ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೆಲಕಚ್ಚಿತಾ ಉಕ್ರೇನ್‌ ಆರ್ಥಿಕತೆ? ಯುದ್ಧನಿಧಿಗಾಗಿ ಅಶ್ಲೀಲ ಚಿತ್ರ ಮಾರಾಟ ಕಾನೂನು ಬದ್ಧಗೊಳಿಸಲು ಮುಂದಾದ ಸರ್ಕಾರ!

ರಷ್ಯಾ ವಿರುದ್ಧದ ಸತತ ಯುದ್ಧದಿಂದಾಗಿ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಉಕ್ರೇನ್, ಯುದ್ದದಿಂದಾಗಿ ತನ್ನ ಜಿಡಿಪಿಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಅಂದರೆ ಸುಮಾರು $150 ಬಿಲಿಯನ್‌ ಡಾಲರ್‌ಗೂ ಹೆಚ್ಚು ಹಣವನ್ನು ನೇರ ಮಿಲಟರಿ ವೆಚ್ಚಕ್ಕಾಗಿ ವ್ಯಯಿಸಿದೆ. ದಿನವೊಂದರ ಯುದ್ದಕ್ಕಾಗಿ ಸುಮಾರು $100 ಮಿಲಿಯನ್‌ ಡಾಲರ್‌ ಖರ್ಚಾಗುತ್ತಿದ್ದು, ದೇಶದ ಆರ್ಥಿಕತೆ ಮೇಲೆ ತೀವ್ರ ಹೊಡೆ ಬಿದ್ದಿದೆ.

ಅಶ್ಲೀಲ ಚಿತ್ರ ಮಾರಾಟ ಕಾನೂನು ಬದ್ಧಗೊಳಿಸಲು ಮುಂದಾದ ಉಕ್ರೇನ್‌ ಸರ್ಕಾರ!

ಇಂಟರ್ ನೆಟ್ ಚಿತ್ರ -

Vishakha Bhat Heggar
Vishakha Bhat Heggar Sep 7, 2026 3:57 PM

ಕೀವ್‌: ರಷ್ಯಾ ವಿರುದ್ಧದ ಸತತ ಯುದ್ಧದಿಂದಾಗಿ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಉಕ್ರೇನ್, ಯುದ್ದದಿಂದಾಗಿ ತನ್ನ ಜಿಡಿಪಿಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಅಂದರೆ ಸುಮಾರು $150 ಬಿಲಿಯನ್‌ ಡಾಲರ್‌ಗೂ ಹೆಚ್ಚು ಹಣವನ್ನು ನೇರ ಮಿಲಟರಿ ವೆಚ್ಚಕ್ಕಾಗಿ ವ್ಯಯಿಸಿದೆ. ದಿನವೊಂದರ ಯುದ್ದಕ್ಕಾಗಿ ಸುಮಾರು $100 ಮಿಲಿಯನ್‌ ಡಾಲರ್‌ ಖರ್ಚಾಗುತ್ತಿದ್ದು, ದೇಶದ ಆರ್ಥಿಕತೆ ಮೇಲೆ ತೀವ್ರ ಹೊಡೆ ಬಿದ್ದಿದೆ. ಈ ಬೃಹತ್‌ ಆರ್ಥಿಕ ಹೊರೆಯನ್ನು ಸರಿದೂಗಿಸಲು ಮತ್ತು ಸ್ವಯಂ ಆದಾಯ ಹೆಚ್ಚಿಸಿಕೊಳ್ಳಲು ಉಕ್ರೇನ್‌ ಸರ್ಕಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ಇಷ್ಟೂ ದಿನ ಅಪರಾಧವೆಂದು ಪರಿಗಣಿಸಲಾಗಿದ್ದ ಅಶ್ಲೀಲ ಚಿತ್ರ ಹಾಗೂ ವಿಡಿಯೋ (Pornography) ಉದ್ಯಮವನ್ನು ಕಾನೂನುಬದ್ಧಗೊಳಿಸಲು ಉಕ್ರೇನ್ ಸಂಸತ್ತು ಸಿದ್ಧತೆ ನಡೆಸಿದೆ. ಈ ಉದ್ಯಮವನ್ನು ತೆರಿಗೆ ವ್ಯಾಪ್ತಿಗೆ ತರುವುದರಿ೦ದ ವಾರ್ಷಿಕ ಸುಮಾರು $25 ಮಿಲಿಯನ್ ಡಾಲರ್ ಆದಾಯ ಬರಲಿದ್ದು, ಇದರಿಂದ ಸೇನೆಗೆ ಬೇಕಾದ 30,000 ಮಿಲಿಟರಿ ಡ್ರೋನ್‌ಗಳನ್ನು ಖರೀದಿಸಲು ಸರ್ಕಾರ ಯೋಜನೆ ರೂಪಿಸಿದೆ.

