ಗಾಜಾ: ಹಮಾಸ್ (hamas) ನಡೆಸಿದ ದಾಳಿಯ ಮೂರನೇ ವಾರ್ಷಿಕೋತ್ಸವದ ದಿನವಾದ ಅಕ್ಟೋಬರ್ 7ರಂದು ಇಸ್ರೇಲ್ (Israel Strikes) ಗಾಜಾ (gaza) ಮೇಲೆ ಹೊಸ ದಾಳಿಗಳನ್ನು ನಡೆಸಿದೆ. ಈ ದಾಳಿಗಳಲ್ಲಿ ಐವರು ಸಾವನ್ನಪ್ಪಿದ್ದಾರೆ. ಮೂರು ವರ್ಷಗಳ ಹಿಂದೆ 'ನೋವಾ' ಸಂಗೀತ ಉತ್ಸವದಲ್ಲಿ (Nova music festival) ಹತ್ಯೆಗೀಡಾದ 300ಕ್ಕೂ ಹೆಚ್ಚು ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಲು ಕುಟುಂಬ ಸದಸ್ಯರು ಮುಂಜಾನೆ ಸೇರಿದ್ದಾಗ ಈ ಘಟನೆ ನಡೆದಿದೆ. ಮೃತರಲ್ಲಿ ಒಬ್ಬರನ್ನು ಮೊಹಮ್ಮದ್ ತಮೌಸ್ ಎಂದು ಗಾಜಾದ ನಾಗರಿಕ ರಕ್ಷಣಾ ದಳ (Gaza's civil defence) ಗುರುತಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಪ್ಯಾಲೆಸ್ಟೀನಿಯನ್ ಅಧಿಕಾರಿಗಳು, ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಸಂಘರ್ಷ ಪ್ರಾರಂಭವಾಗಿ ಅಕ್ಟೋಬರ್ 7ರಂದು ಮೂರು ವರ್ಷ. ಇದೇ ದಿನ ಇಸ್ರೇಲ್ ಗಾಜಾ ಮೇಲೆ ಹೊಸ ದಾಳಿಗಳನ್ನು ನಡೆಸಿತು. ಈ ದಾಳಿಗಳಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ʼʼನರೇಂದ್ರ ಮೋದಿ ವಿಷ್ಣುವಿನ ಅವತಾರʼʼ: ಭಾರತದ ಪ್ರಧಾನಿಯನ್ನು ಬಣ್ಣಿಸಿದ ಭೂತಾನ್ ಪಿಎಂ ತ್ಶೆರಿಂಗ್ ತೊಬ್ಗೆ
ಕಳೆದ ಮೂರು ವರ್ಷಗಳ ಹಿಂದೆ 'ನೋವಾ' ಸಂಗೀತ ಉತ್ಸವದಲ್ಲಿ ಹತ್ಯೆಗೀಡಾದ 300ಕ್ಕೂ ಹೆಚ್ಚು ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಲು ಕುಟುಂಬ ಸದಸ್ಯರು ಮುಂಜಾನೆ ಸೇರಿದ್ದಾಗ ಗಾಜಾ ಪ್ರದೇಶದಲ್ಲಿ ಜೋರಾದ ಸ್ಫೋಟದ ಶಬ್ದಗಳು ಕೇಳಿಬಂದವು. ಇದರ ಬಳಿಕ ಇಸ್ರೇಲಿ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯು ರಾತ್ರಿಯ ವೇಳೆ ವರದಿ ನೀಡಿತ್ತು.
ಮೃತರಲ್ಲಿ ಒಬ್ಬರಾಗಿರುವ ಮೊಹಮ್ಮದ್ ತಮೌಸ್ ಅವರು ಹಮಾಸ್ ನ ತುರ್ತು ರಕ್ಷಣಾ ಸೇವೆಯಾಗಿ ಕಾರ್ಯನಿರ್ವಹಿಸುವ ಸಂಸ್ಥೆಯ ಸ್ವಯಂಸೇವಕರಾಗಿದ್ದರು ಎಂದು ಗಾಜಾದ ನಾಗರಿಕ ರಕ್ಷಣಾ ದಳ ತಿಳಿಸಿದೆ.
