ಟಾಯ್ಲೆಟ್ ಪೇಪರ್‌ನ ಹಾಗೆ ಅಮೆರಿಕ ನಮ್ಮನ್ನು ಬಳಸಿಕೊಂಡಿತು! ಪಾಕ್ ರಕ್ಷಣಾ ಸಚಿವನಿಂದ ಗಂಭೀರ ಆರೋಪ
Pakistan Allegations Against the US: ಅಮೆರಿಕದ ವಿರುದ್ಧ ಪಾಕಿಸ್ತಾನ ಗಂಭೀರ ಆರೋಪಗಳನ್ನು ಮಾಡಿದೆ. ಟಾಯ್ಲೆಟ್ ಪೇಪರ್‌ಗಿಂತಲೂ ಕೆಟ್ಟ ರೀತಿಯಲ್ಲಿ ನಮ್ಮನ್ನು ನಡೆಸಿಕೊಂಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಸಂಸತ್ತಿನಲ್ಲಿ ಕಠಿಣವಾಗಿ ಟೀಕಿಸಿದ್ದಾರೆ. ಅಮೆರಿಕದೊಂದಿಗೆ ಕೈಜೋಡಿಸಿದ ನಿರ್ಧಾರಗಳು ದೇಶಕ್ಕೆ ದೀರ್ಘಕಾಲಿಕ ಹಾನಿ ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ (ಸಂಗ್ರಹ ಚಿತ್ರ) -
ಇಸ್ಲಾಮಾಬಾದ್, ಫೆ.11: ಪಾಕಿಸ್ತಾನವು ವಿಶ್ವದ ದೊಡ್ಡಣ್ಣನ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದೆ. ಅಮೆರಿಕವು (America) ತನ್ನ ಕಾರ್ಯತಂತ್ರದ ಹಿತಾಸಕ್ತಿಗಳಿಗಾಗಿ ಇಸ್ಲಾಮಾಬಾದ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಮತ್ತು ನಂತರ ಅದನ್ನು ಟಾಯ್ಲೆಟ್ ಪೇಪರ್‌ಗಿಂತಲೂ ಕೆಟ್ಟದಾಗಿದೆ ನಡೆಸಿಕೊಂಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ (Khawaja Asif) ಹೇಳಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ ಆಸಿಫ್, 1999ರ ನಂತರ ವಿಶೇಷವಾಗಿ ಅಫ್ಘಾನಿಸ್ತಾನದ ವಿಚಾರದಲ್ಲಿ, ಮತ್ತೆ ವಾಷಿಂಗ್ಟನ್‌ನೊಂದಿಗೆ ಕೈಜೋಡಿಸಿದ ಪಾಕಿಸ್ತಾನದ ನಿರ್ಧಾರವು ದೇಶಕ್ಕೆ ದೀರ್ಘಕಾಲಿಕ ಹಾನಿಯನ್ನುಂಟುಮಾಡಿದೆ ಎಂದು ಹೇಳಿದರು. ಅಮೆರಿಕದ ಬೆಂಬಲವನ್ನು ಪಡೆಯಲು ಮಾಡಿದ ಪ್ರಯತ್ನವು ದೊಡ್ಡ ತಪ್ಪಾಗಿದ್ದು, ಅದರ ಪರಿಣಾಮಗಳನ್ನು ಪಾಕಿಸ್ತಾನವು ಹಲವು ದಶಕಗಳಿಂದ ಅನುಭವಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿದೆ ವಿಡಿಯೊ:
Khwaja Asif admits in Parliament that Pakistan rented itself out to the U.S. for war and was later discarded “like toilet paper”. Afghanistan was destroyed by policies now openly acknowledged in parliament. Millions suffered. Generations were lost. The world cannot look away now… pic.twitter.com/aEQjrm16ME