ಉಕ್ರೇನ್ ತನ್ನ ದೇಶದ ಯುದ್ಧದ ವೆಚ್ಚಗಳಿಗೆ ಹೆಚ್ಚಿನ ಆದಾಯವನ್ನು ಕಲೆಹಾಕಲು, ಅಶ್ಲೀಲ ಚಿತ್ರ ಉದ್ಯಮವನ್ನು ಕಾನೂನುಬದ್ಧಗೊಳಿಸಿ, ಅದನ್ನು ತೆರಿಗೆ ವ್ಯವಸ್ಥೆಯ ವ್ಯಾಪ್ತಿಗೆ ತರಲು ಪರಿಶೀಲಿಸುತ್ತಿದೆ ಎಂದು 'ದಿ ವಾಲ್ ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ. ಈ ಪ್ರಸ್ತಾವನೆಯು ಕೇವಲ ಸರ್ಕಾರದ ತೆರಿಗೆ ಆದಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಭ್ರಷ್ಟಾಚಾರವನ್ನು ತಡೆಗಟ್ಟುವುದು ಮತ್ತು ವಯಸ್ಕರ ವಿಷಯವನ್ನು (ಅಡಲ್ಟ್ ಕಂಟೆಂಟ್) ನಿರ್ಮಿಸಿ ಹಣ ಸಂಪಾದಿಸುತ್ತಿರುವ ಸಾವಿರಾರು ಜನರು ಎದುರಿಸುತ್ತಿರುವ ಕಾನೂನು ತೊಡಕುಗಳನ್ನು ಹಾಗೂ ವೈರೋಧ್ಯಗಳನ್ನು ಬಗೆಹರಿಸುವ ಉದ್ದೇಶವನ್ನು ಹೊಂದಿದೆ. ಉಕ್ರೇನ್‌ನಲ್ಲಿ ಪ್ರಸ್ತುತ ಅಶ್ಲೀಲ ಚಿತ್ರಗಳ ನಿರ್ಮಾಣ, ವಿತರಣೆ ಮತ್ತು ಅವುಗಳನ್ನು ಹೊಂದಿರುವುದು ಕಾನೂನುಬಾಹಿರವಾಗಿದ್ದು, ಇದಕ್ಕೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಆದಾಗ್ಯೂ, ದೇಶದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಹಾಗೂ ಲಾಭದಾಯಕವಾಗಿರುವ ಈ ವಯಸ್ಕರ ಉದ್ಯಮವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲಾ ಎಂದು ವರದಿ ಹೇಳಿದೆ. ಹೀಗಾಗಿ ಉಕ್ರೇನ್‌ ಅನೇಕ ಕಂಟೆಂಟ್ ಕ್ರಿಯೇಟರ್ಸ್ ಆನ್‌ಲೈನ್ ಮೂಲಕ, ವಿದೇಶಗಳಿಂದ ಅಥವಾ ಪ್ರಸ್ತುತ ಇರುವ ಕಾನೂನು ನಿಯಮಗಳಿಂದ ತಪ್ಪಿಸಿಕೊಳ್ಳುವಂತಹ ವ್ಯವಸ್ಥೆಗಳನ್ನು ಮಾಡಿಕೊಂಡು ಈ ಕೆಲಸವನ್ನು ಮುಂದುವರಿಸುತ್ತಿದ್ದಾರೆ.

