ವೆನೆಜುವೆಲಾ ಅಧ್ಯಕ್ಷ, ಪತ್ನಿಯನ್ನು ಸೆರೆ ಹಿಡಿದ ಅಮೆರಿಕ ಸೇನೆ; ಸೋಶಿಯಲ್ ಮೀಡಿಯದಲ್ಲಿ ಟ್ರಂಪ್ ಪೋಸ್ಟ್
Venezuela President: ವೆನೆಜುವೆಲಾದ ಮೇಲೆ ದೊಡ್ಡ ಪ್ರಮಾಣದ ವೈಮಾನಿಕ ದಾಳಿಯ ನಂತರ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕದ ಪಡೆಗಳು ಸೆರೆಹಿಡಿದಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ. ಅಮೆರಿಕದ ಕಾನೂನು ಜಾರಿ ಸಂಸ್ಥೆಗಳ ಜೊತೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ವಶಕ್ಕೆ ತೆಗೆದುಕೊಂಡು ದೇಶದಿಂದ ಹೊರಗೆ ಕಳುಹಿಸಲಾಯಿತು.
ಸಂಗ್ರಹ ಚಿತ್ರ -
ವೆನೆಜುವೆಲಾದ ಮೇಲೆ ದೊಡ್ಡ ಪ್ರಮಾಣದ ವೈಮಾನಿಕ (Venezuela President) ದಾಳಿಯ ನಂತರ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕದ ಪಡೆಗಳು ಸೆರೆಹಿಡಿದಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ. ವೆನೆಜುವೆಲಾದ ರಾಜಧಾನಿಯಲ್ಲಿ ನಡೆದ ಸ್ಫೋಟಗಳ ನಂತರ ಈ ಹೇಳಿಕೆ ಬಂದಿದೆ. ತಮ್ಮ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ ಅಧ್ಯಕ್ಷ ಟ್ರಂಪ್, ಅಮೆರಿಕವು "ವೆನೆಜುವೆಲಾ ಮತ್ತು ಅದರ ನಾಯಕನ ವಿರುದ್ಧ ದೊಡ್ಡ ಪ್ರಮಾಣದ ದಾಳಿಯನ್ನು ಯಶಸ್ವಿಯಾಗಿ ನಡೆಸಿದೆ" ಎಂದು ಹೇಳಿದರು.
ಅಮೆರಿಕದ ಕಾನೂನು ಜಾರಿ ಸಂಸ್ಥೆಗಳ ಜೊತೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ವಶಕ್ಕೆ ತೆಗೆದುಕೊಂಡು ದೇಶದಿಂದ ಹೊರಗೆ ಕಳುಹಿಸಲಾಯಿತು ಎಂದು ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ಮಾರ್-ಎ-ಲಾಗೊದಲ್ಲಿ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಹಂಚಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ವೆನೆಜುವೆಲಾದ ರಕ್ಷಣಾ ಸಚಿವ ವ್ಲಾಡಿಮಿರ್ ಪ್ಯಾಡ್ರಿನೊ ಲೋಪೆಜ್ ಅವರ ಮನೆಯನ್ನು ಗುರಿಯಾಗಿಸಿಕೊಂಡು ಅಮೆರಿಕ ವೈಮಾನಿಕ ದಾಳಿಯನ್ನು ನಡೆಸಿತ್ತು.
ದಕ್ಷಿಣ ಭಾಗದಲ್ಲಿ ಪ್ರಮುಖ ಮಿಲಿಟರಿ ನೆಲೆಯ ಬಳಿಯೂ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು ಭಾರೀ ಪ್ರಮಾಣದ ಹಾನಿಯಾಗಿರುವ ಸಂಭವ ಇದೆ ಎಂದು ಹೇಳಲಾಗಿದೆ. ಇಡೀ ವೆನೆಜುವೆಲಾದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ರಾಜಧಾನಿಯ ದಕ್ಷಿಣ ಭಾಗದಲ್ಲಿರುವ ಪ್ರಮುಖ ಮಿಲಿಟರಿ ನೆಲೆಯ ಸಮೀಪವಿರುವ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡ ವರದಿಯಾಗಿದೆ. ನಿವಾಸಿಗಳ ಪ್ರಕಾರ ಕನಿಷ್ಠ ಏಳು ಸ್ಫೋಟಗಳ ಶಬ್ದಗಳು ಕೇಳಿಬಂದವು. ವೆನೆಜುವೆಲಾದ ಸರ್ಕಾರವು ದಾಳಿಗಳನ್ನು ಅಮೆರಿಕದ ಪಡೆಗಳು ನಡೆಸಿವೆ ಎಂದು ಹೇಳಿದೆ. ವೆನೆಜುವೆಲಾದ ಸರ್ಕಾರ ಇದುವರೆಗೆ ಟ್ರಂಪ್ ಅವರ ಹೇಳಿಕೆಯನ್ನು ದೃಢಪಡಿಸಿಲ್ಲ.
ವೆನೆಜುವೆಲಾದ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ಟ್ರಂಪ್ ಹೇಳಿದ್ದೇನು?
ಮಾದಕವಸ್ತು ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಗೆ ವೆನೆಜುವೆಲಾ ಸಹಕಾರ ನೀಡುತ್ತಿದೆ ಎಂದು ಅಮೆರಿಕ ಆರೋಪಿಸುತ್ತಲೇ ಬಂದಿತ್ತು. ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಧಿಕಾರದಿಂದ ಹೊರಗಿಡುವ ಪ್ರಯತ್ನಗಳ ಭಾಗವಾಗಿ ಅಮೆರಿಕ ಈ ದಾಳಿ ನಡೆಸಿದೆ.