ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನ್ಯೂಜೆರ್ಸಿಯಲ್ಲಿ ಎರಡು ಹೆಲಿಕಾಪ್ಟರ್ ಪತನ; ಇಲ್ಲಿದೆ ಭಯಾನಕ ವಿಡಿಯೊ

ನ್ಯೂಜೆರ್ಸಿಯ ಹ್ಯಾಮಂಟನ್ ನಲ್ಲಿ ಎರಡು ಹೆಲಿಕಾಪ್ಟರ್ ಗಳು ಅಪಘಾತಕ್ಕೀಡಾದ ಭಯಾನಕ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದಾನೆ, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಹ್ಯಾಮಂಟನ್ ಮುನ್ಸಿಪಲ್ ವಿಮಾನ ನಿಲ್ದಾಣದ ಬಳಿ ಗಾಳಿಯಲ್ಲಿ ಡಿಕ್ಕಿ ಹೊಡೆದ ಹೆಲಿಕಾಪ್ಟರ್ ಗಳು ಬಳಿಕ ನೆಲಕ್ಕೆ ಅಪ್ಪಳಿಸಿ ಸುಟ್ಟು ಕರಕಲಾಗಿದೆ.

(ಸಂಗ್ರಹ ಚಿತ್ರ)

ನ್ಯೂಜೆರ್ಸಿ: ಎರಡು ಹೆಲಿಕಾಪ್ಟರ್ (helicopter crash) ಗಳು ಗಾಳಿಯಲ್ಲಿ ಅಪಘಾತಕ್ಕೀಡಾದ ಘಟನೆ ನ್ಯೂಜೆರ್ಸಿಯ (new jersey) ಹ್ಯಾಮಂಟನ್ (hammonton) ನಲ್ಲಿ ನಡೆದಿದೆ. ದುರಂತದಲ್ಲಿ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಎರಡು ಹೆಲಿಕಾಪ್ಟರ್‌ಗಳು ಗಾಳಿಯಲ್ಲಿ ಅಪಘಾತಕ್ಕೀಡಾದ ಭಯಾನ ವಿಡಿಯೊ (Viral Video) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆ ಹ್ಯಾಮಂಟನ್ ಮುನ್ಸಿಪಲ್ ವಿಮಾನ ನಿಲ್ದಾಣದ ಬಳಿ ನಡೆದಿದೆ ಎನ್ನಲಾಗಿದೆ. ತುರ್ತು ರಕ್ಷಣಾ ತಂಡ ತಕ್ಷಣ ಸ್ಪಂದಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು.

ನ್ಯೂಜೆರ್ಸಿಯ ಅಟ್ಲಾಂಟಿಕ್ ಕೌಂಟಿಯಲ್ಲಿರುವ ಒಂದು ಪಟ್ಟಣವಾಗಿರುವ ಹ್ಯಾಮಂಟನ್ನ ಮುನ್ಸಿಪಲ್ ವಿಮಾನ ನಿಲ್ದಾಣ 100 ಬೇಸಿನ್ ರಸ್ತೆಯಲ್ಲಿ ಎರಡು ಹೆಲಿಕಾಪ್ಟರ್‌ಗಳು ಅಪಘಾತಕ್ಕೀಡಾಗಿದೆ. ಒಂದು ಹೆಲಿಕಾಪ್ಟರ್ ಸಂಪೂರ್ಣವಾಗಿ ಬೆಂಕಿಯಲ್ಲಿ ಸುಟ್ಟು ಕಾರಕಲಾ್ದರೆ ಇನ್ನೊಂದು ಹೆಲಿಕಾಪ್ಟರ್ ಹತ್ತಿರದ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ.



ವಿಮಾನ ನಿಲ್ದಾಣ ಬಳಿ ಬಿದ್ದ ಹೆಲಿಕಾಪ್ಟರ್ ನಲ್ಲಿ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಪಘಾತ ನಡೆದ ತಕ್ಷಣ ಸ್ಪಂದಿಸಿದ ತುರ್ತು ರಕ್ಷಣಾ ಪಡೆ ಗಾಯಾಳುಗಳನ್ನು ರಕ್ಷಿಸುವ ಕಾರ್ಯ ಮಾಡಿದರು. ಶೋಧ ತಂಡವು ಹೆಲಿಕಾಪ್ಟರ್ ನಲ್ಲಿ ಇನ್ನು ಯಾರಾದರೂ ಇದ್ದರೇ ಎನ್ನುವ ಕುರಿತು ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಸ್ಥಳೀಯರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಹೆಲಿಕಾಪ್ಟರ್ ಪತನಕ್ಕೆ ಕಾರಣ ತಿಳಿದು ಬಂದಿಲ್ಲ. ಘಟನೆಗೆ ಸಂಬಂಧಿಸಿ ಹೆಚ್ಚಿನ ಮಾಹಿತಿಗಳನ್ನೂ ಬಿಡುಗಡೆ ಮಾಡಲಾಗಿಲ್ಲ. ಘಟನೆಯ ಬಳಿಕ ವೈಟ್ ಹಾರ್ಸ್ ಪೈಕ್ ಮತ್ತು ರೂಟ್ 206 ಅನ್ನು ಮುಚ್ಚಲಾಯಿತು.

ಹೆಲಿಕಾಪ್ಟರ್ ಅಪಘಾತದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಹೆಲಿಕಾಪ್ಟರ್ ಪತನದ ಬಳಿಕ ದಟ್ಟವಾದ ಹೊಗೆ ಅವರಿಸಿಕೊಂಡಿದ್ದನ್ನು ಕಾಣಬಹುದಾಗಿದೆ. ಅಪಘಾತದ ಸ್ಥಳದಲ್ಲಿ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿವೆ. ದುರಂತದ ಕಾರಣ ತಿಳಿದು ಬಂದಿಲ್ಲ. ಎಷ್ಟು ಮಂದಿ ಹೆಲಿಕಾಪ್ಟರ್ ಗಳಲ್ಲಿ ಇದ್ದರು ಎನ್ನುವ ಕುರಿತು ಕೂಡ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author