ಪೋರ್ನೋಗ್ರಫಿ ಕಾನೂನುಬದ್ಧವಾದರೆ ಉಕ್ರೇನ್‌ಗೆ ವರ್ಷಕ್ಕೆ $25 ಮಿಲಿಯನ್ ಆದಾಯ

ಅಶ್ಲೀಲ ಉದ್ಯಮವನ್ನು (ಪೋರ್ನೋಗ್ರಫಿ) ಕಾನೂನುಬದ್ಧಗೊಳಿಸುವುದರಿಂದ ಉಕ್ರೇನ್‌ಗೆ ವರ್ಷಕ್ಕೆ ಸುಮಾರು 200 ಕೋಟಿ ರೂಪಾಯಿಗೂ ಹೆಚ್ಚು (25 ಮಿಲಿಯನ್ ಡಾಲರ್) ತೆರಿಗೆ ಆದಾಯ ಬರಬಹುದು. ಉಕ್ರೇನ್ ಸಂಸತ್ತಿನ ಹಣಕಾಸು ಸಮಿತಿಯ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ಸಂಸದ ಯಾರೋಸ್ಲಾವ್ ಝೆಲೆಜ್ನಿಯಾಕ್ ಇದನ್ನು ಕಾನೂನುಬದ್ಧಗೊಳಿಸಲು ಯೋಜನೆ ರೂಪಿಸಿದ್ದಾರೆ. ಸಿದ್ಧಪಡಿಸಿರುವ ಮಸೂದೆಯು ಜುಲೈನಲ್ಲಿ ಸಂಸತ್ತಿನ ಮೊದಲ ಸುತ್ತಿನ ಮತದಾನದಲ್ಲಿ ಅಂಗೀಕಾರಗೊಂಡಿದ್ದು, ಅಂತಿಮ ಅನುಮೋದನೆಗೆ ಕಾಯುತ್ತಿದೆ.

ಈ ಉದ್ಯಮವನ್ನು ಕಾನೂನುಬದ್ಧಗೊಳಿಸಿ ತೆರಿಗೆ ವಿಧಿಸುವುದರಿಂದ ಸರ್ಕಾರಕ್ಕೆ ವರ್ಷಕ್ಕೆ ದೊಡ್ಡ ಮಟ್ಟದ ಆದಾಯ ಸಿಗಲಿದೆ ಎಂಬುದು ಝೆಲೆಜ್ನಿಯಾಕ್ ಅವರ ಲೆಕ್ಕಾಚಾರ. ಉಕ್ರೇನ್‌ನ ವರ್ಷದ ಒಟ್ಟು ಯುದ್ಧದ ವೆಚ್ಚಕ್ಕೆ (ಸುಮಾರು 120 ಬಿಲಿಯನ್ ಡಾಲರ್) ಹೋಲಿಸಿದರೆ ಈ ಹಣ ಸಣ್ಣದಾಗಿದ್ದರೂ, ಇದರಿಂದ ಸುಮಾರು 30,000 ಡ್ರೋನ್‌ಗಳನ್ನುಖರೀದಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಈಗಾಗಲೇ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಈ ಉದ್ಯಮಕ್ಕೆ ಕಾನೂನಿನ ಮಾನ್ಯತೆ ನೀಡುವುದರಿಂದ, ಇದರ ಹೆಸರಿನಲ್ಲಿ ನಡೆಯುವ ಭ್ರಷ್ಟಾಚಾರವನ್ನು ಕಡಿಮೆ ಮಾಡಬಹುದು ಎಂದು ಬೆಂಬಲಿಗರು ನಂಬಿದ್ದಾರೆ. ಇದರ ಜೊತೆಗೆ, 'ಒಂದೆಡೆ ಕಾನೂನುಬಾಹಿರ ಎಂದು ಹೇಳುತ್ತಲೇ, ಇನ್ನೊಂದೆಡೆ ಅವರಿಂದ ತೆರಿಗೆ ವಸೂಲಿ ಮಾಡುತ್ತಿರುವುದು ಸರ್ಕಾರದ ವೈರೋಧ್ಯ ಮತ್ತು ತಪ್ಪು ಧೋರಣೆಯಾಗಿದೆ' ಎಂದು ಝೆಲೆಜ್ನಿಯಾಕ್ ಹೇಳಿದ್ದಾರೆ.

