ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಶರಣಾಗಿ ಇಲ್ಲ ಇಡೀ ದೇಶವನ್ನೇ ನಾಶ ಮಾಡುವೆ"; ಇರಾನ್‌ಗೆ ಕೊನೆ ಎಚ್ಚರಿಕೆ ನೀಡಿದ ಟ್ರಂಪ್‌

ಮಂಗಳವಾರ ಗಡುವು ಮುಗಿಯುವ ಮೊದಲು ಟೆಹ್ರಾನ್ ವಾಷಿಂಗ್ಟನ್‌ನೊಂದಿಗೆ ಶಾಂತಿ ಒಪ್ಪಂದವನ್ನು ತಲುಪಲು ಸಾಧ್ಯವಾಗದಿದ್ದರೆ 'ಇಡೀ ಇರಾನ್ ಅನ್ನು ಸ್ಫೋಟಿಸುವುದಾಗಿ' ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇರಾನ್ ನಮ್ಮ ಜೊತೆ ಒಪ್ಪಂದಕ್ಕೆ ಬರದಿದ್ದರೆ, ಆ ಇಡೀ ದೇಶವನ್ನೇ ನಾವು ಸರ್ವನಾಶ ಮಾಡುತ್ತೇವೆ. ಇರಾನ್‌ನ ವಿದ್ಯುತ್‌ ಸ್ಥಾವರ ಹಾಗೂ ಸೇತುವೆಗಳ ಮೇಲೆ ದಾಳಿ ಮಾಡುವ ಮುನ್ಸೂಚನೆ ನೀಡಿದ್ದಾರೆ.

ಸಂಗ್ರಹ ಚಿತ್ರ

ವಾಷಿಂಗ್ಟನ್‌: ಮಂಗಳವಾರ ಗಡುವು ಮುಗಿಯುವ ಮೊದಲು ಟೆಹ್ರಾನ್ ವಾಷಿಂಗ್ಟನ್‌ನೊಂದಿಗೆ ಶಾಂತಿ ಒಪ್ಪಂದವನ್ನು ತಲುಪಲು (Donald Trump) ಸಾಧ್ಯವಾಗದಿದ್ದರೆ 'ಇಡೀ ಇರಾನ್ ಅನ್ನು ಸ್ಫೋಟಿಸುವುದಾಗಿ' ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇರಾನಿನ ನಾಗರಿಕರಿಗೆ ಅತ್ಯಗತ್ಯವಾದ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇರಾನ್ ವಿರುದ್ಧ ಅತ್ಯಂತ ತೀಕ್ಷ್ಣ ಹಾಗೂ ಆಕ್ರಮಣಕಾರಿ ಪದಗಳನ್ನು ಬಳಸಿದ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಕೂಡಲೇ ತೆರೆಯುವಂತೆ ಹೇಳಿದರು.

ಇರಾನ್ ನಮ್ಮ ಜೊತೆ ಒಪ್ಪಂದಕ್ಕೆ ಬರದಿದ್ದರೆ, ಆ ಇಡೀ ದೇಶವನ್ನೇ ನಾವು ಸರ್ವನಾಶ ಮಾಡುತ್ತೇವೆ. ಇರಾನ್‌ನ ವಿದ್ಯುತ್‌ ಸ್ಥಾವರ ಹಾಗೂ ಸೇತುವೆಗಳ ಮೇಲೆ ದಾಳಿ ಮಾಡುವ ಮುನ್ಸೂಚನೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇರಾನ್ ಮೇಲಿನ ಸಂಭಾವ್ಯ ದಾಳಿಯ ಸಮಯವನ್ನು ಹಂಚಿಕೊಂಡಿದ್ದಾರೆ. ಮಂಗಳವಾರ ಸಂಜೆ (ಅಮೆರಿಕ ಕಾಲಮಾನ ರಾತ್ರಿ 8:00 ಗಂಟೆ, ಅಂದರೆ ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ) ಯೊಳಗೆ ಜಲಮಾರ್ಗವನ್ನು ಸಾಗರ ಸಂಚಾರಕ್ಕೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಇರಾನ್ ಅನ್ನು ನರಕವನ್ನಾಗಿಸುತ್ತೇವೆ ಎಂದು ಎಚ್ಚರಿಸಿದ್ದಾರೆ. ರಾಜಿ ಮಾಡಿಕೊಳ್ಳಲು ತೆಹ್ರಾನ್‌ಗೆ ಸಾಕಷ್ಟು ಸಮಯವಿದೆ. ಹಾಗೆ ಮಾಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ಟ್ರಂಪ್ ಬೆದರಿಕೆಗೆ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಕರ್ ಖಾಲಿಬಾಫ್ ತಿರುಗೇಟು ನೀಡಿದ್ದಾರೆ. ನಿಮ್ಮ ಬೇಜವಾಬ್ದಾರಿ ನಡೆಗಳು ಅಮೆರಿಕವನ್ನು ನರಕಕ್ಕೆ ತಳ್ಳುತ್ತಿವೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಆದೇಶಗಳನ್ನು ಪಾಲಿಸುತ್ತಿರುವ ನೀವು ಇಡೀ ಮಧ್ಯಪ್ರಾಚ್ಯ ವಲಯವನ್ನು ಬೆಂಕಿಗೆ ದೂಡುತ್ತಿದ್ದೀರಿ. ಯುದ್ಧಾಪರಾಧಗಳಿಂದ ನಿಮಗೆ ಏನೂ ಸಿಗುವುದಿಲ್ಲ ಎಂದು ಕಿಡಿ ಕಾರಿದರು. ಅಷ್ಟೇ ಅಲ್ಲದೇ ಇರಾನ್, ಅಮೆರಿಕದ ವಿಶೇಷ ಪಡೆಗಳು ಇರಾನ್‌ನಲ್ಲಿದ್ದ ಅಮೆರಿಕ ಸಿಬ್ಬಂದಿಯನ್ನು ರಕ್ಷಿಸಲು ನಡೆಸಿದ ‘ಆಪರೇಶನ್ ಈಗಲ್ ಕ್ಲಾ’ ಎಂಬ ಮಿಷನ್‌ನ್ನು ಅಮೆರಿಕಗೆ ನೆನಪಿಸಿದೆ.

Kiran Upadhyay Column: ಇದು ಟ್ರಂಪ್‌ ಮುಖವನ್ನು ಕೆಂಪಾಗಿಸಿದ ಯುದ್ಧ

ಟಾಬಾಸ್ ಮರುಭೂಮಿಯಲ್ಲಿ ನಡೆದ ಆಪರೇಶನ್ ಈಗಲ್ ಕ್ಲಾ – ಇರಾನ್‌ನಲ್ಲಿ ಅಮೆರಿಕ ಸೇನೆಯ ಐತಿಹಾಸಿಕ ಸೋಲು ಎಂದು ಇರಾನ್‌ ತನ್ನ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದೆ.

Vishakha Bhat Heggar

View all posts by this author