ವಾಷಿಂಗ್ಟನ್: ಭಾರತ (India) ಮತ್ತು ಯುಎಸ್ (US) ನಡುವೆ ವ್ಯಾಪಾರ ಮಾತುಕತೆಗಳು (Trade talk) ಮುಂದುವರಿಯುತ್ತಿದ್ದು, ಈವರೆಗೆ ಸಿಗದೇ ಇರುವಂತಹ ಅತ್ಯುತ್ತಮ ಕೊಡುಗೆಗಳನ್ನು ಭಾರತ ನೀಡಿದೆ ಎಂದು ಯುಎಸ್ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ (US Trade Representative Jamieson Greer) ತಿಳಿಸಿದ್ದಾರೆ. ಸೆನೆಟ್ ವಿನಿಯೋಗ ಉಪಸಮಿತಿಯ ವಿಚಾರಣೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಯುಎಸ್ ಟಿಆರ್ ತಂಡವು (USTR team) ನವದೆಹಲಿಯೊಂದಿಗೆ ಮಾತುಕತೆಯನ್ನು ಮುಂದುವರಿಸಿದ್ದು, ಸೂಕ್ಷ್ಮ ಅಡೆತಡೆಗಳನ್ನು ನಿವಾರಿಸುವ ಕೆಲಸ ಮಾಡುತ್ತಿದೆ. ಈ ಬಾರಿ ಭಾರತದಿಂದ ಇದುವರೆಗೆ ಪಡೆಯದೇ ಇರುವಂತಹ ಅತ್ಯುತ್ತಮ ಕೊಡುಗೆಗಳನ್ನು ನೀಡಿದೆ ಎಂದು ಹೇಳಿದರು.
ಭಾರತ ಮತ್ತು ಯುಎಸ್ ನಡುವಿನ ವ್ಯಾಪಾರ ವಹಿವಾಟುಗಳು ಕಳೆದ ದಶಕದ ಬಳಿಕ ಗಮನಾರ್ಹವಾಗಿ ವಿಸ್ತರಣೆಯಾಗಿದೆ. ಈ ಬಾರಿ ಭಾರತವು ಯುಎಸ್ ನೊಂದಿಗೆ ಕೃಷಿ, ಡಿಜಿಟಲ್, ವಾಯುಯಾನ, ಔಷಧ, ಖನಿಜ ಮಾರುಕಟ್ಟೆ ಸೇರಿದಂತೆ ವಿವಿಧ ವ್ಯಾಪಾರ ಕ್ಷೇತ್ರದಲ್ಲಿ ಪ್ರವೇಶದ ಕುರಿತು ಮಾತುಕತೆ ನಡೆಸುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತೆಯತ್ತ ನೋಡಿ ಕಣ್ಣು ಮಿಟುಕಿಸಿದ ಪಾಕಿಸ್ತಾನ ಸೇನಾ ವಕ್ತಾರ
ಸೆನೆಟ್ ವಿನಿಯೋಗ ಉಪಸಮಿತಿಯ ವಿಚಾರಣೆಯಲ್ಲಿ ಮಂಗಳವಾರ ಮಾತನಾಡಿದ ಗ್ರೀರ್, ಭಾರತದೊಂದಿಗೆ ವ್ಯಾಪಾರ ಮಾತುಕತೆ ಮುಂದುವರಿದಿದೆ. ಧಾನ್ಯಗಳಾದ ಸೋಯಾ, ಜೋಳ ಸೇರಿದಂತೆ ಅಮೆರಿಕದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವ ನಿಟ್ಟಿನಲ್ಲಿ ನವದೆಹಲಿ ಮಾತುಕತೆ ನಡೆಸುತ್ತಿದೆ. ಇದೊಂದು ನಮಗೆ ಸಿಕ್ಕಿರುವ ಅತ್ಯುತ್ತಮ ಅವಕಾಶ ಎಂದು ಅವರು ಹೇಳಿದರು.
ಭಾರತದಲ್ಲಿ ಕೆಲವು ಬೆಳೆಗಳಿಗೆ ವಿರೋಧವಿದೆ. ಆದರೆ ಅವರು ಭವಿಷ್ಯದ ದೃಷ್ಟಿಕೋನದಿಂದ ಮಾಡಿರುವ ಪ್ರಸ್ತಾಪಗಳಿಗೆ ಒಲವು ತೋರುತ್ತಿದ್ದಾರೆ ಎಂದು ಹೇಳಿದ ಗ್ರೀರ್, ಅಮೆರಿಕದ ಉತ್ಪನ್ನಗಳು ಚೀನಾ ಮಾರುಕಟ್ಟೆಯಲ್ಲಿ ನಿರಂತರವಾಗಿ ಏರಿಳಿತಗಳನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಭಾರತವು ಈಗ ಅಮೆರಿಕದ ಸರಕುಗಳಿಗೆ ಒಂದು ಪರ್ಯಾಯ ಮಾರುಕಟ್ಟೆ ಎಂದರು.
ಭಾರತವು ಭರವಸೆಯ ಮತ್ತು ದೊಡ್ಡ ದಾಸ್ತಾನುಗಳಿಗೆ ಅತ್ಯಂತ ಕಷ್ಟಕರವಾದ ಮಾರುಕಟ್ಟೆಯಾಗಿದೆ. ಆದರೆ ವ್ಯಾಪಾರವನ್ನು ನಿರ್ವಹಿಸಲು ಈ ಮಾರ್ಗವನ್ನು ನಾವು ಕಂಡುಕೊಳ್ಳಬೇಕು ಎಂದ ಅವರು ತಿಳಿಸಿದರು.