ತೆರಿಗೆ ಕಟ್ಟಿದರೆ ಜೈಲು, ಕಟ್ಟದಿದ್ದರೆ ದಂಡ, ಸರ್ಕಾರದ ವಿಚಿತ್ರ ನಿಯಮ

ಲಂಡನ್ ಮೂಲದ 'ಒನ್ಲಿಫ್ಯಾನ್ಸ್' ಕಂಪನಿಯಿಂದ ಉಕ್ರೇನ್ ತೆರಿಗೆ ಇಲಾಖೆಗೆ ಸಿಕ್ಕ ಮಾಹಿತಿಯಿಂದ ಈ ಸಮಸ್ಯೆ ಮುನ್ನೆಲೆಗೆ ಬಂದಿತು. 2023 ರಲ್ಲಿ ಉಕ್ರೇನ್‌ನ ಸುಮಾರು 7,900 ಜನರು ಈ ಆ್ಯಪ್ ಮೂಲಕ 1,000 ಕೋಟಿ ರೂಪಾಯಿಗೂ ಹೆಚ್ಚು ($131 ಮಿಲಿಯನ್) ಆದಾಯ ಗಳಿಸಿದ್ದರು. ಇದರಿಂದ ಸರ್ಕಾರಕ್ಕೆ ದೊಡ್ಡ ಮಟ್ಟದ ತೆರಿಗೆ ಬರಬೇಕಿತ್ತು. ಹೀಗಾಗಿ, ತಿಂಗಳಿಗೆ 16 ಲಕ್ಷ ರೂಪಾಯಿಗೂ ಹೆಚ್ಚು ($20,000) ಸಂಪಾದಿಸುತ್ತಿದ್ದ ಜನರಿಗೆ ತೆರಿಗೆ ಇಲಾಖೆಯು, ತೆರಿಗೆ ಕಟ್ಟಿ ಎಂದು ನೋಟಿಸ್ ಕಳುಹಿಸಿತು. ಆದರೆ ಇಲ್ಲೇ ದೊಡ್ಡ ಸಮಸ್ಯೆ ಎದುರಾಯಿತು!

ಉಕ್ರೇನ್‌ನ ವಸತಿ ಪ್ರದೇಶಗಳ ಮೇಲೆ ರಾತ್ರೋರಾತ್ರಿ ರಷ್ಯಾ ದಾಳಿ: ಭಾರತೀಯರು ಬಲಿ

ಒಂದು ವೇಳೆ ಆ ವ್ಯಕ್ತಿಗಳು ತಾವು ಗಳಿಸಿದ ಹಣವನ್ನು ಸರ್ಕಾರದ ಮುಂದೆ ಘೋಷಿಸಿದರೆ, ಕಾನೂನುಬಾಹಿರವಾಗಿ ಅಶ್ಲೀಲ್‌ ವಿಡಿಯೋ ತಯಾರಿಸುತ್ತಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿ ಪೊಲೀಸರು ಅವರನ್ನು ಬಂಧಿಸುವ ಅಪಾಯವಿತ್ತು. ಇದನ್ನು ಉಲ್ಲೇಖಿಸಿರುವ ಸಂಸದ ಝೆಲೆಜ್ನಿಯಾಕ್ ʼಜನರು ಈಗ ಧರ್ಮಸಂಕಟದಲ್ಲಿದ್ದಾರೆ. ತೆರಿಗೆ ಕಟ್ಟದಿದ್ದರೆ ತೆರಿಗೆ ವಂಚಕರು ಎಂದು ಕೇಸ್ ಹಾಕುತ್ತಾರೆ, ತೆರಿಗೆ ಕಟ್ಟಿದರೆ ಅಶ್ಲೀಲ ವಿಡಿಯೋ ಮಾಡಿದ್ದೀರಿ ಎಂದು ಜೈಲಿಗೆ ಕಳುಹಿಸುತ್ತಾರೆ! ಸರ್ಕಾರದ ಈ ವಿಚಿತ್ರ ನಿಯಮವೇ ದೊಡ್ಡ ವಿರೋಧಾಭಾಸವಾಗಿದೆʼ ಎಂದು ಹೇಳಿದ್ದಾರೆ.

