ಲಖನೌ, ಜು. 16: ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯನ್ನು ಹುಡುಕಿಕೊಂಡು ಉತ್ತರ ಪ್ರದೇಶದ (Uttar Pradesh) ಅಲಿಗಢದ ವ್ಯಕ್ತಿಯೊಬ್ಬ ವೀಸಾ ಇಲ್ಲದೆ ಪಾಕಿಸ್ತಾನಕ್ಕೆ ಪ್ರವೇಶಿಸಿದ್ದು, ಅಲ್ಲಿ ಜೈಲು ಪಾಲಾಗಿದ್ದಾನೆ. ಆತನ ಗುರುತು ಅನುಮಾನಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ತಿಂಗಳ ನಂತರವೂ, ಶಿಕ್ಷೆ ಅವಧಿ ಪೂರ್ಣಗೊಂಡರೂ ಆತ ಲಾಹೋರ್‌ನ ಕೋಟ್ ಲಖ್‌ಪತ್ ಜೈಲಿನಲ್ಲಿಯೇ ಉಳಿದಿದ್ದಾನೆ. ಆತನನ್ನು ಬಿಡುಗಡೆ ಮಾಡಿಸುವಂತೆ ಕುಟುಂಬವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಬಾದಲ್ ಬಾಬು ದೆಹಲಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದು, ಸನಾ ಎಂಬ ಪಾಕಿಸ್ತಾನಿ ಮಹಿಳೆಯೊಂದಿಗೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿದ್ದರು. ಈ ಸ್ನೇಹ ಕ್ರಮೇಣ ಪ್ರೇಮ ಸಂಬಂಧವಾಗಿ ಬದಲಾಯಿತು. ಬಾದಲ್ ಕೊನೆಯ ಬಾರಿಗೆ ಸನಾ ಜತೆ 2024ರ ಅಕ್ಟೋಬರ್ 30ರಂದು ಮಾತನಾಡಿದ್ದರು ಎಂದು ಅವರ ಕುಟುಂಬ ಹೇಳಿದೆ. ಕಣ್ಮರೆಯಾಗುವ ಮೊದಲು ಆತ ಎಲ್ಲ ದಾಖಲೆಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರು ಎಂದು ಕುಡುಂಬಸ್ಥರು ಹೇಳಿದ್ದಾರೆ.
ಸುಮಾರು 20 ತಿಂಗಳ ಹಿಂದೆ, ಆತನ ಬಗ್ಗೆ ವಿಡಿಯೊಗಳು ಮತ್ತು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಲು ಪ್ರಾರಂಭಿಸಿದಾಗ ಪಾಕಿಸ್ತಾನಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಂಧಿಸಲ್ಪಟ್ಟಿದ್ದಾರೆ ಎಂಬುದು ತಿಳಿದುಬಂತು. ಬಾದಲ್ ಮೊದಲು 2024ರ ಆಗಸ್ಟ್‌ನಲ್ಲಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಪ್ರಯತ್ನಿಸಿದ್ದರು. ಆದರೆ ಅದು ವಿಫಲವಾಯಿತು. ನಂತರ ಅವರು ವೀಸಾ ಇಲ್ಲದೆ ಗಡಿ ದಾಟುವಲ್ಲಿ ಯಶಸ್ವಿಯಾದರು. 2024ರ ಅಕ್ಟೋಬರ್ 15ರಂದು ಪಾಕಿಸ್ತಾನ ತಲುಪಿದರು.
ವೀಸಾ ಅವಧಿ ಮುಗಿದ ನಂತರವೂ ಚಿಕ್ಕಬಳ್ಳಾಪುರದಲ್ಲಿ ಉಳಿದ ಪಾಕಿಸ್ತಾನ ಮಹಿಳೆ, ಪುತ್ರ
ಇತ್ತ ಬಾದಲ್‌ರನ್ನು ಸನಾ ಮದುವೆಯಾಗಲು ನಿರಾಕರಿಸಿದ ನಂತರ, ಅವರು ಪಾಕಿಸ್ತಾನದಲ್ಲೇ ಉಳಿದು ಅಲ್ಲಿಯೇ ಕೆಲಸ ಮುಂದುವರಿಸಿದ್ದರು ಎಂದು ಕುಟುಂಬ ಹೇಳಿದೆ. ಅವರು ಫೋನ್ ಕರೆಗಳ ಮೂಲಕ ತಮ್ಮ ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದ್ದರು. ಆದರೆ 2024ರ ಡಿಸೆಂಬರ್ 27ರಿಂದ ಅವರಿಗೆ ಸಮಸ್ಯೆ ಶುರುವಾಯಿತು. ಅಲ್ಲಿ ಅವರು ಮೇಕೆಗಳನ್ನು ಮೇಯಿಸುವ ಕೆಲಸ ಮಾಡುತ್ತಿದ್ದರು.
