12th Global Achievers Awards in South Africa: ಇದೊಂದು ಸಾಂಸ್ಕೃತಿಕ ವಿನಿಮಯ
ಭಾರತದ ರಾಷ್ಟ್ರಪಿತ ಎನಿಸಿಕೊಂಡ ಮಹಾತ್ಮ ಗಾಂಧಿ ಅವರನ್ನು ಸ್ವಾತಂತ್ರ್ಯ ಹೋರಾಟ ಗಾರನಾಗಿ ರೂಪಿಸಿ ನೀಡಿದ ದೇಶ ನಮ್ಮದು ಎಂಬುದು ನಮ್ಮ ಹೆಮ್ಮೆ ಎಂದು ಸೌತ್ ಆಫ್ರಿಕನ್ ಟೂರಿಸಂನ ರೀಜನಲ್ ಜನರಲ್ ಮ್ಯಾನೇಜರ್ ಶ್ರೀ ಕೊಬಾನಿ ಗಾಡ್ಸ್‌ವಿಲ್ ಮ್ಯಾಂಕೋಟ್ವ್ಯಾ ಅವರು ಹೇಳಿದರು.
-
ಭಾರತ ದೇಶದ ಕರ್ನಾಟಕದ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಅನ್ನು ದಕ್ಷಿಣ ಆಫ್ರಿಕಾದಲ್ಲಿ ನೀಡಲು ಉದ್ದೇಶಿಸಿ, ಇಷ್ಟೊಂದು ಪ್ರಶಸ್ತಿ ಪುರಸ್ಕೃತರನ್ನು ಒಟ್ಟು ಗೂಡಿಸಿ ಕರೆತಂದಿರುವುದು ನಮ್ಮ ಪಾಲಿಗೆ ವಿಶೇಷ ಗೌರವದ ಕ್ಷಣ. ದಕ್ಷಿಣ ಆಫ್ರಿಕಾ ಹಾಗೂ ಭಾರತದ ಬಾಂಧವ್ಯ ಇಂದು ನಿನ್ನೆಯದ್ದಲ್ಲ.
ಭಾರತದ ರಾಷ್ಟ್ರಪಿತ ಎನಿಸಿಕೊಂಡ ಮಹಾತ್ಮ ಗಾಂಧಿ ಅವರನ್ನು ಸ್ವಾತಂತ್ರ್ಯ ಹೋರಾಟ ಗಾರನಾಗಿ ರೂಪಿಸಿ ನೀಡಿದ ದೇಶ ನಮ್ಮದು ಎಂಬುದು ನಮ್ಮ ಹೆಮ್ಮೆ ಎಂದು ಸೌತ್ ಆಫ್ರಿಕನ್ ಟೂರಿಸಂನ ರೀಜನಲ್ ಜನರಲ್ ಮ್ಯಾನೇಜರ್ ಶ್ರೀ ಕೊಬಾನಿ ಗಾಡ್ಸ್‌ವಿಲ್ ಮ್ಯಾಂಕೋಟ್ವ್ಯಾ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ,ನಿಮ್ಮ ಸ್ವಾತಂತ್ರ್ಯಪೂರ್ವ ಕಾಲ ದಿಂದಲೂ ನಮ್ಮ ಕೊಡುಕೊಳ್ಳುವಿಕೆಗಳು ಮಾನವೀಯ ನೆಲೆಯಲ್ಲಿ ಹಾಗೂ ವ್ಯಾವಹಾರಿಕ ನೆಲೆಯಲ್ಲಿ ವ್ಯಾಪಕವಾಗಿ ವಿಸ್ತರಿಸಿವೆ. ಉಭಯ ದೇಶಗಳೂ ಇದರಿಂದ ಲಾಭ ಪಡೆದಿವೆ. ಭಾರತದ ಅನೇಕ ಕಡೆಗಳಿಗೆ ನಮ್ಮ ದೇಶದ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸ ಮಾಡುತ್ತಿದ್ದಾರೆ.
ಇದನ್ನೂ ಓದಿ: 12th Global Achievers Awards in South Africa: ವಿದೇಶಿ ನೆಲದಲ್ಲಿ ಕನ್ನಡದ ಕಾರ್ಯಕ್ರಮ: ಶೆಟ್ಟರ್
ಹಾಗೇ ಭಾರತದ ಸಾವಿರಾರು ಮಂದಿ ನಮ್ಮಲ್ಲಿಗೆ ಪ್ರತಿವರ್ಷ ವನ್ಯಜೀವಿ ಪ್ರವಾಸೋ ದ್ಯಮಕ್ಕಾಗಿ ಬರುತ್ತಾರೆ. ಉಭಯ ದೇಶಗಳ ಜನಪ್ರಿಯ ನಾಯಕರ ಬಾಂಧವ್ಯ ಉತ್ತಮ ವಾಗಿದೆ. ವಿಶ್ವವಾಣಿ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದ ಮೂಲಕ ಈ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯ ಆಗುತ್ತಿದೆ.
ಇದೊಂದು ಸಾಂಸ್ಕೃತಿಕ ವಿನಿಮಯವೂ ಆಗಿದೆ. ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರ ದಲ್ಲಿ ನಿಮ್ಮ ಸಹಭಾಗಿತ್ವವನ್ನು ಇನ್ನಷ್ಟು ಅಪೇಕ್ಷಿಸುತ್ತೇವೆ ಹಾಗೂ ನಾವೂ ಅದರಲ್ಲಿ ಕೈಜೋಡಿಸುತ್ತೇವೆ. ಮುಂದಿನ ವರ್ಷವೂ ವಿಶ್ವವಾಣಿ ಕಾರ್ಯಕ್ರಮ ಇಲ್ಲೇ ಆಗಲಿ ಎಂದು ಹೇಳಿದರು.