ಕಂಟೆಟ್‌ ಚಿತ್ರಿಕೃಣಕ್ಕಾಗಿ ವಿದೇಶಕ್ಕೆ ತೆರಳುತ್ತಿರುವ ಕ್ರಿಯೇಟರ್‌ಗಳು

ಕಾನೂನಿನ ಗೊಂದಲ ಮತ್ತು ಶಿಕ್ಷೆಯ ಭಯದಿಂದಾಗಿ ಉಕ್ರೇನ್‌ನ ನೂರಾರು ಒನ್ಲಿಫ್ಯಾನ್ಸ್ ಕ್ರಿಯೇಟರ್‌ಗಳು ವಿದೇಶಗಳಿಗೆ ತೆರಳುತ್ತಿದ್ದು, ದೇಶದ ಹೊರಗಿನಿಂದ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಸ್ವೈಟ್ಲಾನಾ ದ್ವೋರ್ನಿಕೋವಾ ಕೂಡ ಉಕ್ರೇನ್‌ನಲ್ಲಿ ವಿಡಿಯೋ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ, ಫ್ರಾನ್ಸ್ ಅಥವಾ ಸ್ಪೇನ್‌ ದೇಶಗಳಲ್ಲಿ ವಿಲ್ಲಾಗಳನ್ನು ಬಾಡಿಗೆಗೆ ಪಡೆದು ಅಲ್ಲಿಂದ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದಾರೆ. ಉಕ್ರೇನ್‌ನಲ್ಲೇ ಉಳಿದುಕೊಂಡಿರುವವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. 'ಲಿವಿವ್' ನಗರದಲ್ಲಿ ಇರಿನಾ ಮೊಸಿಯುಕ್ ಎಂಬುವವರು ಸಲಹಾ ಸಂಸ್ಥೆ ಎಂಬ ಹೆಸರಿನಲ್ಲಿ ಕಚೇರಿ ನಡೆಸುತ್ತಿದ್ದು, ಅದರೊಳಗೆ ಹಲವಾರು ಮಾಡೆಲ್‌ಗಳಿಗೆ ವೆಬ್‌ಕ್ಯಾಮ್ ಸ್ಟುಡಿಯೋ ಸೌಲಭ್ಯ ಒದಗಿಸಿದ್ದಾರೆ. ತಮ್ಮಲ್ಲಿ ಕೆಲಸ ಮಾಡುವ ಮಾಡೆಲ್‌ಗಳು ತಿಂಗಳಿಗೆ 1.6 ಲಕ್ಷದಿಂದ 5.7 ಲಕ್ಷ ರೂಪಾಯಿವರೆಗೆ ($2,000 ರಿಂದ $7,000) ಗಳಿಸುತ್ತಿದ್ದು, ತಾವು ಪ್ರಸ್ತುತ ತಿಂಗಳಿಗೆ ಸುಮಾರು 4 ಲಕ್ಷ ರೂಪಾಯಿ ($5,000) ತೆರಿಗೆ ಕಟ್ಟುತ್ತಿರುವುದಾಗಿ ಇರಿನಾ ತಿಳಿಸಿದ್ದಾರೆ. ಈ ಉದ್ಯಮಕ್ಕೆ ಸಂಪೂರ್ಣ ಕಾನೂನು ಮಾನ್ಯತೆ ಸಿಕ್ಕರೆ ಸರ್ಕಾರಕ್ಕೆ ಇನ್ನೂ ಹೆಚ್ಚಿನ ತೆರಿಗೆ ಕಟ್ಟಲು ಸಾಧ್ಯ ಎಂದು ಅವರು ಹೇಳಿದ್ದಾರೆ.