ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ಅಂದು ಒಬಾಮಾ ಮೇಲೆ ಗೂಬೆ ಕೂರಿಸಿದ್ದ ಟ್ರಂಪ್‌ ಇಂದು ಮಾಡಿದ್ದೇನು? ನೆಟ್ಟಿಗರಿಂದ ಪ್ರಶ್ನೆ; ವೈರಲ್‌ ಆಗ್ತಿದೆ 2011ರ ಟ್ವೀಟ್‌!

ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಕದನಕ್ಕೆ ಅಮೆರಿಕ ಸೇರ್ಪಡೆಗೊಂಡಿದೆ. ಭಾನುವಾರ ಇರಾನ್‌ನ ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ ಮಾಡಿ ಧ್ವಂಸಗೊಳಿಸಿದೆ. ಇರಾನ್‌ ಈ ಕೂಡಲೇ ತನ್ನ ಪರಮಾಣು ಚಟುವಟಿಕೆಗಳನ್ನು ನಿಲ್ಲಿಸಬೇಕು. ಇಲ್ಲವಾದರೆ ಅಮೆರಿಕ ದಾಳಿ ನಡೆಸುತ್ತದೆ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದರು.

ಒಬಾಮಾ ಮೇಲೆ ಆರೋಪಿಸಿದ್ದ ಟ್ರಂಪ್‌ ಮಾಡಿದ್ದೇನು? ನೆಟ್ಟಿಗರಿಂದ ಪ್ರಶ್ನೆ

Profile Vishakha Bhat Jun 23, 2025 12:43 PM

ವಾಷಿಂಗ್ಟನ್‌: ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಕದನಕ್ಕೆ ಅಮೆರಿಕ ಸೇರ್ಪಡೆಗೊಂಡಿದೆ. ಭಾನುವಾರ ಇರಾನ್‌ನ ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ ಮಾಡಿ ಧ್ವಂಸಗೊಳಿಸಿದೆ. ಇರಾನ್‌ ಈ ಕೂಡಲೇ ತನ್ನ ಪರಮಾಣು ಚಟುವಟಿಕೆಗಳನ್ನು ನಿಲ್ಲಿಸಬೇಕು. ಇಲ್ಲವಾದರೆ ಅಮೆರಿಕ ದಾಳಿ ನಡೆಸುತ್ತದೆ ಎಂದು ಟ್ರಂಪ್‌ (Donald Trump) ಎಚ್ಚರಿಕೆ ನೀಡಿದ್ದರು. ಆದರೂ ಇರಾನ್‌ ಇದಕ್ಕೆ ಮಣೆ ಹಾಕಿರಲಿಲ್ಲ. ಇದೀದ ಅಮೆರಿಕ ದಾಳಿ ನಡೆಸಿ 3 ಪರಮಾಣು ನೆಲೆಗಳನ್ನು ನಾಶ ಮಾಡಿದೆ. ಇರಾನ್‌ ಮೇಲೆ ದಾಳಿ ನಡೆಸುತ್ತಿದ್ದಂತೆ 2011 ರಲ್ಲಿ ಟ್ರಂಪ್‌ ಮಾಡಿದ್ದ ಟ್ವೀಟ್‌ ಒಂದು ಇದೀಗ ವೈರಲ್‌ ಆಗಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ 2011 ರಲ್ಲಿ ಅಂದಿನ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಕುರಿತು ಟ್ವೀಟ್‌ ಮಾಡಿದ್ದರು. ಬರಾಕ್ ಒಬಾಮಾ ಅವರು ಮತ್ತೆ ಆಯ್ಕೆಯಾಗಲು ಇರಾನ್ ಜೊತೆ ಯುದ್ಧ ಬಯಸಿದ್ದರು ಎಂದು ಟ್ರಂಪ್ ಹೇಳಿದ್ದರು. ಒಬಾಮಾಗೆ ಮತ್ತೆ ಅಧಿಕಾರಕ್ಕೇರಲು ಅವರು ಯುದ್ಧ ಮಾಡುತ್ತಾರೆ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದರು. 2011 ರ ವೀಡಿಯೊದಲ್ಲಿ, ಟ್ರಂಪ್ ಒಬಾಮಾ ಅವರಿಗೆ "ಮಾತುಕತೆ ನಡೆಸುವ ಸಾಮರ್ಥ್ಯವಿಲ್ಲ" ಎಂದು ಹೇಳಿದ್ದರು, ಅಧ್ಯಕ್ಷರು ತಮ್ಮ ಅಧಿಕಾರದ ಸ್ಥಾನವನ್ನು ಉಳಿಸಿಕೊಳ್ಳಲು ಇರಾನ್ ವಿರುದ್ಧ ಯುದ್ಧ ಪ್ರಾರಂಭಿಸುತ್ತಾರೆ. ಅವರು ದುರ್ಬಲರು ಮತ್ತು ಅವರು ನಿಷ್ಪರಿಣಾಮಕಾರಿ ಎಂದು ಟ್ರಂಪ್‌ ಆ ಸಮಯದಲ್ಲಿ ಹೇಳಿದ್ದರು.

2012 ಮತ್ತು 2013 ರಲ್ಲಿ ನಂತರದ ಟ್ವೀಟ್‌ಗಳಲ್ಲಿ, ಅವರು ಇದೇ ರೀತಿಯ ಹೇಳಿಕೆಗಳನ್ನು ಪುನರುಚ್ಚರಿಸಿದರು, ಒಬಾಮಾ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಲು ಮತ್ತು "ತಾವು ಎಷ್ಟು ಕಠಿಣ ಎಂದು ತೋರಿಸಲು" ಇರಾನ್ ಅಥವಾ ಲಿಬಿಯಾ ಮೇಲೆ ದಾಳಿ ಮಾಡಬಹುದು ಎಂದು ಹೇಳಿದ್ದರು. ಚುನಾವಣೆ ಗೆಲ್ಲಲು ಅವರಿಗಿರುವುದು ಅವರಿಗೆ ಇದೊಂದೇ ದಾರಿ ಎಂದು ಟೀಕಿಸಿದ್ದರು. 2013 ರ ಮತ್ತೊಂದು ಪೋಸ್ಟ್‌ನಲ್ಲಿ ರಾಜತಾಂತ್ರಿಕ ವೈಫಲ್ಯವನ್ನು ಮುಚ್ಚಿಕೊಳ್ಳಲು ಒಬಾಮಾ ಯುದ್ಧವನ್ನು ಆಯೋಜಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ಸುದ್ದಿಯನ್ನೂ ಓದಿ: Israel-Iran Conflict: ಇಸ್ರೇಲ್‌ -ಇರಾನ್‌ ಯುದ್ಧಕ್ಕೆ ಎಂಟ್ರಿ ಕೊಟ್ಟೇ ಬಿಡ್ತು ಅಮೆರಿಕ; ಇರಾನ್‌ನ 3 ಪರಮಾಣು ನೆಲೆಗಳ ಮೇಲೆ ದಾಳಿ

ಇದೀಗ ಅವರು ಮಾಡಿರುವ ವೈರಲ್‌ ಆಗಿತ್ತು. ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಇರಾನ್‌ನ ಮೂರು ಪರಮಾಣು ತಾಣಗಳಾದ ಫೋರ್ಡೋ, ಇಸ್ಫಹಾನ್ ಮತ್ತು ನಟಾಂಜ್ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್‌ ಅವರನ್ನು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ.