ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ಗಾಜಾ ಪಟ್ಟಿಯ ಸಂಪೂರ್ಣ ಜವಾಬ್ದಾರಿ ನಮ್ಮದು ಎಂದ ಟ್ರಂಪ್‌! ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆ

ಗಾಜಾ ಪಟ್ಟಿಯನ್ನು ನಾವು ಸ್ವಾಧೀನಪಡಿಸಿಕೊಂಡು ಇಡೀ ನಗರವನ್ನು ಅಭಿವೃದ್ಧಿ ಮಾಡುತ್ತೇವೆ. ಗಾಜಾದ ಮಾಲೀಕತ್ವವು ನಮ್ಮಲ್ಲೇ ಇರುತ್ತದೆ ಎಂದು ಅಮೆರಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್‌ರಿಂದ ಈ ಹೇಳಿಕೆ ಬಂದಿದೆ.

ಗಾಜಾ ಪಟ್ಟಿ ಇನ್ನು ಅಮೆರಿಕದ ವಶಕ್ಕೆ? ಟ್ರಂಪ್‌ ಹೇಳಿದ್ದೇನು?

Profile Vishakha Bhat Feb 5, 2025 1:17 PM

ವಾಷಿಂಗ್ಟನ್:‌ ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಕದನಕ್ಕೆ ವಿರಾಮ ಬಿದ್ದಿದೆ. ಯುದ್ದ ಪೀಡಿತ ಗಾಜಾ ಪಟ್ಟಿಯಲ್ಲೀಗ ಶಾಂತಿ ನೆಲೆಸಿದೆ. ಇದೀಗ ಪ್ಯಾಲೆಸ್ತೀನೀಯರನ್ನು ಬೇರೆಡೆಗೆ ಪುನರ್ವಸತಿಗೊಳಿಸಿದ ನಂತರ ಅಮೆರಿಕ ಗಾಜಾ ಪಟ್ಟಿಯನ್ನು "ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್‌ರಿಂದ ಈ ಹೇಳಿಕೆ ಬಂದಿದೆ. ಗಾಜಾದಲ್ಲಿನ ಸಮಸ್ಯೆಯನ್ನು ನಿವಾರಿಸಿ, ಗಾಜಾವನ್ನು ಅಭಿವೃದ್ದಿಗೊಳಿಸಲು ಟ್ರಂಪ್‌ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಗಾಜಾ ಪಟ್ಟಿಯನ್ನು ಅಮೆರಿಕ ವಶಪಡಿಸಿಕೊಳ್ಳಲಿದೆ, ಮತ್ತು ನಾವು ಅದರೊಂದಿಗೆ ಕೆಲಸ ಮಾಡುತ್ತೇವೆ. ಗಾಜಾದಲ್ಲಿರುವ ಅಪಾಯಕಾರಿ ಸ್ಫೋಟಗೊಳ್ಳದ ಬಾಂಬ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವ ಜವಾಬ್ದಾರಿಯನ್ನು ಅಮೆರಿಕ ವಹಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.



ಜಂಟಿ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್‌ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಕಳೆದ ನಾಲ್ಕು ವರ್ಷದಲ್ಲಿ ಬೈಡನ್‌ ಏನೂ ಮಾಡಲಿಲ್ಲ ಎಂದು ಟ್ರಂಪ್‌ ದೂರಿದ್ದಾರೆ. ಈ ಹಿಂದೆ ಅವರು ಅಧ್ಯಕ್ಷರಾಗಿದ್ದಾಗ ಈ ಯುದ್ಧ ಪ್ರಾರಂಭವಾಗಿತ್ತು. ಆದರೆ ಆಗ ಅಮೆರಿಕ ಏನೂ ಮಾಡಿಲ್ಲ. ಸಾವಿರಾರು ಸಾವು ನೋವುಗಳು ಸಂಭವಿಸಿದ್ದವು. ಆದರೆ ಇನ್ನು ಮೇಲೆ ಗಾಜಾ ಅಮೆರಿಕದ ಸುಪರ್ದಿಗೆ ಬರಲಿದೆ. ಒಂದು ವೇಳೆ ಅಮೆರಿಕದ ಸೈನ್ಯವನ್ನು ಅಲ್ಲಿ ನಿಯೋಜನೆ ಮಾಡಬೇಕಾದ ಪರಿಸ್ಥಿತಿ ಎದುರಾದರೆ ಅದನ್ನೂ ಕೂಡ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Narendra Modi: ಫೆ.13ರಂದು ಡೊನಾಲ್ಡ್ ಟ್ರಂಪ್‌ ಭೇಟಿಯಾಗಲಿರುವ ನರೇಂದ್ರ ಮೋದಿ!

ಗಾಜಾ ಪಟ್ಟಿ ದಶಕಗಳಿಂದ ಸಂಘರ್ಷ ವಲಯವಾಗಿದ್ದು, ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಆಗಾಗ್ಗೆ ಘರ್ಷಣೆಗಳು ನಡೆಯುತ್ತಿವೆ. ಇದೀಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಯು ಬಹಳ ಸೂಕ್ಷ್ಮ ಮತ್ತು ಸಂಕೀರ್ಣ ವಿಷಯವಾಗಿರುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಯಾಗುವ ಸಾಧ್ಯತೆ ಇದೆ.