ದಾಳಿಯ ಕುರಿತು ಮಾಹಿತಿ ನೀಡಿರುವ ಇಸ್ರೇಲ್ ಸೇನೆ, ಉತ್ತರ ಗಾಜಾ ಪಟ್ಟಿಯ ಕಮಲ್ ಅಡ್ವಾನ್ ಆಸ್ಪತ್ರೆಯಿಂದ ಹೊರಬಂದಿದ್ದ ಇಬ್ಬರು ಹಮಾಸ್ ಉಗ್ರರನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಅವರನ್ನು ಹತ್ಯೆ ಮಾಡಲಾಗಿದೆ. ಮೃತರಲ್ಲಿ ಒಬ್ಬರು ಇಸ್ರೇಲಿ ರಕ್ಷಣಾ ಪಡೆ ಸೈನಿಕರಿಗೆ ಹಾನಿ ಮಾಡುವ ಉದ್ದೇಶದಿಂದ ಹಳದಿ ರೇಖೆ ಪ್ರದೇಶದಲ್ಲಿ ಸ್ಫೋಟಕಗಳನ್ನು ಅಳವಡಿಸಿದ್ದರು. ಗಾಜಾ ಪಟ್ಟಿಯಲ್ಲಿ ಹಮಾಸ್ ಮತ್ತು ಇಸ್ರೇಲ್ ಸೇನೆಯ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ಹಳದಿ ರೇಖೆ ಗುರುತಿಸುತ್ತದೆ ಎಂದು ಹೇಳಿದೆ.
ದಾಳಿಯಲ್ಲಿ ಮೃತಪಟ್ಟವರಲ್ಲಿ ಒಬ್ಬರಾದ ಮೊಹಮ್ಮದ್ ತಮೌಸ್, ಹಮಾಸ್‌ನ ಮಿಲಿಟರಿ ವಿಭಾಗದಲ್ಲಿ ಸ್ನೈಪರ್ ಆಗಿದ್ದು, ನಾಗರಿಕ ರಕ್ಷಣಾ ಸಂಸ್ಥೆಗೂ ಸೇವೆ ಸಲ್ಲಿಸುತ್ತಿದ್ದರು. ಪ್ಯಾಲೆಸ್ಟೀನಿಯನ್ ನ ದಕ್ಷಿಣ ನಗರವಾದ ಖಾನ್ ಯೂನಿಸ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 60 ವರ್ಷದ ಹಶಾಮ್ ಇಬ್ರಾಹಿಂ ಅಬು ಮುಸ್ತಫಾ ಎಂಬವರು ಮೃತಪಟ್ಟಿದ್ದು, ಇತರ ಹಲವು ಮಂದಿ ಗಾಯಗೊಂಡಿದ್ದಾರೆ. ಖಾನ್ ಯೂನಿಸ್‌ನ ದಕ್ಷಿಣ ಭಾಗದಲ್ಲಿ ನಡೆದ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಜಿಯಾದ್ ಝಾರಾಬ್ ಎಂಬವರು ಮೃತಪಟ್ಟಿದ್ದಾರೆ. ಅಲ್-ಬುರಾಕ್ ಶಿಬಿರದಲ್ಲಿದ್ದ ಡೇರೆಯೊಂದರ ಮೇಲೆ ನಡೆದ ದಾಳಿಯಲ್ಲಿ ಮತ್ತೋರ್ವ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯ ಆಸ್ಪತ್ರೆ ಮೂಲಗಳು ತಿಳಿಸಿವೆ.
ಗಾಜಾದಲ್ಲಿ ಯುದ್ಧ ಆರಂಭವಾಗಿ ಮೂರು ವರ್ಷಗಳು ಕಳೆದಿವೆ. 2025ರ ಅಕ್ಟೋಬರ್ ನಲ್ಲಿ ಅಮೆರಿಕದ ಮಧ್ಯಸ್ಥಿಕೆಯ ಬಳಿಕ ಕದನ ವಿರಾಮ ಜಾರಿಗೊಳಿಸಿದ್ದರೂ ಆಗಾಗ್ಗೆ ದಾಳಿಗಳು ನಡೆಯುತ್ತಲೇ ಇದೆ. ಇಸ್ರೇಲ್ ಗಾಜಾ ಪಟ್ಟಿಯನ್ನು ವಾಸಕ್ಕೆ ಯೋಗ್ಯವಲ್ಲದ ಸ್ಥಳವನ್ನಾಗಿ ಮಾಡಿದೆ ಎಂದು ಗಾಜಾ ನಗರದ ನಿವಾಸಿ ಮಹಮೂದ್ ಅಬು ಹಸಿರಾ ಎಂಬವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಗಾಜಾದ ಬಹುತೇಕ ಜನರನ್ನು ಸ್ಥಳಾಂತರಿಸಲಾಗಿದೆ. 74,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕದನ ವಿರಾಮ ಘೋಷಣೆಯಾದ ಮೇಲೆ ಇಸ್ರೇಲ್ ಪಡೆಗಳು ಗಾಜಾದಲ್ಲಿ 1,460 ಕ್ಕೂ ಹೆಚ್ಚು ಜನರನ್ನು ಕೊಂದಿವೆ ಎಂದು ವಿಶ್ವಸಂಸ್ಥೆಯು ವಿಶ್ವಾಸಾರ್ಹ ಮೂಲ, ಹಮಾಸ್‌ನ ಆಡಳಿತದಲ್ಲಿರುವ ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.