ಬಾದಲ್ ಮಾತನಾಡುತ್ತಿದ್ದ ಭಾಷೆ ಕೇಳಿ ಸ್ಥಳೀಯರಿಗೆ ಅನುಮಾನ ಮೂಡಿತು. ಅವರ ಭಾರತೀಯ ಉಪಭಾಷೆಯನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಅವರನ್ನು ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ್ದಕ್ಕಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ ಆವರಣದ ಮುಂದೆ ಇದ್ದ ಬಾದಲ್ ಅವರ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ವಿಡಿಯೊದಲ್ಲಿ ಮಾತನಾಡಿದ ಬಾದಲ್, ತನ್ನ ಕುಟುಂಬಕ್ಕೆ ಚಿಂತಿಸಬೇಡಿ ಎಂದು ಹೇಳಿದ್ದರು. “ನಾನು ಈಗ ಹಿಂತಿರುಗಲು ಸಾಧ್ಯದಿಲ್ಲ. ಚಿಂತಿಸಬೇಡಿ. ನಾನು ಮತಾಂತರಗೊಂಡಿದ್ದೇನೆ” ಎಂದು ತಿಳಿಸಿದ್ದರು. ಬಾದಲ್ ಅವರನ್ನು ಜೈಲಿಗೆ ಕಳುಹಿಸುವ ಮೊದಲು ಅವರ ವಕೀಲರು ವಿಡಿಯೊ ಕರೆಯನ್ನು ಏರ್ಪಡಿಸಿದ್ದರು ಎನ್ನಲಾಗಿದೆ.
ಗಡಿ ದಾಟಿ ಭಾರತದೊಳಗೆ ಸುಲಭವಾಗಿ ಕಾಲಿಡಬಹುದು ಎಂದ ಪಾಕಿಸ್ತಾನ ಪತ್ರಕರ್ತೆಗೆ ತರಾಟೆ
ಬಾದಲ್ ಪ್ರಸ್ತುತ ಲಾಹೋರ್‌ನ ಕೋಟ್ ಲಖ್‌ಪತ್ ಜೈಲಿನಲ್ಲಿದ್ದಾರೆ. ಅವರು ಶಿಕ್ಷೆಯನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಆದರೆ ಸ್ವದೇಶಕ್ಕೆ ವಾಪಸಾತಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಜೈಲಿನಲ್ಲಿದ್ದಾರೆ ಎಂದು ಅವರು ಕುಟುಂಬ ಹೇಳಿದೆ. ಅವರನ್ನು ಕರೆತರಲು ಅನುಕೂಲ ಮಾಡಿಕೊಡುವಂತೆ ಕುಟುಂಬವು ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದೆ.
ಅಲಿಗಢ ಆಡಳಿತವು ಅಗತ್ಯವಿರುವ ದಾಖಲೆಗಳನ್ನು ಹಲವು ಬಾರಿ ಸಲ್ಲಿಸಿದೆ. ಅಲಿಗಢ ಸಂಸದ ಸತೀಶ್ ಗೌತಮ್ ಈ ವಿಷಯದ ಬಗ್ಗೆ ಸಚಿವಾಲಯಕ್ಕೆ ಈ ಹಿಂದೆ ಪತ್ರ ಬರೆದಿದ್ದರು. ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆಯೊಬ್ಬರು ಪಾಕಿಸ್ತಾನದಲ್ಲಿರುವ ಬಾದಲ್ ಅವರ ಕಾನೂನು ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದು, ಅವರನ್ನು ಬಿಡುಗಡೆಗೊಳಿಸಲು ನಡೆಯುತ್ತಿರುವ ಕಾನೂನು ಪ್ರಕ್ರಿಯೆಗೆ ಸಹಕರಿಸುತ್ತಿದ್ದಾರೆ ಎಂದು ಬಾದಲ್ ಕುಟುಂಬ ಹೇಳಿದೆ.