ಸಮಿತಿಯ ಅಧ್ಯಕ್ಷ ಜೆರ್ರಿ ಮೋರನ್ ಮಾತನಾಡಿ, ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ರಫ್ತು ತಾಣಗಳನ್ನು ವಿಸ್ತರಿಸುವಂತೆ ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರೀರ್, ಭಾರತದೊಂದಿಗೆ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಪರ್ಕವು ಸಾಕಷ್ಟು ಮುಂದುವರೆದಿದೆ. ಕೊರತೆಗಳನ್ನು ಕಡಿಮೆ ಮಾಡಿ, ಹೊಸಹೊಸ ಪ್ರವೇಶವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ಯುಎಸ್ ವ್ಯಾಪಾರ ಸಂಬಂಧಗಳಿಗೆ ಜಾಗತಿಕ ಮಟ್ಟದಲ್ಲಿ ಭಾರತವು ಒಂದು ನಿರ್ದಿಷ್ಟ ಮತ್ತು ನಿಖರವಾದ ಮರುಕತೆಯಾಗಿದೆ. ಯುಎಸ್ ಈಗ ಆಗ್ನೇಯ ಏಷ್ಯಾ ಮತ್ತು ಯುರೋಪಿನಲ್ಲಿಯೂ ಸಹ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುತ್ತಿದೆ. ಈ ವೇಳೆಯಲ್ಲಿ ಭಾರತದಂತಹ ಪ್ರಮುಖ ಪಾಲುದಾರ ರಾಷ್ಟ್ರವು ವಾಷಿಂಗ್ಟನ್‌ನ ಕೈಯನ್ನು ಬಲಪಡಿಸುತ್ತವೆ ಎಂದರು.
ಭಾರತದೊಂದಿಗೆ ಕೃಷಿಯ ಹೊರತಾಗಿ ಸುಂಕ ಮತ್ತು ಮಾರುಕಟ್ಟೆ ಪ್ರವೇಶ ಸಮಸ್ಯೆಗಳು ಉದ್ಭವಿಸುತ್ತವೆ. 1979 ರ ವಿಮಾನ ಒಪ್ಪಂದದ ಅಡಿಯಲ್ಲಿ ನಾಗರಿಕ ವಿಮಾನಯಾನ ಭಾಗಗಳಿಗೆ ಶೂನ್ಯ ಸುಂಕದ ಬದ್ಧತೆಗಳ ಭವಿಷ್ಯದ ಬಗ್ಗೆ ಭಾರತದೊಂದಿಗಿನ ಚರ್ಚೆಗಳು ಮುಂದುವರಿದಿದೆ. ಒಂದು ವೇಳೆ ಅವರು ಯುಎಸ್ ಗೆ ಮಾರುಕಟ್ಟೆ ಪ್ರವೇಶವನ್ನು ನೀಡಲು ಸಿದ್ಧರಿದ್ದರೆ ನಾವು ಖಂಡಿತವಾಗಿಯೂ ಅವರಿಗೆ ಬೇಕಾದ ಅವಕಾಶವನ್ನು ಮಾಡಿಕೊಡುವ ಬಗ್ಗೆ ಯೋಚಿಸಬಹುದಾಗಿದೆ ಎಂದು ಹೇಳಿದರು.
ಹಲವು ದೇಶಗಳು ಯುಎಸ್ ಎಥೆನಾಲ್‌ಗಾಗಿ ತಮ್ಮ ಮಾರುಕಟ್ಟೆಗಳನ್ನು ತೆರೆಯಲು ಒಪ್ಪಿಕೊಂಡಿವೆ. ಜೈವಿಕ ಇಂಧನಗಳು ಸೇರಿದಂತೆ ಹಲವಾರು ವರ್ಷಗಳಿಂದ ಯುರೋಪಿಯನ್ ಒಕ್ಕೂಟವು 750 ಬಿಲಿಯನ್ ಡಾಲರ್ ಯುಎಸ್ ಇಂಧನ ಉತ್ಪನ್ನಗಳನ್ನು ಖರೀದಿಸಲು ಬದ್ಧವಾಗಿದೆ ಎಂದು ತಿಳಿಸಿದರು.
ಭಾರತದ ವಿರುದ್ಧ ಮತ್ತೆ ಪಾಕ್ ಅನಗತ್ಯ ಪ್ರಚೋದನೆ: ನಾಲಗೆ ಹರಿಯಬಿಟ್ಟ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್
ಈ ನಡುವೆ ಅಸ್ಥಿರವಾದ ಸುಂಕಗಳು ಮತ್ತು ಚೀನಾದ ಖರೀದಿಗಳ ಬದಲಾವಣೆಯ ನಡುವೆ ಅಮೆರಿಕನ್ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಲವಾರು ಸೆನೆಟರ್‌ಗಳು ಕಳವಳ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರೀರ್, ಅಮೆರಿಕವು ಪರಸ್ಪರ ಒಪ್ಪಂದಗಳಿಗೆ ಒತ್ತು ನೀಡುತ್ತಿರುವುದರಿಂದ ರಫ್ತುದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಯಾಗುತ್ತಿದೆ. ಸುಂಕಗಳು ಸೇರಿದಂತೆ ವ್ಯಾಪಾರ ಸಂಬಂಧಿತ ಮಾತುಕತೆಗಳಿಗೆ ಬದ್ಧವಾಗಿ ಅದನ್ನು ಜಾರಿಗೊಳಿಸಿ ನಾವು ಮಾರುಕಟ್ಟೆಗಳಿಗೆ ಪ್ರವೇಶ ಒದಗಿಸುವುದು ಅತ್ಯಗತ್ಯವಾಗಿದೆ ಎಂದರು.