— Mariam Solaimankhil (@Mariamistan) February 10, 2026
'ಜಿಹಾದ್ ದುರುಪಯೋಗಪಡಿಸಿಕೊಂಡಿದ್ದರು'
ದಶಕಗಳ ಅಧಿಕೃತ ವಾದವನ್ನು ಪ್ರಶ್ನಿಸಿದ ಆಸಿಫ್, ಅಫ್ಘಾನಿಸ್ತಾನ ಸಂಘರ್ಷದಲ್ಲಿ ಪಾಕಿಸ್ತಾನದ ಪಾಲ್ಗೊಳ್ಳುವಿಕೆ ಧಾರ್ಮಿಕ ಕರ್ತವ್ಯದ ಕಾರಣದಿಂದಾಗಿತ್ತು ಎಂಬ ಹೇಳಿಕೆಯನ್ನು ಅವರು ತಳ್ಳಿಹಾಕಿದರು. ‘ಜಿಹಾದ್’ ಎಂಬ ಹೆಸರಿನಲ್ಲಿ ಪಾಕಿಸ್ತಾನಿಗಳನ್ನು ಸಂಘಟಿಸಿ ಯುದ್ಧಕ್ಕೆ ಕಳುಹಿಸಲಾಗಿತ್ತು ಎಂಬುದನ್ನು ಅವರು ಒಪ್ಪಿಕೊಂಡರು. ಅದು ದಾರಿತಪ್ಪಿಸುವ ಮತ್ತು ವಿನಾಶಕಾರಿಯಾಗಿಯೂ ಇದ್ದಿದು ಎಂದು ಅವರು ಹೇಳಿದ್ದಾರೆ.
ಈ ಯುದ್ಧಗಳನ್ನು ಕಾನೂನುಬದ್ಧಗೊಳಿಸಲು ಪಾಕಿಸ್ತಾನದ ಶಿಕ್ಷಣ ವ್ಯವಸ್ಥೆಯನ್ನು ಸಹ ಮರುರೂಪಿಸಲಾಗಿದೆ ಎಂದು ಆಸಿಫ್ ಹೇಳಿದರು. ಆ ವೈಚಾರಿಕ ಬದಲಾವಣೆಗಳ ಅನೇಕ ಪರಿಣಾಮಗಳು ಇಂದಿಗೂ ಮುಂದುವರಿದಿವೆ ಎಂದು ತಿಳಿಸಿದ್ದಾರೆ.
ಬಲೂಚಿಸ್ತಾನ ದಂಗೆಗೆ ಪಾಕ್ ಸೇನೆ ಕಂಗಾಲು; ಭಾರತದೊಂದಿಗೆ ಕ್ರಿಕೆಟ್ ಮ್ಯಾಚ್ ಬಹಿಷ್ಕರಿಸಲು ಇದೇ ಕಾರಣವಾಯ್ತಾ?
1980ರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಸೋವಿಯತ್ ವಿರೋಧಿ ಯುದ್ಧವು ನಿಜವಾದ ಧಾರ್ಮಿಕ ಕರ್ತವ್ಯದಿಂದಲ್ಲ, ಬದಲಾಗಿ ಅಮೆರಿಕದ ಭೌಗೋಳಿಕ-ರಾಜಕೀಯ ಹಿತಾಸಕ್ತಿಗಳಿಂದ ಪ್ರೇರಿತವಾಗಿತ್ತು ಎಂದು ಅವರು ಹೇಳಿದರು. ಆ ಸಂದರ್ಭದಲ್ಲಿ ‘ಜಿಹಾದ್’ ಘೋಷಣೆ ಮಾಡಲು ಯಾವುದೇ ಸಮಂಜಸ ಕಾರಣಗಳಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಕ್ಷಣಾ ಸಚಿವರ ಪ್ರಕಾರ, ತನ್ನದಲ್ಲದ ಸಂಘರ್ಷಗಳಲ್ಲಿ ಪಾಕಿಸ್ತಾನದ ಭಾಗವಹಿಸುವಿಕೆಯಿಂದಾಗಿ ದೀರ್ಘಕಾಲೀನ ಅಸ್ಥಿರತೆ ಮತ್ತು ಸಾಮಾಜಿಕ ಹಾನಿ ಉಂಟಾಗಿದ್ದು, ಅದರ ಪರಿಣಾಮಗಳು ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ ಎಂದು ಹೇಳಿದರು.
