೆ ಈಗ ವಿಶ್ವೇಶ್ವರ ಭಟ್ ಸಾಕ್ಷಿಯಾಗಿದ್ದಾರೆ. ವಿಶ್ವೇಶ್ವರ ಭಟ್ ಅವರನ್ನು ನಾವು ಸಂಪಾದಕ ರಾಗಿ ನೋಡುತ್ತೇವೆ. ಅವರು ವಿಶ್ವಕೋಶ ಎನ್ನುವುದು ನನ್ನ ಅಭಿಪ್ರಾಯ.

ವಿಶ್ವೇಶ್ವರ ಭಟ್ಟರನ್ನು ನಾವು ಕೇವಲ ಸಂಪಾದಕರಾಗಿ ನೋಡುತ್ತೇವೆ. ಆದರೆ ಅವರು ವಿಶ್ವಕೋಶ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರು ತಮ್ಮ ಭಾಷಣ ದಲ್ಲಿ, ವಿಶ್ವೇಶ್ವರ ಭಟ್ ಅವರೊಂದಿಗೆ ಯಾವ ರೀತಿ ಬಾಂಧವ್ಯ ಆರಂಭವಾಯಿತು, ಈ ಸಂಬಂಧ ಹೇಗೆ ಗಟ್ಟಿಯಾಯಿತು ಎನ್ನುವ ಬಗ್ಗೆ ಮನದಾಳದ ಮಾತು ಹೇಳಿದರು.

ಹೃದಯ ಹೃದಯಗಳ ವಾತ್ಸಲ್ಯಕ್ಕೆ ಕೊಂಡಿಯ ಆವಶ್ಯಕತೆ ಇದೆಯೇ? ಇದೆ ಅದು ಯಾವಾಗ ಎಂದರೆ ಒಬ್ಬರನ್ನೊಬ್ಬರು ಅರಿತಾಗ ಮಾತ್ರ ಎನ್ನುವ ನಾಣ್ಣುಡಿ ಇದೆ. ಇದಕ್ಕೆ ಈಗ ವಿಶ್ವೇಶ್ವರ ಭಟ್ ಸಾಕ್ಷಿಯಾಗಿದ್ದಾರೆ. ವಿಶ್ವೇಶ್ವರ ಭಟ್ ಅವರನ್ನು ನಾವು ಸಂಪಾದಕ ರಾಗಿ ನೋಡುತ್ತೇವೆ. ಅವರು ವಿಶ್ವಕೋಶ ಎನ್ನುವುದು ನನ್ನ ಅಭಿಪ್ರಾಯ.

ವಿಶ್ವವಾಣಿಿ ಪತ್ರಿಕೆ ವಿಶ್ವಕೋಶ. ಅವರು ನಾಡಿಗೇ ಮಾರ್ಗದರ್ಶಕರು ಎಂದು ಹೇಳಿದರು. ಪತ್ರಿಕೋದ್ಯಮದಲ್ಲಿ ಯಾವ ರೀತಿ ಸ್ವಾರ್ಥ ಇದೆ, ಸಂಬಂಧಗಳೆಲ್ಲ ಯಾವ ರೀತಿ ಕಳಚಿ ಬಿದ್ದಿದೆ, ನಮ್ಮ ಮಕ್ಕಳನ್ನು ಮುಂದೆ ಯಾವ ರೀತಿ ಕಾಪಾಡಬೇಕು. ಈ ವಿಚಾರದಲ್ಲಿ ಎಷ್ಟು ಚಿಂತನೆ ನಡೆಸಿದರೂ ಕಡಿಮೆಯೇ. ನಾವು ಸ್ವಸ್ಥ ಸಮಾಜವನ್ನು ಕಟ್ಟಬೇಕಿದೆ.