1999 ರ ನಂತರ, ವಿಶೇಷವಾಗಿ ಸೆಪ್ಟೆಂಬರ್ 11, 2001 ರ ದಾಳಿಯ ನಂತರ, ಅಮೆರಿಕದೊಂದಿಗೆ ಮರು ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರವು ಭಾರಿ ಬೆಲೆ ತೆರಬೇಕಾದ ಪರಿಸ್ಥಿತಿಯನ್ನು ಉಂಟುಮಾಡಿತು ಎಂದು ಆಸಿಫ್ ಹೇಳಿದರು.
ಮಿಲಿಟರಿ ಅಧಿಕಾರಿ ದಿವಂಗತ ಜಿಯಾ-ಉಲ್-ಹಕ್ ಮತ್ತು ಪರ್ವೇಜ್ ಮುಷರಫ್ ಅವರು ಪಾಕಿಸ್ತಾನವನ್ನು ಬಾಹ್ಯ ಯುದ್ಧಗಳಲ್ಲಿ ಸಿಲುಕಿಸಿದ್ದಾರೆ ಮತ್ತು ಅದರ ಮಿತ್ರರಾಷ್ಟ್ರಗಳು ಸ್ಥಳಾಂತರಗೊಂಡ ನಂತರವೂ ಅದರ ಪರಿಣಾಮವನ್ನು ದೇಶವು ಹೊತ್ತುಕೊಳ್ಳುವಂತೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಅಮೆರಿಕವು ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್‌ಗಿಂತ ಕೆಟ್ಟದಾಗಿ ನಡೆಸಿಕೊಂಡಿದ್ದು, ಅದನ್ನು ಒಂದು ಉದ್ದೇಶಕ್ಕಾಗಿ ಬಳಸಿ ನಂತರ ಎಸೆಯಲಾಗಿದೆ ಎಂದು ಕಟುವಾದ ಭಾಷೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
Vishwavani Editorial: ಬಲೂಚ್ ಕಿಚ್ಚಿಗೆ ಪಾಕ್ ದಬ್ಬಾಳಿಕೆ ಕಾರಣ
2001ರ ನಂತರದ ಅವಧಿಯನ್ನು ಉಲ್ಲೇಖಿಸಿ ಅವರು, ಅಮೆರಿಕ ನೇತೃತ್ವದ ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಬೆಂಬಲಿಸಲು ಪಾಕಿಸ್ತಾನ ತಾಲಿಬಾನ್ ವಿರುದ್ಧ ತಿರುಗಿಬಿತ್ತು. ಆದರೆ ಪಾಕಿಸ್ತಾನವು ಹಿಂಸಾಚಾರ, ಮೂಲಭೂತವಾದ ಮತ್ತು ಆರ್ಥಿಕ ಒತ್ತಡದಲ್ಲಿ ಸಿಲುಕಿದಾಗ ಅಮೆರಿಕ ಹಿಂದೆ ಸರಿಯಿತು ಎಂದು ಹೇಳಿದರು.
ನಾವು ಅನುಭವಿಸಿದ ನಷ್ಟಗಳನ್ನು ಎಂದಿಗೂ ಸರಿದೂಗಿಸಲು ಸಾಧ್ಯವಿಲ್ಲ ಎಂದು ಆಸಿಫ್ ಹೇಳಿದರು. ಆ ನಿರ್ಧಾರಗಳು ಬದಲಾಯಿಸಲಾಗದ ತಪ್ಪುಗಳಾಗಿದ್ದು, ಇತರರಿಂದ ನಡೆಸಲ್ಪಡುವ ಸಂಘರ್ಷಗಳಲ್ಲಿ ಪಾಕಿಸ್ತಾನವನ್ನು ಒಂದು ಕೈಗೊಂಬೆಯನ್ನಾಗಿ ಮಾಡಿದೆ ಎಂದು ಅವರು ದೂರಿದರು.