ಇದನ್ನೂ ಓದಿ: 12th Global Achievers Awards in South Africa: ಇದೊಂದು ಸಾಂಸ್ಕೃತಿಕ ವಿನಿಮಯ

ನಮ್ಮೆಲ್ಲ ಹಿರಿಯರು ಅಕ್ಷರ ಕಲಿಯಲಿಲ್ಲ, ಓದಲಿಲ್ಲ, ಬರೆಯಲಿಲ್ಲ. ಆದರೆ ಉತ್ತಮ ಸಮಾಜವನ್ನು ಕಟ್ಟಿದರು. ಹಣ ಮಾಡುವುದೊಂದೇ ಮುಖ್ಯವಲ್ಲ. ನಾವೆಲ್ಲ ಉತ್ತಮವಾಗಿ ಬದುಕಿದ್ದೇವೆ. ಮುಂದೆ ನಮ್ಮ ಮಕ್ಕಳ ಪೀಳಿಗೆಯೂ ಉತ್ತಮ ಸಮಾಜದಲ್ಲಿ ಬದುಕಬೇಕಿದೆ. ಈ ನಿಟ್ಟಿನಲ್ಲಿ ವಿಶ್ವೇಶ್ವರ ಭಟ್ಟರು ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಸಮಾಜವನ್ನು ಎಚ್ಚರಿಸಲು ಮುಂದಾಗಿದ್ದಾರೆ. ಬಂಧುತ್ವವವನ್ನು ಉಳಿಸಿಕೊಂಡು ಹೋಗ ಬೇಕು ಎನ್ನುವ ಕಾಳಜಿ ವಹಿಸಿದ್ದಾರೆ ಎಂದರು.

‘ಏನಾದರೂ ಆಗು, ನೀ ಬಯಸಿದಂತಾಗು

ಏನಾದರೂ ಆಗು, ನೀ ಇಚ್ಛಿಸಿದಂತಾಗು

ಏನಾದರೂ ಸರಿ ಮೊದಲು ಮಾನವನಾಗು’

ಎನ್ನುವ ಕವನ ಉಲ್ಲೇಖಿಸಿದ ಭೋಜೇಗೌಡ,

ಮಾನವೀಯತೆಯ ಮೌಲ್ಯಗಳನ್ನು ಕಳೆದುಕೊಂಡಿದ್ದೇವೆ. ಅಕ್ಕ-ತಂಗಿಯರ ಸಂಬಂಧ ಕಳೆದುಕೊಂಡಿದ್ದೇವೆ. ಅಣ್ಣ- ತಮ್ಮಂದಿರ ಸಂಬಂಧ ಕಳೆದುಕೊಂಡಿದ್ದೇವೆ.

ಗುರು-ಶಿಷ್ಯರ ಸಂಬಂಧ ಕಳೆದುಕೊಂಡಿದ್ದೇವೆ. ಸ್ನೇಹಿತರ ಸಂಬಂಧ ಕಳೆದುಕೊಂಡಿದ್ದೇವೆ. ಈ ಸಂಬಂಧ ಉಳಿಯಬೇಕು ಎಂದರೆ ವಿಶ್ವೇಶ್ವರ ಭಟ್ ನಡೆಸುತ್ತಿರುವ ಕಾರ್ಯಕ್ರಮ ನಿತ್ಯ ನಿರಂತರವಾಗಬೇಕು. ಇಂತಹ ಕೆಲಸ ಇನ್ನಷ್ಟು ಆಗಬೇಕು. ಜಿ.ಎಸ್.ಶಿವರುದ್ರಪ್ಪ ಒಂದು ಕಡೆ ಹೇಳುತ್ತಾರೆ,

‘ಎಲ್ಲಿದೆ ನಂದನ ಎಲ್ಲಿದೆ ಬಂಧನ

ಎಲ್ಲಾ ಇವೆ ಈ ನಮ್ಮೊಳಗೆ

ಒಳಗಿನ ತಿಳಿಯನು ಕಲಕದೆ ಇದ್ದರೆ

ಅಮೃತದ ಸವಿಯಿದೆ ನಾಲಗೆಗೆ’

ಅಂದರೆ ಎಲ್ಲ ಇದೆ ನಮ್ಮೊಳಗೆ. ನಾನು ಎಂಬ ಸ್ವಾರ್ಥದಿಂದ ಎಲ್ಲರೂ ದೂರವಾಗುತ್ತಾರೆ.

ಇದೇ ಕಾರಣಕ್ಕೆ ವಿಶ್ವವಾಣಿಯ ಈ ಕಾರ್ಯಕ್ರಮ ಪ್ರಸ್ತುತವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಕುವೆಂಪು ಅವರ ಆಶಯದಂತೆ ವಿಶ್ವವಾಣಿ ಕಾರ್ಯ ನಿರ್ವಹಿಸುತ್ತಿದೆ. ಉತ್ತಮವಾದ ನಾಡನ್ನು ಕಟ್ಟಲು ಇಂತಹ ಕಾರ್ಯಕ್ರಮ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ವಿಶ್ವೇಶ್ವರ ಭಟ್ ಅವರದ್ದು ಅತ್ಯುತ್ತಮ ಲೇಖನಗಳು. ಅವರ ತಮ್ಮ ಬರಹಗಳ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಮಾನವ ಜನ್ಮ ದೊಡ್ಡದು. ಹೀಗಾಗಿ ನಾವು ಏನಾದರೂ ಸಾಧನೆ ಮಾಡಬೇಕು. ಸಮಾಜಕ್ಕೆ ಒಳಿತು ಮಾಡಬೇಕು. ನಾವೆಲ್ಲ ನಮ್ಮ ಕಾರ್ಯ ಕ್ಷೇತ್ರದಲ್ಲಿ ಕಾಯ, ವಾಚ, ನಿಷ್ಠೆ, ಪ್ರಾಮಾಣಿಕತೆಯಿಂದ ಈ ನಾಡಿನ ದಾಸಾನುದಾಸರಾಗಿ ವಿಶ್ವೇಶ್ವರ ಭಟ್, ಜಗದೀಶ್ ಶೆಟ್ಟರ್, ಸುಕುಮಾರ್ ಶೆಟ್ಟಿ ಅವರಂತ ಹವರ ಜತೆ ಕೆಲಸ ಮಾಡಿದರೆ ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ‌

ಅದಕ್ಕಾಗಿ ವಿಶ್ವವಾಣಿ ಕೆಲಸ ಇಂದು ಬಹಳ ಪ್ರಸ್ತುತ ಎನಿಸಿಕೊಂಡಿದೆ. ಅದು ನಿರಂತರ ವಾಗಿರಲಿ. ಪತ್ರಿಕೆ ಓದುವವರ ಸಂಖ್ಯೆ ಕೋವಿಡ್ ಬಳಿಕ ಸ್ವಲ್ಪ ಕಡಿಮೆಯಾಗಿದೆ. ಆದರೂ ಇಂದಿಗೂ ಓದುಗರಿದ್ದಾರೆ ಎಂದರೆ ಅದಕ್ಕೆ ಕಾರಣ ವಿಶ್ವೇಶ್ವರ ಭಟ್ ಅವರಂತಹ ಲೇಖಕರು. ಈಗಲೂ ಅವರ ಲೇಖನಗಳನ್ನು ಕಾದು ಓದುವವರಿದ್ದಾರೆ.

ಸಂಬಂಧ ಉಳಿಯದಿದ್ದರೆ ಸಮಾಜ ಕಟ್ಟಲು ಸಾಧ್ಯವಿಲ್ಲ. ಅಂತಹ ಸಂಬಂಧ ಉಳಿಯಲು ಇಂತಹ ಕಾರ್ಯಕ್ರಮ ನಡೆಯಲಿ. ‘ವಿಶ್ವವಾಣಿ’ ಕುಟುಂಬದ ಜತೆ ನಾನು ಯಾವತ್ತೂ ಇರುತ್ತೇನೆ. ಹಿಂದೆ ನನಗೆ ಸುಪ್ರೀಂ ಕೋರ್ಟ್‌ನ ಚೀಫ್ ಜಸ್ಟಿಸ್ ಜತೆ ಸನ್ಮಾನ ಮಾಡಿದ್ದರು. ಅದಕ್ಕಿಂತ ಹೆಚ್ಚಿನ ಸಂತೋಷ ಈ ಅವಾರ್ಡ್ ಸಿಕ್ಕಾಗ ನನಗೆ ಆಗಿದೆ ಎಂದರು.